ಅತ್ಯುತ್ತಮ ರೀತಿಯಲ್ಲಿ ವಾಟ್ಸಾಪ್ ಬಳಸುವುದು ಹೇಗೆ?

Written By:

ಜಾಹೀರಾತಿನ ಜಂಜಾಟವಿಲ್ಲದ ಉಚಿತ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಪಠ್ಯ ಮತ್ತು ಮೀಡಿಯಾ ಸಂದೇಶಗಳನ್ನು ಒಬ್ಬರಿಂದ ಇನ್ನೊಬ್ಬರಿಗೆ ರವಾನಿಸಲು ಸಹಾಯ ಮಾಡುತ್ತದೆ. ಕನಿಷ್ಟ ಇಂಟರ್ನೆಟ್ ಸಂಪರ್ಕ ನಿಮ್ಮ ಫೋನ್‌ನಲ್ಲಿದ್ದರೆ ಸಾಕು ಸುಲಭವಾಗಿ ವಾಟ್ಸಾಪ್ ಮೂಲಕ ನಿಮ್ಮ ಸ್ನೇಹಿತರೊಂದಿಗೆ ಸಂವಾದವನ್ನು ನಡೆಸಬಹುದಾಗಿದೆ.

ಇದನ್ನೂ ಓದಿ: 2014 ರ ಅತ್ಯುತ್ತಮ ಗ್ಯಾಜೆಟ್ ಸಂಗ್ರಹ

ಇಂದಿನ ಲೇಖನದಲ್ಲಿ ವಾಟ್ಸಾಪ್ ಅನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಗೆ ಬಳಸುವುದು ಎಂಬುದನ್ನು ಕೆಲವು ವಿಧಾನಗಳ ಮೂಲಕ ಅರಿತುಕೊಳ್ಳೋಣ. ಈ ಹಂತಗಳು ಹೆಚ್ಚು ಸರಳವಾಗಿದ್ದು ನಿಮ್ಮ ವಾಟ್ಸಾಪ್ ಸಂದೇಶವನ್ನು ಪರಿಣಾಮಾತ್ಮಕವಾಗಿ ನಿಮ್ಮ ಸ್ನೇಹಿತರಿಗೆ ತಿಳಿಸಲು ನೆರವು ನೀಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಡೌನ್‌ಲೋಡ್ ಮಾಡಿ

ವಾಟ್ಸಾಪ್ ಡೌನ್‌ಲೋಡ್ ಮಾಡಿ

#1

ಐಟ್ಯೂನ್ಸ್ ಅಪ್ಲಿಕೇಶನ್ ಸ್ಟೋರ್ ಮತ್ತು ಆಂಡ್ರಾಯ್ಡ್ ಮಾರ್ಕೆಟ್ ಪ್ಲೇಸ್‌ನಲ್ಲಿ ನಿಮಗೆ ವಾಟ್ಸಾಪ್ ಅನ್ನು ಡೌನ್‌ಲೋಡ್ ಮಾಡಬಹುದು.

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಅಪ್ಲಿಕೇಶನ್ ಲಾಂಚ್ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಅಪ್ಲಿಕೇಶನ್ ಲಾಂಚ್ ಮಾಡಿ

#2

ನಿಮ್ಮ ಫೋನ್ ಸಂಖ್ಯೆಗೆ ಲಿಂಕ್ ಆಗುವಂತಹ ವಾಟ್ಸಾಪ್ ಖಾತೆಯನ್ನು ರಚಿಸಿ.

ನಿಮ್ಮ ಮೆಚ್ಚಿನವುಗಳನ್ನು ನಿರ್ವಹಿಸಿ

ನಿಮ್ಮ ಮೆಚ್ಚಿನವುಗಳನ್ನು ನಿರ್ವಹಿಸಿ

#3

ಒಮ್ಮೆ ನಿಮ್ಮ ಖಾತೆಯಲ್ಲಿ, "ಮೆಚ್ಚಿನವುಗಳು" ಟ್ಯಾಬ್‌ನಲ್ಲಿ ಈಗಾಗಲೇ ವಾಟ್ಸಾಪ್ ಖಾತೆಯನ್ನು ಹೊಂದಿರುವವರ ಹೆಸರನ್ನು ನಿಮಗೆ ಕಾಣಬಹುದು.

ನಿಮ್ಮ ಸ್ಟೇಟಸ್ ಬದಲಾಯಿಸಿ

ನಿಮ್ಮ ಸ್ಟೇಟಸ್ ಬದಲಾಯಿಸಿ

#4

ಕೆಳಗಿನ ಸಮಾನಾಂತರ ನ್ಯಾವಿಗೇಶನ್ ಬಾರ್‌ನಲ್ಲಿ "ಸ್ಟೇಟಸ್" ಸ್ಪರ್ಶಿಸಿ. ಬಲಮೇಲ್ಭಾಗ ಮೂಲೆಯಲ್ಲಿರುವ "+" ಅನ್ನು ಸ್ಪರ್ಶಿಸಿ.

ಸ್ನೇಹಿತರನ್ನು ಆಮಂತ್ರಿಸಿ

ಸ್ನೇಹಿತರನ್ನು ಆಮಂತ್ರಿಸಿ

#5

ವಾಟ್ಸಾಪ್ ಬಳಸಿ ಸಂದೇಶ ರವಾನಿಸಲು ನೀವು ಬಯಸುತ್ತಿರಬಹುದು. ನ್ಯಾವಿಗೇಶನ್ ಪಟ್ಟಿಯ ಮಧ್ಯಭಾಗದಲ್ಲಿರುವ "ಸಂಪರ್ಕಗಳು" ಟ್ಯಾಬ್ ಅನ್ನು ತಟ್ಟಿ. ಸಂಪರ್ಕವನ್ನು ಕಂಡುಕೊಳ್ಳಿ ಮತ್ತು ಅದರ ವಿವರಗಳನ್ನು ವೀಕ್ಷಿಸಲು ಸ್ಪರ್ಶಿಸಿ.

ಚಾಟ್ ಆರಂಭಿಸಿ

ಚಾಟ್ ಆರಂಭಿಸಿ

#6

ನ್ಯಾವಿಗೇಶನ್ ಪಟ್ಟಿಯಲ್ಲಿ "ಚಾಟ್ಸ್" ಸ್ಪರ್ಶಿಸಿ. ಬಲ ಮೇಲ್ಭಾಗದಲ್ಲಿರುವ ಪೆನ್ಸಿಲ್ ಐಕಾನ್ ಮುಟ್ಟಿರಿ ಮತ್ತು ಹೊಸ ವಾಟ್ಸಾಪ್ ಸಂದೇಶವನ್ನು ಪ್ರಾರಂಭಿಸಲು ಸಂಪರ್ಕ ಆರಿಸಿ.

ನಿಮ್ಮ ಸ್ನೇಹಿತರ ಫೋನ್‌ಗೆ ನಿಮ್ಮ ಸಂದೇಶ ಡೆಲಿವರ್ ಆಗುವವರೆಗೆ ಕಾಯಿರಿ

ನಿಮ್ಮ ಸ್ನೇಹಿತರ ಫೋನ್‌ಗೆ ನಿಮ್ಮ ಸಂದೇಶ ಡೆಲಿವರ್ ಆಗುವವರೆಗೆ ಕಾಯಿರಿ

#7

ನಿಮ್ಮ ಸಂದೇಶದ ಮುಂದಿರುವ ಚೆಕ್‌ಮಾರ್ಕ್ ಸರ್ವರ್‌ಗೆ ನಿಮ್ಮ ಸಂದೇಶ ಡೆಲಿವರಿ ಆಯಿತು ಎಂಬುದನ್ನು ಸೂಚಿಸುತ್ತದೆ, ಎರಡು ಚೆಕ್‌ಮಾರ್ಕ್‌ಗಳನ್ನು ನಿಮ್ಮ ಸಂದೇಶದ ಮುಂದೆ ನೀವು ಕಂಡಲ್ಲಿ ಸ್ವೀಕರಿಸಿದವರ ಡಿವೈಸ್‌ಗೆ ಸಂದೇಶ ಡೆಲಿವರಿ ಆಯಿತು ಎಂಬುದನ್ನು ಇದು ಸೂಚಿಸುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about How To Use Whatsapp In a Easy and Efficient way.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot