Home
ಟೆಕ್ ನೌಕರಿ

ಎಂದಾದರೂ ಈ ರೀತಿ ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದಿರಾ?..ಇದು ತುಂಬಾ ಸುಲಭ!

ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜಿಂಗ್ ಆಪ್‌ ವಾಟ್ಸಾಪ್ ಹಲವು ಉಪಯುಕ್ತ ಫೀಚರ್ಸ್‌ ಮೂಲಕ ಬಳಕೆದಾರರ ಗಮನ ಸೆಳೆದಿದೆ. ಆ ಪೈಕಿ ಸ್ಟೇಟಸ್ ಫೀಚರ್‌ ಸಿಕ್ಕಾಪಟ್ಟೆ ಸದ್ದು ಮಾಡಿತ್ತಿದ್ದು, ಫೋಟೊ, ವಿಡಿಯೋ, ಟೆಕ್ಸ್ಟ್‌ ಅನ್ನು ಸ್ಟೇಟಸ್‌ ಆಗಿ ಇಡಬಹುದಾಗಿದೆ. ಇನ್ನು ಇತ್ತೀಚಿಗೆ ವಾಯಿಸ್‌ ನೋಟ್‌ ಅನ್ನು ಸಹ ಸ್ಟೇಟಸ್‌ ಆಗಿ ಇಡಲು ಅವಕಾಶ ಒದಗಿಸುವ ಮೂಲಕ ಬಳಕೆದಾರರಿಗೆ ಖುಷಿ ನೀಡಿದೆ.

ಹೌದು, ವಾಟ್ಸಾಪ್‌ ಆಪ್‌ನಲ್ಲಿ ಬಳಕೆದಾರರು ವಾಯಿಸ್‌ ರೆಕಾರ್ಡಿಂಗ್‌ ಅನ್ನು ಸ್ಟೇಟಸ್‌ಗೆ ಹಾಕಬಹುದಾಗಿದೆ. ಅಂದಹಾಗೆ ವಾಟ್ಸಾಪ್‌ ಸ್ಟೇಟಸ್‌ಗೆ ಹಾಕುವ ವಾಯಿಸ್‌ ನೋಟ್‌/ ರೆಕಾರ್ಡಿಂಗ್ ಗಳು 30 ಸೆಕೆಂಡ್‌ಗಳಿಗಿಂತ ಹೆಚ್ಚಿರಬಾರದು. ಹಾಗಾದರೆ ವಾಟ್ಸಾಪ್‌ ನಲ್ಲಿ ವಾಯಿಸ್‌ ರೆಕಾರ್ಡಿಂಗ್‌ಗಳನ್ನು ಸ್ಟೇಟಸ್‌ ಆಗಿ ಹಾಕುವುದು ಹೇಗೆ ಮತ್ತು ಈ ಕುರಿತು ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಎಂದಾದರೂ ಈ ರೀತಿ ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದಿರಾ?..ಇದು ತುಂಬಾ ಸುಲಭ!

ವಾಯಿಸ್‌ ರೆಕಾರ್ಡಿಂಗ್‌ ಅನ್ನು ಸ್ಟೇಟಸ್‌ ಹಾಕಲು ಈ ಕ್ರಮ ಅನುಸರಿಸಿ:

ಹಂತ 1. ಈ ಫೀಚರ್ ಬಳಸಲು ಮೊದಲು ನಿಮ್ಮ ವಾಟ್ಸಾಪ್ ಅನ್ನು ಅಪ್ಡೇಟ್ ಮಾಡಬೇಕು. ನಂತರ ವಾಟ್ಸಾಪ್‌ ನಲ್ಲಿ ಸ್ಟೇಟಸ್ ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ.

ಹಂತ 2. ನಂತರ ಈ ಪುಟದಲ್ಲಿ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಆಂಡ್ರಾಯ್ಡ್ ಬಳಕೆದಾರರು ಅದನ್ನು ಕೆಳಗಿನ ಬಲ ಭಾಗದ ಮೂಲೆಯಲ್ಲಿ ಕಾಣಬಹುದಾಗಿದೆ. ಇನ್ನು iOS ಬಳಕೆದಾರರು ಅದನ್ನು ಎಲ್ಲಾ ಸ್ಟೇಟಸ್ ಅಪ್ಡೇಟ್ ಮೇಲ್ಭಾಗದಲ್ಲಿ ಕಾಣಬಹುದಾಗಿದೆ.

ಹಂತ 3. ಆ ಬಳಿಕ, ರೆಕಾರ್ಡಿಂಗ್ ಆರಂಭಿಸಲು ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಮೈಕ್ ಐಕಾನ್ ಮೇಲೆ ಟ್ಯಾಪ್ ಮಾಡಿ ಹಿಡಿದುಕೊಳ್ಳಿ.

ಹಂತ 4. ಬಳಿಕ ಮೈಕ್ ಐಕಾನ್ ಅನ್ನು ಎಡಕ್ಕೆ ಸ್ಲೈಡ್ ಮಾಡುವ ಮೂಲಕ ನಿಮಗೆ ಬೇಡದ ರೆಕಾರ್ಡಿಂಗ್ ಅನ್ನು ಡಿಲೀಟ್ ಮಾಡಬಹುದು.

ಎಂದಾದರೂ ಈ ರೀತಿ ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದಿರಾ?..ಇದು ತುಂಬಾ ಸುಲಭ!

ಹಂತ 5. ನಂತರ ನಿಮ್ಮ ರೆಕಾರ್ಡಿಂಗ್ ನಂತರ ಪ್ಲೇ ಬಟನ್ ಅನ್ನು ಒತ್ತುವ ಮೂಲಕ ರೆಕಾರ್ಡಿಂಗ್ ಸೆಂಡ್ ಮಾಡುವ ಮೊದಲು ಪೂರ್ವವೀಕ್ಷಿಸಬಹುದು.

ಹಂತ 6. ನಿಮಗೆ ರೆಕಾರ್ಡಿಂಗ್ ಇಷ್ಟವಾಗದಿದ್ದರೆ ಅದನ್ನು ಡಿಲೀಟ್ ಸಹ ಮಾಡಬಹುದು. ಬೇಕಿದ್ದರೆ ಮತ್ತೆ ರೆಕಾರ್ಡಿಂಗ್ ಪ್ರಾರಂಭಿಸಬಹುದು

ಹಂತ 7. ಇಷ್ಟವಾದ ವಾಯ್ಸ್ ನೋಟ್ ಸ್ಟೇಟಸ್ ಪೋಸ್ಟ್ ಮಾಡಲು ಕೆಳಗಿನ ಬಲ ಭಾಗದ ಮೂಲೆಯಲ್ಲಿರುವ ಸೆಂಡ್ ಬಟನ್ ಒತ್ತಿರಿ.

ಮೊಬೈಲ್‌ ನಂಬರ್ ಸೇವ್ ಮಾಡದೇ, ವಾಟ್ಸಾಪ್‌ ಮೆಸೆಜ್‌ ಮಾಡಲು ಹೀಗೆ ಮಾಡಿ:

ಹಂತ 1 : ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಯಾವುದೇ ಬ್ರೌಸರ್ ತೆರೆಯಿರಿ.
ಹಂತ 2 : ಈ URL ನಲ್ಲಿ ಟೈಪ್ ಮಾಡಿ: http://wa.me/ಮೊಬೈಲ್‌ ಸಂಖ್ಯೆ ನಮೂದಿಸಿ
ಹಂತ 3 : ನಂತರ, ಎಂಟರ್ ಕೀ ಅನ್ನು ಟ್ಯಾಪ್ ಮಾಡುವ ಮೊದಲು, ನೀವು ನಮೂದಿಸಿದ ವಿವರಗಳನ್ನು ಚೆಕ್ ಮಾಡಿ, ಬಳಿಕ ಎಂಟರ್ ಬಟನ್ ಒತ್ತಿರಿ.
ಹಂತ 4: ಆ ನಂತರ ಮತ್ತೊಂದು ಲಿಂಕ್ ತೆರೆಯಲಿದ್ದು, ನೀವು ನಮೂದಿಸಿರುವ ನಂಬರ್ ಕಾಣಿಸುತ್ತದೆ.
ಹಂತ 5: ಹಾಗೆಯೇ, continue to chat ಬಾಕ್ಸ್‌ ಕಾಣಿಸುತ್ತದೆ. ಮೆಸೆಜ್ ಮಾಡಲು ಆ ಆಯ್ಕೆ ಕ್ಲಿಕ್ ಮಾಡಿರಿ.
ಹಂತ 6: ಆ ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ, ವಾಟ್ಸಾಪ್‌ ಮೆಸೆಜ್‌ ಆಪ್‌ ತೆರೆದುಕೊಳ್ಳುತ್ತದೆ. ಬಳಿಕ ನೀವು ನೇರವಾಗಿ ಮೆಸೆಜ್ ಟೈಪ್ ಮಾಡುವ ಮೂಲಕ ಚಾಟ್ ಮಾಡಬಹುದು.

Best Mobiles in India

English summary
How to Share Voice Recording as WhatsApp Status. here is the complete guide.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+