ಕಾರಿನಲ್ಲಿ ಬ್ಲೂಟೂತ್ ಸಂಪರ್ಕದ ಸಮಸ್ಯೆಯೇ?...ಇಲ್ಲಿವೆ ಸರಳ ಸಲಹೆ
ವಾಹನ ಉದ್ಯಮ ಮತ್ತು ತಂತ್ರಜ್ಞಾನವು ಇದೀಗ ಹೆಚ್ಚಾಗಿ ಒಂದಕ್ಕೊಂದು ಬೆಸೆದುಕೊಂಡಿವೆ. ಇದು ವಾಹನ ತಂತ್ರಜ್ಞಾನದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದ್ದು, ಇತ್ತೀಚೆಗಂತೂ
ಎಲೆಕ್ಟ್ರಿಕ್ ವೆಹಿಕಲ್ಸ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿವೆ. ಈ ತಂತ್ರಜ್ಞಾನ ವಿಭಾಗದಲ್ಲಿ ಬ್ಲೂಟೂತ್(Bluetooth) ಪ್ರಮುಖ ಪಾತ್ರ ವಹಿಸುತ್ತದೆ.
ಹೌದು, ಎಲೆಕ್ಟ್ರಿಕ್ ವೆಹಿಕಲ್ಸ್ ಮಾತ್ರವಲ್ಲದೆ ಇಂದು ಸಾಮಾನ್ಯ ವಾಹನಗಳಲ್ಲೂ ಬ್ಲೂಟೂತ್ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಅಷ್ಟು ಮಾತ್ರವಲ್ಲ ಇತ್ತೀಚೆಗೆ ಲಾಂಚ್ ಆಗುತ್ತಿರುವ ಬೈಕ್ ಹಾಗೂ ಸ್ಕೂಟರ್‌ಗಳು ಸಹ ಬ್ಲೂಟೂತ್ ಫೀಚರ್ಸ್ ಪಡೆದುಕೊಳ್ಳುತ್ತಿವೆ. ಈ ನಡುವೆ ಕಾರ್ ಹಾಗೂ ಇನ್ನಿತರೆ ದೊಡ್ಡ ವಾಹನಗಳಲ್ಲಿ ಬ್ಲೂಟೂತ್ ಸಂಪರ್ಕದ ಸಮಸ್ಯೆಗಳು ಆಗಾಗ್ಗೆ ಎದುರಾಗುತ್ತಿದ್ದು, ಅದನ್ನು ಹೇಗೆ ಸರಿಮಾಡುವುದು ಎಂಬುದನ್ನು ನಾವಿಲ್ಲಿ ತಿಳಿಸಿಕೊಟ್ಟಿದ್ದೇವೆ ಓದಿರಿ.

ಕಾರ್‌ನಲ್ಲಿ ಬ್ಲೂಟೂತ್ ಸಮಸ್ಯೆ: ಕಾರ್‌ಗಳು ಇಂದು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ದೊಡ್ಡ ಎಲ್‌ಇಡಿ ಡಿಸ್‌ಪ್ಲೇ ಆಯ್ಕೆಗಳನ್ನೂ ಸಹ ನೀಡಲಾಗುತ್ತಿದ್ದು, ಈ ಮೂಲಕ ವಿಡಿಯೋ ನೋಡಬಹುದು, ಕಾರ್‌ಅನ್ನು ಕಂಟ್ರೋಲ್ ಮಾಡಬಹುದು. ಆದರೆ ಕೆಲವೊಂದು ಸಂದರ್ಭದಲ್ಲಿ ಬ್ಲೂಟೂತ್ ಸಮಸ್ಯೆಗಳು ಎದುರಾಗುತ್ತವೆ. ಅಂದರೆ, ನಿಮ್ಮ ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಂನೊಂದಿಗೆ ನಿಮ್ಮ ಫೋನ್‌ಅನ್ನು ಸಂಪರ್ಕಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಇದರ ಹಿಂದೆ ಹಲವಾರು ಕಾರಣಗಳು ಸಾಮಾನ್ಯವಾಗಿ ಇದ್ದೇ ಇರುತ್ತವೆ. ಅವುಗಳನ್ನು ಈ ರೀತಿ ಪರಿಶೀಲಿಸಿ.
ಹೊಂದಾಣಿಕೆ ಪರಿಶೀಲಿಸಿ: ಮೊದಲು ನಿಮ್ಮ ಫೋನ್ ಮತ್ತು ಕಾರು ಪರಸ್ಪರ ಬ್ಲೂಟೂತ್ ಆವೃತ್ತಿಗಳಿಗೆ (Bluetooth version) ಹೊಂದಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಹೊಂದಾಣಿಕೆ ಮಾಹಿತಿಗಾಗಿ ನಿಮ್ಮ ಕಾರಿನ ಕೈಪಿಡಿ ಅಥವಾ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲನೆ ನಡೆಸಬೇಕು. ಅವುಗಳು ಹೊಂದಿಕೆಯಾಗದಿದ್ದರೆ, ನಿಮ್ಮ ಕಾರಿಗೆ ಆಫ್ಟರ್ ಮಾರ್ಕೆಟ್ ಬ್ಲೂಟೂತ್ ಅಡಾಪ್ಟರ್ ಅನ್ನು ಬಳಸಬೇಕಾಗಿದೆ.
ಬ್ಲೂಟೂತ್ ಸಕ್ರಿಯಗೊಳಿಸಿ: ಬ್ಲೂಟೂತ್ ಮೂಲಕ ಫೋನ್ ಅನ್ನು ಕಾರಿಗೆ ಸಂಪರ್ಕಿಸಲು ಸಾಧ್ಯವಾಗದಿರುವ ಹಿಂದಿನ ಪ್ರಮುಖ ಕಾರಣವೆಂದರೆ ಬ್ಲೂಟೂತ್ ಆಫ್ ಆಗಿರುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ. ಪರಿಣಾಮ ಅದು ಆನ್ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಂತರ ಕನೆಕ್ಟ್ ಮಾಡಲು ಪ್ರಯತ್ನಿಸಿ. ಈ ರೀತಿಯ ಸಾಮನ್ಯ ಸಮಸ್ಯೆಗಳು ಹೆಚ್ಚು ವರದಿ ಆಗುತ್ತಿವೆ.
ಹಳೆಯ ಬ್ಲೂಟೂತ್ ಸಂಪರ್ಕ ಅಳಿಸಿ: ಸಾಮಾನ್ಯವಾಗಿ ನೀವು ಈ ಹಿಂದೆ ನಿಮ್ಮ ಫೋನ್ ಅನ್ನು ಇತರ ಬ್ಲೂಟೂತ್ ಡಿವೈಸ್‌ಗಳೊಂದಿಗೆ ಕನೆಕ್ಟ್ ಮಾಡಿದ್ದರೆ ಆ ಡಿವೈಸ್‌ಗಳು ಹೊಸ ಡಿವೈಸ್‌ನ ಸಂಪರ್ಕದಲ್ಲಿ ಹಸ್ತಕ್ಷೇಪ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಿಮ್ಮ ಫೋನ್ ಮತ್ತು ಕಾರಿನ ಬ್ಲೂಟೂತ್ ಸೆಟ್ಟಿಂಗ್‌ಗಳೆರಡರಿಂದಲೂ ಈ ಹಳೆಯ ಕನೆಕ್ಟಿವಿಟಿಗಳನ್ನು ಅಳಿಸಿ ಹಾಕಿ.
ಫೋನ್, ಕಾರಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ರೀಸ್ಟಾರ್ಟ್ ಮಾಡಿ: ಇದರೊಂದಿಗೆ ಮತ್ತೊಂದು ಆಯ್ಕೆ ಏನೆಂದರೆ ಸರಳ ರೀಸ್ಟಾರ್ಟ್ ಆಯ್ಕೆ ಹಲವು ಕನೆಕ್ಟಿವಿಟಿ ಸಮಸ್ಯೆಗಳನ್ನು ಪರಿಹರಿಸಬಹುದು. ನಿಮ್ಮ ಫೋನ್ ಮತ್ತು ಕಾರನ್ನು ಆಫ್ ಮಾಡಿ, ಕೆಲವು ಸೆಕೆಂಡುಗಳ ಕಾಲ ನಿರೀಕ್ಷಿಸಿ ಮತ್ತು ನಂತರ ಅವುಗಳನ್ನು ಮತ್ತೆ ಆನ್ ಮಾಡಿ ಕನೆಕ್ಟ್ ಪ್ರಕ್ರಿಯೆ ನಡೆಸಿ.

ಫರ್ಮ್‌ವೇರ್ ಅನ್ನು ನವೀಕರಿಸಿ: ಇದರೊಂದಿಗೆ ಹಳೆಯ ಫರ್ಮ್‌ವೇರ್ ಆವೃತ್ತಿಯಿಂದಾಗಿ(Firmware version) ಕೆಲವೊಮ್ಮೆ ಈ ಸಮಸ್ಯೆಗಳು ಉಂಟಾಗಬಹುದು. ಎರಡೂ ಡಿವೈಸ್‌ಗಳು ಇತ್ತೀಚಿನ ಫರ್ಮ್‌ವೇರ್ ಆವೃತ್ತಿಗಳನ್ನು ಹೊಂದಿವೆಯೇ ಎಂದು ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಕಾರಿನ ಬ್ಲೂಟೂತ್ ಸಿಸ್ಟಮ್ ಮತ್ತು ನಿಮ್ಮ ಫೋನ್‌ನ ಸಾಫ್ಟ್‌ವೇರ್‌ಗಾಗಿ ಲಭ್ಯವಿರುವ ಫರ್ಮ್‌ವೇರ್ ನವೀಕರಣಗಳಿಗಾಗಿ ಪರಿಶೀಲಿಸಿ.
ಬೇರೆ ಫೋನ್ ಅನ್ನು ಸಂಪರ್ಕಿಸಲು ಪ್ರಯತ್ನಿಸಿ: ಇಷ್ಟಾಗಿಯೂ ಸಂಪರ್ಕ ಆಗುತ್ತಿಲ್ಲ ಎಂದಾದರೆ ಫೋನ್ ಅಥವಾ ಕಾರಿನಲ್ಲಿ ಸಮಸ್ಯೆ ಇದೆಯೇ ಎಂದು ಕಂಡುಕೊಳ್ಳಲು ಕಾರಿನೊಂದಿಗೆ ಮತ್ತೊಂದು ಹೊಸ ಫೋನ್ ಕನೆಕ್ಟ್ ಮಾಡಲು ಮುಂದಾಗಿ. ಈ ಸಂಪರ್ಕವು ಯಶಸ್ವಿಯಾದರೆ, ನಿಮ್ಮ ಹಳೆಯ ಫೋನ್‌ನಲ್ಲಿ ಕೆಲವು ಸಮಸ್ಯೆಗಳಿವೆ ಎಂದರ್ಥ. ಅಥವಾ ಈ ಬಾರಿಯೂ ಕನೆಕ್ಟ್ ಆಗಲಿಲ್ಲ ಎಂದರೆ ನಿಮ್ಮ ಕಾರ್‌ನಲ್ಲಿ ಏನಾದರೂ ಸಮಸ್ಯೆ ಇರಬಹುದು ಎಂದರ್ಥ.


Click it and Unblock the Notifications








