Home
ಟೆಕ್ ನೌಕರಿ

ಮೊಬೈಲ್‌ನಲ್ಲಿ ಈ ಸೆಟ್ಟಿಂಗ್‌‌ ಆನ್ ಆಗಿದ್ರೆ ಈಗಲೇ ಆಫ್ ಮಾಡಿ: ಇಲ್ಲದಿದ್ರೆ Phone Hack ಆಗುತ್ತೆ ಹುಷಾರ್!

ಮೊಬೈಲ್​ ಬಳಕೆ ಹೆಚ್ಚಾದಂತೆ, ಇದನ್ನೇ ಲಾಭವಾಗಿಟ್ಟುಕೊಂಡು ಸೈಬರ್ ಕಳ್ಳರು ಮತ್ತು ಹ್ಯಾಕರ್ಸ್​ ಜನರನ್ನು ವಂಚನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ, ನಿಮ್ಮ ಫೋನ್‌ನಲ್ಲಿ ನಿಮಗೆ ಗೊತ್ತಿಲ್ಲದೆಯೇ ಕೆಲವು ಸೆಟ್ಟಿಂಗ್‌ಗಳು ಆನ್‌ ಆಗಿರುತ್ತವೆ. ಇಲ್ಲವೇ, ಯಾವುದೋ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿರುತ್ತೀರಿ. ಫೋನ್ ಹ್ಯಾಕಿಂಗ್ (Phone Hack) ಹೇಗೆ ಆಗುತ್ತೆ? ಅದನ್ನು ತಡೆಯುವುದು ಹೇಗೆ? ಎಂಬ ಬಗ್ಗೆ ನಿಮಗೆ ಐಡಿಯಾ ಇರಲ್ಲ. ಮೊಬೈಲ್‌ನಲ್ಲಿ ಯಾವುದಾದರೂ ಸೆಟ್ಟಿಂಗ್‌ಗಳು‌‌ ಆನ್ ಆಗಿದ್ಯಾ? ಅಥವಾ ನಿಮ್ಮ ಮೊಬೈಲ್​ ಹ್ಯಾಕ್​ ಆಗಿದ್ಯಾ? ಅನ್ನೋದನ್ನು ಮೊದಲು ಚೆಕ್ ಮಾಡಿಕೊಳ್ಳಿ. ಅದು ಹೇಗೆ ಅನ್ನೋದನ್ನು ನಾವು ತಿಳಿಸಿಕೊಡುತ್ತೇವೆ.

ನಾವು ಮೊಬೈಲ್ ಬಳಸುವಾಗ ಅಥವಾ ಹೊಸ ಸ್ಮಾರ್ಟ್‌ಫೋನ್ ಖರೀದಿಸುವಾಗ ಫೀಚರ್ಸ್ ಬಗ್ಗೆ ಹೆಚ್ಚಾಗಿ ಗಮನಿಸುವುದಿಲ್ಲ. ಈ ಬಗ್ಗೆ ತಿಳಿಯದ ಕಾರಣ, ನಮಗೆ ಅರಿಯದೆ ಹಲವಾರು ಫೀಚರ್ಸ್‌, ಆಪ್ಷನ್‌ಗಳನ್ನು ಬಳಸಲು ಆರಂಭದಲ್ಲೇ ಅದಕ್ಕೆ ಅವಕಾಶ ನೀಡುತ್ತವೆ. ಕಾಲ ಕಳೆದಂತೆ ನೀವು ಕೇವಲ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ಗಳು, ಬ್ಯಾಂಕಿಂಗ್ ಅಪ್ಲಿಕೇಶನ್, ಕಾಲ್‌ಗಳು, ಮೆಸೇಜ್‌ಗಳು ಹೊರೆತು ಯಾವುದೇ ಫೀಚರ್ಸ್‌ಗಳನ್ನು ಟಚ್‌ ಮಾಡುವುದೇ ಇಲ್ಲ. ಇದು ಕೆಲವೊಂದು ಸೆಟ್ಟಿಂಗ್‌ಗಳಿಂದ Phone Hack ಮಾಡಲು ದಾರಿ ಮಾಡಿಕೊಡುತ್ತದೆ. ನಮ್ಮ ಮೊಬೈಲ್‌ ಅನ್ನು ಹೇಗೆ ಸುರಕ್ಷಿತವಾಗಿಡಬಹುದು ಅನ್ನೋದನ್ನು ತಿಳಿಯೋಣ ಬನ್ನಿ.

ಮೊಬೈಲ್‌ನಲ್ಲಿ ಈ ಸೆಟ್ಟಿಂಗ್‌‌ ಆನ್ ಆಗಿದ್ರೆ, ಹ್ಯಾಕ್ ಆಗೋದು ಗ್ಯಾರಂಟಿ

ನಿಮ್ಮ ಫೋನ್ ಹ್ಯಾಕ್‌ ತಪ್ಪಿಸಲು ಈ ಸೆಟ್ಟಿಂಗ್ ಪರಿಶೀಲಿಸಿ

ನಿಮ್ಮ ಕೈಯಲ್ಲೂ ಮೊಬೈಲ್ ಇದೆ ಅಂದ್ರೆ, ಜೊತೆಗೆ ಅಪಾಯವೂ (Phone Hack) ಇರುತ್ತದೆ. ಹೀಗಾಗಿ, ಫಸ್ಟ್ ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಓಪನ್ ಮಾಡಿ. ಅಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್‌ಗಳಿಗೆ ಹೋಗಿ. ಇಲ್ಲಿ ಗೌಪ್ಯತೆ ಸೆಟ್ಟಿಂಗ್‌ಗಳ ಆಯ್ಕೆ ಕಾಣುತ್ತೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ, ಸುರಕ್ಷಿತ ಬ್ರೌಸಿಂಗ್ ಆಯ್ಕೆ ಗೋಚರಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ರೆ, ಮೂರು ಆಯ್ಕೆಗಳನ್ನು ಪಡೆಯುತ್ತೀರಿ. ಆಗ ಏನು ಮಾಡಬೇಕು ಅಂತ ತಿಳಿಯಲು ಮುಂದೆ ಓದಿ.

ನಿಮಗೆ Enhanced Protection, Standard Protection ಮತ್ತು No protection (Not Recommended) ಎಂಬ ಮೂರು ಆಯ್ಕೆಗಳು ಕಾಣಿಸುತ್ತವೆ. ಒಂದುವೇಳೆ ಅಲ್ಲಿ ಸ್ಟ್ಯಾಂಡರ್ಡ್ ಬ್ರೌಸಿಂಗ್ ಅಥವಾ ನೋ ಪ್ರೊಟೆಕ್ಷನ್ ಬ್ರೌಸಿಂಗ್ ಆಯ್ಕೆ ಆನ್ ಆಗಿದ್ದರೆ, ನಿಮ್ಮ ಮೊಬೈಲ್ ಯಾವುದೇ ಸಮಯದಲ್ಲಿ ಹ್ಯಾಕರ್‌ಗಳ ಗುರಿಯಾಗಬಹುದು. ಫೋನ್‌ ಕೂಡ ಹ್ಯಾಕ್‌ (Phone Hack) ಆಗಬಹುದು. ಕೂಡಲೇ ಇದನ್ನು Enhanced Protection (ಸುರಕ್ಷಿತ ಬ್ರೌಸಿಂಗ್) ಆಯ್ಕೆಗೆ ಬದಲಾಯಿಸಿಕೊಳ್ಳಿ.

Enhanced Protection ಆನ್ ಮಾಡುವ ವಿಧಾನಗಳು

Enhanced Protection ಆನ್‌ ಮಾಡುವುದು ಒಂದು ಸರಳ ಪ್ರಕ್ರಿಯೆಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ ಕೆಲವೊಂದು ಸೆಟ್ಟಿಂಗ್‌ಗಳು ಅರಿವಿಲ್ಲದೆಯೇ ಆನ್‌ ಆಗಿರುತ್ತವೆ. ಇದರಿಂದ ಸ್ಮಾರ್ಟ್‌ಫೋನ್‌ ಹ್ಯಾಕ್ (Phone Hack) ಮಾಡಬಹುದು. ಇಷ್ಟಕ್ಕೆ ನೀವು ಗಾಬರಿಯಾಗುವ ಅಗತ್ಯವಿಲ್ಲ. ಸುಲಭವಾಗಿ ನಿಮ್ಮ ಮೊಬೈಲ್‌ ಅನ್ನು ಸುರಕ್ಷಿತವಾಗಿಡಬಹುದು. ಅದಕ್ಕೆ ನಾವು ಈ ಕೆಳಗೆ ತಿಳಿಸುವ ಸರಳ ವಿಧಾನಗಳನ್ನು ಬಳಸಿ.

  • ನಿಮ್ಮ ಫೋನ್‌ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ.
  • ನಂತರ ಕೊನೆಯಲ್ಲಿರುವ '⋮' ಚುಕ್ಕಿ(ಚಿಹ್ನೆ) ಮೇಲೆ ಕ್ಲಿಕ್ ಮಾಡಿ.
  • ಈ ಪಟ್ಟಿಯಲ್ಲಿ ಕೆಳಗೆ Settings ಆಯ್ಕೆ ಕಾಣುತ್ತದೆ, ಆಯ್ಕೆ ಮಾಡಿ.
  • ನಂತರ Privacy and Security ಆಯ್ಕೆಯನ್ನು ಆರಿಸಿ, ಕೊಂಚ ಕೆಳಗೆ ಸ್ಕ್ರೋಲ್ ಮಾಡಿ.
  • ನಿಮಗೆ Security ವಿಭಾಗದಲ್ಲಿ Safe Browsing ಎಂಬ ಆಯ್ಕೆ ಕಾಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
  • ಆಗ Enhanced Protection, Standard Protection, No protection (Not Recommeded) ಎಂಬ ಆಯ್ಕೆಗಳು ನಿಮ್ಮ ಮುಂದೆ ಬರುತ್ತದೆ.
  • ನೀವು ಮೊದಲ ಆಯ್ಕೆಯನ್ನು Enhanced Protection ಆರಿಸಿಕೊಳ್ಳಿ. ಇಷ್ಟು ಮಾಡಿದ್ರೆ ಸಾಕು.

ಇದನ್ನೂ ಓದಿ : ಈ ಸ್ಮಾರ್ಟ್‌ವಾಚ್‌ಗಳು ನಿಮ್ಮ ಪ್ರಾಣವನ್ನೂ ಉಳಿಸುತ್ತವೆ!: ಆರೋಗ್ಯ ಟ್ರ್ಯಾಕಿಂಗ್‌ಗೆ ಬೆಸ್ಟ್‌ ವಾಚ್‌ಗಳಿವು

Enhanced Protection ಯಾಕೆ ಆನ್ ಮಾಡಬೇಕು?

ಮೊಬೈಲ್‌ ಹ್ಯಾಕಿಂಗ್ (Phone Hack) ಅನ್ನು ತಪ್ಪಿಸಲು ನೀವು Enhanced Protection (ವರ್ಧಿತ ಸುರಕ್ಷಿತ ಬ್ರೌಸಿಂಗ್) ಆಯ್ಕೆಯನ್ನು ಆನ್ ಮಾಡಬೇಕು. 2020 ರಲ್ಲಿ ಮೊದಲ ಬಾರಿಗೆ Google Chrome ಬ್ರೌಸರ್‌ಗಾಗಿ ಈ Enhanced Protection (ವರ್ಧಿತ ಸುರಕ್ಷಿತ ಬ್ರೌಸಿಂಗ್) ಫೀಚರ್ ಅನ್ನು ಆರಂಭಿಸಿತ್ತು. ಇದರಿಂದ ವೆಬ್ ಬ್ರೌಸ್ ಮಾಡುವಾಗ ಹೆಚ್ಚು ಸುಧಾರಿತ ಮಟ್ಟದ ಭದ್ರತೆ ಒದಗಿಸುತ್ತದೆ. ಮೊಬೈಲ್‌ ಸೇಫ್ಟಿಗಾಗಿ ಬಳಕೆದಾರರಿಗೆ ಈ ಫೀಚರ್‌ ಒಂದು ಉತ್ತಮ ಆಯ್ಕೆಯಾಗಿದೆ.

ನೀವು & ನಿಮ್ಮ ಮೊಬೈಲ್‌ ಹ್ಯಾಕರ್‌ಗಳಿಂದ ಸೇಫ್!

Google ಪ್ರಕಾರ Enhanced Protection (ವರ್ಧಿತ ಸುರಕ್ಷಿತ ಬ್ರೌಸಿಂಗ್) ಅನ್ನು ಆನ್ ಮಾಡುವುದರಿಂದ, ಅಪಾಯಕಾರಿ ವೆಬ್‌ಸೈಟ್‌ಗಳು ಮತ್ತು ಡೌನ್‌ಲೋಡ್‌ಗಳಿಂದ ರಕ್ಷಣೆ ನೀಡುತ್ತದೆ. ಮೊಬೈಲ್‌ ಹ್ಯಾಕ್ (Phone Hack) ಆಗುವುದನ್ನು ಸುಲಭವಾಗಿ ತಪ್ಪಿಸಬಹುದು. Google ಸುರಕ್ಷಿತ ಬ್ರೌಸಿಂಗ್‌ನೊಂದಿಗೆ ನೈಜ-ಸಮಯದ ಡೇಟಾವನ್ನು ಹಂಚಿಕೊಳ್ಳುವ ಮೂಲಕ ಅಪಾಯಕಾರಿ ಸೈಟ್‌ಗಳಿಂದ ನಿಮ್ ಮೊಬೈಲ್‌ ಅನ್ನು ರಕ್ಷಿಸುತ್ತದೆ. ಹೀಗೆ, ನಾವು ಮೇಲೆ ತಿಳಿಸಿದ ವಿಧಾನಗಳನ್ನು ಫಾಲೋ ಮಾಡಿದ್ರೆ, ನೀವು ಮತ್ತು ನಿಮ್ಮ ಮೊಬೈಲ್‌ ಹ್ಯಾಕರ್‌ಗಳಿಂದ ಸಂಪೂರ್ಣ ಸೇಫ್!

ಗಿಜ್‌ಬಾಟ್‌ ಕನ್ನಡ ವೆಬ್‌ಸೈಟ್ ತಂತ್ರಜ್ಞಾನ ಸಂಬಂಧಿಸಿದ ಸುದ್ದಿಗಳನ್ನು ತ್ವರಿತವಾಗಿ ನೀಡುತ್ತದೆ. ಜೊತೆಗೆ, ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚೆಗೆ ಬಿಡುಗಡೆಯಾದ ಸ್ಮಾರ್ಟ್‌ಪೋನ್, ಕಂಪ್ಯೂಟರ್, ಗ್ಯಾಡ್ಜೆಟ್‌ಗಳ ಮತ್ತು ಆನ್‌ಲೈನ್ ಜಗತ್ತಿನ ಕ್ಷಣ-ಕ್ಷಣದ ಸುದ್ದಿ, ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಎಕ್ಸ್‌ ಖಾತೆ, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ತಪ್ಪದೇ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Best Mobiles in India

English summary
Enhanced Safe Browsing for your Phone can help provide more protection against phishing and malware across Google Chrome and Gmail. Enhanced Safe Browsing keeps you safe when you’re signed in
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+