ಸ್ಮಾರ್ಟ್‌ಫೋನ್‌ ಸ್ಪೀಡ್‌ ಹೆಚ್ಚಿಸುವುದು ಹೇಗೆ ?

By Ashwath
|

ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಾದಂತೆ ಕೆಲವರ ಸ್ಮಾರ್ಟ್‌ಫೋನ್‌ಗಳು ಆರಂಭದಲ್ಲಿದ್ದ ವೇಗಕ್ಕಿಂತ ತುಂಬಾ ತಡವಾಗಿ ಡೇಟಾವನ್ನು ಪ್ರೋಸೆಸಿಂಗ್‌ ಮಾಡುತ್ತಿರುತ್ತದೆ. ಈ ರೀತಿ ಆದಾಗ ಬಹಳಷ್ಟು ಜನರು ಸ್ಮಾರ್ಟ್‌ಫೋನ್‌ ಯಾವುದೋ ಅಂಶ ಹಾಳಾಗಿದೆ ಎಂದು ತಿಳಿದು ಸರ್ವಿಸ್‌ ಸೆಂಟರ್‌ನಲ್ಲಿ ರಿಪೇರಿ ಕೊಡುತ್ತಾರೆ. ನಿಜವಾಗಿ ಏನು ಆಗಿರುವುದಿಲ್ಲ. ಇತ್ತೀಚಿನ ಆಂತರಿಕ ಮೊಮೋರಿ ಹೆಚ್ಚಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ಸಮಸ್ಯೆ ಕಡಿಮೆ. ಆದ್ರೆ ಜಿಂಜರ್‌ಬ್ರಿಡ್‌ ಓಎಸ್‌ ಇದ್ದು ಕಡಿಮೆ RAM ಹೊಂದಿರುವ ಸ್ಮಾರ್ಟ್‌ಫೋನಿಲ್ಲಿ ಈ ಸಮಸ್ಯೆ ಸ್ವಲ್ಪ ಹೆಚ್ಚು.

ಸ್ಮಾರ್ಟ್‌ಫೋನ್‌ ಪ್ರೋಸೆಸರ್‌ ವೇಗ ಕಡಿಮೆಯಾದ್ರೆ ನಮಗೆಲ್ಲ ಕಿರಿಕಿರಿ ಆಗುತ್ತದೆ. ಹೀಗಾಗಿ ಗಿಜ್ಬಾಟ್‌ ಸ್ಮಾರ್ಟ್‌ಫೋನ್ ವೇಗವಾಗಿ ಕೆಲಸಮಾಡಬೇಕಾದ್ರೆ ಏನು ಮಾಡಬೇಕು ಎಂಬುದಕ್ಕೆ ಕೆಲವು ಉಪಯುಕ್ತ ಮಾಹಿತಿಗಳನ್ನು ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.

ಇದನ್ನೂ ಓದಿ : ಫೇಸ್‌ಬುಕ್‌ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸೆಟ್ಟಿಂಗ್ಸ್‌ ಆಯ್ಕೆಯನ್ನು ಆರಿಸಿ, ಎಸ್‌ಡಿ ಕಾರ್ಡ್ ಮತ್ತು ಫೋನ್‌ ಸ್ಟೋರೇಜ್‌ ಆಯ್ಕೆ ಆರಿಸಿದಾಗ ನೀವು ಸ್ಮಾರ್ಟ್‌ಫೋನ್‌ ಮೆಮೋರಿಯನ್ನು ನೋಡಬಹುದು. ಎಸ್‌ಡಿ ಕಾರ್ಡ್‌ನಲ್ಲಿ ಎಷ್ಟು ಮೆಮೋರಿ ಇದೆ ? ಜೊತೆಗೆ ನಿಮ್ಮ ಸ್ಮಾರ್ಟ್‌ಫೋನ್‌ ಮೆಮೋರಿಯನ್ನು ಚೆಕ್‌ ಮಾಡಿಕೊಳ್ಳಬಹುದು.

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಕೆಲವೊಮ್ಮೆ ಸೆಟ್ಟಿಂಗ್ಸ್‌ ಆಯ್ಕೆ ಬದಲಾಯಿಸುವಾಗ ತಪ್ಪಾಗಿ ಫೋನ್‌ ಮೆಮೋರಿಯಲ್ಲಿ ಸೇವ್‌ ಆಗುವಂತೆ ಆರಿಸಿದ್ರೆ ಸ್ಮಾರ್ಟ್‌ಫೋನ್‌ ತೆಗೆದ ಫೋಟೋ, ಎಂಪಿ3ಗಳು ಫೋನ್‌ ಮೆಮೋರಿಯಲ್ಲಿ ಸೇವ್‌ ಆಗುತ್ತದೆ. ಹಾಗಾಗಿ ಡೇಟಾಗಳನ್ನು ಯಾವಾಗ್ಲೂ ಮೆಮೋರಿ ಕಾರ್ಡ್‌ನಲ್ಲಿ ಸೇವ್‌ ಆಗುವಂತೆ ಆಯ್ಕೆಯನ್ನು ಆರಿಸಿ.

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಗೂಗಲ್ ಪ್ಲೇಸ್ಟೋರ್‌ನಲ್ಲಿ ಉತ್ತಮದ ಆಂಟಿವೈರಸ್‌ಗಳು ಅಪ್ಲಿಕೇಶನ್‌ಗಳು ಇದೆ. ಅವುಗಳಲ್ಲಿ ಯಾವುದಾದ್ರೂ ಒಂದನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ.

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಕೆಲವೊಮ್ಮೆ ಪ್ರಯೋಗ ಮಾಡಿ ಅಪ್ಲಿಕೇಶನ್‌ಗಳನ್ನು ಹೇಗಿದೆ ಎಂದು ತಿಳಿಯುವುದಕ್ಕಾಗಿ ಬಹಳಷ್ಟು ಜನ ಪ್ಲೇಸ್ಟೋರ್‌ನಿಂದ ಆಪ್ಸ್‌ ಡೌನ್‌ಲೋಡ್‌ ಮಾಡಿರುತ್ತಾರೆ. ಹಾಗಾಗಿ ನೀವು ಪ್ರತಿದಿನ ಬಳಸುವ ಅಪ್ಲಿಕೇಶನ್‌ ಉಳಿಸಿಕೊಂಡು ಉಳಿದ ಬಳಸದೇ ಇರುವಂತಹ ಅನಗತ್ಯ ಅಪ್ಲಿಕೇಶನ್‌ ಅನ್‌ಇನ್‌ಸ್ಟಾಲ್‌ ಮಾಡಿ.

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಫೋನ್‌ನಂಬರ್‌ಗಳು ಮತ್ತು ವೆಬ್‌ ಅಪ್ಲಿಕೇಶನ್‌ಗಳು (ಫೇಸ್‌ಬುಕ್‌,ಮೆಸೆಂಜರ್‌) ಅಟೋಮ್ಯಾಟಿಕ್‌ ಸಿಂಕ್‌ ಆಗಿದ್ರೆ ಈ ಸೌಲಭ್ಯವನ್ನು ಆಫ್‌ ಮಾಡಿದರೆ ಉತ್ತಮ

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಕೆಲವೊಮ್ಮೆ ಈ ಆಯ್ಕೆಯೂ ಕೆಲಸ ಮಾಡುತ್ತದೆ. ತಾತ್ಕಲಿಕವಾಗಿ ನೀವು ಸ್ಮಾರ್ಟ್‌ಫೋನ್‌ ಪವರ್‌ ಆಫ್‌ ಮಾಡಿ ವೇಗ ಹೆಚ್ಚಿಸಬಹುದು.

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಸ್ಮಾರ್ಟ್‌ಫೋನ್‌ ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ?

ಈ ಮೊದಲು ತಿಳಿಸಿದ ಮಾಹಿತಿಗಳನ್ನು ಓದಿ ತಿಳಿದು ಪ್ರಯೋಗ ಮಾಡಿಯೂ ನಿಮ್ಮ ಸ್ಮಾರ್ಟ್‌ಫೋನ್‌ ನಿಧನವಾಗಿ ಕೆಲಸ ಮಾಡುತ್ತಿದ್ದರೆ, ಕೊನೆಯದಾಗಿ ನೀವು ಫ್ಯಾಕ್ಟರಿ ಡೇಟಾ ರೀಸೆಟ್‌ ಮಾಡಬಹುದು.ಈ ಆಯ್ಕೆಯನ್ನು ಆರಿಸಿದ್ದಲ್ಲಿ ಮೊಬೈಲ್‌ ಖರೀದಿಸುವಾಗ ಹೇಗೆ ಇತ್ತೋ ಅದೇ ರೀತಿಯಾಗಿ ನಿಮ್ಮ ಸ್ಮಾರ್ಟ್‌ಫೋನ್‌ ಬದಲಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿರುವ ಅಪ್ಲಿಕೇಶನ್‌ ಮತ್ತು ಫೋನ್‌ ಮೆಮೋರಿಯಲ್ಲಿರುವ ಎಲ್ಲಾ contactsಗಳು ಡಿಲೀಟ್‌ ಆಗುತ್ತವೆ.

ಸ್ಮಾರ್ಟ್‌ಫೋನ್‌ನಲ್ಲಿರುವ ಪ್ರೈವೆಸಿ ಸೆಟ್ಟಿಂಗ್ಸ್‌ ಹೋಗಿ ಫ್ಯಾಕ್ಟರಿ ಡೇಟಾವನ್ನು ರೀಸೆಟ್‌ ಮಾಡಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X