Home
Social media

ಫೇಸ್‌ಬುಕ್ ಮೆಸೇಂಜರ್‌ನಲ್ಲಿ ಯಾರಿಗೂ ತಿಳಿಯದ ರಹಸ್ಯ ಟ್ರಿಕ್ಸ್‌ಗಳು

By Suneel

ಸಾಮಾಜಿಕ ಜಾಲತಾಣ ದೈತ್ಯ ಸಂಸ್ಥೆ ಫೇಸ್‌ಬುಕ್‌ನ ಮೆಸೇಂಜರ್‌ ಅಪ್ಲಿಕೇಶನ್‌ ಅನ್ನು ಇಂದು 800 ದಶಲಕ್ಷಕ್ಕೂ ಅಧಿಕ ಜನರು ಪ್ರತಿತಿಂಗಳಲ್ಲೂ ಕಾರ್ಯನಿರತವಾಗಿ ಬಳಸುತ್ತಿದ್ದಾರೆ. ಪ್ರತಿಯೊಬ್ಬರು ಇದನ್ನು ಪ್ರಸ್ತುತದಲ್ಲಿ ಕೇವಲ ಮೆಸೇಜ್‌ ಕಳುಹಿಸಲು ಬಳಸುತ್ತಿದ್ದಾರೆ.

ಫೇಸ್‌ಬುಕ್‌ ಮೆಸೇಂಜರ್‌ ಆಪ್‌ ಕೇವಲ ಸಂದೇಶಗಳ ಚಾಟಿಂಗ್‌ಗಾಗಿ ಎಂದು ಹಲವರು ಅಂದುಕೊಂಡಿದ್ದಾರೆ. ಆದರೆ ಮೆಸೇಂಜರ್‌ ಯಾರಿಗೂ ತಿಳಿಯದ ಪ್ರಮುಖವಾದ 10 ರಹಸ್ಯ ಫೀಚರ್‌ಗಳನ್ನು ಹೊಂದಿದೆ. ಅವುಗಳು ಯಾವುವು ಎಂದು ಇಂದಿನ ಲೇಖನದಲ್ಲಿ ಓದಿ ತಿಳಿಯಿರಿ.

ವೆಬ್‌ಸೈಟ್‌

ವೆಬ್‌ಸೈಟ್‌

ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಹೊಂದುವುದಕ್ಕಿಂತ, ಹಲವು ವೆಬ್‌ಸೈಟ್‌ ಓಪನ್‌ ಮಾಡುವುದಕ್ಕಿಂತ ಮೆಸೇಂಜರ್‌ ಆಪ್‌ನಲ್ಲೇ ಪ್ರತಿಯೊಬ್ಬರ ಚಾಟ್‌ಗೂ ಸಹ ಉಚಿತ ಸೈಡ್‌ಬಾರ್‌ಗಳನ್ನು ಪಡೆಯಬಹುದು. ಅಲ್ಲದೇ ಕರೆಗಳು ಸ್ವೀಕರಿಸಬಹುದು, ವೀಡಿಯೋ ಚಾಟ್‌ ಮಾಡಬಹುದು. ಇಬ್ಬರು ಶೇರ್‌ ಮಾಡಿದ ಫೋಟೋಗಳನ್ನು ನೋಡಬಹುದಾಗಿದೆ.

 ಮೆಸೇಂಜರ್ ಬಳಸಲು ಫೇಸ್‌ಬುಕ್‌ ಬೇಡ

ಮೆಸೇಂಜರ್ ಬಳಸಲು ಫೇಸ್‌ಬುಕ್‌ ಬೇಡ

ಮೆಸೇಂಜರ್‌ ಬಳಸಲು ಫೇಸ್‌ಬುಕ್‌ ಖಾತೆ ಬೇಕಾಗಿಲ್ಲ. ಕೇವಲ ಮೊಬೈಲ್‌ ಸಂಖ್ಯೆ ನೀಡಿ ಲಾಗಿನ್‌ ಆಗಬಹುದು. ಆದರೆ ಮೆಸೇಂಜರ್‌ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.

ಉಬರ್‌ ಬೇಡಿಕೆ

ಉಬರ್‌ ಬೇಡಿಕೆ

ಮೆಸೇಂಜರ್‌ ಆಪ್‌ ಇದ್ದರೆ ನೀವು ಪ್ರಯಾಣಕ್ಕಾಗಿ ಕ್ಯಾಬ್‌ ಬುಕ್‌ ಮಾಡಲು ಉಬರ್‌ ಅನ್ನು ಇನ್ನೊಂದು ಆಪ್‌ ಆಗಿ ಸ್ವೀಕರಿಸುವ ಅಗತ್ಯವಿಲ್ಲ. ಮೆಸೇಂಜರ್‌ನಲ್ಲೇ conversation>>more>>transportation ಟ್ಯಾಪ್‌ ಮಾಡಿ ಅಲ್ಲಿ ಉಬರ್‌ ಪಡೆಯಬಹುದು. ಅಲ್ಲದೇ ಅದರ ಅಪ್‌ಡೇಟ್‌ ಅನ್ನು ಸಹ ಪಡೆಯಬಹುದಾಗಿದೆ.

ಸರಳ ಆಕ್ಸೆಸ್‌ಗಾಗಿ ಪಿನ್‌

ಸರಳ ಆಕ್ಸೆಸ್‌ಗಾಗಿ ಪಿನ್‌

ನೀವು ಯಾವಾಗಲು ನಿರ್ಧಿಷ್ಟ ಗ್ರೂಪ್‌ನ ಜನರೊಂದಿಗೆ ಮಾತ್ರ ಚಾಟ್‌ ಮಾಡುತ್ತಿದ್ದರೆ ಅವರನ್ನು ಸ್ಕ್ರಾಲ್‌ ಮಾಡುತ್ತಾ ಹುಡುಕುವ ಅಗತ್ಯವಿಲ್ಲ. ಗ್ರೂಪ್‌ ಬಟನ್‌ಮೇಲೆ ಕ್ಲಿಕ್ ಮಾಡಿ ಅಲ್ಲಿ ಪಿನ್‌ ಬಟನ್‌ ಅನ್ನು ಎಡಭಾಗದ ಮೇಲ್ಭಾಗದ ಕಾರ್ನರ್‌ನಲ್ಲಿ ಸೆಲೆಕ್ಟ್‌ ಮಾಡಿ. ಅಲ್ಲಿ ಹೆಸರು ನೀಡಿ.

ನೋಟಿಫಿಕೇಶನ್‌ ಮ್ಯೂಟ್‌

ನೋಟಿಫಿಕೇಶನ್‌ ಮ್ಯೂಟ್‌

ಯಾವುದಾದರೂ ನಿರ್ಧಿಷ್ಟ ಸಂವಾದ ಸಂದೇಶಗಳನ್ನು ಮ್ಯೂಟ್‌ ಮಾಡಬೇಕೆಂದರೆ ನೋಟಿಫಿಕೇಶನ್‌>>ಫೀರಿಯಡ್‌ ಆಫ್‌ಟೈಮ್‌ ಆಯ್ಕೆ ಮಾಡಿ ಸಂದೇಶಗಳನ್ನು ಮ್ಯೂಟ್‌ ಮಾಡಬಹುದು. ಅಲ್ಲದೇ ಸಂಪೂರ್ಣ ನೋಟಿಫಿಕೇಶನ್‌ ಅನ್ನೇ ಆಪ್‌ ಮಾಡಬಹುದು.

ಪಾವತಿ ಫೀಚರ್‌

ಪಾವತಿ ಫೀಚರ್‌

ಕೆಲವೊಂದು ಪ್ರಖ್ಯಾತ ಆಪ್‌ಗಳು ಮಾತ್ರ ಹಣ ಹೊರತು ಪಡಿಸಿ ನಿಮಗೆ ಉಚಿತ ಪಾವತಿಯನ್ನು ಇತರೆ ಆಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡರೆ ನೀಡುತ್ತವೆ. ಪಾವತಿಯನ್ನು ನೀವು ಆಪ್‌ಗಳನ್ನು ಬಳಸಲು ಉಚಿತ ಸೌಲಭ್ಯವನ್ನು ಹೊಂದುತ್ತೀರಿ.

ಫೋಟೋಗಳ ಹಂಚಿಕೆ

ಫೋಟೋಗಳ ಹಂಚಿಕೆ

ನಿಮ್ಮ ಗೆಳೆಯರಿಗೆ ನಿಮ್ಮ ಮುಖ ಪರಿಚಯದ ಫೋಟೋ ಕಳುಹಿಸಲು ಸರಳ ಫೀಚರ್‌ ಹೊಂದಿದೆ. ಫೀಚರ್ ಆನ್‌ ಆಗಿದ್ದಾಗ ನಿಮಗೆ ಫೋಟೋ ಶೇರ್‌ ಮಾಡಲು ನೋಟಿಫಿಕೇಶನ್‌ ನೀಡುತ್ತದೆ.

ನೀವಿರುವ ವಿಳಾಸ ಕಳುಹಿಸಿ

ನೀವಿರುವ ವಿಳಾಸ ಕಳುಹಿಸಿ

ಮ್ಯಾಪ್‌ ಸಹಾಯದಿಂದ ನೀವು ನೀವಿರುವ ಸ್ಥಳದ ಬಗ್ಗೆ Conversation>>more icon>> Location ಆಯ್ಕೆ ಮಾಡಿ ನಂತರ ಸ್ಥಳವನ್ನು ಹುಡುಕಿ ಕಳುಹಿಸಬಹುದು.

 GIFs

GIFs

ಮೆಸೇಂಜರ್‌ನಲ್ಲಿ Conversation ಇರುವಲ್ಲಿ ಮೋರ್‌ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ಹಲವು ಬಗೆಯ ಆಪ್‌ಗಳನ್ನು ನೋಡಿತ್ತೀರಿ. ಅದರಲ್ಲಿ ಯಾವ ಬಗೆಯ ಆಪ್‌ ಬೇಕೆಂದು ಆಯ್ಕೆ ಮಾಡಿ. ನಂತರ ನಿಮಗೆ ಬೇಕಾದ GIFsಗಳನ್ನು ಪಡೆಯಬಹುದು.

 ಸಂದೇಶಗಳನ್ನು ಎಮೋಜಿಗಳಿಂದ ಕಸ್ಟಮೈಜ್‌ ಮಾಡಿ

ಸಂದೇಶಗಳನ್ನು ಎಮೋಜಿಗಳಿಂದ ಕಸ್ಟಮೈಜ್‌ ಮಾಡಿ

ಆಪ್‌ನಲ್ಲಿ ನಡೆಸುವ ಸಂವಾದಗಳನ್ನು ವಿವಿಧ ಬಗೆಯ ಎಮೋಜಿಗಳನ್ನು ನೀಡಿ ಹಲವರೊಂದಿಗಿನ ಚಾಟ್‌ ಅನ್ನು ವಿಶೇಷಗೊಳಿಸಿ. ಹೀಗೆ ಮಾಡಲು ನಿಮ್ಮ ಗೆಳೆಯರ ಹೆಸರು ಟೈಪ್‌ ಮಾಡಿ. ನಂತರ ಗೆಳೆಯನ ಅಡ್ಡಹೆಸರು, ಬಣ್ಣ, ಎಮೋಜಿ ಎಂದು ಫೀಚರ್‌ಗಳು ಕಾಣುತ್ತವೆ. ಅಲ್ಲಿ ವಿವಿಧ ಎಮೋಜಿಗಳನ್ನು ಸೆಲೆಕ್ಟ್‌ ಮಾಡಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
10 popular hidden tricks of Facebook Messenger. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+