ವಿಂಡೋಸ್‌ 7 ನಿಂದ ವಿಂಡೋಸ್‌ 8ಗೆ ಅಪ್ಗ್ರೇಡ್‌ ಮಾಡುವುದು ಹೇಗೆ?

By Super
|
ವಿಂಡೋಸ್‌ 7 ನಿಂದ ವಿಂಡೋಸ್‌ 8ಗೆ ಅಪ್ಗ್ರೇಡ್‌ ಮಾಡುವುದು ಹೇಗೆ?

ಮೈಕ್ರೋಸಾಫ್ಟ್‌ನ ನೂತನ ಮಾದರಿಯ ವಿಂಡೋ 8 ಆಪರೇಟಿಂಗ್‌ ಸಿಸ್ಟಂ ಶೀಗ್ರದಲ್ಲೇ ಮಾರುಕಟ್ಟೆಗೆ ಕಾಲಿರಿಸಲಿದೆ. ಈ ಮೂಲಕ ನಿಮ್ಮ ಕಂಪ್ಯೂಟರ್ ಹಾಗೂ ಲ್ಯಾಪ್‌ಟಾಪ್‌ನ ಆಪರೇಟಿಂಗ್‌ ಸಿಸ್ಟಂ ಅಪ್ಗ್ರೇಡ್‌ ಮಾಡಿ ಕೊಳ್ಳಬಹುದಾಗಿದೆ. ಅಂದಹಾಗೆ ಹಾಗೆ ನೂತನ ಆಪರೇಟಿಂಗ್‌ ಸಿಸ್ಟಂ ಅಕ್ಟೋಬರ್‌ 26 ರಂದು ಬಿಡುಗಡೆಯಾಗಲಿದೆ. ನೀವೂ ಕೂಡ ನಿಮ್ಮ ಕಂಪ್ಯೂಟರ್‌ಗೆ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ಅಪ್ಗ್ರೇಡ್‌ ಮಾಡಿಕೊಳ್ಳ ಬೇಕೆಂದಿದ್ದೀರ ಹಾಗಿದ್ದಲ್ಲಿ ನೀವು 699 ರೂಗಳನ್ನು ಖರ್ಚು ಮಾಡಬೇಕಾಗುತ್ತದೆ. ಅಂದಹಾಗೆ ಮೈಕ್ರೋಸಾಫ್ಟ್‌ ತನ್ನಯ ನೂತನ ಆಪರೇಟಿಂಗ್‌ ಸಿಸ್ಟಂ ಅನ್ನು 140 ರಾಷ್ಟ್ರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.

ವಿಂಡೋಸ್‌ 7 ನಿಂದ ವಿಂಡೋಸ್‌ 8 ಗೆ ಹೇಗೆ ಅಪ್ಗ್ರೇಡ್‌ ಮಾಡಿಕೊಳ್ಳುವುದು?

  • ಅಂದಹಾಗೆ ನೀವು ನಿಮ್ಮ ಪಿಸಿ, ಕಂಪ್ಯುಟರ್‌ ಅಥವಾ ಲ್ಯಾಪ್‌ಟಾಪ್‌ 2012 ರಲ್ಲಿ ಖರೀದಿಸಿದ್ದಲ್ಲಿ ಮಾತ್ರವಷ್ಟೇ ನಿಮಗೆ ನೂತನ ವಿಂಡೋಸ್‌ 8 699 ರೂ.ಗಳಿಗೆ ದೊರೆಯುತ್ತದೆ.

  • ನಿಮ್ಮ ವಿಂಡೋಸ್‌ 7 ಪಿಸಿಯನ್ನು ಅಪ್ಗ್ರೇಡ್‌ ಮಾಡಲು windowsupgradeoffer.com ಸೈಟ್‌ ಓಪನ್‌ ಮಾಡಿಕೊಳ್ಳಿ.

  • ಸೈಟ್‌ ಓಪನ್‌ ಮಾಡಿದ ಬಳಿಕ ಅದರಲ್ಲಿನ ಫಾರ್ಮ್‌ ಫೀಲ್‌ ಮಾಡಿ. ಹಾಗು ಇದರಲ್ಲಿ ಲ್ಯಾಪ್‌ಟಾಪ್‌ ಖರೀದಿಸಿದ ಸರಿಯಾದ ದಿನಾಂಕವನ್ನು ಎಚ್ಚರದಿಂದ ಧಾಖಲಿಸಿ.

  • ನಂತರ ಅಕ್ಟೋಬರ್ 26 ರಂದು ನಿಮ್ಮ ಮೇಲ್‌ ಐಡಿಗೆ ವಿಂಡೋಸ್‌ 8 ಹೊಂದಿರುವ ಒಂದು ಮೇಲ್‌ ಬರುತ್ತದೆ ಹಾಗೂ ಅದರಲ್ಲಿ ಒಂದು ಪ್ರಮೋಷನಲ್‌ ಕೋಡ್‌ ಇರಿತ್ತದೆ. ಈ ಕೋಡ್‌ ಅನ್ನು ಮೇಲ್‌ ನಲ್ಲಿ ನೀಡ ಲಾಗಿರುವ ಲಿಂಕ್‌ಗೆ ತೆರಳಿ ಕೋಡ್‌ ನೀಡಿ ವಿಂಡೋಸ್‌ 8 ಡೌನ್ಲೋಡ್‌ ಮಾಡಿಕೊಳ್ಳ ಬಹುದಾಗಿದೆ.

  • ಮೈಕ್ರೋಸಾಫ್ಟ್‌ ಈ ನೂತನ ವಿಂಡೋಸ್‌ 8 ನ ಅಪ್ಗ್ರೇಡ್‌ ಕೋಡ್‌ನ ಅವಧಿಯನ್ನು ಕೇವಲ 2013ರ ಜನವರಿ 31 ರವರೆಗು ಮಾತ್ರವೇ ಮಾನ್ಯಾತೆ ನೀಡುತ್ತದೆ. ಇದಾದ ಬಳಿಕ ನಿಮ್ಮ ಅಪ್ಗ್ರೇಡ್‌ ಕೋಡ್‌ ಸ್ವೀಕರಿಸಲಾ ಗುವುದಿಲ್ಲಾ.

15,000 ರೂ.ದರದಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X