ವಾಟ್ಸಾಪ್‌ನಲ್ಲಿ ಈ ಫೀಚರ್ ನಿಮಗೆ ತುಂಬಾ ನೆರವಾಗುತ್ತೆ!..ಪಕ್ಕಾ ವ್ಹಾವ್ ಅಂತೀರಾ!
ಮೆಟಾ ಮಾಲೀಕತ್ವದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಾಪ್ ಈಗಾಗಲೇ ಬಳಕೆದಾರರ ಸ್ನೇಹಿ ಆಗಿದೆ. ವಾಟ್ಸಾಪ್ ಆಪ್ ಬಳಕೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಆಯ್ಕೆಗಳನ್ನು ಪರಿಚಯಿಸುತ್ತ ಸಾಗಿದ್ದು, ಕೆಲವೊಂದು ಫೀಚರ್ಸ್‌ಗಳು ಅತೀ ಅಗತ್ಯ ಹಾಗೂ ಉಪಯುಕ್ತ ಎನಿಸಿರುವುದಂತು ಸುಳ್ಳಲ್ಲ. ಅದೇ ರೀತಿ ವಾಟ್ಸಾಪ್‌ನಲ್ಲಿ ಮೆಸೆಜ್ ಟ್ರಾನ್ಸಲೇಟ್/ ಭಾಷಾಂತರ (translate) ಮಾಡುವ ಆಯ್ಕೆಯು ಭಾರೀ ಗಮನ ಸೆಳೆದಿದೆ.

ಹೌದು, ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್ ಅಪ್ಲಿಕೇಶನ್ ಬಳಕೆದಾರರಿಗೆ ಹಲವು ಉಪಯುಕ್ತ ಆಯ್ಕೆಗಳನ್ನು ನೀಡಿದೆ. ಆ ಪೈಕಿ ಮೆಸೆಜ್ ಕಳುಹಿಸುವಾಗ ಮೆಸೆಜ್ ಅನ್ನು ಇತರೆ ಭಾಷೆಗೆ ಭಾಷಾಂತರ/ ಟ್ರಾನ್ಸಲೇಟ್ ಮಾಡುವ ಅವಕಾಶ ಬಳಕೆದಾರರಿಗೆ ಲಭ್ಯವಿದೆ. ಈ ಆಯ್ಕೆಯು ಬೇರೆ ಭಾಷೆಯವರೊಂದಿಗೆ ಸುಲಭವಾಗಿ ಚಾಟ್ ಮಾಡಲು ನೆರವಾಗಲಿದೆ.

ವಾಟ್ಸಾಪ್ ಅಪ್ಲಿಕೇಶನ್ ನಲ್ಲಿ ಮೆಸೆಜ್ ಮಾಡುವಾಗ ಬಳಕೆದಾರರು ಮೊದಲು ಮೆಸೆಜ್ ಬರೆದು, ನಂತರ ಅದನ್ನು ಟ್ರಾನ್ಸಲೇಟ್ ಆಯ್ಕೆ ಮೂಲಕ ಆ ಮೆಸೆಜ್ ಅನ್ನು ಅವರಿಗೆ ಬೇಕಾದ ಬೇರೆ ಭಾಷೆಗೆ ವರ್ಗಾವಯಿಸಿ ಮೆಸೆಜ್ ಕಳುಹಿಸಬಹುದು. ಹೀಗಾಗಿ ಹಲವು ಉಪಯುಕ್ತ ಆಯ್ಕೆಗಳಲ್ಲಿ ಇದು ಒಂದಾಗಿದೆ. ಹಾಗಾದರೇ ವಾಟ್ಸಾಪ್ ಅಪ್ಲಿಕೇಶನ್ ನಲ್ಲಿ ಮೆಸೆಜ್ ಕಳುಹಿಸುವ ಮುನ್ನ ಟ್ರಾನ್ಸಲೇಟ್ ಮಾಡುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಮೆಸೆಜ್ ಟ್ರಾನ್ಸಲೇಟ್ ಮಾಡಲು ಈ ಕ್ರಮ ಅನುಸರಿಸಿ:
ಹಂತ 1: ಮೊದಲು ವಾಟ್ಸಾಪ್ ಆಪ್ ತೆರೆಯಿರಿ
ಹಂತ 2: ವಾಟ್ಸಾಪ್ ತೆರೆದ ನಂತರ, ವಾಟ್ಸಾಪ್ ಚಾಟ್ ತೆರೆಯಿರಿ ಮತ್ತು ಹೊಸ ಮೆಸೆಜ್ ಅನ್ನು ಟೈಪ್ ಮಾಡಿ
ಹಂತ 3: ಬಳಿಕ ಮೆನು ಕಾಣಿಸಿಕೊಳ್ಳುವವರೆಗೆ ಮೆಸೆಜ್ ಮೇಲೆ ದೀರ್ಘವಾಗಿ ಒತ್ತಿರಿ (ಟ್ಯಾಪ್ ಮಾಡಿ ಮತ್ತು ಹಿಡಿದುಕೊಳ್ಳಿ).

ಹಂತ 4: ಬಳಿಕ ಮೆನುವಿನಿಂದ ಮೋರ್ ಆಯ್ಕೆ ಮಾಡಿ.
ಹಂತ 5: ನಂತರ ಕಾಣಿಸಿಕೊಳ್ಳುವ 'Translate' ಆಯ್ಕೆಯನ್ನು ಟ್ಯಾಪ್ ಮಾಡಿರಿ.
ಹಂತ 6: ಆ ನಂತರ ಅನುವಾದಿತ ಮೆಸೆಜ್ ಅನ್ನು ತೋರಿಸುವ ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.

ಮೆಸೆಜ್ ಅನ್ನು ನಿಮ್ಮ ಆದ್ಯತೆಯ ಭಾಷೆಗೆ ಅನುವಾದಿಸದಿದ್ದರೆ, ಮೆಸೆಜ್ ಅನ್ನು ಭಾಷಾಂತರಿಸಲು ಬಯಸುವ ಭಾಷೆಯನ್ನು ನೀವು ಆಯ್ಕೆ ಮಾಡಬಹುದು. ಇನ್ನು ಈ ಆಯ್ಕೆಯು ವಾಟ್ಸಾಪ್ ಆವೃತ್ತಿ 2.20.206.24 ನಲ್ಲಿ ಲಭ್ಯವಿದೆ. ಹಾಗೆಯೇ ಇತ್ತೀಚಿನ ಆಂಡ್ರಾಯ್ಡ್‌ನಲ್ಲಿ ಬಳಕೆ ಮಾಡಬಹುದಾಗಿದೆ. ಅಲ್ಲದೇ ಐಫೋನ್ ನಲ್ಲಿ 2.20.70 ಮತ್ತು ಹೆಚ್ಚಿನ ಆವೃತ್ತಿಗಳಲ್ಲಿ ಲಭ್ಯವಿದೆ.

ಹೆಚ್ಚುವರಿಯಾಗಿ, ವಾಟ್ಸಾಪ್ ಸಹ ಇನ್‌ಬಿಲ್ಟ್ ಫೀಚರ್ಸ್ ಅನ್ನು ಹೊಂದಿದ್ದು ಅದು ಭಾಷೆಗಳ ನಡುವೆ ಮೆಸೆಜ್‌ಗಳನ್ನು ಆಟೋಮ್ಯಾಟಿಕ್ ಆಗಿ ಅನುವಾದಿಸುತ್ತದೆ. ಈ ಆಯ್ಕೆಯು ವಾಟ್ಸಾಪ್ ಸೆಟ್ಟಿಂಗ್‌ಗಳಲ್ಲಿ 'ಚಾಟ್‌ಗಳು' > 'ಭಾಷೆ' ವಿಭಾಗದಲ್ಲಿ ಸಕ್ರಿಯಗೊಳಿಸಬಹುದು.

ಅಧಿಕ ರೆಸಲ್ಯೂಶನ್‌ನಲ್ಲಿ ಫೋಟೊ ಶೇರ್ ಮಾಡಬಹುದು:
ಹಾಗೆಯೇ ವಾಟ್ಸಾಪ್ ನೂತನವಾಗಿ ಅಧಿಕ ರೆಸಲ್ಯೂಶನ್‌ನಲ್ಲಿ ಫೋಟೊ ಶೇರ್ ಆಯ್ಕೆಯನ್ನು ಪರಿಚಯಿಸಿದೆ. ಈ ಆಯ್ಕೆ ಮೂಲಕ ಬಳಕೆದಾರರು ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಬಹುದಾಗಿದೆ. ಅಂದರೆ ಸೆಂಡ್ ಮಾಡುವ ಫೋಟೋ ಗುಣಮಟ್ಟ ಹೇಗಿರಬೇಕು ಅನ್ನೊದನ್ನ ಬಳಕೆದಾರರೇ ನಿರ್ಧಾರ ಮಾಡಬಹುದಾಗಿದೆ. ಇದರಿಂದ ನಿಮ್ಮ ಫೋಟೋ ಮೂಲ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಇಲ್ಲದಂತೆ ಸೆಂಡ್ ಮಾಡುವ ಅವಕಾಶ ಬಳಕೆದಾರರಿಗೆ ಲಭ್ಯವಾಗಲಿದೆ.

ಸದ್ಯ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಈ ಫೀಚರ್ಸ್ ಲಭ್ಯವಾಗಲಿದ್ದು, ಇದು ಇತ್ತೀಚಿನ ಬೀಟಾ ಅಪ್‌ಡೇಟ್ - 2.23.2.11ನಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಅಲ್ಲದೇ ಇತ್ತೀಚಿನ ಬೀಟಾ ಆವೃತ್ತಿ 2.21.15.7 ನಲ್ಲಿ ಕೂಡ ವಾಟ್ಸಾಪ್ ಮೂರು ರೀತಿಯ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡುವ ಅವಕಾಶಗಳನ್ನು ಕಲ್ಪಿಸಿದೆ. ಇನ್ನು ಈ ಆಯ್ಕೆಯು ವಾಟ್ಸಪ್ ಸೆಟ್ಟಿಂಗ್ಸ್ ಬಳಕೆದಾರರಿಗೆ ಲಭ್ಯವಾಗಲಿದೆ. ಇದನ್ನು ಟ್ಯಾಪ್ ಮಾಡುವ ಮೂಲಕ ಫೋಟೋ ಗುಣಮಟ್ಟವನ್ನು ಆಯ್ಕೆ ಮಾಡಬಹುದು ಎಂದು ವಾಬೇಟಾಇನ್ಫೋ ವೆಬ್‌ಸೈಟ್ ತಿಳಿಸಿದೆ.


Click it and Unblock the Notifications








