ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ಸಂಪರ್ಕ ವೇಗಗೊಳಿಸುವುದು ಹೇಗೆ?
ಹೋ... ಗಾಡ್!! ಯಾವ 3G ಇದ್ರೇನು, 4G ಇದ್ರೇನು!! ನೆಟ್ ಮಾತ್ರ ಬೇಗ ಕನೆಕ್ಟ್ ಆಗಲ್ಲ. ಇದು ಸ್ಮಾರ್ಟ್‌ಫೋನ್ ಬಳಸುವವರ ಎಲ್ಲರ ಸಮಸ್ಯೆ. ಅದರಲ್ಲೂ ಫೇಸ್‌ಬುಕ್‌ನಂತ ಸಾಮಾಜಿಕ ಜಾಲತಾಣ ಓಪನ್ ಮಾಡಿದರಂತು ಇಂಟರ್ನೆಟ್‌ಸಂಪರ್ಕ ಇನ್ನೂ ಸಹ ನಿಧಾನವಾಗಿಬಿಡುತ್ತದೆ. ಅಂದಹಾಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್ ವೇಗಗೊಳ್ಳಬೇಕೆ? ಹಾಗಾದ್ರೆ ಗಿಜ್‌ಬಾಟ್ ಇಂದಿನ ಲೇಖನದಲ್ಲಿ ನೀಡಿರುವ ಸರಳ ವಿಧಾನವನ್ನು ಅನುಸರಿಸಿ. ಸ್ಮಾರ್ಟ್‌ಫೋನ್‌ನಲ್ಲಿ ಅತಿವೇಗವಾಗಿ ವೆಬ್‌ಪೇಜ್ ಲೋಡಿಂಗ್ ಪಡೆಯಿರಿ. ಅಂದಹಾಗೆ ಒಂದಷ್ಟು ಅನಗತ್ಯ ಅಪ್ಲಿಕೇಶನ್‌ಗಳನ್ನು ಸ್ಮಾರ್ಟ್‌ಫೋನ್‌ನಲ್ಲಿ ಅನ್‌ಇನ್‌ಸ್ಟಾಲ್ ಮಾಡಿ.

1
ಮೊದಲನೇಯದಾಗಿ ನಿಮ್ಮ ಆಂಡ್ರಾಯ್ಡ್ ಫೋನ್‌ಗಳಲ್ಲಿ ಲೇಟೆಸ್ಟ್ ಗೂಗಲ್ ಕ್ರೋಮ್ ವರ್ಸನ್ ಅನ್ನು ಅಪ್‌ಡೇಟ್ ಮಾಡಿ.

2
ಲೇಟೆಸ್ಟ್ ಗೂಗಲ್ ಕ್ರೋಮ್ ಅಪ್ಲಿಕೇಶನ್ ಅನ್ನು ಟ್ಯಾಪ್ ಮಾಡುವ ಮೂಲಕ ಓಪೆನ್ ಮಾಡಿ ಯುಆರ್‌ಎಲ್ ಸರ್ಚ್ ಬಾರ್‌ನಲ್ಲಿ chrome://Flags ಎಂದು ಟೈಪ್ ಮಾಡಿ, ಎಂಟರ್ ಬಟನ್ ಪ್ರೆಸ್‌ಮಾಡಿ.

3
ಹೈಡೆನ್ ಆಗಿರುವ ಹೆಚ್ಚು ಫೈಲ್‌ಗಳು ಅಲ್ಲಿ ಓಪೆನ್ ಆಗುತ್ತವೆ. ಅಲ್ಲಿ 'Maximum tiles for interest area Mac, Windows, Linux, Chrome OS, Android '' ಆಯ್ಕೆಗಳನ್ನು ಸರ್ಚ್ ಮಾಡಿ. ಉದಾಹರಣೆಗೆ ಫೋಟೋ ನೋಡಿ ಅದನ್ನು ಅನುಸರಿಸಿ.

4
'Maximum tiles for interest area Mac, Windows, Linux, Chrome OS, Android '' ಆಯ್ಕೆಗಳಿರುವಲ್ಲಿ, Default ಎಂಬ ಬಟನ್ ಮೇಲೆ ಟ್ಯಾಪ್‌ಮಾಡಿ. ಅಲ್ಲಿ ನಿಮಗೆ ವಿಡ್ತ್‌ನ ಸಾಮರ್ಥ್ಯಗಳು 128, 256, 512, 1024 ಎಂದು ಕಾಣುತ್ತವೆ. ಅಲ್ಲಿ ನೀವು ಗರಿಷ್ಟ ಸಾಮರ್ಥ್ಯ 512 ಅಥವಾ 1024 ಕ್ಕೆ ಕ್ಲಿಕ್ ಮಾಡಿ ಬದಲಿಸಿ. ಸ್ಲೈಡರ್‌ನ ಫೋಟೋ ಅನುಸರಿಸಿ.

5
ನಂತರದಲ್ಲಿ ಕೆಳಗೆ Relaunch Now ಬಟನ್‌ಕಾಣುತ್ತದೆ ಅದನ್ನು ಟ್ಯಾಪ್ ಮಾಡಿ.

6
ಮೇಲಿನ ಹಂತಗಳನ್ನು ಅನುಸರಿಸಿದ ನಂತರದಲ್ಲಿ ನಿಮ್ಮ ಆಂಡ್ರಾಯ್ಡ್ ಗೂಗಲ್ ಕ್ರೋಮ್ ಅಪ್ಲಿಕೇಶನ್ ಹಿಂದಿನಕ್ಕಿಂತ ಈಗ ವೇಗವಾಗಿ ವೆಬ್‌ಪೇಜ್‌ಗಳನ್ನು ಲೋಡ್ ಮಾಡುತ್ತದೆ. ಅಲ್ಲದೇ ಹೆಚ್ಚು ಟ್ಯಾಬ್‌ಗಳನ್ನು ಒಮ್ಮೆಯೇ ವೇಗವಾಗಿ ಓಪೆನ್ ಮಾಡಬಹುದು.

7
ಗೂಗಲ್ ಕ್ರೋಮ್‌ನಲ್ಲಿನ ಹೈಡೆನ್ ಸೆಟ್ಟಿಂಗ್ಸ್‌ಗಳನ್ನು ಸರಳವಾಗಿ ಬದಲಿಸಿ ನಿಮ್ಮ ನೆಟ್ ಸಂಪರ್ಕ ವೇಗಗೊಳಿಸಿ.

ಗಿಜ್‌ಬಾಟ್



Click it and Unblock the Notifications








