Home
ಟೆಕ್ ನೌಕರಿ

ಗೂಗಲ್‌ನ ಈ ಹೊಸ ಸೇವೆಯು, ಆತ್ಮೀಯರ ಹುಟ್ಟುಹಬ್ಬವನ್ನು ನೆನಪಿಸಲಿದೆ!

ಸರ್ಚ್ ಇಂಜಿನ್ ದೈತ್ಯ ಗೂಗಲ್‌ ಸಂಸ್ಥೆಯು ತನ್ನ ಬಳಕೆದಾರರಿಗೆ ಹಲವು ಉಪಯುಕ್ತ ಫೀಚರ್ಸ್‌ ಪರಿಚಯಿಸಿ ಜನಪ್ರಿಯತೆ ಪಡೆದಿದೆ. ಹಾಗೆಯೇ ಆತ್ಮೀಯರ ಗೂಗಲ್‌ ಹುಟ್ಟುಹಬ್ಬದ ದಿನಗಳನ್ನು ನೆನಪಿಸಲು ಸಹ ಆಯ್ಕೆಯನ್ನು ಒದಗಿಸಿದ್ದು, ಇನ್ನು ಗೆಳೆಯರ ಹಾಗೂ ಕುಟುಂಬದವರ ಹುಟ್ಟುಹಬ್ಬಗಳನ್ನು ಮರೆಯಲಾಗದು.

ಹೌದು, ಗೂಗಲ್‌ ಸಂಸ್ಥೆಯು ಕೊನೆಗೂ ಗೂಗಲ್‌ ಕಾಂಟ್ಯಾಕ್ಟ್‌ಗಳಿಗೆ ಹುಟ್ಟುಹಬ್ಬದ ರಿಮೈಂಡ್ಸ್ (birthday reminders) ಫೀಚರ್ಸ್‌ ಅನ್ನು ಹೊರತರಲು ಪ್ರಾರಂಭಿಸಿದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿನಲ್ಲಿ ಕಾಂಟ್ಯಾಕ್ಟ್‌ಗಳನ್ನು ಸೇವ್ ಮಾಡಿರುವ, ಸ್ನೇಹಿತರು ಮತ್ತು ಕುಟುಂಬದವರ ಹುಟ್ಟುಹಬ್ಬದ ರಿಮೈಂಡ್ಸ್‌ ಪಡೆಯಲು ಈ ಆಯ್ಕೆಯು ಬಳಕೆದಾರರಿಗೆ ಅನುಮತಿಸುತ್ತದೆ.

ಗೂಗಲ್‌ನ ಈ ಹೊಸ ಸೇವೆಯು, ಆತ್ಮೀಯರ ಹುಟ್ಟುಹಬ್ಬವನ್ನು ನೆನಪಿಸಲಿದೆ!

ನೂತನ ಆಯ್ಕೆಯು ಬಳಕೆದಾರರಿಗೆ ಪ್ರತಿ ಕಾಂಟ್ಯಾಕ್ಟ್‌ನ ಗೂಗಲ್‌ ಕಾಂಟ್ಯಾಕ್ಟ್‌ಗಳಲ್ಲಿ ಹುಟ್ಟುಹಬ್ಬದ ಮಾಹಿತಿಯನ್ನು ನಮೂದಿಸಲು ಅನುಮತಿಸುತ್ತದೆ. ಹಾಗೆಯೇ ಗೂಗಲ್‌ ಖಾತೆಗೆ ಲಿಂಕ್ ಮಾಡಲಾದ ಎಲ್ಲಾ ಡಿವೈಸ್‌ಗಳಲ್ಲಿ ಅದು ಸಿಂಕ್ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಹುಟ್ಟು ಹುಬ್ಬಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಇದು ನೆರವಾಗಲಿದೆ. ಹಾಗಾದರೇ ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಹುಟ್ಟುಹಬ್ಬದ ರಿಮೈಂಡ್ಸ್‌ ಸೆಟ್ ಮಾಡಲು ಇವು ಅಗತ್ಯ:
* ಫೋನಿನಲ್ಲಿ ಇರುವ ಗೂಗಲ್‌ ಕಾಂಟ್ಯಾಕ್ಸ್‌ ಆಪ್‌ ಅಪ್‌ಡೇಟ್‌ ಮಾಡಿರಿ.
* ಬಳಿಕ ಆಪ್‌ ಅನ್ನು ನಿಮ್ಮ ಗೂಗಲ್‌ ಖಾತೆಯೊಂದಿಗೆ ಲಿಂಕ್ ಮಾಡಿ
* ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜನ್ಮ ದಿನಾಂಕ

ನೂತನ ಫೀಚರ್‌ ಮೂಲಕ ಹುಟ್ಟುಹಬ್ಬದ ರಿಮೈಂಡ್ಸ್‌ ಸೆಟ್ ಮಾಡಲು ಹೀಗೆ ಮಾಡಿರಿ:
- ನಿಮ್ಮ ಫೋನ್‌ನಲ್ಲಿ ಗೂಗಲ್‌ ಕಾಂಟ್ಯಾಕ್ಟ್‌ ಆಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಮತ್ತು ಇನ್‌ಸ್ಟಾಲ್‌ ಮಾಡಿ
- ಬಳಿಕ ಗೂಗಲ್‌ ಕಾಂಟ್ಯಾಕ್ಟ್‌ ಆಪ್‌ ಅನ್ನು ತೆರೆಯಿರಿ
- ಕೆಳಗಿನ ಪ್ಯಾನೆಲ್‌ನಿಂದ ನಿಮ್ಮ ಗೂಗಲ್‌ ಕಾಂಟ್ಯಾಕ್ಟ್‌ಗಳ ಅಪ್ಲಿಕೇಶನ್‌ನಲ್ಲಿ ಮುಖ್ಯಾಂಶಗಳ ಪುಟವನ್ನು ಟ್ಯಾಪ್ ಮಾಡಿ
- ನಂತರ, ಅಪ್ಲಿಕೇಶನ್‌ನ ನಿಮಗಾಗಿ ವಿಭಾಗದಿಂದ ಜನ್ಮದಿನವನ್ನು ಸೇರಿಸಿ ಟ್ಯಾಬ್ ಅನ್ನು ನೀವು ಕಾಣುವಿರಿ
- ಇದು ನಂತರ ನಿಮ್ಮನ್ನು ಸಂಪರ್ಕ ಪಟ್ಟಿಗೆ ಮರುನಿರ್ದೇಶಿಸುತ್ತದೆ. ಅಲ್ಲಿ ನೀವು ಜನ್ಮದಿನವನ್ನು ಸೇರಿಸಲು ಬಯಸುವ ಕಾಂಟ್ಯಾಕ್ಟ್‌ ನೀವು ಆಯ್ಕೆ ಮಾಡಬಹುದು.
- ಕಾಂಟ್ಯಾಕ್ಟ್‌ ಅನ್ನು ಆಯ್ಕೆ ಮಾಡಿ ಮತ್ತು ಜನ್ಮದಿನವನ್ನು ನಮೂದಿಸಿ.

ಗೂಗಲ್‌ನ ಈ ಹೊಸ ಸೇವೆಯು, ಆತ್ಮೀಯರ ಹುಟ್ಟುಹಬ್ಬವನ್ನು ನೆನಪಿಸಲಿದೆ!

ಜನಪ್ರಿಯ ಗೂಗಲ್‌ ಸಂಸ್ಥೆಯು ಇತ್ತೀಚಿಗೆ ಕೆಲವು ನೂತನ ಫೀಚರ್ಸ್‌ಗಳನ್ನು ತನ್ನ ಸೇವೆಗಳಲ್ಲಿ ಸೇರ್ಪಡೆ ಮಾಡಿಕೊಂಡಿದೆ. ಅವುಗಳು ಬಳಕೆದಾರರಿಗೆ ಮತ್ತಷ್ಟು ಉಪಯುಕ್ತ ಎನಿಸಲಿದ್ದು, ಕೆಲಸಗಳಿಗೆ ನೆರವಾಗುತ್ತವೆ. ಅಂತಹ ಎರಡು ನೂತನ ಫೀಚರ್ಸ್‌ ಬಗ್ಗೆ ಇಲ್ಲಿದೆ ಮಾಹಿತಿ.

ಲೈವ್ ಕ್ಯಾಪ್ಶನ್‌ : ಗೂಗಲ್‌ ಕ್ಯಾಪ್ಶನ್‌ ಫೀಚರ್ಸ್‌ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ವಾಯ್ಸ್‌ನೊಂದಿಗೆ ಕ್ಯಾಪ್ಶನ್‌ಗಳನ್ನು ನೀಡಲಿದೆ. ಇದಲ್ಲದೆ, ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ಲೈವ್ ಶೀರ್ಷಿಕೆಯ ಅನುಭವವನ್ನು ಆಪ್ಟಿಮೈಸ್ ಮಾಡುವ ಹೊಸ ಶೀರ್ಷಿಕೆಗಳ ಬಾಕ್ಸ್ ಅನ್ನು ನೀಡಲಿದೆ. ಇದು ಬಳಕೆದಾರರಿಗೆ ಕರೆಗಳ ಸಮಯದಲ್ಲಿ ಪ್ರತಿಕ್ರಿಯೆಗಳನ್ನು ಟೈಪ್ ಮಾಡಲು ಸಾದ್ಯವಾಗಲಿದೆ.

ಕ್ರೋಮ್‌ ಅಡ್ರೆಸ್‌ ಬಾರ್‌ : ಗೂಗಲ್‌ ಕ್ರೋಮ್‌ ಅಡ್ರೆಸ್‌ ಬಾರ್‌ನಲ್ಲಿ URL ಗಳಲ್ಲಿರುವ ಮುದ್ರಣದೋಷಗಳನ್ನು ಪತ್ತೆ ಮಾಡುವ ಫೀಚರ್ಸ್ ಅನ್ನು ಸೇರಿಸಲಾಗಿದೆ. ತಿದ್ದುಪಡಿಗಳ ಆಧಾರದ ಮೇಲೆ ವೆಬ್‌ಸೈಟ್‌ಗಳನ್ನು ಸೂಚಿಸಲಿದೆ ಎಂದು ಹೇಳಲಾಗಿದೆ. ಇದು ಡಿಸ್ಲೆಕ್ಸಿಯಾ ಹೊಂದಿರುವ ಜನರಿಗೆ, ಭಾಷೆ ಕಲಿಯುವವರಿಗೆ ಸಹಾಯ ಮಾಡಲಿದೆ ಎಂದು ವರದಿಯಾಗಿದೆ. ಇನ್ನು ಈ ಫಿಚರ್ಸ್‌ ಈ ಹಿಂದೆ ಕ್ರೋಮ್‌ ಡೆಸ್ಕ್‌ಟಾಪ್‌ನಲ್ಲಿ ಲಭ್ಯವಿದ್ದು, ಮುಂಬರುವ ತಿಂಗಳುಗಳಲ್ಲಿ ಮೊಬೈಲ್‌ನಲ್ಲಿ ಕೂಡ ಲಭ್ಯವಾಗಲಿದೆ.

Best Mobiles in India

English summary
How to set Birthday Reminders using Google Contacts App: details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+