Subscribe to Gizbot

ಫ್ರೀಚಾರ್ಜ್" ಆಪ್ ಮೂಲಕ ಬ್ಯಾಂಕ್ ಅಕೌಂಟ್‌ಗೆ ಹಣ ಸೆಂಡ್ ಮಾಡುವುದು ಹೇಗೆ?

Written By:

ಭಾರತೀಯ ಡಿಜಿಟಲ್ ವಾಲೆಟ್ ಕಂಪೆನಿಗಳಲ್ಲಿ ಪೆಟಿಎಂ ಮತ್ತು ಮೊಬಿಕ್ವಿಕ್ ಸಂಸ್ಥೆಗಳಂತೆ ಉತ್ತಮ ಹೆಸರು ಗಳಿಸಿರುವ ಮತ್ತೊಂದು ಆನ್‌ಲೈನ್ ವಾಲೆಟ್ ಸಂಸ್ಥೆ ಫ್ರೀಚಾರ್ಜ್. ತನ್ನ ಗ್ರಾಹಕರಿಗೆ ಕಡಿಮೆ ಬೆಲೆದಲ್ಲಿ ಹೆಚ್ಚಿನ ಸೇವೆಗಳನ್ನು ನೀಡುತ್ತಿರುವ ಫ್ರೀಚಾರ್ಜ್ ಹೆಚ್ಚು ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿದೆ.

ನೋಟು ಬ್ಯಾನ್ ಆಗುವುದಕ್ಕಿಂತ ಮೊದಲು ಫ್ರೀಚಾರ್ಜ್ ಆಪ್‌ ಮೂಲಕ ಶಾಪಿಂಗ್ ,ಪೇಮೆಂಟ್, ಮತ್ತು ಟಿಕೆಟ್ ಬುಕ್ಕಿಂಗ್ ಮಾಡುತ್ತಿದ್ದವರು, ಇದೀಗ ಕ್ಯಾಶ್‌ಲೆಸ್ ವ್ಯವಹಾರ ಹೆಚ್ಚಾದ ನಂತರ ಫ್ರೀಚಾರ್ಜ್ ಮೂಲಕ ಆನ್‌ಲೈನ್ ಹಣದ ಪಾವತಿ ವ್ಯವಹಾರದಲ್ಲಿ ಹೆಚ್ಚು ತೊಡಗಿದ್ದಾರೆ.

ಫ್ರೀಚಾರ್ಜ್

ಲ್ಯಾಪ್‌ಟಾಪ್‌ನಲ್ಲಿ ಮೊಬೈಲ್ ಇಂಟರ್‌ನೆಟ್ ಬಳಸುವುದು ಹೇಗೆ?

ಫ್ರೀಚಾರ್ಜ್ ವಾಲೆಟ್ ಮೂಲಕ ಬ್ಯಾಂಕ್ ಅಕೌಂಟ್‌ಗೆ ಪ್ರತಿ ಬಾರಿ 5000 ರೂಪಾಯಿ ಮತ್ತು ಪ್ರತಿ ದಿನ 25,000 ರೂಪಾಯಿ ಹಣವನ್ನು ನೀವು ಸಂದಾಯ ಮಾಡಬಹುದಾಗಿದೆ. ಇನ್ನು ತಿಂಗಳಿಗೆ 25,000 ಹಣ ಮಿತಿ ಇರುವುದರಿಂದ, ನೀವು ತಿಂಗಳಿಗೆ ಕೇವಲ 25,000 ರೂಪಾಯಿ ಹಣ ಮಾತ್ರ ಸಂದಾಯ ಮಾಡಬಹುದು..

ಫ್ರೀಚಾರ್ಜ್

ಇತರೆ ಡಿಜಿಟಲ್ ವಾಲೆಟ್ ಕಂಪೆನಿಗಳಿಗಿಂತಲೂ ಫ್ರೀಚಾರ್ಜ್ ಮೂಲಕ ಸುಲಭವಾಗಿ ಬ್ಯಾಂಕ್ ಅಕೌಂಟ್‌ಗೆ ಆನ್‌ಲೈನ್ ಹಣ ಪಾವತಿ ಮಾಡುವುದು ಹೇಗೆ ಎಂಬುದನ್ನು  ತಿಳಿಯಿರಿ.

#1 ಫ್ರೀಚಾರ್ಜ್ ಆಪ್ ತೆರೆಯಿರಿ ನಂತರ "Account" ಐಕಾನ್ ಕ್ಲಿಕ್ ಮಾಡಿ.

#2 "Account" ಐಕಾನ್ ಕ್ಲಿಕ್ ಆದ ನಂತರ MY account details" ಆಯ್ಕೆಮಾಡಿರಿ

#3 ನಿಮ್ಮ ಫ್ರೀಚಾರ್ಜ್ ಬ್ಯಾಲೆನ್ಸ್ ಚೆಕ್ ಮಾಡಿ . ( ನಿಮ್ಮ ಹೆಸರು ಮತ್ತು ಇ-ಮೇಲ್ ಐಡಿ ಕೆಳಭಾಗದಲ್ಲಿ )

ಫ್ರೀಚಾರ್ಜ್

#4 ಸಂದಾಯ ಮಾಡಬೇಕಿರುವ ಹಣದ ಮೊತ್ತ ನಮೂದಿಸಿ

#5 ನೀವು ಹಣ ಸಂದಾಯ ಮಾಡಬೇಕಿರುವ ಬ್ಯಾಂಕ್ ಅಕೌಂಟ್ ನಮೂದಿಸಿ

#6 ನಂತರ "Withdraw" ಐಕಾನ್ ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
FreeCharge wallet can also be used to transfer money to other users, bank accounts.to know more visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot