Power Bank..ಪವರ್ ಬ್ಯಾಂಕ್ ಅನ್ನು ಈ ರೀತಿ ಬಳಸೋದು ಖಂಡಿತಾ ಸರಿಯಲ್ಲ! ಬಾಂಬ್‌ನಂತೆ ಸ್ಫೋಟವಾಗುತ್ತೆ
ಪವರ್ ಬ್ಯಾಂಕ್‌ಗಳಿಗೆ ಇಂದು ಸ್ಮಾರ್ಟ್‌ಫೋನ್‌ಗಳಿಗೆ ಕೊಡುವ ಮೌಲ್ಯವನ್ನೇ ನೀಡಲಾಗುತ್ತದೆ. ಈ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್ ಡಿವೈಸ್‌ಗಳು ಸದಾ ಜೀವಂತ ಇರುವಂತೆ ನೋಡಿಕೊಳ್ಳುತ್ತಾರೆ. ಈ ಕಾರಣಕ್ಕೆ ಮಾರುಕಟ್ಟೆಯಲ್ಲಿ ಭಿನ್ನ ಫೀಚರ್ಸ್ ಇರುವ ಪವರ್ ಬ್ಯಾಂಕ್‌ಗಳು ಬಹಳ ಸದ್ದು ಮಾಡುತ್ತಿವೆ.
ಹೌದು, ಇಂದು ಬಹುತೇಕರ ಬಳಿ ಸ್ಮಾರ್ಟ್ ಫೋನ್ ಅಥವಾ ಮೊಬೈಲ್ ಇದ್ದೇ ಇದೆ. ಮೊಬೈಲ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಸ್ಮಾರ್ಟ್‌ಫೋನ್‌ಗಳು ಮನರಂಜನೆಯ ಪ್ರಮುಖ ಡಿವೈಸ್ ಆಗಿ ಮಾರ್ಪಟ್ಟಿದ್ದು, ಈ ವೇಳೆ ಜನರು ಹಲವು ಗಂಟೆಗಳ ಕಾಲ ಮೊಬೈಲ್ ನಲ್ಲಿ ವಿಡಿಯೋಗಳನ್ನು ನೋಡುತ್ತಲೇ ಇರುತ್ತಾರೆ. ಆದರೆ ಆವೇಳೆ ವಿದ್ಯುತ್ ಇಲ್ಲದಿದ್ರೆ ಅಥವಾ ನಿಮ್ಮ ಪವರ್ ಸಾಕೆಟ್ ದೂರ ಇದ್ದರೆ ಪವರ್ ಬ್ಯಾಂಕ್ ಅನ್ನೇ ಬಳಕೆ ಮಾಡಲಾಗುತ್ತದೆ. ಆದರೆ ಈ ಪವರ್ ಬ್ಯಾಂಕ್ ಅನ್ನು ಹೆಂಗೆಂಗೋ ಬಳಕೆ ಮಾಡಿದ್ರೆ ಬ್ಲಾಸ್ಟ್ ಆಗೋದು ಪಕ್ಕಾ.

ದೀರ್ಘ ಚಾರ್ಜಿಂಗ್: ಕೆಲವು ಪವರ್ ಬ್ಯಾಂಕ್‌ಗಳು ಕಡಿಮೆ ಗುಣಮಟ್ಟದ ಪವರ್ ಸೆಲ್‌ಗಳೊಂದಿಗೆ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಮಿತಿಮೀರಿದ ಚಾರ್ಜಿಂಗ್‌ನಿಂದಾಗಿ ಅವು ಸ್ಫೋಟಗೊಳ್ಳಬಹುದು. ಪವರ್ ಬ್ಯಾಂಕ್‌ನಲ್ಲಿನ ಬ್ಯಾಟರಿಯು ಹೆಚ್ಚಿನ mAh ಶಕ್ತಿಯನ್ನು ಹೊಂದಿರುವುದರಿಂದ ಪವರ್ ಬ್ಯಾಂಕ್‌ನಲ್ಲಿನ ಸ್ಫೋಟವು ಮೊಬೈಲ್‌ನಲ್ಲಿನ ಬ್ಲಾಸ್ಟ್‌ಗಿಂತ ಹೆಚ್ಚು ಅಪಾಯಕಾರಿ. ಪರಿಣಾಮ ಬಳಕೆದಾರರು ಯಾವಾಗಲೂ ಉನ್ನತ ದರ್ಜೆಯ ಲಿಥಿಯಂ-ಪಾಲಿಮರ್ ಬ್ಯಾಟರಿ ಆಯ್ಕೆ ಇರುವ ಪವರ್ ಬ್ಯಾಂಕ್ ಖರೀದಿಸಬೇಕು.
ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ : ಅನೇಕ ಜನರು ಪವರ್ ಬ್ಯಾಂಕ್ ಅನ್ನು ಕೆಟ್ಟ ರೀತಿಯಲ್ಲಿ ಬಳಕೆ ಮಾಡುತ್ತಾರೆ. ಅಂದರೆ ಕೆಲವರು ಪವರ್ ಬ್ಯಾಂಕ್ ಅನ್ನು ರಾತ್ರಿಇಡೀ ಚಾರ್ಜ್ ಮಾಡುತ್ತಾರೆ. ಅನೇಕ ಜನರು ಬೇಸಿಗೆಯಲ್ಲಿ ಕಾರಿನಲ್ಲಿ ಪವರ್ ಬ್ಯಾಂಕ್ ಅನ್ನು ಬಿಟ್ಟು ಹೋಗುತ್ತಾರೆ ಅಥವಾ ಆರ್ದ್ರ ಸ್ಥಳದಲ್ಲಿ ಇಡುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಪವರ್ ಬ್ಯಾಂಕ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು ಬೆಂಕಿಯ ಸಾಧ್ಯತೆಗಳು ಹೆಚ್ಚಾಗುತ್ತವೆ.
ಪವರ್ ಬ್ಯಾಂಕ್‌ನೊಂದಿಗೆ ತಪ್ಪಾದ ಮೊಬೈಲ್ ಚಾರ್ಜಿಂಗ್ : ಹಲವು ಬಾರಿ ಪವರ್ ಬ್ಯಾಂಕ್ ನಲ್ಲಿ ಮೊಬೈಲ್ ಚಾರ್ಜ್ ಮಾಡಿದಾಗ ಬಿಸಿಯಾಗತೊಡಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪವರ್ ಬ್ಯಾಂಕ್ ಅನ್ನು ತಂಪಾಗಿರಿಸಲು ಪ್ರಯತ್ನಿಸಿ. ಅದರ ಉಷ್ಣತೆಯು ಹೆಚ್ಚಾಗುತ್ತಿದೆ ಎಂದು ನೀವು ಭಾವಿಸಿದಾಗ ತಕ್ಷಣ ಅದನ್ನು ಆಫ್ ಮಾಡಿ. ಅಲ್ಲದೆ ಅದನ್ನು ಹೆಚ್ಚು ಚಾರ್ಜ್ ಮಾಡಬೇಡಿ. ಪವರ್ ಬ್ಯಾಂಕ್ ಪಾಸ್-ಥ್ರೂ ಚಾರ್ಜಿಂಗ್ ಹೊಂದಿಲ್ಲದಿದ್ದರೆ, ಅದನ್ನು ಚಾರ್ಜ್ ಮಾಡುವಾಗ ಬೇರೆ ಯಾವುದೇ ಡಿವೈಸ್ ಅನ್ನು ಚಾರ್ಜ್ ಮಾಡಬೇಡಿ.
ಪವರ್ ಬ್ಯಾಂಕ್ ಖರೀದಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ: ಪವರ್ ಬ್ಯಾಂಕ್ ಖರೀದಿಸುವಾಗ, ಅದರ ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ. ಕಡಿಮೆ ಬೆಲೆಯ ಕಾರಣದಿಂದ ಯಾವುದೇ ಸ್ಥಳೀಯ ಕಂಪನಿಯ ಉತ್ಪನ್ನವನ್ನು ಖರೀದಿ ಮಾಡಲು ಮುಂದಾಗಬೇಡಿ. ಪವರ್ ಬ್ಯಾಂಕಿನ ಗುಣಮಟ್ಟವು ಅದರ ಕಾರ್ಯಕ್ಷಮತೆಯನ್ನು ಪ್ರತಿಬಿಂಬಿಸುತ್ತದೆ. ಕಳಪೆ ಗುಣಮಟ್ಟದ ಪವರ್ ಬ್ಯಾಂಕ್ ನಿಮ್ಮ ಫೋನ್ ಅನ್ನು ಸರಿಯಾಗಿ ಚಾರ್ಜ್ ಮಾಡುವುದಿಲ್ಲ ಜೊತೆಗೆ ಫೋನ್ ಅನ್ನು ಹಾನಿಗೊಳಿಸುತ್ತದೆ.

ಇಷ್ಟೇ ಅಲ್ಲದೆ ಪವರ್ ಬ್ಯಾಂಕ್‌ನಿಂದ ಮೊಬೈಲ್ ಅನ್ನು ಚಾರ್ಜ್ ಮಾಡುವಾಗ ಸರಿಯಾದ ಯುಎಸ್‌ಬಿ ಕೇಬಲ್ ಅನ್ನು ಬಳಕೆ ಮಾಡಿ. ಪವರ್ ಬ್ಯಾಂಕ್‌ನೊಂದಿಗೆ ಬಂದ ಅದೇ ಕೇಬಲ್ ಅನ್ನು ಬಳಸುವುದು ಇನ್ನೂ ಉತ್ತಮವಾಗಲಿದೆ. ಪ್ರಮುಖ ಮಾಹಿತಿ ಏನೆಂದರೆ ಪ್ರತಿದಿನ ಪವರ್ ಬ್ಯಾಂಕ್ ನಿಂದ ಮೊಬೈಲ್ ಚಾರ್ಜ್ ಮಾಡುವುದು ಕೂಡ ಒಳ್ಳೆಯ ಅಭ್ಯಾಸವಲ್ಲ. ಪ್ರಯಾಣದಲ್ಲಿರುವಾಗ ಹಾಗೆ ತೀರಾ ಅಗತ್ಯವಿದ್ದಾಗ ಮಾತ್ರ ಇದನ್ನು ಬಳಕೆ ಮಾಡಿ. ಉಳಿದ ಸಮಯದ ಪವರ್ ಸಾಕೆಟ್ ಮೂಲಕವೇ ನಿಮ್ಮ ಫೋನ್ ಅನ್ನು ಚಾರ್ಜಿಂಗ್ ಮಾಡಿ.


Click it and Unblock the Notifications








