ಯಾವುದೇ ಸಿನಿಮಾಗಳಿಗೆ VLC ಮೀಡಿಯಾ ಪ್ಲೇಯರ್‌ನಲ್ಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ?

By Suneel
|

ಇಂದು ಪ್ರತಿಯೊಬ್ಬರು ಸಹ ಟ್ರೆಂಡ್‌ ಸೆಟ್ಟರ್ ಆಗುತ್ತಿದ್ದಾರೆ. ಟೆಕ್‌ ಬಳಸುವ ಹವ್ಯಾಸದಲ್ಲಿ ಎಲ್ಲಾ ವಯಸ್ಸಿನವರು, ಎಲ್ಲಾ ಪ್ರದೇಶದವರು ಸಹ ಮುಂಚೂಣಿಯಲ್ಲಿದ್ದಾರೆ. ಹಾಗೆ ಇನ್ನೂ ಸಿನಿಮಾ ನೋಡುವ ಹವ್ಯಾಸದಲ್ಲಂತು ಒಂದು ಕೈ ಮೇಲೆ. ಸಿನಿಮಾ ಚೆನ್ನಾಗಿದೆ ಅಂದ್ರೆ ಯಾವುದೇ ಭಾಷೆಯ ಸಿನಿಮಾ ಆದ್ರು ಪರವಾಗಿಲ್ಲಾ ನಾವು ನೋಡಲೇಬೇಕು ಅನ್ನೋ ಬಹುಸಂಖ್ಯಾತರು ಇದ್ದಾರೆ. ಆದ್ರೆ ಸಣ್ಣ ಕೋರಿಕೆ ಅಂದ್ರೆ ಅಟ್‌ ಲೀಸ್ಟ್‌ ಸಬ್‌ಟೈಟಲ್‌ ಇರಬೇಕು ಅಂತಾರೆ ಅಷ್ಟೆ.

ಸಿನಿಮಾ ಬಗ್ಗೆ ಹೇಳಲು ಕಾರಣ ಅಂದ್ರೆ ಇಂದು ಸಿನಿಮಾಗಳನ್ನು ಕಂಪ್ಯೂಟರ್‌ನಲ್ಲಿ ನೋಡುವವರ ಸಂಖ್ಯೆ ಮತ್ತು ಹವ್ಯಾಸಿಗಳು ಹೆಚ್ಚಾಗಿದ್ದು, ಅವರಿಗೆ ಸಬ್‌ಟೈಟಲ್‌ ಇದ್ರೆ ಸಾಕು. ಯಾಕಂದ್ರೆ ಕೆಲವು ಸಿನಿಮಾಗಳು ಸಬ್‌ಟೈಟಲ್‌ ಇದ್ರೆ ಅಧಿಕ ಮನರಂಜನಾತ್ಮಕವಾಗಿಯೂ, ಮೌಲ್ಯಯುತವಾಗಿಯೂ ನೋಡಿಸಿಕೊಳ್ಳುತ್ತದೆ. ಸಮಸ್ಯೆ ಏನಪ್ಪಾ ಅಂದ್ರೆ ಕೆಲವು ಸಿನಿಮಾಗಳು ಸಬ್‌ಟೈಟಲ್‌ ಅನ್ನು ಹೊಂದಿರುವುದೇ ಇಲ್ಲಾ. ಅಂತಹ ಸಿನಿಮಾಗಳಿಗೆ ಸಬ್‌ಟೈಟಲ್‌ ಪಡೆಯುವುದು ಹೇಗೆ ಎಂಬುದು ಹಲವರ ಪ್ರಶ್ನೆ. ಈ ಕಾರಣದಿಂದ ಗಿಜ್‌ಬಾಟ್ ಈ ಲೇಖನದಲ್ಲಿ ವಿಎಲ್‌ಸಿ ಮೀಡಿಯಾ ಪ್ಲೇಯರ್‌ (VLC Media Player)ಗೆ ಆಟೋಮೆಟಿಕಲಿ ಸಬ್‌ಟೈಟಲ್‌ ಪಡೆಯುವುದು ಹೇಗೆ ಎಂಬುದನ್ನು ತಿಳಿಸುತ್ತಿದೆ.

ನಾವು ತಿಳಿಸುವ ವಿಧಾನದಿಂದ ವಿಎಲ್‌ಸಿ ಮೀಡಿಯಾ ಪ್ಲೇಯರ್‌ನೊಂದಿಗೆ ಸರಳವಾಗಿ ಆನ್‌ಲೈನ್‌ನಿಂದ ಸಬ್‌ಟೈಟಲ್‌ ಡೌನ್‌ಲೋಡ್‌ ಮಾಡಬಹುದಾಗಿದೆ.

1

1

ಮೊದಲಿಗೆ ನಿಮ್ಮ ಕಂಪ್ಯೂಟರ್‌ಗೆ Vlsub extension ಡೌನ್‌ ಮಾಡಿಕೊಳ್ಳಬೇಕು. ನಂತರ ZIP ಫೈಲ್‌ ಅನ್ನು ವಿಸ್ತರಿಸಿ( extract) ಅಲ್ಲಿನ 'vlsub' ವಿಸ್ತರಣೆಯನ್ನು ನಕಲಿಸಿ(copy). ನಂತರ ಲೊಕೇಶನ್‌ 'C:Program Files (x86)/VideoLAN/VLC/lua' ಗೆ ಹೋಗಿ ಅಲ್ಲಿ ಒಂದು ಹೊಸ ಫೋಲ್ಡರ್‌ ಅನ್ನು extension ಎಂದು ಕ್ರಿಯೇಟ್ ಮಾಡಿ. ಕ್ರಿಯೇಟ್‌ ಮಾಡಿದ ಫೋಲ್ಡರ್‌ ಒಳಗೆ ನೀವು ನಕಲಿಸಿ ಕೊಂಡ 'vlsub' ಅನ್ನು ಪೇಸ್ಟ್‌ (paste) ಮಾಡಿ.

2

2

ಈ ಹಂತದಲ್ಲಿ ಕಂಪ್ಯೂಟರ್‌ನಲ್ಲಿನ ವಿಎಲ್‌ಸಿ ಮೀಡಿಯಾ ಪ್ಲೇಯರ್‌ ಅನ್ನು ಓಪನ್‌ ಮಾಡಿ. View ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು vlsub ಆಯ್ಕೆಯನ್ನು ನೋಡಬಹುದು.

3

3

ಈ ಹಂತದಲ್ಲಿ ನಿಮ್ಮ ನೆಚ್ಚಿನ ಸಿನಿಮಾವನ್ನು ನೋಡಲು ವಿಎಲ್‌ಸಿ ಪ್ಲೇಯರ್‌ನಲ್ಲಿ ಪ್ಲೇ ಮಾಡಿ. ನಂತರ View ಆಯ್ಕೆಯಲ್ಲಿ visub extension ಮೇಲೆ ಕ್ಲಿಕ್‌ ಮಾಡಿ. ನಂತರ ಓಪನ್‌ ಆಗುವ ಡಯಲಾಗ್‌ ಬಾಕ್ಸ್‌ನಲ್ಲಿ ನಿಮ್ಮ ಸಿನಿಮಾಗೆ ಸಬ್‌ಟೈಟಲ್‌ ಅನ್ನು ಸರ್ಚ್‌ ಮಾಡಿ.

4

4

ಈ ಹಂತದಲ್ಲಿ ನಿಮ್ಮ ಸಿನಿಮಾ ಟೈಟಲ್‌ ಸರ್ಚ್‌ ಮಾಡಿದ ನಂತರ, ನಿಮ್ಮ ನೆಚ್ಚಿನ ಸಬ್‌ಟೈಟಲ್‌ ಫೈಲ್‌ ಅನ್ನು ಆಯ್ಕೆ ಮಾಡಿ ನಂತರ ಡಯಲಾಗ್ ಬಾಕ್ಸ್‌ನ ಕೆಳಗೆ "Download Selection" ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

5

5

ಹಿಂದಿನ ಸ್ಲೈಡರ್‌ನಲ್ಲಿ ತಿಳಿಸಿದ ಸರಳ ವಿಧಾನದಿಂದ ನಿಮಗೆ ಬೇಕಾದ ಸಿನಿಮಾಗಳಿಗೆ ಸರಳವಾಗಿ ವಿಎಲ್‌ಸಿ ಮೀಡಿಯಾ ಪ್ಲೇಯರ್‌ನಲ್ಲೇ ವೇಗವಾಗಿ ಸಬ್‌ಟೈಟಲ್‌ ಪಡೆಯಬಹುದಾಗಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?ಸ್ಮಾರ್ಟ್‌ಫೋನ್‌ನ ವೈರಸ್ ನಿವಾರಣೆ ಹೇಗೆ?

ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?ಬ್ಲಾಕ್ ಮಾಡಿದ ಯೂಟ್ಯೂಬ್ ವೀಡಿಯೊ ವೀಕ್ಷಣೆ ಹೇಗೆ?

ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
How to Download Subtitles Automatically In VLC Media Player for any movie. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X