Home
ಟೆಕ್ ನೌಕರಿ

ಎಸಿ ಖರೀದಿಸಲು ಕಷ್ಟವೇ? ಕೇವಲ 900ರೂ.ಗೆ ಫ್ಯಾನ್‌ ಅನ್ನೇ ಎಸಿಯನ್ನಾಗಿ ಮಾಡಿಕೊಳ್ಳಿ!

ಸ್ಮಾರ್ಟ್‌ಡಿವೈಸ್‌ಗಳು ನಮಗೆ ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲ ಮಾಡಿಕೊಡುತ್ತವೆ. ಅದರಲ್ಲೂ ಮನೆಯಲ್ಲಿನ ಕೆಲವು ಡಿವೈಸ್‌ಗಳು ಬಳಕೆದಾರರಿಗೆ ಅಗತ್ಯ ಸೇವೆ ನೀಡಲಿದ್ದು, ಪ್ರಮುಖವಾಗಿ ಫ್ಯಾನ್‌ ಅಗ್ರ ಸ್ಥಾನ ಪಡೆಯುತ್ತದೆ. ಯಾಕೆಂದರೆ ಯಾರದೇ ಮನೆಯಲ್ಲಿಯಾದರೂ ಈಗ ಫ್ಯಾನ್‌ ಅನಿವಾರ್ಯ ಎಂಬಂತೆ ಆಗಿದೆ. ಆದರೆ ಈ ಫ್ಯಾನ್‌ ಅನ್ನೇ ಎಸಿಯನ್ನಾಗಿ ಮಾಡುವುದು ಹೇಗೆಂದು ಗೊತ್ತಾ?.

ಹೌದು, ನಿಮ್ಮ ಫ್ಯಾನ್ ಅನ್ನು ಎಸಿಯಾಗಿ ಪರಿವರ್ತಿಸಲು ನೀವು ಕೇವಲ 900ರೂ.ಗಳನ್ನು ಖರ್ಚು ಮಾಡಿದ್ರೆ ಸಾಕು. ಈ ಮೂಲಕ ಯಾರೆಲ್ಲಾ ಎಸಿ ಖರೀದಿ ಮಾಡಲು ಸಾಧ್ಯವಾಗುವುದಿಲ್ಲವೋ ಅವರು ಮನೆಯಲ್ಲೇ ಇರುವ ಫ್ಯಾನ್‌ ಮೂಲಕ ತಂಪಾದ ಗಾಳಿಯನ್ನು ಪಡೆದುಕೊಳ್ಳಬಹುದು. ಜೊತೆಗೆ ಆಹ್ಲಾದಕರ ಅನುಭವವನ್ನು ನಿಮ್ಮ ಮನೆಯಲ್ಲಿಯೇ ಸೃಷ್ಟಿ ಮಾಡಬಹುದು. ಹಾಗಿದ್ರೆ, ಸಾಮಾನ್ಯ ಫ್ಯಾನ್‌ ಅನ್ನ ಹೇಗೆ ಎಸಿಯಾಗಿ ಪರಿವರ್ತಿಸುವುದು ಎಂದು ತಿಳಿದುಕೊಳ್ಳಿ.

ಎಸಿ ಖರೀದಿಸಲು ಕಷ್ಟವೇ? ಕೇವಲ 900ರೂ.ಗೆ ಫ್ಯಾನ್‌ ಅನ್ನೇ ಎಸಿಯನ್ನಾಗಿ ಮಾಡಿಕೊಳ್ಳಿ

ಭಾರತದ ಕೆಲವು ಭಾಗಗಳಲ್ಲಿ ತಾಪಮಾನ 45 ಡಿಗ್ರಿ ದಾಟುತ್ತಿದೆ. ಈ ಬಿಸಿಲಿನಿಂದ ಪಾರಾಗಲು ಇನ್ಮುಂದೆ ನಿಮಗೆ ಖಂಡಿತಾ ಎಸಿ ಅಗತ್ಯ ಇರುವುದಿಲ್ಲ. ಜೊತೆಗೆ ಬಡವರಿಗೆ ಎಸಿ ಖರೀದಿ ಮಾಡುವುದು ಇರಲಿ. ಆ ಕಡೆ ತಿರುಗಿಯೂ ನೋಡುವುದಿಲ್ಲ. ಆದರೆ, ಇರುವುದರಲ್ಲೇ ತೃಪ್ತಿ ಪಡೆಯಬೇಕು ಎಂಬಂತೆ ಎಸಿಯಂತಹ ತಂಪಾದ ಗಾಳಿಯನ್ನು ಪಡೆಯಲು ಸಾಮಾನ್ಯ ಫ್ಯಾನ್‌ನಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿದರೆ ಸಾಕು.

ಪ್ರಮುಖ ಇ-ಕಾಮರ್ಸ್‌ ಸೈಟ್‌ ಆಗಿರುವ ಅಮೆಜಾನ್‌ನಲ್ಲಿ ನೀರು ಸಿಂಪಡಿಸುವ ಯಂತ್ರಗಳು ಲಭ್ಯವಿದ್ದು, ಈ ಡಿವೈಸ್‌ ಮೂಲಕ ನಿಮ್ಮ ಟೇಬಲ್ ಫ್ಯಾನ್ ಅನ್ನು ಎಸಿ ಆಗಿ ಪರಿವರ್ತಿಸಬಹುದಾಗಿದೆ. ಜೊತೆಗೆ ನೀವು ನಿಮ್ಮ ಸಾಮಾನ್ಯ ಫ್ಯಾನ್ ಅನ್ನು ಎಸಿ ಆಗಿ ಪರಿವರ್ತಿಸಲು ಮುಂದಾದರೆ ನಿಮ್ಮ ಫ್ಯಾನ್‌ಗೆ ವಾಟರ್ ಸ್ಪ್ರಿಂಕ್ಲರ್ ಡಿವೈಸ್‌ ಅನ್ನು ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ.

ಈ ಡಿವೈಸ್‌ ಅಮೆಜಾನ್‌ನಲ್ಲಿ ಕೇವಲ 900ರೂ.ಗಳ ಬೆಲೆ ಹೊಂದಿದ್ದು, ಅದಕ್ಕಿಂತಲೂ ಕಡಿಮೆ ಬೆಲೆಗೂ ಸಹ ಲಭ್ಯ ಇವೆ. ಜೊತೆಗೆ ಈ ಡಿವೈಸ್‌ ಕೆಲವು ಬಿಡಿ ಭಾಗಗಳನ್ನು ಹೊಂದಿದ್ದು, ಈ ಎಲ್ಲಾ ಬಿಡಿ ಭಾಗಗಳನ್ನು ನೀವೇ ಒಂದು ಮಾಡಿ ಎಸಿಯಾಗಿ ಪರಿವರ್ತಿಸಬೇಕಾಗುತ್ತದೆ. ಹೀಗಂದ ಮಾತ್ರಕ್ಕೆ ಇದೇನು ದೊಡ್ಡ ಮಹಾವಿದ್ಯೆ ಎಂದು ತಿಳಿಯಬೇಡಿ. ನೀರಿನ ಡಬ್ಬಿ ಮತ್ತು ಪಂಪ್‌ನಿಂದ ಸಂಪರ್ಕ ನೀಡಿದರೆ ಸಾಕು.

ಎಸಿ ಖರೀದಿಸಲು ಕಷ್ಟವೇ? ಕೇವಲ 900ರೂ.ಗೆ ಫ್ಯಾನ್‌ ಅನ್ನೇ ಎಸಿಯನ್ನಾಗಿ ಮಾಡಿಕೊಳ್ಳಿ

ಇನ್ನು ನಿಮ್ಮ ಫ್ಯಾನ್‌ಗೆ ವಾಟರ್ ಸ್ಪ್ರಿಂಕ್ಲರ್ ಅಳವಡಿಸಿದ ಬಳಿಕ ನೀರಿನ ಟ್ಯಾಂಕ್ ಅಥವಾ ಪಂಪ್‌ನಿಂದ ನೀರಿನ ಸಂಪರ್ಕವನ್ನು ಒದಗಿಸಿ. ಅಂದರೆ ಫ್ಯಾನ್‌ನ ಮುಂಭಾಗದ ಗ್ರಿಲ್‌ಗೆ ಉಂಗುರದಂತಹ ಡಿವೈಸ್‌ ಅನ್ನು ಜೋಡಿಸಿ. ಆ ಡಿವೈಸ್‌ನಿಂದ ಸ್ಪ್ರೇನಂತೆ ನೀರು ಹೊರಬರುತ್ತದೆ. ಫ್ಯಾನ್ ಆನ್ ಮಾಡಿದಾಗ ಅದರಿಂದ ಗಾಳಿ ಮತ್ತು ರಿಂಗ್‌ನಿಂದ ಬರುವ ನೀರು ನಿಮಗೆ ತಂಪಾದ ಗಾಳಿಯನ್ನು ನೀಡುತ್ತದೆ.

ವಾಟರ್ ಸ್ಪ್ರಿಂಕ್ಲರ್ ಡಿವೈಸ್‌ ಸಾಮಾನ್ಯವಾಗಿ 4,495ರೂ.ಗಳಿಗಿಂತ ಅಧಿಕ ಬೆಲೆ ಹೊಂದಿರುತ್ತವೆ. ಆದರೆ, ಅಮೆಜಾನ್‌ನಲ್ಲಿ ಈ ಸ್ಪ್ರಿಂಕ್ಲರ್ ಡಿವೈಸ್‌ಗೆ 80 ಪ್ರತಿಶತ ರಿಯಾಯಿತಿ ಘೋಷಣೆ ಮಾಡಲಾಗಿದ್ದು, 899ರೂ.ಗಳ ದರದಲ್ಲಿ ಖರೀದಿ ಮಾಡಬಹುದು. ಈ ಡಿವೈಸ್‌ ಅನ್ನು ಖರೀದಿ ಮಾಡಿದ ನಂತರ ಕೇವಲ ಫ್ಯಾನ್‌ ಅನ್ನು ಎಸಿಯಾಗಿ ಮಾಡುವ ಉದ್ದೇಶವಲ್ಲದೆ ಬೇರೆ ವಿಧದಲ್ಲೂ ಬಳಕೆ ಮಾಡಿಕೊಳ್ಳಬಹುದು.

ಎಸಿ ಖರೀದಿಸಲು ಕಷ್ಟವೇ? ಕೇವಲ 900ರೂ.ಗೆ ಫ್ಯಾನ್‌ ಅನ್ನೇ ಎಸಿಯನ್ನಾಗಿ ಮಾಡಿಕೊಳ್ಳಿ

ಈ ವಾಟರ್ ಸ್ಪ್ರಿಂಕ್ಲರ್ ಅನ್ನು ಉದ್ಯಾನದಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲೂ ರೈತರು ಕೃಷಿ ಉದ್ದೇಶಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಈ ಪ್ರೊಡಕ್ಟ್‌ ಅನ್ನು ಖರೀದಿ ಮಾಡುವ ಮುನ್ನ ಇದರ ಬಗ್ಗೆ ವಿಮರ್ಶೆಯನ್ನು ನೋಡಿ ಖರೀದಿ ಮಾಡಿ. ಯಾಕೆಂದರೆ ಇದೇ ರೀತಿಯ ಹಲವಾರು ನಕಲಿ ಪ್ರೊಡಕ್ಟ್‌ಗಳು ಮಾರುಕಟ್ಟೆಯಲ್ಲಿ ಸೇಲ್‌ ಆಗುತ್ತಿವೆ.

Best Mobiles in India

English summary
You just need to spend Rs 900 to convert your fan into AC. Through this, those who are not able to buy AC can get cool air through the fan at home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+