Home
ಟೆಕ್ ನೌಕರಿ

ಛೇ...ಈ ಫೋನ್ ಟ್ರಿಕ್ಸ್‌ ನಂಗೆ ಗೊತ್ತೇ ಇರಲಿಲ್ಲ ಅಂತಾ ನೀವು ಬೇಜಾರಾಗೋದು ಪಕ್ಕಾ!

ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಬಹುಪಾಲು ಮಂದಿಗೆ ಫೋನ್‌ನಲ್ಲಿ ಇರುವ ಕೆಲವು ಅಚ್ಚರಿ ಅಂಶಗಳು ತಿಳಿದಿರುವುದಿಲ್ಲ. ಅದರಂತೆ ಹಲವಾರು ಸುಲಭ ಟ್ರಿಕ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿ ಅಡಗಿದ್ದು, ಇವುಗಳ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತಾ ಅಚ್ಚರಿಗೆ ಒಳಗಾಗುತ್ತೀರಾ!.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಬಹುಪಾಲು ಮಂದಿಗೆ ಸುಲಭವಾಗಿ ತಿಳಿಯದ ಅನೇಕ ಅದ್ಭುತವಾದ ಹಾಗೂ ಸರಳ ಟ್ರಿಕ್ಸ್‌ಗಳನ್ನು ನೀವಿಲ್ಲಿ ತಿಳಿಯಬಹುದಾಗಿದ್ದು, ಈ ಮೂಲಕ ದಿನವೂ ಬಳಕೆ ಮಾಡುವ ಮೆಸೆಜಿಂಗ್‌ ಆಪ್‌, ಗೂಗಲ್‌ ಮ್ಯಾಪ್ಸ್‌ ಹಾಗೂ ಮೊಬೈಲ್‌ ಬಳಕೆಯ ವಿಷಯದಲ್ಲಿ ಹೊಸ ಅನುಭವವನ್ನು ಪಡೆದುಕೊಳ್ಳಬಹುದು. ಹಾಗಿದ್ರೆ, ಮತ್ಯಾಕೆ ತಡ, ಬನ್ನಿ ಈ ಮೂರು ಅದ್ಭುತವಾದ ಟ್ರಿಕ್ಸ್‌ಗಳನ್ನು ತಿಳಿದುಕೊಳ್ಳೋಣ.

ಛೇ...ಈ ಫೋನ್ ಟ್ರಿಕ್ಸ್‌ ನಂಗೆ ಗೊತ್ತೇ ಇರಲಿಲ್ಲ ಅಂತಾ ನೀವು ಬೇಜಾರಾಗೋದು ಪಕ್ಕಾ!

ಬ್ಯಾಕ್‌ಸ್ಪೇಸ್ ಟ್ರಿಕ್

ಬ್ಯಾಕ್‌ಸ್ಪೇಸ್ ಎಂದರೆ ಸಾಮಾನ್ಯವಾಗಿ ನಾವು ಏನಾದರೂ ತಪ್ಪಾದ ಅಕ್ಷರಗಳನ್ನು ಮೊಬೈಲ್‌ನಲ್ಲಿ ಎಂಟ್ರಿ ಮಾಡಿದಾಗ ಅದನ್ನು ಡಿಲೀಟ್ ಬಳಕೆ ಮಾಡುವ ಟೂಲ್ಸ್‌. ಈ ವಿಷಯದಲ್ಲಿ ಬಹುಪಾಲು ಮಂದಿಗೆ ಬೇಸರ ಉಂಟಾಗಿರಬಹುದು. ಯಾಕೆಂದರೆ ತಪ್ಪಾದ ಒಟ್ಟು ಅಕ್ಷರವನ್ನು ಒಮ್ಮೆಲೆ ಅಳಿಸಲು ಮೆಸೆಜಿಂಗ್‌ ಆಪ್‌ನಲ್ಲಿ ಸಾಧ್ಯವಾಗುವುದಿಲ್ಲ. ಯಾಕೆಂದರೆ ಲ್ಯಾಪ್‌ಟಾಪ್‌ ಅಥವಾ ಮಾನಿಟರ್‌ ಶೈಲಿಯಲ್ಲಿ ಒಮ್ಮೆಲೆ ಅಕ್ಷರಗಳನ್ನು ಅಳಿಸುವ ಸೌಕರ್ಯವನ್ನು ಫೋನ್‌ನಲ್ಲಿ ನೀಡಲಾಗಿಲ್ಲ.

ಛೇ...ಈ ಫೋನ್ ಟ್ರಿಕ್ಸ್‌ ನಂಗೆ ಗೊತ್ತೇ ಇರಲಿಲ್ಲ ಅಂತಾ ನೀವು ಬೇಜಾರಾಗೋದು ಪಕ್ಕಾ!

ಇದಕ್ಕಾಗಿ ನೀವು ಈ ಟ್ರಿಕ್ಸ್‌ ಅನುಸರಿಸಬಹುದು. ಈ ಮೂಲಕ ಒಮ್ಮೆಲೆ ಆ ಪದವನ್ನೋ ಅಥವಾ ವಾಕ್ಯವನ್ನೇ ಡಿಲೀಟ್‌ ಮಾಡಬಹುದು. ಸಾಮಾನ್ಯವಾಗಿ ದೀರ್ಘವಾಗಿ ಬ್ಯಾಕ್‌ಸ್ಪೇಸ್ ಅನ್ನು ಒತ್ತಿ ಹಿಡಿದಾಗ ಬೇಗನೇ ಅಕ್ಷರಗಳು ಒಂದೊಂದಾಗಿ ಡಿಲೀಟ್ ಆಗುತ್ತವೆ. ಆದರೆ, ಪೂರ್ಣ ವಾಕ್ಯವನ್ನೋ ಅಥವಾ ತಪ್ಪಾದ ಪದವನ್ನ ಸೆಲೆಕ್ಟ್‌ ಮಾಡಿದರೆ ಅದನ್ನು ಒಮ್ಮೆಲೆ ಡಿಲೀಟ್‌ ಮಾಡುವ ಅವಕಾಶ ಸಹ ಇದೆ. ಹಾಗೆಯೇ ಈ ಪದವನ್ನು ಕಟ್‌ ಆಂಡ್‌ ಪೇಸ್ಟ್‌ ಮಾಡುವ ಆಯ್ಕೆಯನ್ನೂ ಬಳಕೆ ಮಾಡಿಕೊಳ್ಳಬಹುದು.

ಗೂಗಲ್ ಮ್ಯಾಪ್‌ನಲ್ಲಿ ವಿಶೇಷ ಟ್ರಿಕ್ಸ್‌

ಗೂಗಲ್ ಮ್ಯಾಪ್‌ ಒಂದು ಏರಿಯಾದಿಂದ ಇನ್ನೊಂದು ಏರಿಯಾಗೆ ಹೋಗಬೇಕಾದೂ ಬಳಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಷ್ಟರಮಟ್ಟಿಗೆ ನಗರ ಪಟ್ಟಣಗಳು ಬೆಳೆದು ನಿಂತಿವೆ. ಈ ವೇಳೆ ಫೋನ್‌ನಲ್ಲಿ ಗೂಗಲ್‌ ಮ್ಯಾಪ್ ಬಳಕೆ ಮಾಡುವಾಗ ಜೂಮ್ ಇನ್ ಮಾಡಲು ಡಿಸ್‌ಪ್ಲೇಯನ್ನು ಎರಡು ಬಾರಿ ಟ್ಯಾಪ್ ಮಾಡಲಾಗುತ್ತದೆ. ಹಾಗೆಯೇ ಜೂಮ್ ಔಟ್ ಮಾಡಲು ಫೋನ್‌ನಲ್ಲಿನ ಬ್ಯಾಕ್‌ ಬಟನ್‌ ಬಳಕೆ ಮಾಡಲಾಗುತ್ತದೆ. ಆದರೆ, ಈ ಟ್ರಿಕ್ ಬಳಸಿ ಝೂಮ್ ಇನ್ ಮತ್ತು ಝೂಮ್ ಔಟ್ ಅನ್ನು ಇನ್ನಷ್ಟು ಸುಲಭವಾಗಿ ಮಾಡಬಹುದಾಗಿದೆ.

ಛೇ...ಈ ಫೋನ್ ಟ್ರಿಕ್ಸ್‌ ನಂಗೆ ಗೊತ್ತೇ ಇರಲಿಲ್ಲ ಅಂತಾ ನೀವು ಬೇಜಾರಾಗೋದು ಪಕ್ಕಾ!

ಮೊದಲು ನಿಮ್ಮ ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಓಪನ್‌ ಮಾಡಿ. ನಂತರ ಡಿಸ್‌ಪ್ಲೇ ಮೇಲೆ ಎರಡು ಟ್ಯಾಪ್ ಮಾಡಿ ಈ ವೇಳೆ ಜೂಮ್ ಔಟ್ ಮಾಡಲು ಮೇಲಕ್ಕೆ ಸ್ವೈಪ್ ಮಾಡಿ. ಹಾಗೆಯೇ ಜೂಮ್ ಇನ್ ಮಾಡಲು ಡಿಸ್‌ಪ್ಲೇ ಕೆಲಭಾಗಕ್ಕೆ ಸ್ವೈಪ್ ಮಾಡಿ. ಈ ಮೂಲಕ ನೀವು ಒಂದೇ ಕೈ ಬಳಕೆ ಮಾಡಿಕೊಂಡು ಈ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ನೀವೇನಾದರೂ
ಕಾರಿನಲ್ಲಿ ಅಥವಾ ಬೈಕ್‌ ನಲ್ಲಿ ಪ್ರಯಾಣಿಸುವಾಗ ಪಯಣಿಸುವಾಗ ಭಾರೀ ಉಪಯೋಗಕ್ಕೆ ಬರುತ್ತದೆ. ಮತ್ಯಾಕೆ ತಡ ಒಮ್ಮೆ ಟ್ರೈ ಮಾಡಿ ನೋಡಿ.

ಒನ್‌ ಹ್ಯಾಂಡ್‌ ಮೋಡ್‌

ಒನ್‌ ಹ್ಯಾಂಡ್‌ ಮೋಡ್‌ ಎನ್ನುವುದು ಇತ್ತೀಚೆಗೆ ಅಗತ್ಯವಾಗಿ ಬೇಕಾದ ಫೀಚರ್ಸ್‌ ಆಗಿದೆ. ಇದಕ್ಕೆ ಕಾರಣ ಮೊಬೈಲ್‌ಗಳು ದೊಡ್ಡ ಡಿಸ್‌ಪ್ಲೇ ಮೂಲಕ ಕಾಣಿಸಿಕೊಳ್ಳುತ್ತಿರುವುದು. ಇದರಿಂದಾಗಿ ಬೈಕ್‌ ಓಡಿಸುವಾಗ, ಮೀಟಿಂಗ್‌ ನಲ್ಲಿ ಇರುವಾಗ, ಸಂಚಾರ ಮಾಡುವಾಗ ಹಾಗೆಯೇ ಅಗತ್ಯ ಕೆಲಸ ಮಾಡುವಾಗ ಎರಡೂ ಕೈಗಳನ್ನು ಬಳಕೆ ಮಾಡಿಕೊಂಡು ಫೋನ್‌ ಅನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ.

ಈ ಕಾರಣಕ್ಕಾಗಿಯೇ ಇತ್ತೀಚಿನ ಫೋನ್‌ಗಳಲ್ಲಿ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತಿದ್ದು, ಈ ಮೂಲಕ ಬಳಕೆದಾರರು ಒಂದೇ ಕೈನಲ್ಲಿ ಫೋನ್‌ ಅನ್ನು ನಿಯಂತ್ರಣ ಮಾಡಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಫೋನ್‌ ನಲ್ಲಿ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಿಕೊಳ್ಳಬೇಕಿದೆ. ಇದಾದ ನಂತರ ನಿಮ್ಮ ಫೋನ್‌ನ ಡಿಸ್‌ಪ್ಲೇ ಅರ್ಧಕ್ಕೆ ಇಳಿಯಲಿದ್ದು, ಈ ಅರ್ಧ ಡಿಸ್‌ಪ್ಲೇ ನಲ್ಲೇ ಎಲ್ಲಾ ಮಾಹಿತಿ ಗೋಚರಿಸುತ್ತವೆ.

Best Mobiles in India

English summary
We have informed about the backspace trick, one hand mode and special tricks on Google Maps in smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+