ಆಧಾರ್ ಅಪ್ಡೇಟ್‌ಗೆ 12 ದಿನ ಮಾತ್ರ ಬಾಕಿ!: 'ಫ್ರೀ' ಆಗಿ ಅಪ್ಡೇಟ್ ಮಾಡಲು ಇಲ್ಲಿದೆ ಸುಲಭ ವಿಧಾನ
ಆಧಾರ್ ಕಾರ್ಡ್ (Aadhaar Card) ಇಂದು ಬಹಳ ಮುಖ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ. ಯಾವುದೇ ಶುಲ್ಕ ಪಾವತಿ ಇಲ್ಲದೇ ಉಚಿತವಾಗಿ (Free Aadhaar Updation) ಆನ್‌ಲೈನ್‌ನಲ್ಲಿ ಆಧಾರ್ ಅಪ್ಡೇಟ್ ಮಾಡಲು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ನೀವು 10 ವರ್ಷಕ್ಕಿಂತ ಹಳೆಯ ಆಧಾರ್ ಅನ್ನು ಹೊಂದಿದ್ದರೆ, ಅಪ್ಡೇಟ್ ಮಾಡುವುದು ಅಗತ್ಯವಾಗಿದೆ. ಯುಐಡಿಎಐ ವೆಬ್‌ಸೈಟ್‌ಗೆ ಭೇಟಿ ನೀಡಿ, ಫ್ರೀಯಾಗಿ ಈ ಪ್ರಕ್ರಿಯೆಯನ್ನು ಮಾಡಬಹುದು. ಹಾಗಿದ್ರೆ, ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ? Aadhaar Cardನಲ್ಲಿ ಏನೆಲ್ಲಾ ಅಪ್ಡೇಟ್ ಮಾಡಬೇಕು? ಅನ್ನೋದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ಸರ್ಕಾರವು, ಆನ್‌ಲೈನ್‌ನಲ್ಲಿ ಉಚಿತವಾಗಿ Aadhaar Card ಅಪ್ಡೇಟ್ ಮಾಡಲು ಮಾರ್ಚ್ 14 ರವರೆಗೆ ಗಡುವು ನೀಡಿತ್ತು. ಬಳಿಕ, ಮಾರ್ಚ್ 14ರಿಂದ ಜೂನ್ 14ಕ್ಕೆ ಈ ಸಮಯಾವಕಾಶವನ್ನು ವಿಸ್ತರಿಸಿದೆ. ಇದು 10 ವರ್ಷಕ್ಕೂ ಹೆಚ್ಚು ಹಳೆಯ ಆಧಾರ್ ಹೊಂದಿರುವವರಿಗೆ ಮಾತ್ರ ಅನ್ವಯವಾಗಲಿದೆ. ಹೆಸರು ಬದಲಾಯಿಸುವುದಿದ್ದರೆ, ಜನ್ಮದಿನಾಂಕ ಬದಲಾವಣೆ ಮಾಡುವುದಿದ್ದರೆ, ಫೋಟೋ ಚೇಂಜ್ ಮಾಡಿಸುವುದಿದ್ದರೆ ಅಥವಾ ವಿಳಾಸ ಬದಲಾಯಿಸಬೇಕಿದ್ದರೆ.. ಹೀಗೆ ಆಧಾರ್‌ನಲ್ಲಿ ಅಪ್ಡೇಟ್ ಮಾಡಬಹುದು. ಜೂನ್ 14ರವರೆಗೂ ನೀವು ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬಹುದಾಗಿದೆ.

ಆಧಾರ್ ಅಪ್ಡೇಟ್‌ಗೆ 12 ದಿನ ಮಾತ್ರ ಬಾಕಿ!
ನಿಮಗೆಲ್ಲರಿಗೂ ತಿಳಿದಿರುವಂತೆ ಸರ್ಕಾರಿ ಸೌಲಭ್ಯಗಳು ಸೇರಿದಂತೆ ನಾನಾ ಸೇವೆಗಳಿಗೆ Aadhaar Card ದಾಖಲೆ ಕಡ್ಡಾಯವಾಗಿದೆ. ನೀವು ಯುಐಡಿಎಐ ವೆಬ್‌ಸೈಟ್‌ನಲ್ಲಿ ಮಾತ್ರ ಆಧಾರ್ ಅಪ್ಡೇಟ್ (Aadhaar Update) ಮಾಡಬಹುದು. ನೀವು ಆಧಾರ್ ಕೇಂದ್ರಕ್ಕೆ ಹೋಗದೆ ಈ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಲು ಬಯಸಿದರೆ, ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಬೇಕಾಗುತ್ತದೆ. Aadhaar Card ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು 12 ದಿನ ಮಾತ್ರ ಬಾಕಿ ಉಳಿದಿದೆ. ಅಷ್ಟರೊಳಗೆ ಫ್ರೀಯಾಗಿ Aadhaar Card ಅಪ್ಡೇಟ್ ಮಾಡಿಸುವುದು ಸೂಕ್ತ.
ಆಧಾರ್‌ನಲ್ಲಿ ಏನೆಲ್ಲಾ ಅಪ್ಡೇಟ್ ಮಾಡಬೇಕು?
ಯುಐಡಿಎಐ ಒದಗಿಸುವ ಆಧಾರ್ ಕಾರ್ಡ್‌ನಲ್ಲಿ (Aadhaar Card) ನಿಮ್ಮ ಮನೆಯ ವಿಳಾಸ, ಫೋನ್ ಸಂಖ್ಯೆ, ಹೆಸರು, ಇಮೇಲ್ ಐಡಿ ಇತ್ಯಾದಿ ಪ್ರಮುಖ ಮಾಹಿತಿಗಳನ್ನು ಅಪ್ಡೇಟ್ ಮಾಡಬಹುದು. ಇದಲ್ಲದೇ, ಫೋಟೋ, ಬಯೋಮೆಟ್ರಿಕ್, ಐರಿಸ್‌ನಂತಹ ಮಾಹಿತಿಯನ್ನು ಸಹ ಇದರಲ್ಲಿ ಅಪ್ಡೇಟ್ ಮಾಡಬಹುದು. ಆದರೆ, ನೀವು ಈ ಪ್ರಕ್ರಿಯೆಯನ್ನು ನೇರವಾಗಿ ಆನ್‌ಲೈನ್‌ನಲ್ಲಿ ಮಾಡಲು ಸಾಧ್ಯವಿಲ್ಲ. ಆಧಾರ್ ನೋಂದಣಿ ಕೇಂದ್ರಕ್ಕೆ ತೆರಳಿ ಅಪ್ಡೇಟ್ ಮಾಡಿಸಬಹುದು. ಇದಕ್ಕೆ ನೀವು ನಿಗದಿತ ಪಡಿಸಿದ ಶುಲ್ಕವನ್ನು (50 ರೂ.) ಪಾವತಿಸಬೇಕಾಗಿದೆ.
ಈ ಸುದ್ದಿ ಓದಿದ್ದೀರಾ?: ಪ್ಯಾನ್-ಆಧಾರ್ ಜೋಡಣೆಗೆ ಮೂರೇ ದಿನ ಬಾಕಿ : ನಿರ್ಲಕ್ಷಿಸಿದರೆ ದುಪ್ಪಟ್ಟು ತೆರಿಗೆ ಕಟ್!
ಆಧಾರ್ ಯಾಕೆ ಅಪ್ಡೇಟ್ ಮಾಡಬೇಕು?
10ಕ್ಕೂ ಹೆಚ್ಚು ವರ್ಷಗಳಿಂದ Aadhaar ಅನ್ನು ಅಪ್ಡೇಟ್ ಮಾಡದೇ ಇರುವವರು, ಈ ಕೆಲಸ ಮಾಡಬೇಕು ಎಂದು ಸರ್ಕಾರ ತಿಳಿಸಿದೆ. ಬಹುತೇಕರು Aadhaar Card ಮಾಡಿಸಿದಾಗಿನಿಂದ ಅದನ್ನು ಅಪ್ಡೇಟ್ ಮಾಡಿಸಿರುವುದಿಲ್ಲ. ನಿಮ್ಮ Aadhaar ಪ್ರೊಫೈಲ್‌ನಲ್ಲಿ ಯಾವುದೇ ಮಾಹಿತಿ ಬದಲಾವಣೆ ಇಲ್ಲದಿದ್ದರೂ, ಅದನ್ನು ನಮೂದಿಸಿ ಅಪ್ಡೇಟ್ ಮಾಡಬಹುದು. ಉದಾಹರಣೆಗೆ, ನಿಮಗೆ ವಯಸ್ಸಾಗಿದ್ದರೆ ಬೆರಳಚ್ಚು ಗುರುತು ಮಾಸಬಹುದು. ಮೊದಲಿನಂತೆ ಬೆರಳಚ್ಚು ಸರಿಯಾಗಿ ಮೂಡದಿರಬಹುದು. ಹೀಗಾಗಿ, Aadhaar Cardನಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು ಅಪ್ಡೇಟ್ ಮಾಡಿಸಬೇಕು.
ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವುದು ಹೇಗೆ?
- Step 1: ಮೊದಲಿಗೆ https://uidai.gov.in/ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- Step 2: ನಂತರ ಅಪ್ಡೇಟ್ ಆಧಾರ್ ಕಾರ್ಡ್ ಆಯ್ಕೆಯನ್ನು ಆರಿಸಿಕೊಳ್ಳಿ.
- Step 3: ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ. ಬಳಿಕ, ಓಟಿಪಿ ನಮೂದಿಸಿ ಲಾಗಿನ್ ಆಗಿ.
- Step 4: ಮುಂದಿನ ಪೇಜ್‌ನಲ್ಲಿ ನೀವು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
- Step 5: ಅದರಲ್ಲಿ ನೀವು ಅಪ್ಡೇಟ್ ಮಾಡಬೇಕಾದ ಆಯ್ಕೆಯನ್ನು ಕ್ಲಿಕ್ಕಿಸಿ. (ಉದಾಹರಣೆಗೆ, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಬದಲಾಯಿಸಬೇಕಿದ್ದರೆ ಆ ಆಯ್ಕೆಯನ್ನು ಆರಿಸಿ).
- Step 6: ಬಳಿಕ ನೀವು ಆಧಾರ್ ಅನ್ನು ಅಪ್ಡೇಟ್ ಮಾಡಲು ಮುಂದುವರಿಯಿರಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
- Step 7: ಬಳಿಕ ಅಪ್ಡೇಟ್ ಮಾಡಿದ ಆಯ್ಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಪ್ಲೋಡ್ ಮಾಡಿ. ಎಲ್ಲವೂ ಸರಿ ಇದ್ದರೆ ಒಪ್ಪಿಗೆ ನೀಡಬಹುದು.
- Step 8: ಆಗ ನಿಮಗೆ ಒಂದು ವಿನಂತಿ ಸಂಖ್ಯೆಯನ್ನು ರಚಿಸಲಾಗುತ್ತದೆ. ಈ ನಂಬರ್ ಅನ್ನು ಸೇವ್ ಮಾಡಿ ಇಟ್ಟುಕೊಳ್ಳಿ. ಇಷ್ಟು ಮಾಡಿದರೆ ಸಾಕು.
- Step 9: ಅಪ್ಡೇಟ್ ಮಾಡಿದ ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ (ನವೀಕರಿಸಿದ ಆಧಾರ್) ನಿಮ್ಮ ವಿಳಾಸಕ್ಕೆ ತಲುಪುತ್ತದೆ.
ಆನ್‌ಲೈನ್‌ನಲ್ಲಿ ಅಪ್ಡೇಟ್ ಮಾಡಲು ಆಗದಿದ್ದರೆ, ನಿಮ್ಮ ಸಮೀಪದ ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬಹುದು. ಬೆಂಗಳೂರು ಒನ್ ಇತ್ಯಾದಿ ಕಡೆಯೂ ಈ ಸೇವೆ ಲಭ್ಯ ಇರುತ್ತದೆ. ಇಲ್ಲಿ 50 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇದೇ ಜೂನ್ 14 ರವರೆಗೂ ನೀವು ಆನ್‌ಲೈನ್‌ಲ್ಲಿ ಅಪ್ಡೇಟ್ ಮಾಡಿಸಲು ಅವಕಾಶವಿದ್ದು, ಕೂಡಲೇ ಆಧಾರ್ ಅನ್ನು ಅಪ್ಡೇಟ್ ಮಾಡುವುದು ಒಳ್ಳೆಯದು.


Click it and Unblock the Notifications








