ಟೆಲಿಗ್ರಾಮ್‌ನಲ್ಲಿ ವಿಡಿಯೋ ಮೆಸೆಜ್ ಕಳುಹಿಸುವುದು ಹೇಗೆ ಗೊತ್ತಾ?
ಫೇಸ್‌ಬುಕ್ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಹಲವು ಇನ್‌ಸ್ಟಂಟ್ ಮೆಸೆಜ್ ಆಪ್‌ಗಳು ಇದ್ದರು, ಟೆಲಿಗ್ರಾಮ್ ಆಪ್ ವಾಟ್ಸಾಪ್ ಆಪ್‌ಗೆ ನೇರ ಪೈಪೋಟಿ ನೀಡುತ್ತಿದೆ. ಟೆಲಿಗ್ರಾಂ ಅಪ್ಲಿಕೇಶನ್ ವಾಟ್ಸಾಪ್‌ಗೆ ಉತ್ತಮ ಪರ್ಯಾಯ ಎಂದು ಗುರುತಿಸಿಕೊಂಡಿದೆ. ಹಾಗೆಯೇ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಒದಗಿಸಿದೆ. ಪ್ರೈವಸಿಗೂ ಕೆಲವು ಅನುಕೂಲಕರ ಫೀಚರ್ಸ್‌ಗಳನ್ನು ನೀಡಿದೆ.

ಹೌದು, ಟೆಲಿಗ್ರಾಮ್ ತನ್ನ ಬಳಕೆದಾರರಿಗೆ ಹಲವು ಬಗೆಯ ಸೇವೆಗಳನ್ನು ಹಾಗೂ ಆಯ್ಕೆಗಳನ್ನು ಪರಿಚಯಿಸಿದೆ. ಮುಖ್ಯವಾಗಿ ಪ್ರೈವಸಿಗೆ ಸಂಬಂಧಿಸದಂತೆಯೂ ಫೀಚರ್‌ಗಳನ್ನು ಅಳವಡಿಸಿದೆ. ಟೆಲಿಗ್ರಾಮ್‌ನಲ್ಲಿ ಬಳಕೆದಾರರು ವಿಡಿಯೋ ಮೆಸೆಜ್ ಸಹ ಸೆಂಡ್ ಮಾಡಬಹುದಾಗಿದೆ. ಮೆಸಜ್‌ಗಳನ್ನು ಎಡಿಟ್ ಮಾಡುವ ಅವಕಾಶ ಒಳಗೊಂಡಿದೆ. ಮಲ್ಟಿಪಲ್ ಪ್ರೊಫೈಲ್ ಪಿಚ್ಚರ್ ಇಡಬಹುದಾದ ಆಯ್ಕೆಯನ್ನು ನೀಡಿದೆ.

ಟೆಲಿಗ್ರಾಂ ಗೌಪ್ಯತೆಗೆ ಕೆಲವು ಸರಳವಾದ ಆದರೆ ಮಹತ್ವದ ಫೀಚರ್ಸ್‌ಗಳನ್ನು ಹೊಂದಿದ್ದು ಅದು ಬಳಕೆದಾರರಿಗೆ ಉಪಯೋಗಕ್ಕೆ ಬರುತ್ತದೆ. ಈ ಫೀಚರ್ಸ್‌ಗಳು ಟೆಲಿಗ್ರಾಂನಲ್ಲಿ ಚಾಟ್ ಮಾಡುವಾಗ ಬಳಕೆದಾರರು ಕಳುಹಿಸಬಹುದಾದ ಅತ್ಯಂತ ಚಿಕ್ಕ ವಿಡಿಯೋ ಮೆಸೆಜ್‌ಗಳನ್ನು ಒಳಗೊಂಡಿರುತ್ತದೆ. ವೀಡಿಯೊ ಮೆಸೆಜ್‌ಗಳನ್ನು ಆಟೋ ಡೌನ್‌ಲೋಡ್ ಮಾಡಲಾಗುತ್ತದೆ ಮತ್ತು ಪೂರ್ವನಿಯೋಜಿತವಾಗಿ ಸ್ವಯಂ ಪ್ಲೇ ಮಾಡಲಾಗುತ್ತದೆ. ಟೆಲಿಗ್ರಾಮ್ ಬಳಕೆದಾರರು ಅನೇಕ ಬಾರಿ ಕಳುಹಿಸಿದ ಟೆಕ್ಟ್ಸ್‌ಗಳನ್ನು ಮತ್ತೆ ಎಡಿಟ್ ಮಾಡಲು ಸಹ ಅನುಮತಿಸುತ್ತದೆ. ಹಾಗಾದರೇ ಟೆಲಿಗ್ರಾಮ್ ಅಪ್ಲಿಕೇಶನ್ ನಲ್ಲಿ ವಿಡಿಯೋ ಮೆಸೆಜ್ ಕಳುಹಿಸುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಟೆಲಿಗ್ರಾಂನಲ್ಲಿ ವಿಡಿಯೋ ಮೆಸೆಜ್ ಸೆಂಡ್ ಮಾಡಲು ಹೀಗೆ ಮಾಡಿರಿ:
* ಟೆಲಿಗ್ರಾಮ್ ಅಪ್ಲಿಕೇಶನ್ ತೆರೆಯಿರಿ.
* ಟೆಲಿಗ್ರಾಮ್‌ನಲ್ಲಿ ಯಾವುದೇ ಚಾಟ್‌ಗೆ ಹೋಗಿ.
* ಮೈಕ್ ಐಕಾನ್ ಅನ್ನು ಒಮ್ಮೆ ಟ್ಯಾಪ್ ಮಾಡಿ ಮತ್ತು ಕ್ಯಾಮೆರಾ ಮೋಡ್‌ಗೆ ಬದಲಿಸಿ.

* ಕ್ಯಾಮೆರಾ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಒತ್ತಿ ಹಿಡಿಯಿರಿ. ನಂತರ ವಿಡಿಯೋ ಮೆಸೆಜ್ ಅನ್ನು ರೆಕಾರ್ಡ್ ಮಾಡಿ.
* ನಂತರ ರೆಕಾರ್ಡಿಂಗ್ ಬಟನ್ ಅನ್ನು ಬಿಡುಗಡೆ ಮಾಡಿ.
* ನೀವು ರೆಕಾರ್ಡ್ ಮಾಡಿದ ವಿಡಿಯೋ ಸೆಂಡ್ ಆಗುತ್ತದೆ.

ಟೆಲಿಗ್ರಾಂನಲ್ಲಿ ಮಲ್ಟಿ ಪ್ರೊಫೈಲ್ ಪಿಚ್ಚರ್ ಸೆಟ್ ಮಾಡಲು ಈ ಕ್ರಮ ಫಾಲೋ ಮಾಡಿರಿ:
ಟೆಲಿಗ್ರಾಮ್ ಬಳಕೆದಾರರಿಗೆ ಮಲ್ಟಿ ಪ್ರೊಫೈಲ್ ಪಿಚ್ಚರ್ ಸೆಟ್ ಮಾಡಲು ಅವಕಾಶ ಮಾಡಿಕೊಡುತ್ತದೆ. ಸೇವ್ ಮಾಡಿದ ಫೋಟೊಗಳನ್ನು ಟ್ಯಾಪ್ ಮಾಡುವ ಮೂಲಕ ಅವರ ಕಾಂಟ್ಯಾಕ್ಟ್‌ನಲ್ಲಿರುವವರು ನೋಡಬಹುದು. ಹೊಸ ಪ್ರೊಫೈಲ್ ಫೋಟೊಗಳನ್ನು ಅಪ್‌ಲೋಡ್ ಮಾಡಲು ಹೀಗೆ ಮಾಡಿ.
* ಮೊದಲಿಗೆ ಸೆಟ್ಟಿಂಗ್‌ಗಳನ್ನು ತೆರೆಯಿರಿ
* ಲೈವ್ ಫೋಟೋ ತೆಗೆಯಲು ಕ್ಯಾಮೆರಾ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಗ್ಯಾಲರಿಯಿಂದ ಫೋಟೋ ಅಪ್‌ಲೋಡ್ ಮಾಡಲು ಐಕಾನ್ ಮೇಲೆ ದೀರ್ಘವಾಗಿ ಒತ್ತಿರಿ.

ಟೆಲಿಗ್ರಾಮ್‌ನಲ್ಲಿ ಮೆಸೆಜ್ ಎಡಿಟ್ ಮಾಡಲು ಹೀಗೆ ಮಾಡಿರಿ:
ಟೆಲಿಗ್ರಾಮ್ ಬಳಕೆದಾರರು ಟೆಕ್ಟ್ಸ್‌ಗಳನ್ನು ಕಳುಹಿಸಿದ ನಂತರ ಅದನ್ನು ಎಡಿಟ್ ಮಾಡಲು ಬಳಕೆದಾರರನ್ನು ಶಕ್ತಗೊಳಿಸುತ್ತದೆ. ಟೆಕ್ಟ್ಸ್‌ಗಳನ್ನು ಎಡಿಟ್ ಮಾಡಲು ಬಳಕೆದಾರರು ಈ ಕ್ರಮ ಅನುಸರಿಸಬೇಕಿದೆ:
* ನೀವು ಎಡಿಟ್ ಮಾಡ ಬಯಸುವ ಮೆಸೆಜ್ ಅನ್ನು ಟ್ಯಾಪ್ ಮಾಡಿ.
* ಟೆಕ್ಟ್ಸ್ ಅನ್ನು ಎಡಿಟ್ ಮಾಡಲು ನೀವು ಪೆನ್ಸಿಲ್ ಐಕಾನ್ ಅನ್ನು ಆಯ್ಕೆ ಮಾಡಿ. ಐಫೋನ್ ಬಳಕೆದಾರರು ತಾವು ಎಡಿಟ್ ಮಾಡಲು ಬಯಸುವ ಟೆಕ್ಟ್ಸ್ ಅನ್ನು ಟ್ಯಾಪ್ ಮಾಡಿದಾಗ ಎಡಿಟ್ ಆಯ್ಕೆಯನ್ನು ನೋಡುತ್ತಾರೆ.
* ನಿಮ್ಮ ಎಡಿಟ್ ಮಾಡಿದ ಟೆಕ್ಟ್ಸ್ ಟೈಪ್ ಮಾಡಿ.
* ಒಮ್ಮೆ ನೀವು ಮುಗಿಸಿದ ನಂತರ ಚೆಕ್ ಮಾರ್ಕ್ ಮೇಲೆ ಕ್ಲಿಕ್ ಮಾಡಿ.


Click it and Unblock the Notifications








