ರಿಲಾಯನ್ಸ್ ಜಿಯೋ ಸಿಗ್ನಲ್ ಸಮಸ್ಯೆಗೆ ಪರಿಹಾರ ಇಲ್ಲಿದೆ
ರಿಲಾಯನ್ಸ್ ಜಿಯೋ ಈಗ ದೇಶದಲ್ಲಿ ಹೆಚ್ಚು ಚರ್ಚೆಯ ಸುದ್ದಿಯಾಗಿದೆ. ಈಗಾಗಲೇ ಈ ಸೇವೆಯು 1.5 ಬಿಲಿಯನ್ ಗ್ರಾಹಕರನ್ನು ತಲುಪಿದ್ದು, ಇದು ಭಾರೀ ಸಂಖ್ಯೆಯಾಗಿದೆ, ಈ ಸೇವೆಯು ಇನ್ನೂ ಟ್ರಯಲ್ ಮಾದರಿಯಲ್ಲಿದೆ. ಸೇವೆಯು 4ಜಿ ಸಕ್ರಿಯವಾಗಿರುವ ಸ್ಮಾರ್ಟ್‌ಫೋನ್‌ಗಳಿಗೆ ಲಭ್ಯವಿದ್ದು, ಈ ಸಿಮ್ ಅನ್ನು 3ಜಿ ಸೇವೆಗಳಿಗೆ ಬಳಸಬಹುದಾದ ಟ್ರಿಕ್ಸ್ ಅನ್ನು ಅರಿತುಕೊಂಡು ಅಂತೆಯೇ ಮಾಡಿದ್ದೇವೆ. ಹೆಚ್ಚಿನ ಬಳಕೆದಾರರು ದುರ್ಬಲ ಸಿಗ್ನಲ್ ಸಮಸ್ಯೆ ಮತ್ತು ನೆಟ್‌ವರ್ಕ್ ಸಮಸ್ಯೆಗಳಂತಹ ದೂರನ್ನು ದಾಖಲಿಸಿದ್ದಾರೆ.
ಓದಿರಿ: ರಿಲಾಯನ್ಸ್ ಜಿಯೋ ಸಿಮ್ ಬೆಂಬಲಿಸುವ 4ಜಿ ಸ್ಮಾರ್ಟ್‌ಫೋನ್‌ಗಳು
ಇಂದಿನ ಲೇಖನದಲ್ಲಿ ಇಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಹೇಗೆ ಎಂಬುದರ ಕುರಿತಾದ ಟ್ರಿಕ್ಸ್‌ಗಳನ್ನು ನೀಡುತ್ತಿದ್ದು ಸ್ಲೈಡರ್‌ಗಳಲ್ಲಿ ಮಾಹಿತಿಯನ್ನು ಕಂಡುಕೊಳ್ಳಬಹುದಾಗಿದೆ.

ನೆಟ್‌ವರ್ಕ್ ಅನ್ನು ಹಸ್ತಚಾಲಿತವಾಗಿ ಆರಿಸಿ
ಸೆಟ್ಟಿಂಗ್ಸ್‌ನಲ್ಲಿ ನೆಟ್‌ವರ್ಕ್‌ಗಳಿಗಾಗಿ ಸಿಗ್ನಲ್ ಅನ್ನು ಹಸ್ತಚಾಲಿತವಾಗಿ ಹುಡುಕಾಡಿ. ಸೆಟ್ಟಿಂಗ್ಸ್ > ಮೋರ್ > ಮೊಬೈಲ್ ನೆಟ್‌ವರ್ಕ್ಸ್ > ನೆಟ್‌ವರ್ಕ್ ಆಪರೇಟರ್ > ಸರ್ಚ್ ಮ್ಯಾನುವಲಿ > ನಂತರ ಕೊನೆಯದಾಗಿ, ರಿಲಾಯನ್ಸ್ ಜಿಯೋ ಆಯ್ಕೆಮಾಡಿ. ಹೀಗೆ ಮಾಡುವುದರ ಮೂಲಕ ನಿಮ್ಮ ಸಿಗ್ನಲ್‌ಗೆ ನೀವು ಮರಳಿ ಬರಬಹುದಾಗಿದೆ.

ಹೊಸ ಎಪಿಎನ್ ರಚಿಸಿಕೊಳ್ಳಿ
ನಿಮ್ಮ ಮೊಬೈಲ್‌ನಲ್ಲಿ ಹೊಸ ಎಪಿಎನ್ ಅನ್ನು ರಚಿಸಿಕೊಳ್ಳುವುದು ಇನ್ನೊಂದು ವಿಧಾನವಾಗಿದೆ. ಪ್ರಥಮ ಹಂತ ತತ್ಕಾಲಿಕವಾಗಿದ್ದು ಈ ಹಂತ ಶಾಶ್ವತವಾಗಿದೆ. ಇದರಲ್ಲಿ ಸಿಗ್ನಲ್ ಅನ್ನು ನೀವು ಶಾಶ್ವತವಾಗಿ ಪಡೆದುಕೊಳ್ಳಬಹುದಾಗಿದೆ.

ಹಿಂದಿನ ಎಪಿಎನ್ ಅನ್ನು ಡಿಲೀಟ್ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹಿಂದಿನ ಎಪಿಎನ್ ಅನ್ನು ಡಿಲೀಟ್ ಮಾಡಿ ಮತ್ತು 'ಜಿಯೋನೆಟ್' ಹೆಸರಿರುವ ಹೊಸ ಎಪಿಎನ್ ಅನ್ನು ರಚಿಸಿ. ಇದಕ್ಕಾಗಿ ಸೆಟ್ಟಿಂಗ್ಸ್ > ಮೋರ್ > ಮೊಬೈಲ್ ನೆಟ್‌ವರ್ಕ್ > ಆಕ್ಸೆಸ್ ಪಾಯಿಂಟ್ ನೇಮ್ಸ್ > ಕ್ರಿಯೇಟ್ ನ್ಯೂ ಎಪಿಎನ್ ಇದಕ್ಕೆ ಹೋಗಿ.

ಎಪಿಎನ್‌ಗಾಗಿ ಡೀಫಾಲ್ಟ್ ಸೆಟ್ಟಿಂಗ್ಸ್
ಮೂರನೇ ಹಂತವನ್ನು ಅನುಸರಿಸಿದ ನಂತರ, ನೀವು ರಚಿಸಿಕೊಂಡ ಎಪಿಎನ್ ಹೆಸರನ್ನು ನಮೂದಿಸಿ. ನಿಮ್ಮದೇ ಹೆಸರನ್ನು ನೀವಿಲ್ಲಿ ನಮೂದಿಸಬಹುದಾಗಿದೆ, ಆದರೆ ಎಪಿಎನ್ ಮಾತ್ರ 'ಜಿಯೋನೆಟ್' ಎಂದಾಗಿರಬೇಕು.

ಸೇವ್ ಮತ್ತು ಸ್ಮಾರ್ಟ್‌ಫೋನ್ ರಿಬೂಟ್ ಮಾಡಿ
ಹೊಸ ಎಪಿಎನ್ ಅನ್ನು ರಚಿಸಿಕೊಂಡ ನಂತರ, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ರಿಬೂಟ್ ಮಾಡಿಕೊಳ್ಳಬೇಕು. ರಿಬೂಟ್ ಮಾಡಿಕೊಂಡ ನಂತರ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಸಿಗ್ನಲ್ ಕಂಡುಬರುತ್ತದೆ ಮತ್ತು 90 ದಿನಗಳಿಗಾಗಿ ರಿಲಾಯನ್ಸ್ ಜಿಯೋ ಸೇವೆಗಳನ್ನು ನಿಮಗೆ ಆನಂದಿಸಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸಿಗ್ನಲ್ ದೊರಕಿಲ್ಲ ಎಂದಾದಲ್ಲಿ 2-5 ಹಂತಗಳನ್ನು ಪುನಃ ಅನುಸರಿಸಿ.


Click it and Unblock the Notifications








