Subscribe to Gizbot

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡುವುದು ಹೇಗೆ?

Posted By:

ಈಗ ಏನಿದ್ರೂ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ನದ್ದೇ ಆಬ್ಬರ. ಹೀಗಾಗಿ ಬಹಳಷ್ಟು ಮಂದಿ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುತ್ತಿದ್ದಾರೆ. ಹೊಸದಾಗಿ ಸ್ಮಾರ್ಟ್‌ಫೋನ್ ಖರೀದಿಸಿದ ನಂತರ ಅದನ್ನು ಲ್ಯಾಪ್‌ಟಾಪ್‌ ಕನೆಕ್ಟ್‌ ಡೇಟಾಗಳನ್ನು ಕಾಪಿ ಮಾಡುವುದರ ಬಗ್ಗೆ ಬಹಳಷ್ಟು ಜನರಲ್ಲಿ ಗೊಂದಲವಿದೆ. ಹೀಗಾಗಿ ನಿಮ್ಮ ಗೊಂದಲವನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಗಿಜ್ಬಾಟ್‌ ಕೆಲವು ಮಾಹಿತಿಗಳನ್ನು ತಂದಿದೆ. ಕಳಗಡೆ 5 ಹಂತಗಳಲ್ಲಿ ವಿವರಿಸಲಾಗಿದ್ದು ಓದಿಕೊಂಡು ನಂತರ ನಿಮ್ಮ ಆಂಡ್ರಾಯ್ಡ್ ಸಾಧನವನ್ನು ಲ್ಯಾಪ್‌ಟಾಪ್‌/ಕಂಪ್ಯೂಟರ್‌ಗೆ ಸುಲಭವಾಗಿ ಕನೆಕ್ಟ್‌ ಮಾಡಿಕೊಳ್ಳಿ.

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡುವುದು ಹೇಗೆ?

ಸ್ಟೆಪ್‌--1

ಲ್ಯಾಪ್‌ಟಾಪ್‌ನ್ನು ಆಂಡ್ರಾಯ್ಡ್‌ ಓಎಸ್‌ ಇರುವ ಸಾಧನಕ್ಕೆ ಯುಎಸ್‌ಬಿ ಕೇಬಲ್‌ ಮೂಲಕ ಕನೆಕ್ಟ್‌ ಮಾಡಿಕೊಳ್ಳಿ.ಕೆಲವೊಂದು ಟ್ಯಾಬ್ಲೆಟ್‌/ಸ್ಮಾರ್ಟ್‌ಫೋನ್‌/ಫ್ಯಾಬ್ಲೆಟ್‌ಗಳ ಯುಎಸ್‌ಬಿ ಬದಲು ಮೈಕ್ರೋ ಯುಎಸ್‌ಬಿ ಕನೆಕ್ಟರ್‌ ನೀಡಿರುತ್ತಾರೆ. ಈ ಮೈಕ್ರ ಕನೆಕ್ಟರ್‌ನ್ನು ಲ್ಯಾಪ್‌ಟಾಪ್‌ಗೆ ಕನೆಕ್ಟ್ ಮಾಡಿಕೊಳ್ಳಿ.

ಸ್ಟೆಪ್‌--2

ಆಂಡ್ರಾಯ್ಡ್ ಸಾಧನದಲ್ಲಿರುವ ನೋಟಿಫಿಕಕೇಶನ್‌ ಫ್ಯಾನಲ್‌ ಓಪನ್‌ ಮಾಡಿಕೊಳ್ಳಿ. ಅಲ್ಲಿ 'USB Connected' ಆಯ್ಕೆ ಆರಿಸಿದ ಬಳಿಕ 'Turn On USB Storage'ನ್ನು ಆರಿಸಿಕೊಳ್ಳಿ.

ಸ್ಟೆಪ್‌--3

ಈಗ ನೀವು ಲ್ಯಾಪ್‌ಟಾಪ್‌ನ ವಿಂಡೋಸ್‌ ಎಕ್ಸಪ್ಲೋರರ್‌ ಹೋಗಿ ಆಂಡ್ರಾಯ್ಡ್‌ ಸಾಧನವಿರುವ ಡ್ರೈವ್‌ ಓಪನ್‌ ಮಾಡಿಕೊಳ್ಳಿ.

ಸ್ಟೆಪ್--4

ನಂತರ ವಿಂಡೋಸ್‌ ಎಕ್ಸ್‌ಪ್ಲೋರರ್‌ನಲ್ಲಿರುವ ನಿಮ್ಮ ಫೈಲ್‌ಗಳನ್ನು ಡ್ರ್ಯಾಗ್‌ ಮಾಡಿ ಎಳೆದು ಆಂಡ್ರಾಯ್ಡ್‌ ಡ್ರೈವ್‌ನಲ್ಲಿ ಒಂದು ಫೋಲ್ಡರ್‌ ಕ್ರಿಯೆಟ್‌ ಮಾಡಿ ಅದರಲ್ಲಿ ಡ್ರಾಪ್‌ ಮಾಡಿ.

ಸ್ಟೆಪ್‌--5

ನಿಮ್ಮ ಎಲ್ಲಾ ಕೆಲಸಗಳು ಮುಗಿದ ಬಳಿಕ ಆಂಡ್ರಾಯ್ಡ್‌ ಸಾಧನದ ನೋಟಿಫಿಕೇಶನ್ ಪ್ಯಾನಲ್‌ಗೆ ಹೋಗಿ 'Turn Off USB Storage' ಆಯ್ಕೆ ಆರಿಸಿಕೊಳ್ಳಿ. ನಂತರ ಲ್ಯಾಪ್‌ಟಾಪ್‌ನಿಂದ ಯುಎಸ್‌ಬಿ ಕೇಬಲ್‌ನ್ನು ಡಿಸ್‌ಕನೆಕ್ಟ್‌ ಮಾಡಿಕೊಳ್ಳಿ.

ಲಿಂಕ್‌ : ಯೂಟ್ಯೂಬ್ ಬಗ್ಗೆ ನಿಮಗೆಷ್ಟು ಗೊತ್ತು ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot