ಹುಷಾರ್!..ವಾಟ್ಸಾಪ್ ವಿಡಿಯೋ ಕಾಲ್‌ನಲ್ಲಿ ಈ ತಪ್ಪು ಎಂದಿಗೂ ಮಾಡಬೇಡಿ!
ಮೆಟಾ ಮಾಲೀಕತ್ವದ ವಾಟ್ಸಾಪ್ ಅಪ್ಲಿಕೇಶನ್ ಅತ್ಯುತ್ತಮ ಸಂವಹನ ಪ್ಲಾಟ್‌ಫಾರ್ಮ್ ಎನಿಸಿಕೊಂಡಿದೆ. ಈ ಆಪ್ ಮೂಲಕ ಮೆಸೆಜ್, ವಾಯಿಸ್ ಕರೆಗಳು ಮತ್ತು ವೀಡಿಯೊ ಕರೆಗಳನ್ನು ಸುಲಭವಾಗಿ ಮಾಡಬಹುದಾಗಿದೆ. ನಿಜಕ್ಕೂ ಇದು ಅನುಕೂಲಕರ ಆಪ್ ಆಗಿದ್ದರೂ, ವಾಟ್ಸಾಪ್ ತಾಣದಲ್ಲಿ ವಂಚನೆಗಳು ಮತ್ತು ಸೈಬರ್ ಬೆದರಿಕೆಗಳ ಘಾಟು ಇದೆ.
ಹೌದು, ವಾಟ್ಸಾಪ್ ಅಪ್ಲಿಕೇಶನ್‌ನಲ್ಲಿ ವಿಡಿಯೋ ಕರೆಯ ಸೇವೆಯು ಹೆಚ್ಚಿ ಜನಪ್ರಿಯ ಪಡೆದಿದ್ದು, ಅನೇಕರು ವಿಡಿಯೋ ಕರೆ ಮಾಡಲು ವಾಟ್ಸಾಪ್ ಬಳಕೆ ಮಾಡುತ್ತಾರೆ. ವಾಟ್ಸಾಪ್ ವಿಡಿಯೋ ಕರೆಯ ಮೂಲಕವೂ ವಂಚನೆಗಳು ಸೇರುತ್ತಿವೆ. ಅಂತಹವುಗಳಲ್ಲಿ WhatsApp Video Call Sextortion ಸಹ ಸೇರಿದೆ. ಇದ್ರಲ್ಲಿ ವಂಚಕರು ವಿಡಿಯೋ ಕರೆ ವೇಳೆ ಸೂಕ್ಷ್ಮ ಅಥವಾ ಖಾಸಗಿ ಮಾಹಿತಿಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಾರೆ.

ಈ ರೀತಿ ಬೆದರಿಕೆ ಹಾಕುವ ಮೂಲಕ ಬಳಕೆದಾರರನ್ನು ವಂಚಿಸುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ವಂಚನೆಗಳಿಂದ ಸುರಕ್ಷಿತವಾಗಿ ಇರಲು ವಾಟ್ಸಾಪ್ ವಿಡಿಯೋ ಕರೆ ಸೇವೆಯನ್ನು ಬಳಕೆ ಮಾಡುವ ಬಳಕೆದಾರರು ಕೆಲವು ಎಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಹಾಗಾದರೇ ವಾಟ್ಸಾಪ್ ವಿಡಿಯೋ ಕರೆ ವಂಚನೆಯಿಮದ ಸುರಕ್ಷಿತವಾಗಿರಲು ಅನುಸರಿಸಬಹುದಾದ ಕೆಲವು ಟಿಪ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಅಪರಿಚಿತ ಕರೆ ಬಗ್ಗೆ ಎಚ್ಚರವಹಿಸಿ
ವಾಟ್ಸಾಪ್ ಆಪ್‌ನಲ್ಲಿ ಅಪರಿಚಿತ ಅಲ್ಲವೇ ಅನುಮಾನಾಸ್ಪವಾದ ಯಾವುದೇ ವೀಡಿಯೊ ಕರೆಯನ್ನು ಸ್ವೀಕರಿಸಿದರೆ, ಎಚ್ಚರವಹಿಸಿ. ಅದಾಗ್ಯೂ, ವಂಚನೆಗಳ ಅಪಾಯದಿಂದ ದೂರ ಇರಲು ಅಪರಿಚಿತ ನಂಬರ್‌ಗಳ ಕರೆಗಳಿಗೆ ಉತ್ತರಿಸುವುದನ್ನು ತಪ್ಪಿಸುವುದು ಸೂಕ್ತ.
ವೈಯಕ್ತಿಕ ಮಾಹಿತಿ ಶೇರ್ ಮಾಡಬೇಡಿ
ಪ್ರಮುಖವಾಗಿ ಗುರುತು ಪರಿಚಯವಿಲ್ಲದ ನಂಬರ್‌ಗಳ ವೀಡಿಯೊ ಕರೆಗಳ ವೇಳೆ ಅವರು ಕೇಳಿದರೂ, ನಿಮ್ಮ ವೈಯಕ್ತಿಕ ಅಥವಾ ಖಾಸಗಿ ಮಾಹಿತಿಯನ್ನು ಶೇರ್ ಮಾಡುವ ಕೆಲಸ ಮಾಡಬೇಡಿ. ಏಕೆಂದರೆ ವಂಚಕರು ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ದುರ್ಬಳಕೆ ಮಾಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಗೌಪ್ಯತೆಯನ್ನು ಕಾಪಾಡಿ.
ಕರೆ ಮಾಡಿದವರ ಬಗ್ಗೆ ತಿಳಿಯಿರಿ
ವಿಡಿಯೋ ಕರೆಯಲ್ಲಿ ಮಾತು ಕತೆ ಪ್ರಾರಂಭಿಸುವ ಮೊದಲು ಅವರ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಅಥವಾ ಇತರ ಮಾರ್ಗಗಳ ಮೂಲಕ ಕರೆ ಮಾಡಿದವರ ಗುರುತನ್ನು ದೃಢೀಕರಿಸುವ ಕೆಲಸ ಮಾಡಿ. ವಂಚಕರು ನಿಮಗೆ ಪರಿಚಯ ಇರುವವರ ರೀತಿ ಮಾತನಾಡಬಹುದು ಅಥವಾ ನಿಮ್ಮನ್ನು ನಂಬಿಸುವ ಕೆಲಸ ಮಾಡಬಹುದು ಹೀಗಾಗಿ ದಿಢೀರನೇ ಅವರು ಹೇಳುವುದನ್ನು ನಂಬಲೇ ಬೇಡಿ.
ವಿಡಿಯೋ ಕರೆಗಳ ಸಮಯದಲ್ಲಿ ಗೊಂದಲವಾಗದಿರಿ
ಅಪರಿಚಿತರಿಂದ ವಾಟ್ಸಾಪ್ ವಿಡಿಯೋ ಕರೆಗಳ ಬಂದಾಗ, ಎಚ್ಚರ ವಹಿಸಿ ಮಾತನಾಡಿ. ಯಾವುದೇ ರೀತಿ ಗೊಂದಲ ಆಗದೆ ಜಾಗೃತವಾಗಿ ಮಾತನಾಡಿ. ಅವರು ಏನೇ ಖಾಸಗಿ ಮಾಹಿತಿ ಕೇಳಿದರೂ, ಬ್ಯಾಂಕ್ ಮಾಹಿತಿ ಕೇಳಿದರೂ ಎಚ್ಚರ ವಹಿಸಿ. ಓಟಿಪಿ ಆಗಲಿ, ಪಿನ್ ಆಗಲಿ ನೀಡದಿರಿ.
ಏನಾದರೂ ಅನುಮಾನ ಬಂದರೇ ವರದಿ ಮಾಡಿ
ಗೊತ್ತಿಲ್ಲದ ನಂಬರ್‌ನಿಂದ ಬಂದ ಕರೆಗಳ ಬಗ್ಗೆ ಎಚ್ಚರಿ ವಹಿಸಿ. ಅದಾಗ್ಯೂ, ಅಂತಹ ವಿಡಿಯೋ ಕರೆಗಳಿಂದ ನಿಮಗೆ ಏನಾದರೂ ಅನುಮಾನ ಎನಿಸಿದರೆ ಅಥವಾ ಅಸಹಜ ನಡವಳಿಕೆಯನ್ನು ಎನಿಸಿದರೆ, ಆ ಬಗ್ಗೆ ತಕ್ಷಣವೇ ವಾಟ್ಸಾಪ್ ಗೆ ನೀವು ವರದಿ ಮಾಡಬಹುದು. ಹೀಗೆ ವರದಿ ಮಾಡುವುದರಿಂದ ವಾಟ್ಸಾಪ್ ಸಂಸ್ಥೆಯು ವಂಚಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ನೆರವು ಮಾಡುತ್ತದೆ.
ಅಪರಿಚಿತ ನಂಬರ್ ಬ್ಲಾಕ್ ಮಾಡಿ
ಪರಿಚಯವಿಲ್ಲದ ಅಥವಾ ಅನುಮಾನಾಸ್ಪದವಾಗಿ ಕರೆ ಮಾಡುವವರಿಂದ ಅಪಾಯ ತಡೆಗಟ್ಟಲು ಅವರನ್ನು ಬ್ಲಾಕ್ ಮಾಡುವುದು ಸೂಕ್ತ. ವಾಟ್ಸಾಪ್ ಆಪ್‌ನಲ್ಲಿ ಆ ರೀತೀಯ ವಿಡಿಯೋ ಕರೆ ಬಂದರೆ, ಆ ನಂಬರ್ ಅನ್ನು ಬ್ಲಾಕ್ ಮಾಡಿಬಿಡಿ. ಬ್ಲಾಕ್ ಮಾಡಿದರೆ, ಆ ನಂಬರ್‌ನಿಂದ ಮತ್ತೆ ಕರೆಗಳಾಗಲಿ ಅಥವಾ ಎಸ್‌ಎಮ್‌ಎಸ್‌ಗಳಾಗಲಿ ಸ್ವೀಕರಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಇದರಿಂದ ವಂಚಕರಿಂದ ಅಪಾಯಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.


Click it and Unblock the Notifications








