ಫೋನಿನಲ್ಲಿ ಒಂದೇ ವೇಳೆ ಎರಡು ಆಪ್ಸ್ ಬಳಸುವುದು ಹೇಗೆ ಗೊತ್ತಾ?
ಪ್ರಸ್ತುತ ಸ್ಮಾರ್ಟ್‌ಫೋನ್ ಬಹು ಅಗತ್ಯ ಡಿವೈಸ್ ಆಗಿದ್ದು, ಬಹುತೇಕ ಕೆಲಸಗಳನ್ನು ಫೋನ್ ಮೂಲಕವೇ ನಡೆಸಲಾಗುತ್ತದೆ. ಸ್ಮಾರ್ಟ್‌ಫೋನಿನ ಆಪರೇಟಿಂಗ್ ಸಿಸ್ಟಮ್‌ನಲ್ಲಿಯೂ ಸಾಕಷ್ಟಿ ಅಪ್‌ಡೇಟ್‌ಗಳಾಗಿದ್ದು, ಸದ್ಯ ಹೊಸ ಫೋನ್‌ಗಳಲ್ಲಿ ಆಂಡ್ರಾಯ್ಡ್ 10 ಓಎಸ್ ಚಾಲ್ತಿಯಲ್ಲಿದೆ. ಪ್ರತಿ ಆಂಡ್ರಾಯ್ಡ್ ಓಎಸ್‌ನಲ್ಲಿಯೂ ಏನಾದರೊಂದು ಹೊಸ ಫೀಚರ್ ಇದ್ದೆ ಇರುತ್ತದೆ. ಆ ಪೈಕಿ ಮಲ್ಟಿಟಾಸ್ಕ್ ಕೆಲಸ ನಿರ್ವಹಿಸಲು ಸ್ಪ್ಲಿಟ್ ಸ್ಕ್ರೀನ್ ಮೋಡ್ ಹೆಚ್ಚು ಗಮನಸೆಳೆದಿದೆ.

ಹೌದು, ಆಂಡ್ರಾಯ್ಡ್ ಓಎಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಆಕರ್ಷಕ ಫೀಚರ್ಸ್‌ಗಳಿವೆ. ಅವುಗಳಲ್ಲಿ ಮಲ್ಟಿಟಾಸ್ಕ್ ಕೆಲಸಕ್ಕೆ ಬೆಂಬಲ ನೀಡುವ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆದಾರರಿಗೆ ಹೆಚ್ಚು ಉಪಯುಕ್ತವಾಗಿದೆ. ಈ ಸೌಲಭ್ಯದಲ್ಲಿ ಬಳಕೆದಾರರು ಏಕಕಾಲದಲ್ಲಿ ಸ್ಮಾರ್ಟ್‌ಫೋನಿನಲ್ಲಿ ಎರಡು ಆಪ್ಸ್‌ಗಳನ್ನು ಬಳಕೆ ಮಾಡಬಹುದಾಗಿದೆ. ಹಾಗಾದರೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆ ಮಾಡುವುದು ಹೇಗೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಸ್ಪ್ಲಿಟ್ ಸ್ಕ್ರೀನ್ ಮೋಡ್
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷ ಫೀಚರ್‌ಗಳಲ್ಲೊಂದಾದ ಸ್ಪ್ಲಿಟ್ ಸ್ಕ್ರೀನ್ ಮೋಡ್ ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಒಂದೇ ವೇಳೆಗೆ ಎರಡು ಅಪ್ಲಿಕೇಶನ್‌ಗಳನ್ನು ಬಳಸಲು ಈ ಫೀಚರ್ ಅನುಮತಿಸುತ್ತದೆ. ಉದಾಹರಣೆಗೆ-ಏಕಕಾಲದಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ವೀಕ್ಷಿಸಬಹುದು ಮತ್ತು ಸ್ನೇಹಿತರಿಗೆ ವಾಟ್ಸಾಪ್‌ನಲ್ಲಿ ಸಂದೇಶ ಕಳುಹಿಸಬಹುದು.

ಸ್ಪ್ಲಿಟ್ ಸ್ಕ್ರೀನ್ ಮೋಡ್ ಸೆಟ್ ಮಾಡಲು ಹೀಗೆ ಮಾಡಿರಿ
* ನಿಮ್ಮ Android ಸ್ಮಾರ್ಟ್‌ಫೋನ್‌ನ ಮೇನ್ ಸ್ಕ್ರೀನ್/ಹೋಮ್ ಸ್ಕ್ರೀನ್ ಕೆಳಗಿನ ಎಡ ಭಾಗದಲ್ಲಿನ ರೀಸೆಂಟ್ ಅಪ್ಲಿಕೇಶನ್‌ಗಳ ಬಟನ್ ಟ್ಯಾಪ್ ಮಾಡಿ. (ಮಧ್ಯ ಬಟನ್ ಎಡ ಭಾಗದ ಬಟನ್)
* ಇತ್ತೀಚಿಗೆ ನೀವು ಬಳಕೆ ಮಾಡಿದ/ತೆರೆದ ಎಲ್ಲಾ ಅಪ್ಲಿಕೇಶನ್‌ಗಳ ಕ್ಯಾಸ್ಕೇಡಿಂಗ್ ಮೆನು ಕಾಣಿಸುತ್ತದೆ.

* ಆಗ, ಬಲ ಭಾಗದ ಮೇಲ್ಭಾಗದಲ್ಲಿ ಕಾಣುವ ಮೂರು ಡಾಟ್ ಬಟನ್ ಇತ್ತಿರಿ, ನಂತರ ಸೆಟ್ಟಿಂಗ್ ಆಯ್ಕೆ ಸೆಲೆಕ್ಟ್ ಮಾಡಿ ಅಲ್ಲಿ ಸ್ಪ್ಲಿಟ್ ಸ್ಕ್ರೀನ್ ಮೋಡ್ ಆಯ್ಕೆ ಆನ್ ಮಾಡಿ.
* ಆನಂತರ, ನೀವು ಒಂದೇ ವೇಳೆ ಎರಡು ಅಪ್ಲಿಕೇಶನ್ ಬಳಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ಮಧ್ಯ ಬಟನ್ ಎಡ ಭಾಗದ ಬಟನ್ ಅನ್ನು ಟ್ಯಾಪ್ ಮಾಡಿರಿ.

* ಇತ್ತೀಚಿಗೆ ನೀವು ತೆರೆದ ಆಪ್ಸ್ ಲಿಸ್ಟ್ ಕಾಣಿಸುತ್ತವೆ. ಅವುಗಳಲ್ಲಿ ಯಾವ ಆಪ್ ಸ್ಪ್ಲಿಟ್ ಸ್ಕ್ರೀನ್ ಮೋಡ್ ಮಾಡಲು ಬಯಸುತ್ತಿರೊ ಆ ಆಪ್ ಅನ್ನು ಟ್ಯಾಪ್ ಮಾಡಿ ಹಿಡಿಯಿರಿ.
* ಆಗ ನೀವು ಟ್ಯಾಪ್ ಮಾಡಿರುವ ಆಪ್ ನಿಮಗೆ ಸ್ಪ್ಲಿಟ್ ಸ್ಕ್ರೀನ್ ವ್ಯೂ ಕಾಣಿಸುತ್ತದೆ. ನೀವು ಅದೇ ವೇಳೆಗೆ ಇನ್ನೊಂದು ಆಪ್ ಬಳಕೆ ಮಾಡಬಹುದು.
* ತೆರೆದ ಎರಡು ಅಪ್ಲಿಕೇಶನ್‌ಗಳ ಕ್ಲೋಸ್ ಮಾಡಲು, ಎರಡು ಅಪ್ಲಿಕೇಶನ್‌ಗಳ ಮಧ್ಯದಲ್ಲಿ ಕಪ್ಪು ಪಟ್ಟಿಯನ್ನು ಟ್ಯಾಪ್ ಮಾಡಿ ಹಿಡಿದುಕೊಳ್ಳಿ. ನಂತರ ನೀವು ಕ್ಲೋಸ್ ಮಾಡ ಬಯಸುವ ಅಪ್ಲಿಕೇಶನ್‌ನ ಸ್ವೈಪ್ ಮಾಡಿ.


Click it and Unblock the Notifications








