Just In
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 17 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 17 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 18 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
Don't Miss
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Movies
ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹೇಗಿದೆ?
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಕುಟುಂಬದವರು ಎಲ್ಲೆಲ್ಲಿ ಇದ್ದಾರೆ ಎಂದು ಟ್ರ್ಯಾಕ್ ಮಾಡುವುದು ಹೇಗೆ?
ಮಕ್ಕಳು ಚಿಕ್ಕವರಾಗಿದ್ದಲ್ಲಿ ಅವರ ಮೇಲೆ ಒಂದು ಕಣ್ಣಿಟ್ಟು ನೋಡಿಕೊಳ್ಳುವುದು ಯಾವ ಫೋಷಕರಿಗೂ ಕಷ್ಟವಲ್ಲ. ಆದರೆ ಅದೇ ಮಕ್ಕಳು ದೊಡ್ಡವರಾದಂತೆ ಸ್ವತಂತ್ರರಾಗಿ ಓಡಾಡುತ್ತಾರೆ. ಇಂತಹ ಸಂದರ್ಭದಲ್ಲಿ ತಮ್ಮ ಮಕ್ಕಳು ಎಲ್ಲಿ ಹೋಗಿದ್ದಾರೆ ಎಂಬುದನ್ನೇ ಕಂಡುಹಿಡಿಯಲು ಸಾಧ್ಯವಿಲ್ಲ. ನಂತರದಲ್ಲಿ ಅವರು ಎಲ್ಲಿದ್ದಾರೆ ಎಂದು ತಿಳಿಯಲು ಆಗಾಗ ಮೆಸೇಜ್ ಮಾಡುವುದು, ಫೋನ್ ಕರೆ ಮಾಡುವುದು ಸಾಮಾನ್ಯವಾಗಿಬಿಡುತ್ತದೆ. ಕೇವಲ ಮಕ್ಕಳು ಮಾತ್ರವಲ್ಲ ಕುಟುಂಬದ ಸದಸ್ಯರು ಯಾರು ಯಾರು ಎಲ್ಲಿದ್ದಾರೆ ಎಂದು ಟ್ರ್ಯಾಕ್ ಮಾಡುವ ವಿಧಾನವನ್ನು ನಾವು ಇಂದು ತಿಳಿಸುತ್ತಿದ್ದೇವೆ.
ನೀವು ಇತರೆ ಪ್ರದೇಶದಲ್ಲಿದ್ದಲ್ಲಿ, ಗಂಡ ಅಥವಾ ಹೆಂಡತಿ ಎಲ್ಲಿದ್ದಾರೆ, ಮಕ್ಕಳು ಎಲ್ಲಿದ್ದಾರೆ, ಗರ್ಲ್ ಫ್ರೆಂಡ್ ಎಲ್ಲಿದ್ದಾಳೆ ಅಥವಾ ಬಾಯ್ ಫ್ರೆಂಡ್ ಎಲ್ಲಿದ್ದಾನೆ, ಕುಟುಂಬದ ಸದಸ್ಯರು ಯಾರು ಯಾರು ಎಲ್ಲಿದ್ದಾರೆ ಟ್ರ್ಯಾಕ್ ಮಾಡುವ ಸುಲಭ ವಿಧಾನವನ್ನು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಆದರೆ ಟ್ರ್ಯಾಕ್ ಮಾಡುವವರ ಮತ್ತು ಟ್ರ್ಯಾಕ್ ಮಾಡಲು ಬಯಸುವವರ ಇಬ್ಬರ ಬಳಿಯು ಸ್ಮಾರ್ಟ್ ಡಿವೈಸ್‌ಗಳಿರಬೇಕು.
ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

ಹಲವು ಮೊಬೈಲ್ ಆಪ್‌ಗಳು
ಹಲವು ಮೊಬೈಲ್ ಆಪ್‌ಗಳು ಡಿವೈಸ್ ಟ್ರ್ಯಾಕಿಂಗ್ ಮತ್ತು ಅಲರ್ಟ್ ಆಫರ್ ನೀಡುತ್ತವೆ. ಆದರೆ ನಾವು "Life360' ಆಪ್ ಅನ್ನು ಪರಿಚಯಿಸುತ್ತಿದ್ದು, ಈ ಆಪ್ ಮೂಲಕ ಟ್ರ್ಯಾಕ್ ಮಾಡಿದ ವ್ಯಕ್ತಿ ಆ ನಿರ್ದಿಷ್ಟ ಸ್ಥಳದಿಂದ ನಿರ್ಗಮಿಸಿದ ನೋಟಿಫಿಕೇಶನ್, ಎಲ್ಲೆಲ್ಲಿ ಹೋಗಿದ್ದರು ಎಂದು ತಿಳಿಯಬಹುದು. ಹಲವು ಗ್ರೂಪ್‌ಗಳನ್ನು ನಿರ್ವಹಿಸಬಹುದು. ಟ್ರ್ಯಾಕ್ ಮಾಡಲು ಬಯಸುವ ಎಲ್ಲರ ಡಿವೈಸ್‌ಗಳಲ್ಲೂ ಈ ಆಪ್ ಅನ್ನು ಸೆಟ್ ಮಾಡಿ. ಮುಂದಿನ ಸ್ಲೈಡರ್‌ಗಳನ್ನು ಓದಿರಿ.

Life360 ಆಪ್
* 'Life360' ಆಪ್ ಅನ್ನು ಡೌನ್‌ಲೋಡ್ ಮಾಡಿ ಡಿವೈಸ್‌ನಲ್ಲಿ ಇನ್‌ಸ್ಟಾಲ್ ಮಾಡಿ.
* ಆಪ್ ಓಪನ್ ಮಾಡಿ 'Next' ಟ್ಯಾಪ್ ಮಾಡಿ ಹೊಸ ಖಾತೆಯನ್ನು ಕ್ರಿಯೇಟ್ ಮಾಡಿ
* ಡಿವೈಸ್‌ನ ಫೋನ್ ನಂಬರ್ ಎಂಟರ್ ಮಾಡಿ Continue ಪ್ರೆಸ್ ಮಾಡಿ
* ಪಾಸ್‌ವರ್ಡ್ ಎಂಟರ್ ಮಾಡಿ Continue ಪ್ರೆಸ್ ಮಾಡಿ
ಆಫ್ ಡೌನ್‌ಲೋಡ್ ಮಾಡಲು ಕ್ಲಿಕ್ ಮಾಡಿ

Life360 ಆಪ್‌ನಲ್ಲಿ ಖಾತೆ ಓಪನ್ ಮತ್ತು ವ್ಯವಸ್ಥೆ
* 'Add Photo' ಟ್ಯಾಪ್ ಮಾಡಿ ಪ್ರೊಫೈಲ್ ಇಮೇಜ್ ಸೆಲೆಕ್ಟ್ ಮಾಡಿ
* ನಿಮ್ಮ ಹೆಸರನ್ನು ಟೈಪಿಸಿ ಸೇವ್ ಮಾಡಿ.
* ನಂತರ Create New Map > Find Me > Yes ಟ್ಯಾಪ್ ಮಾಡಿ
- ಈ ವ್ಯವಸ್ಥೆಯು ನಿಮ್ಮ ಮುಖ್ಯ ಮ್ಯಾಪ್ ಅನ್ನು ಸೆಟಪ್ ಮಾಡುತ್ತದೆ. ನೀವು ಟ್ರ್ಯಾಕ್ ಮಾಡಲು ಬಯಸುವವರ ಡಿವೈಸ್‌ನಲ್ಲಿ ಬಳಸಬೇಕಾದ ಆಹ್ವಾನ ಕೋಡ್ ಅನ್ನು ನೀಡುತ್ತದೆ.

ತುರ್ತು ಸಂಪರ್ಕಗಳ(ಕಾಂಟ್ಯಾಕ್ಟ್) ಆಡ್ ಮಾಡಿ
ನೀವು ನೀಡಿದ ತುರ್ತು ಸಂಪರ್ಕ ಇಮೇಲ್ ಅಥವಾ ಫೋನ್ ನಂಬರ್‌ಗೆ ಮೆಸೇಜ್ ಅನ್ನು ನೀಡುತ್ತದೆ. ಆದರೆ ತುರ್ತು ಪರಿಸ್ಥಿತಿ ಬಗ್ಗೆ ಮೆಸೇಜ್ ಕಳುಹಿಸಲು ಅವರು ಮೊದಲು ನಿಮ್ಮ ರಿಕ್ವೆಸ್ಟ್ ಅನ್ನು ಸ್ವೀಕರಿಸಬೇಕು.
* ಆಪ್‌ನಲ್ಲಿ 3 ಲೈನ್ ಬಟನ್ ಅನ್ನು ಮೆನು ಆಯ್ಕೆಗಾಗಿ ಟ್ಯಾಪ್ ಮಾಡಿ.
* Help Alert ಅನ್ನು ಪ್ರೆಸ್ ಮಾಡಿ
* ಮೂರು ಕಾಂಟ್ಯಾಕ್ಟ್ ಸರ್ಕಲ್‌ನಲ್ಲಿ ಯಾವುದಾದರೊಂದನ್ನು ಪ್ರೆಸ್ ಮಾಡಿ ಒಂದು ಕಾಂಟ್ಯಾಕ್ಟ್ ಸೆಲೆಕ್ಟ್ ಮಾಡಿ.

ಹೆಲ್ಪ್ ಅಲರ್ಟ್ ಸೆಂಡ್ ಮಾಡಿ
* * ಆಪ್‌ನಲ್ಲಿ 3 ಲೈನ್ ಬಟನ್ ಅನ್ನು ಮೆನು ಆಯ್ಕೆಗಾಗಿ ಟ್ಯಾಪ್ ಮಾಡಿ.
* Help Alert ಅನ್ನು ಪ್ರೆಸ್ ಮಾಡಿ
* ಕೆಂಪು ಬಣ್ಣದ ಎಕ್ಸ್‌ಲಾಮೇಶನ್ ಮಾರ್ಕ್ ಸರ್ಕಲ್ ಅನ್ನು ಪ್ರೆಸ್ ಮಾಡಿ
ನಂತರದಲ್ಲಿ ನೀವು ನೀಡಿದ ತುರ್ತು ಸಂಪರ್ಕಕ್ಕೆ ಕರೆ, ಮೆಸೇಜ್ ಮತ್ತು ಇಮೇಲ್ ನೋಟಿಫಿಕೇಶನ್ ಹೋಗುತ್ತದೆ. ವಿಶೇಷವೆಂದರೆ ದೇಶದ ತುರ್ತು ಪರಿಸ್ಥಿತಿ ಸೇವೆ ನಂಬರ್ ಸಹ ಕೆಳಭಾಗದಲ್ಲಿ ಪ್ರದರ್ಶನವಾಗುತ್ತದೆ. ನೀವು ಬೇಕಾದರೆ ಆಪ್‌ನಿಂದಲೇ ಕರೆ ಮಾಡಬಹುದು.

ಸ್ಥಳಗಳನ್ನು ಕ್ರಿಯೇಟ್ ಮಾಡಿ
ಲೈಫ್360 ಆಪ್‌ನಲ್ಲಿ ಹಲವು ಸ್ಥಳಗಳನ್ನು ಮ್ಯಾಪ್‌ನಲ್ಲಿ ಸೆಟಪ್ ಮಾಡಬಹುದು. ಸೆಟಪ್ ಮಾಡಿದ ಸ್ಥಳಗಳಲ್ಲಿ ನಿಮ್ಮ ಸ್ನೇಹಿತರು, ಕುಟುಂಬದವರು ಯಾರಾದರು ಅಲ್ಲಿಗೆ ಬಂದರೆ, ಅಥವಾ ಹೋದಲ್ಲಿ ನಿಮಗೆ ನೋಟಿಫಿಕೇಶನ್ ಬರುತ್ತದೆ. ಅಲ್ಲದೇ ಮನೆಯ ಕುಟುಂಬದವರು, ಮಕ್ಕಳು, ಯಾರು ಯಾರು ಎಲ್ಲಿ ಇದ್ದಾರೆ ಎಂದು ಟ್ರ್ಯಾಕ್ ಮಾಡಲು ಸಹಾಯಕವಾಗುತ್ತದೆ. ಟ್ರ್ಯಾಕ್ ಮಾಡುವುದು ಹೇಗೆ ಎಂದು ತಿಳಿಯಲು ಮುಂದಿನ ಸ್ಲೈಡರ್ ಓದಿರಿ

ಟ್ರ್ಯಾಕ್ ಮಾಡುವುದು ಹೇಗೆ?
* ಮೆನು ಓಪನ್‌ಗಾಗಿ ಆಪ್‌ನ ಎಡಭಾಗದ ಟಾಪ್‌ನಲ್ಲಿ ಪ್ರೆಸ್ ಮಾಡಿ.
* Placee ಟ್ಯಾಪ್ ಮಾಡಿ
* Add a Placee ಪ್ರೆಸ್ ಮಾಡಿ
* ಸ್ಥಳ ಹೆಸರು ಮತ್ತು ವಿಳಾಸವನ್ನು ಟೈಪಿಸಿ ಅಥವಾ ಮ್ಯಾಪ್ ಅನ್ನು ಡ್ರ್ಯಾಗ್ ಮಾಡಿ
* ಅಗತ್ಯವಿದ್ದಲ್ಲಿ ಜಿಯೋಫೇನ್ಸ್ ಏರಿಯಾವನ್ನು ಹೊಂದಿಸಿ.
* ಮ್ಯಾಪ್‌ಗೆ ಸ್ಥಳ ಆಡ್ ಮಾಡಲು ಸೇವ್ ಮಾಡಿ.
ಲೈಫ್360 ಇತರೆ ಫೀಚರ್‌ಗಳು
* ಲೈಫ್360 ಆಪ್ ಅನ್ನು ಕುಟುಂಬ ಸದಸ್ಯರ ಜೊತೆ ಮೆಸೇಜ್ ಮಾಡಲು ಉಪಯೋಗಿಸಬಹುದು.
* ಗ್ರೂಪ್ ನೋಟ್ಸ್‌ಗಾಗಿ ಆಪ್ ಬಳಸಬಹುದು
* ಮಾಹಿತಿಗಾಗಿ ಹಲವು ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಬಹುದು.
ಆಪ್ ಬಗ್ಗೆ ವೀಡಿಯೊ ನೋಡಿ.

ಗಿಜ್‌ಬಾಟ್

ಗಿಜ್‌ಬಾಟ್
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470