ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮ ಅನುಸರಿಸಿ!
ಏನೇ ಮಾಹಿತಿ ಬೇಕಿದ್ದರೂ ಬಳಕೆದಾರರಿಗೆ ಮೊದಲು ನೆನಪಾಗುವುದೇ ಗೂಗಲ್. ಕೇಳಿದ ಮಾಹಿತಿಯ ಫಲಿತಾಂಶವನ್ನು ಕ್ಷಣದಲ್ಲಿಯೇ ಒದಗಿಸಿ ಬಿಡುತ್ತದೆ. ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಸರ್ಚ್ ಮೂಲಕ ಅಗತ್ಯ ಮಾಹಿತಿಗಾಗಿ ಸರ್ಚ್ ಮಾಡಿರುತ್ತಾರೆ. ಹೀಗೆ ಬಳಕೆದಾರರು ಗೂಗಲ್‌ನಲ್ಲಿ ಏನೇ ಹುಡುಕಾಟ ನಡೆಸಿದರೂ ಅವರ ಪ್ರತಿ ಸರ್ಚ್ ಅನ್ನು ಗೂಗಲ್ ದಾಖಲಿಸುತ್ತೆ. ಆದರೆ ಬಳಕೆದಾರರು ಗೂಗಲ್ ಸರ್ಚ್ ಹಿಸ್ಟರಿಯನ್ನು ಆಫ್ ಮಾಡಬಹುದಾಗಿದೆ.

ಹೌದು, ಸರ್ಚ್ ಇಂಜಿನ್ ದೈತ್ಯ ಗೂಗಲ್ ಬಳಕೆದಾರರು ಪ್ರತಿ ಸರ್ಚ್ ಮಾಹಿತಿಯನ್ನು ಹಿಸ್ಟರ್‌ಯಲ್ಲಿ ದಾಖಲಿಸಿಕೊಳ್ಳುತ್ತದೆ. ಸರ್ಚ್ ಹಿಸ್ಟರಿ ದಾಖಲಾಗುವುದರಿಂದ ಬಳಕೆದಾರರು ಸರ್ಚ್ ಮಾಡುವಾಗ ಕೆಲವೊಮ್ಮೆ ಗೂಗಲ್ ಹಿಂದಿನ ಹಿಸ್ಟರಿ ಗ್ರಹಿಸಿ ಕೆಲವು ಕೀ ವರ್ಡ್‌ಗಳ ಆಯ್ಕೆಗಳನ್ನು ನೀಡುತ್ತದೆ. ಆದರೆ ಬಳಕೆದಾರರಿಗೆ ಸರ್ಚ್ ಹಿಸ್ಟರಿ ಆಫ್ ಮಾಡಿಕೊಳ್ಳುವ ಅವಕಾಶ ಒದಗಿಸಿದ್ದು, ಈ ಮೂಲಕ ಸರ್ಚ್ ಹಿಸ್ಟರಿ ಗೂಗಲ್‌ನಲ್ಲಿ ಸ್ಟೋರ್ ಆಗುವುದನ್ನು ತಡೆಯಬಹುದಾಗಿದೆ. ಹಾಗಾದರೇ ಗೂಗಲ್ ಸರ್ಚ್ ಹಿಸ್ಟರಿ ಆಫ್ ಮಾಡುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರಗಳಲ್ಲಿ ನೋಡೋಣ ಬನ್ನಿರಿ.

ಕೀ ವರ್ಡ್ಸ್ ಹೋಲುವ ಜಾಹಿರಾತು
ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಬಳಕೆದಾರರು ಸರ್ಚ್ ಮಾಡುವ ಕೀ ವರ್ಡ್ಸ್‌ಗಳ ಆಧಾರದ ಮೇಲೆ ಜಾಹಿರಾತು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಬಳಕೆದಾರರು ಯಾವ ಯಾವ ಮಾಹಿತಿ ಮತ್ತು ಉತ್ಪನ್ನಗಳ ಕುರಿತಾಗಿ ಸರ್ಚ್ ಮಾಡುತ್ತಿರುತ್ತಾರೋ, ಅವರಿಗೆ ಆ ಉತ್ಪನ್ನಗಳ ಕುರಿತಾಗಿಯೇ ಹೆಚ್ಚಿನ ಆಡ್ಸ್‌ಗಳ ಕಾಣಿಸಿಕೊಳ್ಳುತ್ತವೆ.

ಸರ್ಚ್ ಹಿಸ್ಟರಿ ಆಫ್ ಮಾಡಿ
ಗೂಗಲ್ ಸರ್ಚ್ ಹಿಸ್ಟರಿ ದಾಖಲಾಗಬಾರದು ಎನ್ನುವ ಬಳಕೆದಾರರು ಅದನ್ನು ಆಫ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಅದರೊಂದಿಗೆ ಲೊಕೇಶನ್ ಹಿಸ್ಟರಿ ಮತ್ತು ಯೂಟ್ಯೂಬ್ ಹಿಸ್ಟರಿ ಸಹ ಆಫ್ ಮಾಡುವ ಆಯ್ಕೆಯು ಒಂದೆಡೆ ಇದ್ದು, ಬೇಕಿದ್ದರೇ ಅವರಡನ್ನು ಸಹ ಆಫ್ ಮಾಡಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಫೋನ್‌ನಲ್ಲಿ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಹಂತಗಳನ್ನು ಅನುಸರಿಸಿ
* ನಿಮ್ಮ ಫೋನಿನಲ್ಲಿ ಗೂಗಲ್ ಆಪ್ ತೆರೆಯಿರಿ (ಆಂಡ್ರಾಯ್ಡ್/ಐಓಎಸ್)
* ನಂತರ ಬಾಟಮ್ ನಲ್ಲಿರುವ ಮೋರ್(more) ಆಯ್ಕೆಯನ್ನು ಒತ್ತಿರಿ
* ಆನಂತರ ಸರ್ಚ್ ಆಕ್ಟಿವಿಟಿ ಆಯ್ಕೆಯನ್ನು ಟ್ಯಾಪ್ ಮಾಡಿರಿ
* ವೆಬ್ ಮತ್ತು ಆಪ್ ಆಕ್ಟಿವಿಟಿ toggle ಅನ್ನು ಆಫ್ ಮಾಡಿರಿ

ಡೆಸ್ಕ್‌ಟಾಪ್‌ನಲ್ಲಿ ಸರ್ಚ್ ಹಿಸ್ಟರಿ ಆಫ್ ಮಾಡಲು ಈ ಕ್ರಮಗಳನ್ನು ಅನುಸರಿಸಿ
ಹಂತ 1: https://myactivity.google.com/myactivity
ಹಂತ 2: ಡೆಸ್ಟ್‌ಟಾಪ್‌ನಲ್ಲಿ ಗೂಗಲ್ ಅಕೌಂಟ್ ಲಾಗಿ ಇನ್ ಆಗಿರಿ
ಹಂತ 3: ಲಾಗಿನ್ ಆದ ನಂತರ ವೆಬ್ ಮತ್ತು ಆಪ್ ಆಕ್ಟಿವಿಟಿ ಆಯ್ಕೆ ತೆರೆಯಿರಿ
ಹಂತ 4: ಈ ವೆಬ್ ಮತ್ತು ಆಪ್ ಆಕ್ಟಿವಿಟಿ ಆಯ್ಕೆಯಲ್ಲಿ toggle ಆಫ್ ಮಾಡಿರಿ
ಹಂತ 5: ಹಾಗೆಯೇ ಲೊಕೇಶನ್ ಹಿಸ್ಟರಿ toggle ಆಫ್ ಮಾಡಬಹುದು
ಹಂತ 6: ಯೂಟ್ಯೂಬ್ ಹಿಸ್ಟರಿ ಆಯ್ಕೆ ಸಹ ನೀವು ಮಾಡಿಕೊಳ್ಳಬಹುದು


Click it and Unblock the Notifications








