Home
ಟೆಕ್ ನೌಕರಿ

ಉದ್ಯೋಗ ಬದಲಿಸಿದ್ದೀರಾ?, ಹಾಗಿದ್ರೆ EPFO ಪೋರ್ಟಲ್‌ನಲ್ಲಿ ಈ ಬದಲಾವಣೆ ಮಾಡಿ!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭಾರತದಲ್ಲಿ ಲಕ್ಷಾಂತರ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಂದರೆ ನಿವೃತ್ತಿ ಉಳಿತಾಯ, ದೀರ್ಘಾವಧಿಯ ಹೂಡಿಕೆ ಹಾಗೂ ತೆರಿಗೆ ಪ್ರಯೋಜನ ಸೇರಿದಂತೆ ಹಲವಾರು ರೀತಿಯಲ್ಲಿ ಅನುಕೂಲ. ಈ ನಡುವೆ ನೀವೇನಾದರೂ ಕೆಲಸ ಬಿಟ್ಟು ಬೇರೆ ಕೆಲಸಕ್ಕೆ ಸೇರಿದ್ದರೆ ನಿಮ್ಮ ನಿರ್ಗಮನ ದಿನಾಂಕವನ್ನು ನೀವೇ ನವೀಕರಿಸಬಹುದು.

ಹೌದು, ಇಪಿಎಫ್‌(EPF) ಖಾತೆದಾರರು ತಮ್ಮ ಉದ್ಯೋಗವನ್ನು ತೊರೆದ ಬಳಿಕ ಇಪಿಎಫ್‌ ಪೋರ್ಟಲ್‌ನಲ್ಲಿ ಲಭ್ಯವಿರುವ EPFO ನಲ್ಲಿ ನಿರ್ಗಮನ ದಿನಾಂಕದ ಸೌಲಭ್ಯ ಕಲ್ಪಿಸಿಕೊಡಲಾಗಿದ್ದು, ಸುಲಭವಾಗಿ ಈ ನಿರ್ಗಮನದ ದಿನಾಂಕವನ್ನು ನೀವೇ ನವೀಕರಿಸಬಹುದು.ಹಾಗಿದ್ರೆ, ಬನ್ನಿ ಇದನ್ನು ಹೇಗೆ ಮಾಡುವುದು?, ಈ ರೀತಿ ಮಾಡುವುದರಿಂದ ಏನೆಲ್ಲಾ ಅನುಕೂಲ ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ಉದ್ಯೋಗ ಬದಲಿಸಿದ್ದೀರಾ?, ಹಾಗಿದ್ರೆ EPFO ಪೋರ್ಟಲ್‌ನಲ್ಲಿ ಈ ಬದಲಾವಣೆ ಮಾಡಿ!

ಉದ್ಯೋಗಿಗಳಿಗೆ ಆಗಾಗ್ಗೆ ಎದುರಾಗುತ್ತಿದೆ ಈ ಸಮಸ್ಯೆ: ಯಾವುದೇ ಉದ್ಯೋಗಿಯೂ ಸಹ ಒಂದೇ ಸಂಸ್ಥೆಯಲ್ಲಿ ದೀರ್ಘಕಾಲ ಕೆಲಸ ಮಾಡಲು ಸಾಧ್ಯ ಆಗುವುದಿಲ್ಲ. ಅದರಲ್ಲೂ ಇತ್ತೀಚಿನ ಆರ್ಥಿಕ ಬೆಳವಣಿಗೆಯಿಂದಾಗಿ ವಜಾ ಪ್ರಕ್ರಿಯೆಗಳು ಸಹ ನಡೆಯುತ್ತಿದ್ದು, ಉದ್ಯೋಗಿಗಳು ಹೊಸ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾರೆ. ಈ ವೇಳೆ ಭವಿಷ್ಯ ನಿಧಿ ಖಾತೆ ಹೊಂದಿರುವವರು ನಿರ್ಗಮನ ದಿನಾಂಕವನ್ನು ನವೀಕರಿಸಬೇಕಿದೆ.

ಯಾರೆಲ್ಲಾ ಈ ಕೆಲಸ ಮಾಡಬಹುದು?: ನಿವೃತ್ತಿ ನಿಧಿ ಸಂಸ್ಥೆಯ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪ್ರಕಾರ ಉದ್ಯೋಗಿಗಳು ಕೆಲಸವನ್ನು ತೊರೆದ ಎರಡು ತಿಂಗಳ ನಂತರ ನಿರ್ಗಮನದ ದಿನಾಂಕವನ್ನು ನವೀಕರಿಸಬಹುದು ಅಥವಾ ಪರಿಷ್ಕರಿಸಬಹುದು. ಜೊತೆಗೆ ನಿರ್ಗಮನದ ದಿನಾಂಕವು ನಿಮ್ಮ ಮಾಜಿ ಉದ್ಯೋಗದಾತರು ನಿಮ್ಮ ಅಂತಿಮ ಪಾವತಿಯನ್ನು ನಿಮಗೆ ಒದಗಿಸುವ ದಿನಾಂಕವಾಗಿದೆ.

ಈ ಸಂಬಂಧ ಜುಲೈ 12 ರಂದು, EPFO ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ನೌಕರರು ಈಗ ತಮ್ಮ ನಿರ್ಗಮನದ ದಿನಾಂಕವನ್ನು ತಾವಾಗಿಯೇ ನವೀಕರಿಸಬಹುದು ಎಂದು ಉಲ್ಲೇಖಿಸಿದೆ. ಹಾಗಿದ್ರೆ, ತಡಯಾಕೆ ಬನ್ನಿ ಈ ಸರಳ ಹಂತದ ಮೂಲಕ ಹೇಗೆ ಕೆಲಸ ಬಿಟ್ಟ ದಿನಾಂಕವನ್ನು ನವೀಕರಿಸಬಹುದು ಎಂಬುದನ್ನು ತಿಳಿಯೋಣ.

ಹಂತ 1: ಮೊದಲು ನಿಮ್ಮ ಫೋನ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ EPFO ಅಧಿಕೃತ ಸೈಟ್‌ಗೆ ಭೇಟಿ ನೀಡಬೇಕು. ಇದಕ್ಕಾಗಿ ನೀವು https://unifiedportal mem.epfindia.gov.in/memberinterface/ ಲಿಂಕ್‌ ಬಳಕೆ ಮಾಡಿಕೊಳ್ಳಬಹುದು. ನಂತರ UAN ಮತ್ತು ಪಾಸ್‌ವರ್ಡ್ ಬಳಕೆ ಮಾಡಿಕೊಂಡು ಲಾಗ್ ಇನ್ ಮಾಡಿ.

ಹಂತ 2: ಇದಾದ ಬಳಿಕ 'ಮ್ಯಾನೇಜ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಟ್ಯಾಬ್ ಮಾಡಿ. ಅಲ್ಲಿ 'ಮಾರ್ಕ್ ಎಕ್ಸಿಟ್'ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಬಳಿಕ ಡ್ರಾಪ್-ಡೌನ್ ಪಟ್ಟಿಯಿಂದ ಸೂಕ್ತವಾದ ಪಿಎಫ್‌ ಖಾತೆ ಸಂಖ್ಯೆಯನ್ನು ನೀವು ಆಯ್ಕೆ ಮಾಡಬಹುದು. ಇದರಲ್ಲಿ ನಿರ್ಗಮನ ದಿನಾಂಕ ಮತ್ತು ನಿರ್ಗಮನದ ಕಾರಣವನ್ನು ಉಲ್ಲೇಖಿಸಿ.

ಉದ್ಯೋಗ ಬದಲಿಸಿದ್ದೀರಾ?, ಹಾಗಿದ್ರೆ EPFO ಪೋರ್ಟಲ್‌ನಲ್ಲಿ ಈ ಬದಲಾವಣೆ ಮಾಡಿ!

ಹಂತ 3: ನಂತರದಲ್ಲಿ ಓಟಿಪಿಗಾಗಿ ವಿನಂತಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್‌ ಮಾಡಿ ಬಳಿಕ ನೋಂದಾಯಿತ ಫೋನ್‌ ಸಂಖ್ಯೆಗೆ ಒಂದು ಓಟಿಪಿ ಬರಲಿದೆ. ಅಲ್ಲಿ ಚೆಕ್‌ಬಾಕ್ಸ್ ಅನ್ನು ಆಯ್ಕೆ ಮಾಡಿ, 'ಅಪ್‌ಡೇಟ್' ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ, ತದನಂತರ ಸರಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಇದನ್ನು ಕ್ಲಿಕ್ ಮಾಡುವ ಮೂಲಕ ದೃಢೀಕರಿಸಿ.ಇದನ್ನು ಮಾಡಿದ ನಂತರ ನೀವು ನಿರ್ಗಮನ ದಿನಾಂಕದ ಯಶಸ್ವಿ ನವೀಕರಣವನ್ನು ದೃಢೀಕರಿಸುವ ನೋಟಿಫೀಕೇಶನ್‌ ಸ್ವೀಕರಿಸುತ್ತೀರಿ.

ಇದರೊಂದಿಗೆ ಪೋರ್ಟಲ್‌ನಲ್ಲಿ 'ನಿರ್ಗಮನ ದಿನಾಂಕ' ಅನ್ನು ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಲು ಮೊದಲು ಸದಸ್ಯ ಇ-ಸೇವಾ ಪೋರ್ಟಲ್‌ನಲ್ಲಿ, ವೀಕ್ಷಿಸು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ. ಬಳಿಕ 'ಸೇವಾ ಇತಿಹಾಸ' ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ನಂತರದಲ್ಲಿ ಹೊಸ ಟ್ಯಾಬ್ ಓಪನ್‌ ಆಗಲಿದ್ದು, ಉದ್ಯೋಗಿ ಇಪಿಎಫ್ ಖಾತೆಗಳನ್ನು ಹೊಂದಿರುವ ಎಲ್ಲಾ ಉದ್ಯೋಗದಾತರ ಪಟ್ಟಿಯನ್ನು ಇಲ್ಲಿ ತೋರಿಸಲಾಗುತ್ತದೆ.

Best Mobiles in India

English summary
EPFO has provided exit date facility on EPF portal, so you can easily update this exit date yourself.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+