ಉಚಿತವಾಗಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ನೋಡುವುದು ಈಗ ಸುಲಭ!
ಪ್ರಸ್ತುತ ಓಟಿಟಿ (OTT) ಪ್ಲಾಟ್‌ಫಾರ್ಮ್‌ಗಳಿಗೆ ಅಧಿಕ ಡಿಮ್ಯಾಂಡ್ ಇದೆ. ಅದರಲ್ಲಿಯೂ ಮುಖ್ಯವಾಗಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ ಕೆಲವು ಓಟಿಟಿ ಪ್ಲಾಟ್‌ಫಾರ್ಮ್‌ಗಳು ವೆಬ್‌ಸ್ಟೋರಿ ಹಾಗೂ ವಿಭಿನ್ನ ಕಾರ್ಯಕ್ರಗಳ ಮೂಲಕ ಈಗಾಗಲೇ ಜನರ ಗಮನ ಸೆಳೆದಿವೆ. ಉಚಿತವಾಗಿ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ವೀಕ್ಷಿಸಲು ಅವಕಾಶ ಇದೆಯಾ?
ಹೌದು, ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ಓಟಿಟಿ ವೀಕ್ಷಿಸಬೇಕಿದ್ರೆ, ಚಂದಾದಾರಿಕೆ ಶುಲ್ಕ ನೀಡಿಬೇಕಿದೆ. ಆದರೆ ಯಾವುದೇ ಚಂದಾದಾರಿಕೆ ಶುಲ್ಕ ಪಾವತಿಸದೆಯೂ ಸಹ ಉಚಿತವಾಗಿ ಡಿಸ್ನಿ+ ಹಾಟ್‌ಸ್ಟಾರ್ ಹಾಗೂ ಅಮೆಜಾನ್ ಪ್ರೈಮ್ ಓಟಿಟಿ ಕಾರ್ಯಕ್ರಮ ಗಳನ್ನು ನೋಡಬಹುದಾಗಿದೆ. ಅರೇರೆ ಅದು ಹೇಗೆ ಸಾಧ್ಯ ಅಂತಾ ಯೋಚಿಸ್ತಿರಾ?. ಉಚಿತವಾಗಿ ವೀಕ್ಷಿಸುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಈ ಪ್ಲ್ಯಾನ್‌ಗಳಲ್ಲಿ ಉಚಿತ ಸ್ಟ್ರೀಮಿಂಗ್: ಗ್ರಾಹಕರು ಏರ್‌ಟೆಲ್ 1199 ರೂ. ಅಥವಾ ಜಿಯೋ 699ರೂ. ಪ್ರೀಪೇಯ್ಡ್ ಪ್ಲ್ಯಾನ್ ರೀಚಾರ್ಜ್ ಮಾಡುವ ಮೂಲಕ ಉಚಿತವಾಗಿ ನೆಟ್‌ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ಚಂದಾದಾರಿಕೆ ಪಡೆಯಬಹುದಾಗಿದೆ.
ಏರ್‌ಟೆಲ್ 1199ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಪ್ರಯೋಜನಗಳ ಮಾಹಿತಿ: ಏರ್‌ಟೆಲ್ ಟೆಲಿಕಾಂನ 1199 ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ ಒಟ್ಟು 150 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ಅನಿಯಮಿತ ಧ್ವನಿ ಕರೆಗಳ ಅವಕಾಶವು ಸಹ ದೊರೆಯಲಿದೆ. ಇದರೊಂದಿಗೆ ಉಚಿತ 100 ಎಸ್‌ಎಮ್‌ಎಸ್ ಪ್ರಯೋಜನ ಸಹ ಗ್ರಾಹಕರಿಗೆ ಸಿಗಲಿದೆ.
ಹೆಚ್ಚುವರಿಯಾಗಿ ನೆಟ್‌ಫ್ಲಿಕ್ಸ್ ಬೇಸಿಕ್ ಚಂದಾದಾರಿಕೆ ಜೊತೆಗೆ ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ನೆಟ್‌ಫ್ಲಿಕ್ಸ್ ಚಂದಾದಾರಿಕೆ ಲಭ್ಯ ಹಾಗೆಯೇ ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಸೌಲಭ್ಯಗಳು ಸೇರಿದಂತೆ ಇತರೆ ಹಲವು ಲಭ್ಯ. ಇನ್ನು ಈ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು ಇದೀಗ ಏರ್‌ಟೆಲ್ ಅಪ್ಲಿಕೇಶನ್, ವೆಬ್‌ಸೈಟ್ ಮತ್ತು ಇತರ ರೀಚಾರ್ಜ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯ.
ಜಿಯೋ 699ರೂ. ಪೋಸ್ಟ್‌ಪೇಯ್ಡ್ ಪ್ಲ್ಯಾನ್ : ಜಿಯೋ 699ರೂ. ಪ್ಲಾನಿನಲ್ಲಿ ಗ್ರಾಹಕರಿಗೆ 100 GB ಡೇಟಾ ದೊಂದಿಗೆ ಅನ್ಲಿಮಿಟೆಡ್ ಕರೆ ಮಾಡುವ ಮತ್ತು ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಇದರೊಂದಿಗೆ ಈ ಯೋಜನೆಯಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ದೊರೆಯಲಿದ್ದು, ಎಲ್ಲ ಮೂರು ಸಿಮ್ ಕಾರ್ಡ್‌ಗಳಿಗೆ ಪ್ರತ್ಯೇಕ 5 GB ಡೇಟಾ ಲಭ್ಯ.
ಇದಲ್ಲದೇ ಈ ಯೋಜನೆಯು ಹೆಚ್ಚುವರಿಯಾಗಿ ಓಟಿಟಿ ಚಂದಾದಾರಿಕೆ ಪ್ರಯೋಜನ ಪಡೆದಿದ್ದು, ಫ್ರಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಮತ್ತು ಫ್ರಿ ಅಮೆಜಾನ್ ಪ್ರೈಮ್ ಚಂದಾದಾರಿಕೆ ಪ್ರಯೋಜನ ಸಿಗಲಿದೆ. ಅಲ್ಲದೇ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಮ್ಯೂಸಿಕ್ ಮತ್ತು ಅನಿಯಮಿತ ವಾಯಿಸ್ ಕರೆ ಸೌಲಭ್ಯ ದೊರೆಯಿತ್ತದೆ.
ಅಮೆಜಾನ್ ಪ್ರೈಮ್ ಚಂದಾದಾರಿಕೆ ಮಾಹಿತಿ:
ಅಮೆಜಾನ್ (Amazon Prime Video) ಪ್ರೈಮ್ ವಿಡಿಯೋ ಒಟ್ಟು ನಾಲ್ಕು ಸದಸ್ಯತ್ವ ಯೋಜನೆಗಳ ಆಯ್ಕೆ ಹೊಂದಿದೆ. ಮಾಸಿಕ ಚಂದಾದಾರಿಕೆಯ ಬೆಲೆ 299ರೂ ಮತ್ತು ತ್ರೈಮಾಸಿಕ (3 ತಿಂಗಳುಗಳು) 599ರೂ. ವೆಚ್ಚವಾಗುತ್ತದೆ. ವಾರ್ಷಿಕ ಪ್ರಧಾನ ಸದಸ್ಯತ್ವದ (12 ತಿಂಗಳುಗಳು) 1,499ರೂ ಆಗಿದೆ. ವಾರ್ಷಿಕ ಪ್ರೈಮ್ ಲೈಟ್ ಪ್ಯಾಕ್ ಕೂಡ ಇದೆ, ಇದರ ಬೆಲೆ 999 ರೂ. ಆಗಿದೆ.
ನೆಟ್‌ಫ್ಲಿಕ್ಸ್ ಚಂದಾದಾರಿಕೆ ಮಾಹಿತಿ:
ಭಾರತದಲ್ಲಿ, ನೆಟ್‌ಫ್ಲಿಕ್ಸ್‌ನ ಮೊಬೈಲ್ ಪ್ಲಾನ್ ತಿಂಗಳಿಗೆ 149ರೂ. ಗಳಿಂದ ಪ್ರಾರಂಭ. ಮೂಲ ಪ್ಲ್ಯಾನ್ 199ರೂ. ಮತ್ತು ಪ್ರಮಾಣಿತ ಯೋಜನೆಗೆ 499ರೂ. ಆಗಿದೆ. ಹಾಗೆಯೇ ಪ್ರೀಮಿಯಂ ಯೋಜನೆಗೆ 649ರೂ. ಗಳ ಬೆಲೆಯಲ್ಲಿದೆ.


Click it and Unblock the Notifications








