ಬೇರೆಯವರ ಕೈಗೆ ನಿಮ್ಮ ಫೋನ್ ಕೊಡುವ ಮುನ್ನ ಈ ಸೆಟ್ಟಿಂಗ್ ತಪ್ಪದೇ ಮಾಡಿ!

|

ಪ್ರಸ್ತುತ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅವರ ಸ್ಮಾರ್ಟ್‌ಫೋನ್ ಅತೀ ಖಾಸಗಿ ವಸ್ತುವಾಗಿದೆ. ಸ್ಮಾರ್ಟ್‌ಫೋನ್‌ ಅನ್ನು ಬಿಟ್ಟಿರುವುದು ಕಷ್ಟದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಎಷ್ಟೇ ಆತ್ಮೀಯರಿದ್ದರೂ ಅವರ ಕೈಗೆ ಸ್ಮಾರ್ಟ್‌ಫೋನ್ ನೀಡುವುದಕ್ಕೆ ಹಿಂದುಮುಂದು ನೋಡುತ್ತಾರೆ. ಏಕೆಂದರೇ ಬೇರೆಯವರ ಕೈಗೆ ಸ್ಮಾರ್ಟ್‌ಫೋನ್ ನೀಡಿದಾಗ ಅನವಶ್ಯಕವಾಗಿ ಅವರು ಎಲ್ಲಿ ಫೋನಿನಲ್ಲಿನ ಇತರೆ ಆಪ್ಸ್‌, ಗ್ಯಾಲರಿ, ವಿಡಿಯೊ ನೋಡಿಬೀಡುತ್ತಾರೊ ಎನ್ನುವ ಮನಸ್ಥಿತಿ ಮೂಡುತ್ತದೆ.

ಹೌದು, ಬಳಕೆದಾರರು ಸ್ಮಾರ್ಟ್‌ಫೋನ್‌ನಲ್ಲಿ ಅವರ ಕೆಲವು ಗುಪ್ತ ವಿಷಯಗಳಿರುತ್ತವೆ ಹಾಗೂ ಅನಗತ್ಯವಾಗಿ ಇತರರು ಅವರ ಫೋನ್ ಜಾಲಾಡುವುದು ಇಷ್ಟವಾಗುವುದಿಲ್ಲ. ಹೀಗಾಗಿ ಬೇರೆಯವರ ಕೈಗೆ ಫೋನ್ ನೀಡುವುದು ಸ್ವಲ್ಪ ಕಷ್ಡವೇ ಆಗಿದೆ. ಈ ದಿಸೆಯಲ್ಲಿ ಇತ್ತೀಚಿಗೆ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಕ್ರೀನ್ ಪಿನ್ನಿಂಗ್ ಫೀಚರ್ಸ್‌ ನೀಡಲಾಗುತ್ತಿದ್ದು, ಈ ಆಯ್ಕೆ ಆನ್ ಮಾಡಿ ಬೇರೆದವರ ಕೈ ಗೆ ಫೋನ್ ನೀಡಿದರೇ ಅವರು ಸ್ಮಾರ್ಟ್‌ಫೋನಿನಲ್ಲಿ ಬೇರೆ ಯಾವುದೇ ಆಪರೇಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ.

ಏನಿದು ಸ್ಕ್ರೀನ್ ಪಿನ್ನಿಂಗ್

ಏನಿದು ಸ್ಕ್ರೀನ್ ಪಿನ್ನಿಂಗ್

ಸ್ಕ್ರೀನ್ ಪಿನ್ನಿಂಗ್ ಆಯ್ಕೆಯು ಸ್ಮಾರ್ಟ್‌ಫೋನ್‌ನಲ್ಲಿ ಪಿನ್ನ ಮಾಡಿರುವ ಸ್ಕ್ರೀನ್ ಬಿಟ್ಟು ಫೋನಿನಲ್ಲಿ ಇತರೆ ಯಾವುದೇ ಆಪರೇಟಿಂಗ್ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೊಡಲ್ಲ. ಹೀಗಾಗಿ ಅಗತ್ಯ ಸಂದರ್ಭದಲ್ಲಿ ಬೇರೆಯವರ ಕೈಗೆ ಫೋನ್ ಕೊಡುವಾಗ ಈ ಆಯ್ಕೆಯನ್ನು ಆನ್ ಮಾಡಿ ಕೊಟ್ಟರೇ ಅವರು ನಿಮ್ಮ ಫೋನಿನಲ್ಲಿ ಅಗತ್ಯ ಸ್ಕ್ರೀನ್ ಬಿಟ್ಟು, ಬೇರೆ ಏನನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಲಭ್ಯತೆ

ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಲಭ್ಯತೆ

ಸ್ಕ್ರೀನ್‌ ಪಿನ್ನಿಂಗ್ ಆಯ್ಕೆ ವಿಶೇಷವಾಗಿದ್ದು, ಈ ಆಯ್ಕೆಯು ಇತ್ತೀಚಿನ ಹೊಸ ಆಂಡ್ರಾಯ್ಡ್‌ 10 ಓಎಸ್‌ ಆವೃತ್ತಿಯಲ್ಲಿ ಮತ್ತು ಆಂಡ್ರಾಯ್ಡ್‌ 9 ಪೈ ಓಎಸ್‌ನಲ್ಲಿ ಲಭ್ಯವಾಗುತ್ತದೆ. ನೂತನ ಓಎಸ್‌ ಫೋನ್‌ಗಳಲ್ಲಿ ಈ ಆಯ್ಕೆಯನ್ನು ಇನ್‌ಬಿಲ್ಟ್‌ ಆಗಿ ನೀಡಿದ್ದಾರೆ. ಹೀಗಾಗಿ ಆಂಡ್ರಾಯ್ಡ್‌ 10 ಓಎಸ್‌ ಬಳಕೆದಾರರು ಪ್ರತ್ಯೇಕವಾಗಿ ಥರ್ಡ್‌ಪಾರ್ಟಿ ಆಪ್ಸ್‌ ಇನ್‌ಸ್ಟಾಲ್ ಮಾಡುವ ಅಗತ್ಯವೇ ಇಲ್ಲ.

ಸ್ಕ್ರೀನ್‌ ಪಿನ್ನಿಂಗ್ ಸೆಟ್ಟಿಂಗ್ ಮಾಡುವುದು ಹೇಗೆ?

ಸ್ಕ್ರೀನ್‌ ಪಿನ್ನಿಂಗ್ ಸೆಟ್ಟಿಂಗ್ ಮಾಡುವುದು ಹೇಗೆ?

* ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ ಆಯ್ಕೆ ತೆರೆಯಿರಿ
* ಕೆಲವು ಫೋನ್‌ಗಳಲ್ಲಿ ಸೆಕ್ಯುರಿಟಿ ಮತ್ತು ಲಾಕ್‌ ಹಾಗೆಯೇ ಇನ್ನು ಕೆಲವು ಫೋನ್‌ಗಳಲ್ಲಿ ಬಯೋಮೆಟ್ರಿಕ್ ಮತ್ತು ಸೆಕ್ಯುರಿಟಿ.
* ನಂತರ ಸ್ಕಾಲ್ ಮಾಡಿ ಸ್ಕ್ರೀನ್ ಪಿನ್ನಿಂಗ್ ಆಯ್ಕೆ ಸೆಲೆಕ್ಟ್ ಮಾಡಿ. ಆನ್ ಮಾಡಿರಿ.
* ಆಗ ಸ್ಕ್ರೀನ್ ಪಿನ್ನಿಂಗ್ ಸಕ್ರಿಯ ಆಗಿರುತ್ತದೆ.
* ಬೇರೆಯವರಿಗೆ ಫೋನ್ ಕೊಡುವಾಗ ರಿಸೆಂಟ್ ಮೆನು ಆಯ್ಕೆಯನ್ನು ಸೆಲಕ್ಟ್ ಮಾಡಿರಿ.
* ನಂತರ ಬಲ ಭಾಗದಲ್ಲಿ ಕಾಣುವ ಮೂರು ಡಾಟಗಳಲ್ಲಿ ಸ್ಕ್ರೀನ್ ಪಿನ್ನಿಂಗ್ ಚಾಲ್ತಿ ಮಾಡಿ.

Most Read Articles
Best Mobiles in India

English summary
You can pin an app and hand your phone to a friend. With the screen pinned, your friend can use only that app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X