Home
ಟೆಕ್ ನೌಕರಿ

ಫೋನಿನಲ್ಲಿ ಮೊದಲೇ ಇನ್‌ಸ್ಟಾಲ್‌ ಆದ ಆಪ್‌ ಡಿಲೀಟ್ ಮಾಡುವುದು ಹೇಗೆ?

ಪ್ರಸ್ತುತ ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದಕ್ಕೂ ಪ್ರತ್ಯೇಕ ಅಪ್ಲಿಕೇಶನ್ ಲಭ್ಯ. ಈ ನಿಟ್ಟಿನಲ್ಲಿ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿಕೊಳ್ಳುತ್ತಾರೆ. ಇದು ಒಂದೆಡೆಯಾದರೇ, ಕೆಲವೊಂದು ಅಪ್ಲಿಕೇಶನ್ ಗಳು ಸ್ಮಾರ್ಟ್‌ಫೋನ್‌ ನಲ್ಲಿ ಮೊದಲೇ ಇನ್‌ಸ್ಟಾಲ್ ಆಗಿರುತ್ತವೆ. ಅಂತಹ ಕೆಲವೊಂದು ಆಪ್‌ಗಳನ್ನು ಡಿಲೀಟ್ ಮಾಡಲು / ಅನ್‌ಇನ್‌ಸ್ಟಾಲ್‌ ಮಾಡಲು ಆಯ್ಕೆ ಇರುವುದಿಲ್ಲ. ಅವುಗಳು ಫೋನ್‌ ಮೆಮೊರಿ ಕಬಳಿಸತ್ತವೆ.

ಫೋನಿನಲ್ಲಿ ಮೊದಲೇ ಇನ್‌ಸ್ಟಾಲ್‌ ಆದ ಆಪ್‌ ಡಿಲೀಟ್ ಮಾಡುವುದು ಹೇಗೆ?

ಹೌದು, ಸ್ಮಾರ್ಟ್‌ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್‌ ಆದ ಅಪ್ಲಿಕೇಶನ್‌ಗಳಿಂದ ಬಳಕೆದಾರರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಅನೇಕ ಬಳಕೆದಾರರು ಭಾವಿಸುತ್ತಾರೆ. ಹಾಗಂತ ಡಿಲೀಟ್ ಮಾಡಲು ಮುಂದಾದರೇ, ಕೆಲವೊಂದು ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲು ಆಯ್ಕೆಗಳೆ ಇರುವುದಿಲ್ಲ. ಆದರೆ ಆಂಡ್ರಾಯ್ಡ್‌ ಬಳಕೆದಾರರು ಮೊದಲೇ ಇನ್‌ಸ್ಟಾಲ್ ಮಾಡಿರುವ ಆಪ್‌ಗಳನ್ನು ಡಿಲೀಟ್ ಮಾಡಬಹುದಾಗಿದೆ. ಹಾಗಾದರೇ ಫೋನ್‌ನಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಲಾದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದು ಹೇಗೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಫೋನಿನಲ್ಲಿ ಮೊದಲೇ ಇನ್‌ಸ್ಟಾಲ್‌ ಆದ ಆಪ್‌ ಡಿಲೀಟ್ ಮಾಡುವುದು ಹೇಗೆ?

ಫೋನಿನಲ್ಲಿ ಮೊದಲೇ ಇನ್‌ಸ್ಟಾಲ್ ಮಾಡಿರುವ ಅಪ್ಲಿಕೇಶನ್‌ ಗಳ ಪೈಕಿ ಕೆಲವು ಬಳಕೆದಾರರ ಅಗತ್ಯಕ್ಕೆ ಅನುಗುಣವಾಗಿ ಇನ್ ಸ್ಟಾಲ್ ಮಾಡಿದವು ಆಗಿರುತ್ತವೆ. ಮತ್ತೆ ಕೆಲವು ಫೋನ್‌ ನಲ್ಲಿ ಅಂತರ್ನಿರ್ಮಿತವಾಗಿವೆ. ಆದರೆ ಹೀಗೆ (ಪ್ರಿ ಇನ್‌ಸ್ಟಾಲ್‌) ಮಾಡಲಾದ ಡೌನ್‌ಲೋಡ್ ಆಗಿರುವ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲು ಆಯ್ಕೆಗಳಿವೆ. ಬಳಕೆದಾರರು ಇಂತಹ ಆಪ್ ಡಿಲೀಟ್ ಮಾಡಲು ಮುಂದಾದರೇ ಗೂಗಲ್ ಪ್ಲೇ ಸ್ಟೋರ್ (Google Play Store) ಗೆ ಹೋಗಿ ಅಪ್ಲಿಕೇಶನ್‌ಗಾಗಿ ಸರ್ಚ್ ಮಾಡಬಹುದು. ಅದನ್ನು ಅನ್‌ಇನ್‌ಸ್ಟಾಲ್ ಮಾಡಬಹುದು. ಆದರೆ ಡೀಫಾಲ್ಟ್ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲು ಸಾಮಾನ್ಯವಾಗಿ ಕಷ್ಟವಾಗುತ್ತದೆ.

ಫೋನಿನಲ್ಲಿ ಮೊದಲೇ ಇನ್‌ಸ್ಟಾಲ್‌ ಆದ ಆಪ್‌ ಡಿಲೀಟ್ ಮಾಡುವುದು ಹೇಗೆ?

ಮೊದಲೇ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸಲು ಮೊದಲು ಫೋನ್‌ನ ಸೆಟ್ಟಿಂಗ್‌ ಗೆ ಹೋಗಿರಿ. ಬಳಿಕ 'ಅಪ್ಲಿಕೇಶನ್‌ಗಳು' ಕಾಲಮ್‌ಗೆ ಭೇಟಿ ನೀಡಿರಿ. ಇಲ್ಲಿಗೆ ಹೋಗಿ ಮತ್ತು ಯಾವುದೇ ಮೊದಲೇ ಡೌನ್‌ಲೋಡ್ ಮಾಡಲಾದ ಅಪ್ಲಿಕೇಶನ್‌ನ ಹೆಸರನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ ನೀವು ಅಪ್ಲಿಕೇಶನ್ ಅನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ನೋಡುತ್ತೀರಿ. ಪ್ರಿ ಇನ್‌ಸ್ಟಾಲ್‌ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು disable ಮಾಡುವ ಆಯ್ಕೆಯು ಆಂಡ್ರಾಯ್ಡ್‌ ಸಾಧನಗಳ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಏಕೆಂದರೆ ಐಓಎಸ್‌ ಆವೃತ್ತಿಯ/ ಐಫೋನ್‌ ಬಳಕೆದಾರರು ಮೊದಲೇ ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಅಪರೂಪವಾಗಿ ಲಭ್ಯ ಆಗುತ್ತದೆ.

ವಾಟ್ಸಾಪ್‌ ಆಪ್‌ ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಈ ಕ್ರಮ ಅನುಸರಿಸಿರಿ:
* ವಾಟ್ಸಾಪ್ ಅಪ್ಲಿಕೇಶನ್ ತೆರೆಯಿರಿ
* ನಂತರ ಬಲ ಭಾಗದ ಕಾರ್ನರ್‌ ನಲ್ಲಿ ಕಾಣಿಸುವ ಮೂರು ಡಾಟ್‌ಗಳ ಮೆನು ಕ್ಲಿಕ್ ಮಾಡಿ
* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿರಿ
* ಆನಂತರ ಅಕೌಂಟ್ಸ್‌ ಆಯ್ಕೆಯನ್ನು ಕ್ಲಿಕ್ ಮಾಡಿರಿ
* ಡಿಲೀಟ್ ಮೈ ಅಕೌಂಟ್ ಆಯ್ಕೆ ಸೆಲೆಕ್ಟ್ ಮಾಡಿರಿ
* ಡಿಲೀಟ್ ಮಾಡುವ ಮುನ್ನ ಡಿಲೀಟ್ ಮಾಡುತ್ತಿರುವ ಬಗ್ಗೆ ಕಾರಣ ಕೇಳುತ್ತದೆ.

ಶಾಶ್ವತವಾಗಿ ಇನ್‌ಸ್ಟಾಗ್ರಾಂ ಆಪ್‌ ಖಾತೆ ಡಿಲೀಟ್ ಮಾಡಲು ಹೀಗೆ ಮಾಡಿ:
* ವೆಬ್ ವರ್ಷನ್‌ ಇನ್‌ಸ್ಟಾಗ್ರಾಂ ತೆರೆದು ಲಾಗ್‌ ಇನ್‌ ಆಗಿರಿ.
* ಅಕೌಂಟ್ ತೆಗೆದು ಹಾಕುವ ಸೂಕ್ತ ಕಾರಣ ತಿಳಿಸಬೇಕು.
* ನಂತರ ಶಾಶ್ವತವಾಗಿ ತೆಗೆದುಹಾಕುವ ಆಯ್ಕೆ ಕಾಣಿಸುತ್ತದೆ - rid of it forever
* ನಂತರ ಪಾಸ್‌ವರ್ಡ್‌ ಎಂಟ್ರಿ ಮಾಡಿ.
* ಕೊನೆಯದಾಗಿ ಡಿಸೆಬಲ್ ಆಯ್ಕೆ ಕ್ಲಿಕ್ ಮಾಡಿ.

Best Mobiles in India

English summary
How to Uninstall Unwanted Pre-Installed Apps on Android: Follow These Steps.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+