Home
ಟೆಕ್ ನೌಕರಿ

ವಾಟ್ಸಪ್‌ ಸ್ಟೇಟಸ್ ಅನ್ನು ಫೇಸ್‌ಬುಕ್‌ಗೆ ಶೇರ್ ಮಾಡುವುದು ಹೇಗೆ ಗೊತ್ತಾ?

ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ಎಂಬ ಹೆಗ್ಗಳಿಕೆಯ 'ವಾಟ್ಸಪ್', ಇತ್ತೀಚಿಗೆ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಅಳವಡಿಸಿದೆ. ಬಳಕೆದಾರರ ವಾಟ್ಸಪ್‌ನ ಚಾಟ್‌ ಸೆಕ್ಯುರಿಟಿಗೆ ಪ್ರಮುಖ ಗಮನ ನೀಡಿರುವ ಜೊತೆಗೆ ಅಗತ್ಯ ಸೌಲಭ್ಯಗಳನ್ನು ಸೇರಿಸಿದೆ. ವಾಟ್ಸಪ್‌ ಇತ್ತೀಚಿಗೆ ಹೊಸದಾಗಿ 'ಸ್ಟೇಟಸ್ ಶೇರಿಂಗ್' ಫೀಚರ್‌ ಅನ್ನು ಬಳಕೆದಾರರಿಗೆ ಮುಕ್ತವಾಗಿದ್ದು, ಸ್ಟೇಟಸ್‌ ಅನ್ನು ಫೇಸ್‌ಬುಕ್‌ಗೆ ಶೇರ್ ಮಾಡಬಹುದು.

ವಾಟ್ಸಪ್‌ನಲ್ಲಿ ಸ್ಟೇಟಸ್‌

ಹೌದು, ವಾಟ್ಸಪ್‌ನಲ್ಲಿ ಸ್ಟೇಟಸ್‌ ಇಡುವುದು ಆಯ್ಕೆಯು ಈಗಾಗಲೇ ಬಳಕೆದಾರರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು, ಕೇವಲ 24ಗಂಟೆ ಅವಧಿ ಮಾತ್ರ ಇರಲಿದೆ. ಈ ವಾಟ್ಸಪ್‌ ಸ್ಟೇಟಸ್‌ ಅನ್ನು ಫೇಸ್‌ಬುಕ್‌ಗೆ ಶೇರ್ ಮಾಡುವ ಆಯ್ಕೆಯೇ ಸ್ಟೇಟಸ್ ಶೇರಿಂಗ್ ಫೀಚರ್ ಆಗಿದೆ. ಹಾಗಾದರೇ ವಾಟ್ಸಪ್‌ನಲ್ಲಿ ಇಡುವ ಸ್ಟೇಟಸ್‌ ಅನ್ನು ಫೇಸ್‌ಬುಕ್‌ಗೆ ಶೇರ್ ಮಾಡುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಸೋಶಿಯಲ್‌ ತಾಣಗಳು

ಸೋಶಿಯಲ್‌ ತಾಣಗಳು

ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ ಮೆಸೆಜಿಂಗ್ ಆಪ್‌ನಲ್ಲಿ ಸ್ಟೇಟಸ್‌ ಇಡುವ ಆಯ್ಕೆ ಇದೆ. 24ಗಂಟೆಗಳು ಮಾತ್ರ ಕಾಣಿಸಿಕೊಳ್ಳುವ ಸ್ಟೇಟಸ್‌ ಅನ್ನು ಫೇಸ್‌ಬುಕ್ ಸ್ಟೋರಿಗೆ ನೇರವಾಗಿ ಶೇರ್ ಮಾಡುವ ಸೌಲಭ್ಯ ಲಭ್ಯವಾಗಿದೆ. ಫೇಸ್‌ಬುಕ್ ಸಂಸ್ಥೆಯ ಇತರೆ ಸೋಶಿಯಲ್ ಆಪ್‌ಗಳಾದ ಇನ್‌ಸ್ಟಾಗ್ರಾಂ ಮತ್ತು ಮೆಸ್ಸೆಂಜರ್‌ ಹಾಗೂ ವಾಟ್ಸಪ್‌ ನಡುವೆ ಒಂದು ಲಿಂಕ್ ಏರ್ಪಡಿಸುವ ಫೀಚರ್ ಇದಾಗಿದೆ.

ಕೇವಲ 24ಗಂಟೆ ಮಾತ್ರ

ಕೇವಲ 24ಗಂಟೆ ಮಾತ್ರ

ವಾಟ್ಸಪ್‌ ಅಪ್ಲಿಕೇಶನಲ್ಲಿ ಇಡುವ ಸ್ಟೇಟಸ್‌ ಕೇವಲ 24ಗಂಟೆಗಳು ಮಾತ್ರ ಇರಲಿದ್ದು, ಅದಾದ ನಂತರ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗುತ್ತದೆ. ಹಾಗೆಯೇ ಫೇಸ್‌ಬುಕ್‌ ಆಪ್‌ನಲ್ಲಿಯೂ ಸ್ಟೋರಿಸ್‌ ಫೀಚರ್‌ ನೀಡಲಾಗಿದ್ದು, ಬಳಕೆದಾರರು ಇಲ್ಲಿಯೂ ಸಹ 24 ಗಂಟೆಗಳ ಅವಧಿಗೆ ಸ್ಟೇಟಸ್‌ ಅನ್ನು ಇಡಬಹುದಾಗಿದೆ. ಅದಕ್ಕಾಗಿಯೇ ಇದೀಗ ವಾಟ್ಸಪ್‌ ಸ್ಟೇಟಸ್‌ ಅನ್ನು ಸೇರವಾಗಿ ಫೇಸ್‌ಬುಕ್ ಶೇರ್ ಮಾಡುವ ಆಯ್ಕೆ ನೀಡಿದೆ.

ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಲ್ಲಿ ಲಭ್ಯ

ಆಂಡ್ರಾಯ್ಡ್‌ ಮತ್ತು ಐಓಎಸ್‌ಗಳಲ್ಲಿ ಲಭ್ಯ

ವಾಟ್ಸಪ್‌ನ ಸ್ಟೇಟಸ್‌ ಶೇರ್ ಆಯ್ಕೆಯು ಆಂಡ್ರಾಯ್ಡ್ ಅಪರೇಟಿಂಗ್ ಸಿಸ್ಟಮ್ ಮತ್ತು ಐಫೋನ್ ಐಓಎಸ್‌ನಲ್ಲಿ ಲಭ್ಯವಾಗಿದೆ. ಹೀಗಾಗಿ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಬ್ಬರು ಸಹ ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ಗೆ ಶೇರ್ ಮಾಡಬಹುದಾಗಿದೆ.

ವಾಟ್ಸಪ್‌ ಸ್ಟೇಟಸ್‌ ಫೇಸ್‌ಬುಕ್‌ಗೆ ಶೇರ್ ಮಾಡಲು ಹೀಗೆ ಮಾಡಿರಿ

ವಾಟ್ಸಪ್‌ ಸ್ಟೇಟಸ್‌ ಫೇಸ್‌ಬುಕ್‌ಗೆ ಶೇರ್ ಮಾಡಲು ಹೀಗೆ ಮಾಡಿರಿ

* ನಿಮ್ಮ ವಾಟ್ಸಪ್‌ ತೆರೆಯಿರಿ
* ವಾಟ್ಸಪ್‌ ಸ್ಟೇಟಸ್‌ ಅಪ್‌ಲೋಡ್‌ ಮಾಡಿರಿ(ಟೆಕ್ಸ್ಟ್‌, ವಿಡಿಯೊ ಅಥವಾ ಫೋಟೊ)
* ವಾಟ್ಸಪ್‌ನ ಸ್ಟೇಟಸ್‌ ಬಲ ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳು (ಡಾಟ್ಸ್‌) ಕ್ಲಿಕ್ಕ್ ಮಾಡಿರಿ.
* ಆಗ ಕಾಣಿಸುವ ಶೇರ್ ಆಯ್ಕೆಗಳಲ್ಲಿ ಫೇಸ್‌ಬುಕ್ ಅನ್ನು ಸೆಲೆಕ್ಟ್ ಮಾಡಿರಿ.
* ನಂತರದಲ್ಲಿ ಫೇಸ್‌ಬುಕ್ ಆಕ್ಸಸ್ ಮಾಡಲು ನಿಮ್ಮ ಅನುಮತಿ ಕೇಳುತ್ತದೆ. ಆಗ ಓಪೆನ್ ಆಯ್ಕೆ ಟ್ಯಾಪ್ ಮಾಡಿರಿ.
* ಆನಂತರದಲ್ಲಿ ಫೇಸ್‌ಬುಕ್ ಸ್ಟೋರಿಗೆ ಸ್ಟೇಟಸ್‌ ಶೇರ್ ಮಾಡಿರಿ.

Best Mobiles in India

English summary
The feature to share WhatsApp Status as Facebook Story is available on both the stable version of WhatsApp Android and iOS based apps. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+