2014 ರ ಅತ್ಯುತ್ತಮ ಗ್ಯಾಜೆಟ್ ಸಂಗ್ರಹ

By Shwetha
|

ಸ್ಮಾರ್ಟ್‌ವಾಚ್‌ಗಳಂತಹ ಹೊಸ ಗ್ಯಾಜೆಟ್ ವರ್ಗಗಳು ನಿಜಕ್ಕೂ ಗ್ಯಾಜೆಟ್ ಪ್ರೇಮಿಗಳಿಗೆ ಹಬ್ಬವನ್ನು ನೀಡುತ್ತಿವೆ. ಈ ವರ್ಷದಲ್ಲಿ ಲಾಂಚ್ ಆಗಿರುವ 10 ಗ್ಯಾಜೆಟ್‌ಗಳ ವಿವರಗಳೊಂದಿಗೆ ನಾವು ಬಂದಿದ್ದು ಗ್ಯಾಜೆಟ್ ಪ್ರೇಮಿಗಳಿಗೆ ಇದು ರಸದೌತಣವನ್ನು ನೀಡಲಿದೆ.

ಇದನ್ನೂ ಓದಿ: ಖರೀದಿಗೆ ಅರ್ಹವಾಗಿರುವ ಅತ್ಯುತ್ತಮ ಆಂಡ್ರಾಯ್ಡ್ ಫೋನ್ಸ್

ಈ ಟಾಪ್ 10 ಗ್ಯಾಜೆಟ್‌ಗಳು ಒಂದೊಂದು ವಿಶೇಷತೆಗಳಿಂದ ಬಳಕೆದಾರರ ಮನವನ್ನು ಕದಿಯುವಂತಿದ್ದು ಕೊಳ್ಳುವ ತುಡಿತವನ್ನು ಹೆಚ್ಚಿಸುವುದು ಖಂಡಿತ. ಹೊಸ ವರ್ಷದ ಪ್ರಾರಂಭದಲ್ಲಿ ನಾವು ನಿಂತಿದ್ದು ಈ ವರ್ಷದ ಗ್ಯಾಜೆಟ್ ಲೋಕದ ಏಳು ಬೀಳುಗಳು ನಿಜಕ್ಕೂ ನಮ್ಮನ್ನು ದಿಗ್ಭ್ರಮೆ ಉಂಟುಮಾಡುವಂತಿದೆ.

ಹಾಗಿದ್ದರೆ ಈ ಕೆಳಗಿನ ಗ್ಯಾಜೆಟ್ ಲೋಕದತ್ತ ಪಯಣವನ್ನು ಮಾಡಿ ನಿಜಕ್ಕೂ ಇದು ನಿಮ್ಮ ರಸನಿಮಿಷವಾಗಲಿ.

#1

#1

ಬೆಲೆ ರೂ 62,500

5.5 ಇಂಚಿನ ಡಿಸ್‌ಪ್ಲೇಯೊಂದಿಗೆ ಆಪಲ್ ಐಫೋನ್ 6 ಪ್ಲಸ್ ಬಂದಿದ್ದು ದೊಡ್ಡ ಡಿಸ್‌ಪ್ಲೇ ಇದರ ಆಕರ್ಷಣೆ ಎಂದೆನಿಸಿದೆ. ಫೋನ್‌ನ ಕ್ಯಾಮೆರಾ ನಿಜಕ್ಕು ಪುಳಕವನ್ನುಂಟು ಮಾಡುವಂತಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಇದು ಹೊಂದಿದೆ. ಇದು ಕೈ ನಡುಗುವುದು ಮತ್ತು ಕಡಿಮೆ ಬೆಳಕಿನ ತೊಂದರೆಗಳನ್ನು ನಿವಾರಿಸುತ್ತದೆ. ಸುಧಾರಿತ ಬ್ಯಾಟರಿ ಕೂಡ ಫೋನ್‌ನ ಧನಾತ್ಮಕ ಅಂಶವಾಗಿದೆ.

#2

#2

ಬೆಲೆ ರೂ: 58,300

ಗ್ಯಾಲಕ್ಸಿ ನೋಟ್ 4 ಸ್ಯಾಮ್‌ಸಂಗ್ ಪ್ರೀಮಿಯಮ್ ಫ್ಯಾಬ್ಲೆಟ್ ಆಗಿದೆ. ಗ್ಯಾಲಕ್ಸಿ ನೋಟ್ 4. 5.7 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು, 2.7GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಡಿವೈಸ್‌ನಲ್ಲಿದೆ. ಫೋನ್ 3ಜಿಬಿ RAM ಅನ್ನು ಪಡೆದುಕೊಂಡಿದ್ದು ಇದರ ಸಂಗ್ರಹಣಾ ಸಾಮರ್ಥ್ಯವನ್ನು 32ಜಿಬಿಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದು. ಫೋನ್‌ನ ರಿಯರ್ ಕ್ಯಾಮೆರಾ 16ಎಮ್‌ಪಿ ರೆಸಲ್ಯೂಶನ್ ಅನ್ನು ಹೊಂದಿದ್ದು 3.7ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

#3

#3

ಬೆಲೆ ರೂ: 35,900

ಆಪಲ್‌ನ ಐಪ್ಯಾಡ್ ಏರ್ ಇದೀಗ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದ್ದು, ಹಲವಾರು ಬದಲಾವಣೆಗಳೊಂದಿಗೆ ಡಿವೈಸ್ ಬಂದಿದೆ. ಗೋಲ್ಡ್ ಬಣ್ಣದ ಆಯ್ಕೆ, ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫಾಸ್ಟರ್ ಪ್ರೊಸೆಸರ್ ಮತ್ತು ಉತ್ತಮ 8ಎಮ್‌ಪಿ ಕ್ಯಾಮೆರಾವನ್ನು ಹೊಂದಿದೆ.

#4

#4

ಸ್ಮಾರ್ಟ್‌ವಾಚ್‌ಗಳು ಅಭಿವೃದ್ಧಿಯ ಪಥದಲ್ಲಿ ಮುಂಚೂಣಿಯಲ್ಲಿವೆ. ಮೋಟೋರೋಲಾ ಮೋಟೋ 360 ಅತ್ಯುತ್ತಮವಾಗಿದೆ. ಇದು ಚರ್ಮದ ಬೆಲ್ಟ್‌ನೊಂದಿಗೆ ಬಂದಿದ್ದು ಗೂಗಲ್‌ನ ಆಂಡ್ರಾಯ್ಡ್ ವೇರ್ ಪ್ಲಾಟ್‌ಫಾರ್ಮ್‌ ಅನ್ನು ಹೊಂದಿದೆ. ಇದರ ಡಯಲ್ ವೃತ್ತಾಕಾರದಲ್ಲಿರುವುದರಿಂದ ನೈಜವಾದ ವಾಚ್‌ನಂತೆ ಇದು ಕಾಣುತ್ತದೆ.

#5

#5

ಟಚ್‌ಸ್ಕ್ರೀನ್ ಪುಟವನ್ನು ಸುಲಭವಾಗಿ ತಿರುಗಿಸುವ ಹಾಗೂ ಪಠ್ಯವನ್ನು ಸುಲಭವಾಗಿ ಬರೆಯುವ ಪ್ರಯೋಜನವನ್ನು ನಿಮಗೆ ಒದಗಿಸುತ್ತದೆ. 20% ಫಾಸ್ಟರ್ ಪ್ರೊಸೆಸರ್‌ನೊಂದಿಗೆ 6 ನೇ ಜನರೇಶನ್ ಕಿಂಡಲ್ ಆಗಿರುವ ಇದು ಪುಟವನ್ನು ನ್ಯಾವಿಗೇಶನ್ ಮಾಡಲು ಇ - ಬುಕ್ ರೀಡರ್‌ಗೆ ಸುಲಭಗೊಳಿಸುತ್ತದೆ.

#6

#6

ಬೆಲೆ ರೂ: 2,999

2013 ರ ಮಧ್ಯಭಾಗದಲ್ಲಿ ಗೂಗಲ್‌ನ ಮೀಡಿಯಾ ಸ್ಟ್ರೀಮಿಂಗ್ ಡಿವೈಸ್ ಅನ್ನು ಮೂಲತಃ ಲಾಂಚ್ ಮಾಡಲಾಗಿತ್ತು. ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್ಸ್, ಪಿಸಿಯಲ್ಲಿ ಆನ್‌ಲೈನ್‌ನಲ್ಲಿ ಟಿವಿಗೆ ವಿಷಯಗಳನ್ನು ಸ್ಟ್ರೀಮ್ ಮಾಡುತ್ತದೆ.

#7

#7

ಆಪಲ್‌ನ ಮ್ಯಾಕ್‌ಬುಕ್ ಏರ್ ಆಯ್ಕೆಯು ವೇಗ ಬ್ಯಾಟರಿ ಲೈಫ್‌ ವಿಷಯಕ್ಕೆ ಹೇಳಿ ಮಾಡಿಸಿದ್ದಾಗಿದೆ.

#8

#8

ಉತ್ತಮ ಗೇಮಿಂಗ್ ಕನ್ಸೋಲ್ ಆಗಿರುವ ಸೋನಿಯ ನ್ಯೂ ಜನರೇಶನ್ ಪ್ಲೇಸ್ಟೇಶನ್ ಖರೀದಿಗೆ ಅತ್ಯುತ್ತಮವಾಗಿದೆ. ಉತ್ತಮ ಹಾರ್ಡ್‌ವೇರ್ ಮತ್ತು ಬ್ಲಡ್ ಬೋರ್ನ್ ಹಾಗೂ ಅನ್‌ಚಾರ್ಟೆಡ್ 4 ಅನ್ನು ಇದು ಹೊಂದಿದೆ.

#9

#9

ಉತ್ತಮ ಗುಣಮಟ್ಟದ ಆಡಿಯೊ ಉತ್ಪನ್ನಗಳಾಗಿರುವ ಬೋಸ್, ಗುಣಮಟ್ಟದ ಪೋರ್ಟೇಬಲ್ ಸ್ಪೀಕರ್ ಅನ್ನು ಹೊಂದಿದೆ. ಬ್ಲ್ಯೂಟೂತ್ ಸ್ಪೀಕರ್ ವಿವಿಧ ಬಣ್ಣಗಳಲ್ಲಿ ಬಂದಿದ್ದು ದೊಡ್ಡ ಧ್ವನಿಯನ್ನು ಒದಗಿಸುತ್ತದೆ.

#10

#10

ಸೋನಿ ಈ ವರ್ಷ CyberShot RX100 III, ಇತ್ತೀಚಿನ ಟಾಪ್ ಎಂಡ್ ಪಾಯಿಂಟ್ ಅನ್ನು ಹೊಂದಿದ್ದು ಇದು ವೈಡ್ ಆಂಗಲ್ ಅನ್ನು ಹೊಂದಿದೆ.

Most Read Articles
Best Mobiles in India

English summary
This article tells about The new base model in the Kindle series of e-readers comes with the added advantage of a touchscreen that makes the experience of turning pages and typing in text easier and more streamlined.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more