ಡಿಜಿಟಲ್ ಪೊಲೀಸ್ ಪೋರ್ಟಲ್: ಆನ್‌ಲೈನ್‌ನಲ್ಲಿ ಯಾವೆಲ್ಲಾ ಸಮಸ್ಯೆಗಳಿಗೆ ದೂರು ಸಲ್ಲಿಸಬಹುದು, ಬಳಕೆ ಹೇಗೆ?
ಇತ್ತೀಚಿನ ದಿನಗಳಲ್ಲಿ ಪೊಲೀಸ್ ವ್ಯವಸ್ಥೆ (Police system) ಬಹಳ ಹತ್ತಿರ ಆಗುತ್ತಿದೆ. ಅದರಲ್ಲೂ ಪೊಲೀಸ್ ಠಾಣೆಗೆ ಹೋಗದೆಯೇ ಹಲವಾರು ಮಾಹಿತಿಗಳನ್ನು ಪಡೆದುಕೊಳ್ಳಲು ಸಹ ಅನುವು ಮಾಡಿಕೊಡುವ ಅಧಿಕೃತ ವೆಬ್‌ಸೈಟ್‌ಗಳಿವೆ. ಈ ನಡುವೆ ಕೇಂದ್ರ ಸರ್ಕಾರದ ಡಿಜಿಟಲ್ ಪೊಲೀಸ್ ಪೋರ್ಟಲ್ (Digital Police Portal) ಸಹ ದೇಶದ ಜನರಿಗೆ ಸಾಕಷ್ಟು ಸೌಲಭ್ಯ ಕಲ್ಪಿಸಿಕೊಡಲಿದೆ.
ಹೌದು, ಈಗಾಗಲೇ ಈ ಸೇವೆ ಲಭ್ಯ ಇದೆಯಾದರೂ ಇದೀಗ ಇದರಲ್ಲಿ ಕೆಲವು ಹೊಸ ಸೇವೆಗಳನ್ನು ಕಲ್ಪಿಸುವ ಮೂಲಕ ನವೀಕರಣ ಮಾಡಲಾಗಿದೆ. ಇದರಿಂದ ಈ ಹಿಂದೆ ಇದ್ದ ಸೇವೆಗಳ ಜೊತೆಗೆ ಇನ್ನೂ ಹೆಚ್ಚಿನ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ರಾಜ್ಯ ಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಮಾಹಿತಿ ನೀಡಿದ್ದಾರೆ. ಹಾಗಿದ್ರೆ, ಬನ್ನಿ ಈ ಮೂಲಕ ಏನೆಲ್ಲಾ ಸೌಲಭ್ಯಗಳು ಲಭ್ಯ?, ಬಳಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

2017 ರಲ್ಲಿಯೇ ಆರಂಭ ಆಗಿದ್ದ ಪೋರ್ಟಲ್: ಪೊಲೀಸ್ ವ್ಯವಸ್ಥೆ ಹಲವು ವರ್ಷಗಳ ಹಿಂದೆಯೇ ಡಿಜಿಟಲ್ ಸ್ವರೂಪ ಪಡೆದುಕೊಂಡಿದೆ. ಅಂದರೆ 2017 ರಲ್ಲಿ ಗೃಹ ಸಚಿವಾಲಯದ (MHA) ಅಡಿಯಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಡಿಜಿಟಲ್ ಪೊಲೀಸ್ ಪೋರ್ಟಲ್ ಅನ್ನು ಆರಂಭಿಸಿತ್ತು. ಈ ಪೋರ್ಟಲ್ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ನಾಗರಿಕ ಸೇವೆಗಳ ಶ್ರೇಣಿಯನ್ನು ಹೊಂದಿದೆ.
ಈ ಪೋರ್ಟಲ್ ಬಳಕೆ ಹೇಗೆ?: ನೀವು https://digitalpolice.gov.in ಲಿಂಕ್ ಬಳಕೆ ಮಾಡುವ ಮೂಲಕ ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು. ಇದರಲ್ಲಿ ನಾಗರೀಕ ಸೇವೆ ಹಾಗೂ ಪೊಲೀಸ್ ಸೇವೆ ಎಂಬ ಎರಡು ಆಯ್ಕೆ ಕಾಣಿಸಿಕೊಳ್ಳುತ್ತದೆ. ನಾಗರೀಕ ಸೇವೆಯಲ್ಲಿ ಸೈಬರ್ ಕ್ರೈಮ್, ಸೆಂಟ್ರಲ್ ಸಿಟಿಜನ್ ಸರ್ವಿಸ್, ಎನ್‌ಸಿಆರ್‌ಬಿ ಪಬ್ಲಿಕೇಶನ್ ಎಂಬ ಹಲವು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಅವುಗಳನ್ನು ನಿಮಗೆ ಅಗತ್ಯ ಇರುವುದನ್ನು ಆಯ್ಕೆ ಮಾಡಿಕೊಳ್ಳಬಹುದು.
ಉದಾಹರಣೆಗೆ ನೀವು ಸೈಬರ್ ಕ್ರೈಮ್ ವಿಭಾಗ ಆಯ್ಕೆ ಮಾಡಿಕೊಂಡರೆ ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ವಯಕ್ತಿಕ ಮಾಹಿತಿಯನ್ನು ಸಾರ್ವಜನಿಕಗೊಳಿಸದೆಯೂ ದೂರು ದಾಖಲಿಸಬಹುದಾಗಿದೆ. ಅದರಲ್ಲಿ ಯಾವ ವಿಧದ ಅಪರಾದ, ಘಟನೆ ನಡೆದ ಸ್ಥಳ ಹಾಗೂ ದಿನಾಂಕ ಹಾಗೂ ವಿಳಾಸಗಳಂತಹ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಸುಲಭವಾಗಿ ಈ ಪೋರ್ಟಲ್‌ನಲ್ಲಿ ಸೇವೆ ಪಡೆದುಕೊಳ್ಳಬಹುದಾಗಿದೆ.
ಈ ಪೋರ್ಟಲ್‌ನಲ್ಲಿ ಸೇರ್ಪಡೆಯಾದ ಹೊಸ ಸೇವೆಗಳು ಯಾವುವು?: ಈ ಪೋರ್ಟಲ್ ಬಳಕೆ ಮಾಡಿಕೊಂಡು ನೀವು ಕಾಣೆಯಾದವರ ಹುಡುಕಾಟ, ವಾಹನ NOC ಕ್ರಿಯೇಟ್, ಘೋಷಿತ ಅಪರಾಧಿಗಳ ಮಾಹಿತಿ, ಹತ್ತಿರದ ಪೊಲೀಸ್ ಠಾಣೆಯನ್ನು ಪತ್ತೆ ಮಾಡುವ ಆಯ್ಕೆಗಳು ಪ್ರಮುಖವಾಗಿವೆ. ಇವುಗಳನ್ನು ಹೊರತುಪಡಿಸಿ ಒಂಬತ್ತು ಕಡ್ಡಾಯ ನಾಗರಿಕ ಸೇವೆಗಳನ್ನು ಡಿಜಿಟಲ್ ಪೋಲಿಸ್ ಪೋರ್ಟಲ್ ಮೂಲಕ ರಾಜ್ಯ ಪೊಲೀಸ್ ಸಿಟಿಜನ್ ಪೋರ್ಟಲ್‌ಗಳು ನೀಡುತ್ತವೆ.
ಅವುಗಳಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರುಗಳನ್ನು ಸಲ್ಲಿಸುವುದು, ದೂರುಗಳ ಸ್ಥಿತಿಯನ್ನು ಪಡೆಯುವುದು, ಎಫ್‌ಐಆರ್‌ಗಳ ಪ್ರತಿಗಳನ್ನು ಪಡೆಯುವುದು, ಬಂಧಿತ ವ್ಯಕ್ತಿಗಳು/ ಬೇಕಾಗಿರುವ ಅಪರಾಧಿಗಳ ವಿವರಗಳು, ಕಾಣೆಯಾದ/ಅಪಹರಣಕ್ಕೊಳಗಾದವರ ವಿವರಗಳು, ಕದ್ದ/ವಶಪಡಿಸಿಕೊಂಡ ವಾಹನಗಳು, ಶಸ್ತ್ರಾಸ್ತ್ರಗಳು ಮತ್ತು ಇತರ ಆಸ್ತಿಗಳ ವಿವರಗಳು, ವಿವಿಧ NOC ಗಳ ಸಮಸ್ಯೆ/ನವೀಕರಣಕ್ಕಾಗಿ ವಿನಂತಿಗಳ ಸಲ್ಲಿಕೆ (ಮೆರವಣಿಗೆ, ಕಾರ್ಯಕ್ರಮ / ಪ್ರದರ್ಶನ, ಪ್ರತಿಭಟನೆ / ಮುಷ್ಕರ ಇತ್ಯಾದಿ).
ಸೇವಕರು, ಉದ್ಯೋಗ, ಪಾಸ್‌ಪೋರ್ಟ್, ಹಿರಿಯ ನಾಗರಿಕರ ನೋಂದಣಿ ಇತ್ಯಾದಿಗಳಿಗಾಗಿ ಪರಿಶೀಲನೆ ವಿನಂತಿಗಳು, ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಅಗತ್ಯವಿರುವ ಫಾರ್ಮ್‌ಗಳನ್ನು ಡೌನ್‌ಲೋಡ್ ಮಾಡಲು ನಾಗರಿಕರನ್ನು ಸಕ್ರಿಯಗೊಳಿಸಲು ಪೋರ್ಟಲ್ ಆಯ್ಕೆ ನೀಡಲಾಗಿದೆ. ಇನ್ನು MHA 2019 ರಲ್ಲಿ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) (https://cybercrime.gov.in) ಅನ್ನು ಪ್ರಾರಂಭಿಸಿದ್ದು, ನಾಗರಿಕರು ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಸೈಬರ್ ಅಪರಾಧಗಳು ಸೇರಿದಂತೆ ಎಲ್ಲಾ ರೀತಿಯ ಸೈಬರ್ ಅಪರಾಧಗಳ ವರದಿ ಮಾಡಬಹುದು.

ಮೇಲೆ ತಿಳಿಸಿದ ಪೋರ್ಟಲ್‌ಗಳ ಮೂಲಕ ದೇಶದಾದ್ಯಂತ ನಾಗರಿಕರು ಈ ನಾಗರಿಕ-ಕೇಂದ್ರಿತ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಕಾನೂನು ಜಾರಿ ಸಂಸ್ಥೆಗಳು ಮತ್ತು ರಾಜ್ಯ/UT ಪೋಲೀಸ್‌ನ ಅಧಿಕೃತ ಬಳಕೆದಾರರು ಸುರಕ್ಷಿತ ನೆಟ್‌ವರ್ಕ್ ಬಳಸಿಕೊಂಡು ಅಪರಾಧ ಮತ್ತು ಕ್ರಿಮಿನಲ್ ಡೇಟಾಬೇಸ್ ಗೆ ಎಂಟ್ರಿ ಸಹ ನೀಡಬಹುದಾಗಿದ್ದು, ಈ ಮೂಲಕ ಅಪರಾಧಿಗಳ ಪತ್ತೆಗೆ ಸಹಾಯಕವಾಗಿದೆ.


Click it and Unblock the Notifications








