Home
ಟೆಕ್ ನೌಕರಿ

ಫೋನ್‌ ಕಳೆದುಹೋದರೆ ಈ ನಂಬರ್‌ಗೆ ಮೆಸೆಜ್‌ ಮಾಡಿ; ಕೆಲವೇ ದಿನಗಳಲ್ಲಿ ಮರಳಿ ಸಿಗುತ್ತೆ!?

ಮೊಬೈಲ್‌ ಕಳೆದುಹೋದರೆ ಜನರು ಮೊದಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗುತ್ತಾರೆ. ಇದರ ಜೊತೆಗೆ ಫೈಂಡ್‌ ಮೈ ಡಿವೈಸ್‌ ನೆರವಿ ನೊಂದಿಗೆ ಫೋನ್‌ ಹುಡುಕುವ ಪ್ರಯತ್ನ ಸಹ ಮಾಡುತ್ತಾರೆ. ಇನ್ನು ಕೆಲವರು ಕಳೆದು ಹೋದ ಸ್ಮಾರ್ಟ್‌ಫೋನ್‌ ಮರಳಿ ಸಿಗುವ ಭರವಸೆಯನ್ನೇ ಕಳೆದುಕೊಳ್ಳುತ್ತಾರೆ.

ಕಳೆದುಹೋದ ಫೋನ್‌ ಮತ್ತೆ ಸಿಗುತ್ತೆ ಎನ್ನುವ ಭರವಸೆ ಬಹುತೇಕರಲ್ಲಿ ಇರುವುದಿಲ್ಲ. ಆದರೆ ಪೊಲೀಸ್​ ಇಲಾಖೆಯಿಂದ ಮೊಬೈಲ್​ ಪತ್ತೆ ಹಚ್ಚಲು ನೂತನ ಇ - ಪೋರ್ಟಲ್ (Ceir portal) ಜಾರಿ ಮಾಡಲಾಗಿದೆ. ಈ ಮೂಲಕ ಕಳೆದುಹೋದ ಫೋನ್‌ ಮತ್ತೆ ಸಿಗುತ್ತೆ ಎನ್ನುವ ಭರವಸೆ ಉಳಿಸಿಕೊಳ್ಳುವಂತೆ ಮಾಡಿದೆ.

ಫೋನ್‌ ಕಳೆದುಹೋದರೆ ಈ ನಂಬರ್‌ಗೆ ಮೆಸೆಜ್‌ ಮಾಡಿ; ಕೆಲವೇ ದಿನಗಳಲ್ಲಿ ಸಿಗುತ್ತೆ!?

ಹೌದು, ಒಂದು ವೇಳೆ ಮೊಬೈಲ್‌ ಕಳ್ಳತನವಾದರೆ ಅಥವಾ ಕಳೆದುಹೋದರೆ ಪೊಲೀಸ್‌ ಇಲಾಖೆ ಜಾರಿಗೆ ತಂದಿರುವ ಇ - ಪೋರ್ಟಲ್‌ನಲ್ಲಿ ಮನೆಯಲ್ಲಿಯೇ ಕುಳಿತು ಸುಲಭವಾಗಿ ದೂರು ದಾಖಲಿಸಬಹುದಾಗಿದೆ. ದೂರು ನೀಡಿದ ಕೆಲವೇ ದಿನಗಳಲ್ಲಿ ಫೋನ್‌ ಪತ್ತೆ ಮಾಡಲಾಗುತ್ತದೆ. ಹಾಗೆಯೇ ಪತ್ತೆಯಾಗದ ಫೋನ್‌ಗಳ ಬ್ಲಾಕ್ ಮಾಡಲು ಕ್ರಮ ಕೈಗೊಳ್ಳಬಹುದಾಗಿದೆ.

ಇತ್ತೀಚಿಗೆ ಹುಬ್ಬಳ್ಳಿ - ಧಾರವಾಡ ಪೊಲೀಸ್‌ ಕಮಿಷನರೇಟ್‌ ವತಿಯಿಂದ ಹೊಸ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಈ ಮೂಲಕ ಸುಮಾರು 30 ಫೋನ್‌ಗಳನ್ನು ಪೊಲೀಸ್‌ರು ಪತ್ತೆ ಮಾಡಿದ್ದಾರೆ ಎಂದು ಪೊಲೀಸ್‌ ಆಯುಕ್ತ ರಮಣ್‌ಗುಪ್ತಾ ಅವರು ತಿಳಿಸಿದ್ದಾರೆ. ಇ - ಪೋರ್ಟಲ್‌ನಲ್ಲಿ ಫೋನ್‌ ಕಳೆದುಹೋಗಿರುವ ಬಗ್ಗೆ ದೂರು ದಾಖಲಿಸಿದ್ದ ವಾರಸುದಾರರಿಗೆ ಅವರ ಫೋನ್‌ಗಳನ್ನು ವಾಪಸ್‌ ಹಸ್ತಾಂತರಿಸಿದ್ದಾರೆ.

ಫೋನ್‌ ಕಳೆದುಹೋದರೆ ಈ ನಂಬರ್‌ಗೆ ಮೆಸೆಜ್‌ ಮಾಡಿ; ಕೆಲವೇ ದಿನಗಳಲ್ಲಿ ಸಿಗುತ್ತೆ!?

ನಿಮ್ಮ ಫೋನ್‌ ಕಳೆದುಹೋದರೆ ಕೂಡಲೇ ಹೀಗೆ ಮಾಡಿ:

ಹಂತ 1 : ಮೊದಲಿಗೆ 8277952828 ಈ ನಂಬರ್‌ಗೆ ವಾಟ್ಸಾಪ್‌ನಲ್ಲಿ Hi ಎಂದು ಮೆಸೆಜ್‌ ಮಾಡಿ.

ಹಂತ 2 : ನೀವು ಮೆಸೆಜ್‌ ಕಳುಹಿಸಿದ ವಾಟ್ಸಾಪ್‌ ನಂಬರ್‌ಗೆ ಒಂದು ಲಿಂಕ್‌ ಬರುತ್ತದೆ.

ಹಂತ 3 : ಇಲ್ಲಿ ಕೇಳಲಾಗುವ ಅವಶ್ಯ ಮಾಹಿತಿಗಳನ್ನು ಭರ್ತಿ ಮಾಡಿ ಮತ್ತು Submit ಮಾಡಿರಿ.

ಹಂತ 4 : ಆ ನಂತರ ಕಳೆದುಹೋದ ಫೋನ್‌ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು.

ಹಂತ 5 : ಇನ್ನು ಪತ್ತೆಯಾಗದ ಫೋನ್‌ಗಳನ್ನು ಬ್ಲಾಕ್‌ ಮಾಡಲು ಕ್ರಮ ಕೈಗೊಳ್ಳಲಾಗುವುದು.

ಫೋನ್‌ ಕಳೆದುಹೋದರೆ ಈ ನಂಬರ್‌ಗೆ ಮೆಸೆಜ್‌ ಮಾಡಿ; ಕೆಲವೇ ದಿನಗಳಲ್ಲಿ ಸಿಗುತ್ತೆ!?

ಸಿಮ್ ಕಾರ್ಡ್ ಅನ್ನು ತಕ್ಷಣವೇ ಬ್ಲಾಕ್ ಮಾಡಿ

ಸಿಮ್ ಕಾರ್ಡ್ ಅನ್ನು ತಕ್ಷಣವೇ ನಿರ್ಬಂಧಿಸಿ, ಇದರಿಂದ ಕಳ್ಳರು ಹಣಕಾಸು ಸೇವೆಗಳ OTP ಗಳಿಗೆ ಅಥವಾ ಇತರ ವೈಯಕ್ತಿಕ ಸಂದೇಶಗಳಿಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಸಹಜವಾಗಿ, ನೀವು ಹೊಸ ಸಿಮ್ ಕಾರ್ಡ್‌ನೊಂದಿಗೆ ಅದೇ ಮೊಬೈಲ್ ಸಂಖ್ಯೆಯನ್ನು ಬಳಸುವುದನ್ನು ಮುಂದುವರಿಸಬಹುದು. ಆದರೆ ನಿಮ್ಮ ಹಳೆಯ ಮೊಬೈಲ್ ಸಂಖ್ಯೆಗೆ ಹೊಸ ಸಿಮ್ ಕಾರ್ಡ್ ಪಡೆಯುವ ಸಂಪೂರ್ಣ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

UPI ಪಾವತಿಯನ್ನು ನಿಷ್ಕ್ರಿಯಗೊಳಿಸಿ

ಆ ಫೋನ್ ಸಂಖ್ಯೆಯೊಂದಿಗೆ ಲಿಂಕ್ ಆದ UPI ಪಾವತಿಯನ್ನು ನಿಷ್ಕ್ರಿಯಗೊಳಿಸಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳನ್ನು ನಿರ್ಬಂಧಿಸಿದ ನಂತರ, ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ UPI ಮತ್ತು ಇತರ ಮೊಬೈಲ್ ವ್ಯಾಲೆಟ್‌ಗಳನ್ನು ನಿಷ್ಕ್ರಿಯಗೊಳಿಸಲು ಮರೆಯಬೇಡಿ.


ಮೊಬೈಲ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ

ನಿಮ್ಮ ಮೊಬೈಲ್ ಫೋನ್ ಕಳೆದುಕೊಂಡ ಕ್ಷಣ, ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳಿಗೆ ಪ್ರವೇಶವನ್ನು ನಿರ್ಬಂಧಿಸಿ. ಕಳ್ಳರು ನಿಮ್ಮ ಬ್ಯಾಂಕಿಂಗ್ ಖಾತೆಗಳನ್ನು ಪ್ರವೇಶಿಸಲು ಸಾಧ್ಯವಾದರೆ ಅವರು ಸುಲಭವಾಗಿ ಹಣವನ್ನು ವರ್ಗಾಯಿಸಬಹುದು ಏಕೆಂದರೆ ಅವರು ನಿಮ್ಮ ಮೊಬೈಲ್‌ನಲ್ಲಿ OTP ಗಳನ್ನು ಪಡೆಯುವುದನ್ನು ಮುಂದುವರಿಸುತ್ತಾರೆ. ಏಕೆಂದರೆ ನಿಮ್ಮ ಟೆಲಿಕಾಂ ಆಪರೇಟರ್ ನಿಮ್ಮ ಸಿಮ್ ಅನ್ನು ನಿರ್ಬಂಧಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

Best Mobiles in India

English summary
The phone will be traced within a few days of the complaint. Actions can also be taken to block undetected phones. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+