ಫೋನಿನಲ್ಲಿ ಯಾವುದೇ ಮಾಹಿತಿ ಸರ್ಚ್ ಮಾಡಿದರೂ, ಈ ಕೆಲಸ ಒಮ್ಮೆ ಮಾಡಿ!
ಗೂಗಲ್ ಸರ್ಚ್ ಮಾಹಿತಿ ಸರ್ಚ್ ಮಾಡಲು ಅತ್ಯುತ್ತಮ ವೇದಿಕೆ ಆಗಿದೆ. ಈ ತಾಣದಲ್ಲಿ ಬಳಕೆದಾರರು ಸರ್ಚ್ ಮಾಡಿರುವ ಮಾಹಿತಿ (ಸರ್ಚ್ ಹಿಸ್ಟರಿ) ದಾಖಲಾಗಿರುತ್ತದೆ. ಅಗತ್ಯ ಇದ್ದಾಗ ಮತ್ತೆ ನೋಡಬಹುದಾಗಿದೆ. ಆದರೆ ಬಳಕೆದಾರರು ಖಾಸಗಿಯಾಗಿ ಸರ್ಚ್ ಮಾಡಬಯಸಿದರೆ, ಅದಕ್ಕೆ Incognito Mode ಉತ್ತಮ. ಅದಾಗ್ಯೂ, Incognito Mode ಸರ್ಚ್ ಹಿಸ್ಟರಿ ಡಿಲೀಟ್ ಮಾಡಬಹುದಾಗಿದೆ.
ಹೌದು, ಗೂಗಲ್ ಕ್ರೋಮ್ Incognito ಮೋಡ್ ಆಯ್ಕೆಯು ಬಳಕೆದಾರರ ಬ್ರೌಸಿಂಗ್ ಡೇಟಾದ ಮಾಹಿತಿ/ ಹಿಸ್ಟರಿಯನ್ನು ಟ್ರ್ಯಾಕ್ ಮಾಡುವುದಿಲ್ಲ. ಹೀಗಾಗಿ, Incognito ಮೋಡ್ ಆಯ್ಕೆಯಲ್ಲಿ ಮಾಹಿತಿಯು ಗೌಪ್ಯತೆ ಹೆಚ್ಚು ಸುರಕ್ಷಿತವಾಗಿದೆ. ಆದಾಗ್ಯೂ, ಅಗತ್ಯವಿದ್ದರೆ, ಬಳಕೆದಾರರು ಕ್ರೋಮ್ Incognito ಹಿಸ್ಟರಿ ಚೆಕ್ ಮಾಡಬಹುದಾಗಿದೆ ಅಲ್ಲದೇ ಹಿಸ್ಟರಿ ಡಿಲೀಟ್ ಕೂಡಾ ಮಾಡಬಹುದಾಗಿದೆ.

ಡೆಸ್ಕ್‌ಟಾಪ್ ಮತ್ತು ಮೊಬೈಲ್ ಈ ಎರಡರಲ್ಲಿಯೂ ಗೂಗಲ್ ಕ್ರೋಮ್ Incognito ಮೋಡ್ ಸರ್ಚ್ ಹಿಸ್ಟರಿ ಡಿಲೀಟ್ ಮಾಡಲು ಬಳಸುವ ಕೆಲವು ಟ್ರಿಕ್ಸ್ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ. ಹಾಗಾದರೇ ಕ್ರೋಮ್ Incognito ಮೋಡ್ ಸರ್ಚ್ ಹಿಸ್ಟರಿ ಚೆಕ್ ಮಾಡುವುದು ಹೇಗೆ ಹಾಗೂ ಹಿಸ್ಟರಿ ಡಿಲೀಟ್ ಮಾಡುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಆಂಡ್ರಾಯ್ಡ್‌ನಲ್ಲಿ ಕ್ರೋಮ್ Incognito ಮೋಡ್ ಹಿಸ್ಟರಿ ಚೆಕ್ ಮಾಡಲು ಹೀಗೆ ಮಾಡಿ
ಆಂಡ್ರಾಯ್ಡ್‌ನಲ್ಲಿ Incognito ಮೋಡ್ ಚೆಕ್ ಮಾಡುವ ವಿಧಾನ
ಬಳಕೆದಾರರು ಆಂಡ್ರಾಯ್ಡ್ ಫೋನಿನಲ್ಲಿ DNS ಮಾಹಿತಿಯನ್ನು ತಿಳಿಯಲು ಸಾಧ್ಯವಿಲ್ಲ. ಆದರೆ ಆಂಡ್ರಾಯ್ಡ್ ಫೋನ್‌ಗಳಲ್ಲಿ Incognito ಮೋಡ್ ಹಿಸ್ಟರಿ ವೀಕ್ಷಿಸಲು ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಅಂತಹ ಆಪ್‌ಗಳಿಗೆ ಬೆಸ್ಟ್ ಉದಾಹರಣೆ ಆಗಿ ಹೋವರ್‌ವಾಚ್, ಕಿಡ್ಸ್‌ಗಾರ್ಡ್, ಇತ್ಯಾದಿ ಕಾಣಬಹುದಾಗಿದೆ.

ಈ ಆಪ್‌ಗಳ ನೆರವಿನಿಂದ Incognito ಮೋಡ್ ಹಿಸ್ಟರಿ ಅನ್ನು ವೀಕ್ಷಿಸಲು ಬಳಕೆದಾರರಿಗೆ ಅನುಮತಿ ಇದೆ. ಆದರೆ ಹಿಸ್ಟರಿ ಡಿಲೀಟ್ ಮಾಡಲು ಬಳಕೆದಾರರಿಗೆ ಅನುಮತಿ ಇಲ್ಲ. ಅಂದಹಾಗೆ ಇಂತಹ ಥರ್ಡ್ ಪಾರ್ಟಿ ಆಪ್‌ಗಳು ಬಳಕೆದಾರರ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಯನ್ನು ಟ್ರ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದನ್ನು ಬಳಸುವುದು ಕೆಲವೊಮ್ಮೆ ಅಪಾಯಕಾರಿ.
ಆಂಡ್ರಾಯ್ಡ್‌ನಲ್ಲಿ Incognito ಮೋಡ್ ಹಿಸ್ಟರಿ ಡಿಲೀಟ್ ಮಾಡುವ ಕ್ರಮ
ಹಂತ 1 : ಬಳಕೆದಾರರೇ, ನಿಮ್ಮ ಫೋನಿನಲ್ಲಿ ಗೂಗಲ್ ಕ್ರೋಮ್ ಅನ್ನು ತೆರೆಯಿರಿ.
ಹಂತ 2 : ಅಡ್ರೆಸ್ ಬಾರ್‌ನಲ್ಲಿ 'chrome://net-internals/#dns" ಎಂದು ಟೈಪ್ ಮಾಡಿ ಬಳಿಕ ಎಂಟರ್ ಆಯ್ಕೆ ಕ್ಲಿಕ್ ಮಾಡಿ.
ಹಂತ 3 : ಫೋನಿನ DNS ಸಂಗ್ರಹವನ್ನು ಡಿಲೀಟ್ ಮಾಡಲಿ 'Clear Host Cache' ಆಯ್ಕೆ ಅನ್ನು ಒತ್ತಿರಿ.
ಹಂತ 4 : ಆ ಬಳಿಕ ಕ್ರೋಮ್ Chrome ನಿಂದ ನಿರ್ಗಮಿಸಿ.
ಸರ್ಚ್ ಹಿಸ್ಟರಿಯು Incognito ಮೋಡ್ ನಲ್ಲಿ ಹೇಗೆ ಸೇವ್ ಆಗುತ್ತದೆ?
Incognito ಮೋಡ್‌ನಲ್ಲಿ ಬ್ರೌಸಿಂಗ್ ಹಿಸ್ಟರಿಯನ್ನು ಉಳಿಯಲ್ಲ ಎಂದು ಅನೇಕರು ಭಾವಿಸಬಹುದು, ಆದರೆ ಇದು ನಿಜವಲ್ಲ. ವೆಬ್‌ಸೈಟ್‌ಗಳಿಗಾಗಿ ಕುಕೀಗಳು ಅಥವಾ ಲಾಗ್-ಇನ್ ವಿವರಗಳಂತಹ ತಾತ್ಕಾಲಿಕ ಡೇಟಾ, ಸರ್ಚ್ ಅಥವಾ ವೆಬ್ ಫಾರ್ಮ್‌ಗಳಲ್ಲಿ ನಮೂದಿಸಿದ ಯಾವುದೇ ಡೇಟಾವನ್ನು ಸೇವ್ ಮಾಡಲಾಗುವುದಿಲ್ಲ, ಬಳಕೆದಾರರ ಡೇಟಾದ ಗೌಪ್ಯತೆಯನ್ನು ಕಾಪಾಡುತ್ತದೆ.
ಆದಾಗ್ಯೂ, Incognito ಮೋಡ್ ಹಿಸ್ಟರಿಯನ್ನು ನಿಮ್ಮ ಇಂಟರ್ನೆಟ್ ಸೇವಾ ಪೂರೈಕೆದಾರರು ( ISP ) ನೋಡಬಹುದು ಮತ್ತು ನೀವು ಭೇಟಿ ನೀಡುವ ವೆಬ್‌ಸೈಟ್‌ಗಳು ಇನ್ನೂ ನಿಮ್ಮ ಆನ್‌ಲೈನ್ ಚಟುವಟಿಕೆಯ ದಾಖಲೆಯನ್ನು ಹೊಂದಿರುವ ಸಾಧ್ಯತೆಗಳು ಇರುತ್ತವೆ.
ಅಲ್ಲದೆ, ಕೆಲವು ಸರ್ಕಾರಿ ಇಲಾಖೆಗಳು ಅಗತ್ಯ ಸಂದರ್ಭಗಳಲ್ಲಿ ಬಳಕೆದಾರರ ಆನ್‌ಲೈನ್ ಚಟುವಟಿಕೆಗಳನ್ನು ನೋಡುವ ಹಕ್ಕನ್ನು ಹೊಂದಿದ್ದಾರೆ. ಅದಕ್ಕಾಗಿಯೇ Incognito ಮೋಡ್ ಖಾಸಗಿಯಾಗಿ ಬ್ರೌಸ್ ಮಾಡಲು ಬಳಕೆದಾರರು ಅಂದುಕೊಂಡಷ್ಟು ಸುರಕ್ಷಿತ ಮಾರ್ಗವಲ್ಲ.


Click it and Unblock the Notifications








