Subscribe to Gizbot

ಫೇಸ್‌ಬುಕ್‌ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

Posted By:

ಫೇಸ್‌ಬುಕ್‌ ಹೆಸರು ಕೇಳದವರು ಯಾರಿದ್ದಾರೆ ಹೇಳಿ? ನಾವು ಇ ಮೇಲ್‌ ಚೆಕ್‌ ಮಾಡದಿದ್ದರೂ ಫೇಸ್‌ಬುಕ್‌ನ್ನು ಚೆಕ್‌ ಮಾಡುತ್ತೇವೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌. ಹಾವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ವೇಳೆ ತಮ್ಮ ಕಾಲೇಜಿನ ಗೆಳೆಯರಾದ ಎಡ್ವಾರ್ಡೊ ಸೆವರಿನ್‌ ಡಸ್ಟಿನ್‌ ಮಸ್ಕೊವಿಟ್ಸ, ಕ್ರಿಸ್‌ ಹ್ಯೂಸ್‌ ಸೇರಿ ಈ ಫೇಸ್‌ಬುಕ್‌ನ್ನು ಸಂಶೋಧಿಸಿದರು.

ಪ್ರಾರಂಭದಲ್ಲಿ ಈ ನೆಟ್‌ವರ್ಕ್ ಹಾವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಬೋಸ್ಟನ್‌, ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಂತಹ ಇತರ ವಿವಿಗಳಿಗೂ ವಿಸ್ತಾರಗೊಂಡಿತ್ತು. ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಕೊನೆಯದಾಗಿ 13 ವರ್ಷಕ್ಕಿಂತ ಮೇಲ್ಪಟ್ಟವರು ಸೇರಬಹುದಾಗಿತ್ತು. ಸದ್ಯ ಫೆಸ್‌ಬುಕ್‌ನ್ನು 300 ಮಿಲಿಯನ್‌ಗಳಿಗಿಂತಲೂ ಹೆಚ್ಚು ಜನ ಸಕ್ರಿಯವಾಗಿ ಉಪಯೋಗಿಸುತ್ತಿದ್ದಾರೆ.

ಇಂತಹ ಫೇಸ್‌ಬುಕ್‌ ವಿಶ್ವದೆಲ್ಲೆಡೆ ತನ್ನ ಬ್ರ್ಯಾಂಚ್‌ಗಳನ್ನು ತೆರೆದಿದೆ. ಅಷ್ಟೇ ಅಲ್ಲದೇ ಫೇಸ್‌ಬುಕ್‌ ತನ್ನ ಎಲ್ಲಾ ಬಳಕೆದಾರ ಮಾಹಿತಿಯನ್ನು ಸಂಗ್ರಹಿಸಿಲು ಡೇಟಾ ಸೆಂಟರ್‌ನ್ನು ತೆರದಿದೆ. ಅಮೆರಿಕದ ಪ್ರಿನ್‌ ರಿನ್‌ವಿಲ್ಲೆ ಒರೆಗಾನ್ನಲ್ಲಿ 210 ಮಿಲಿಯನ್‌ ಡಾಲರ್‌ ವೆಚ್ಚ ಮಾಡಿ ಡೇಟಾ ಸೆಂಟರ್‌ನ್ನು ನಿರ್ಮಿಸಿದೆ. ಈ ಡೇಟಾ ಕೇಂದ್ರ ದಿನದ 24 ಗಂಟೆ, ವಾರದ ಏಳು ದಿನವು ಸಹ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಈ ರೀತಿ ಇದು ಕೆಲಸ ಮಾಡುತ್ತಿರುವುದರಿಂದಲೇ ಫೇಸ್‌ಬುಕ್‌ ಇಂದು ವಿಶ್ವದ ದೊಡ್ಡ ಸೋಶೀಯಲ್‌ ನೆಟ್‌ವರ್ಕ್ ತಾಣವಾಗಿ ಬೆಳೆದಿದೆ.

ಇಂತಹ ದೊಡ್ಡ ಸಂಸ್ಥೆಯ ಡೇಟಾ ಸೆಂಟರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದೆ ತಾನೆ ? ನಿಮ್ಮ ಕುತೂಹಲ ತಣಿಸುವುದಕ್ಕಾಗಿಯೇ ಗಿಜ್ಬಾಟ್‌ ನಿಮಗಾಗಿಯೆ ಆ ಕೊಠಡಿಗಳಿರುವ ಚಿತ್ರ ತಂದಿದೆ. ಒಂದೊಂದೆ ಪುಟ ತಿರುವಿ ಆ ಕೊಠಡಿಗಳನ್ನು ನೋಡಿ...

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot