ನೌಕರರೇ ಗಮನಿಸಿ!..ನಿಮ್ಮ EPF ಖಾತೆಯಲ್ಲಿ ಈ ಕೆಲಸ ಮಾಡಿದ್ದೀರಾ, ಒಮ್ಮೆ ಚೆಕ್ ಮಾಡಿ!
ನೌಕರರೇ ಪಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (EPF) ಆರ್ಥಿಕ ಆಸರೆ ಎಂದರೆ ಖಂಡಿತಾ ತಪ್ಪಾಗಲಾರದು. ಏಕೆಂದರೆ ತುರ್ತು ಹಾಗೂ ಅಗತ್ಯ ಸಂದರ್ಭಗಳಲ್ಲಿ ಪಿಎಫ್ ಹಣ ಉದ್ಯೋಗಿಗಳ ನೆರವಿಗೆ ಬರುತ್ತದೆ. ಹೀಗಾಗಿ ನೌಕರರು ಅವರ ಇಪಿಎಫ್ ಖಾತೆಯ ಪಾಸ್‌ಬುಕ್‌ಗೆ ಬ್ಯಾಂಕ್ ಅಕೌಂಟ್ ಮಾಹಿತಿ ಅಪ್‌ಡೇಟ್ ಅಥವಾ ಸೇರ್ಪಡೆ ಮಾಡುವುದು ಮುಖ್ಯ.
ಹೌದು, ಉದ್ಯೋಗಿ ಭವಿಷ್ಯ ನಿಧಿ (EPF) ನಲ್ಲಿ ನಿಮ್ಮ ಬ್ಯಾಂಕ್ ಖಾತೆ ಸೇರಿಸಬಹುದು ಅಥವಾ ಅಪ್‌ಡೇಟ್ ಮಾಡಲು ಸಹ ಅವಕಾಶ ಇದೆ. ಆನ್‌ಲೈನ್ ಮೂಲಕವೇ ಸರಳವಾಗಿ ಅಪ್‌ಡೇಟ್ ಮಾಡಬಹುದಾಗಿದೆ. ನೀವೇನಾದರೂ ಇಪಿಎಫ್‌ನಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸಲು ಅಥವಾ ಅದನ್ನು ನವೀಕರಿಸಲು ಬಯಸಿದರೆ, ಈ ಲೇಖನದಲ್ಲಿ ತಿಳಿಸಲಾದ ಕ್ರಮಗಳನ್ನು ಅನುಸರಿಸಿ. ಮುಂದೆ ಓದಿರಿ.

EPF ಪಾಸ್‌ಬುಕ್‌ನಲ್ಲಿ ಬ್ಯಾಂಕ್ ಖಾತೆ ಮಾಹಿತಿ ಅಪ್‌ಡೇಟ್ ಮಾಡಲು ಹೀಗೆ ಮಾಡಿ
- ಮೊದಲಿಗೆ EPFO ಮೆಂಬರ್ ಪೋರ್ಟಲ್‌ಗೆ ಹೋಗಿ. https://unifiedportalmem.epfindia.gov.in/memberinterface/
- ಬಳಿಕ ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ. ಸೈನ್ ಇನ್ ಅನ್ನು ಟ್ಯಾಪ್ ಮಾಡಿ.
- ನಂತರ 'ಮ್ಯಾನೇಜ್' ಟ್ಯಾಬ್ ಕಾಣಿಸಲಿದೆ, ಅದರ ಮೇಲೆ ಕ್ಲಿಕ್ ಮಾಡಿ.
- ಬಳಿಕ ಡ್ರಾಪ್‌ಡೌನ್ ಮೆನುವಿನಲ್ಲಿ 'KYC' ಆಯ್ಕೆ ಕ್ಲಿಕ್ ಮಾಡಿ.

- ಆ ನಂತರ ಬ್ಯಾಂಕ್‌ಗಳ ಲಿಸ್ಟ್‌ನಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬೇಕು.
- ತದ ನಂತರ ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಹೆಸರು ಮತ್ತು IFSC ಕೋಡ್ ಅನ್ನು ಎಂಟ್ರಿ ಮಾಡಿರಿ.
- ಸೇವ್ ಆಯ್ಕೆ ಮೇಲೆ ಟ್ಯಾಪ್ ಮಾಡಿರಿ.
EPF ಪಾಸ್‌ಬುಕ್ ಚೆಕ್ ಮಾಡಲು ಈ ಕ್ರಮ ಅನುಸರಿಸಿ
ಹಂತ 1 : ಮೊದಲಿಗೆ EPFO ಮೇನ್‌ಪೇಜ್‌ಗೆ ಭೇಟಿ ನೀಡಿ. (https://www.epfindia.gov.in/)
ಹಂತ 2 : ನಂತರ ಮೇಲಿನ ಎಡ ಮೂಲೆಯಲ್ಲಿರುವ ಸರ್ವೀಸ್ (Services) ಆಯ್ಕೆ ಮೇಲೆ ಟ್ಯಾಪ್ ಮಾಡಿ.
ಹಂತ 3 : ಬಳಿಕ ಉದ್ಯೋಗಿಗಳಿಗಾಗಿ (Employees) ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 4 : ಆ ನಂತರ Member Passbook ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ.
ಹಂತ 5 : ಆದಾದ ಬಳಿಕ ನಿಮ್ಮ UAN ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ.
ಹಂತ 6 : ಆ ನಂತರ ಕ್ಯಾಪ್ಚಾವನ್ನು ನಮೂದಿಸಿ ಹಾಗೂ ಸೈನ್ ಇನ್ ಆಯ್ಕೆ ಅನ್ನು ಕ್ಲಿಕ್ ಮಾಡಿ.
ಹಂತ 7 : ಸೈನ್ ಇನ್ ಮಾಡಿದ ಬಳಿಕ, ಎಲ್ಲಾ ವಿವರಗಳು ಸ್ಕ್ರೀನ್ ಮೇಲೆ ಕಾಣಿಸುತ್ತವೆ. ನಂತರದಲ್ಲಿ, ನಿಮ್ಮ ಇಪಿಎಫ್ ಪಾಸ್‌ಬುಕ್ ನೋಡಲು, ಡೌನ್‌ಲೋಡ್ ಇ-ಪಾಸ್‌ಬುಕ್ ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ.
ಹಂತ 8 : ನಂತರದಲ್ಲಿ ಪಾಸ್‌ಬುಕ್ ಅನ್ನು ಡೌನ್‌ಲೋಡ್ ಮಾಡಲು ಬಯಸುವ ಆರ್ಥಿಕ ವರ್ಷವನ್ನು ಆಯ್ಕೆ ಮಾಡಿ. ಅಲ್ಲಿರುವ ಕ್ಯಾಪ್ಚಾ ಭರ್ತಿ ಮಾಡಿರಿ ಹಾಗೂ ಡೌನ್‌ಲೋಡ್ ಆಯ್ಕೆ ಅನ್ನು ಕ್ಲಿಕ್ ಮಾಡಿ.
SMS ಮೂಲಕ ಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ
ನೌಕರರು SMS ಮಾಡುವ ಮೂಲಕ ಸಹ ತಮ್ಮ ಪಿಎಫ್ ಬ್ಯಾಲೆನ್ಸ್ ಮಾಹಿತಿ ಪಡೆಯಬಬುದಾಗಿದೆ. ರಿಜಿಸ್ಟರ್ ಮೊಬೈಲ್ ಸಂಖ್ಯೆ ಮೂಲಕ 7738299899 ಸಂಖ್ಯೆಗೆ 'EPFOHO UAN ENG' ಎಂದು ಮೆಸೆಜ್ ಮಾಡುವ ಮೂಲಕ ಬ್ಯಾಲೆನ್ಸ್ ಮಾಹಿತಿ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








