ಪೇಟಿಎಂ ಮೂಲಕ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಹೇಗೆ?

ಆನ್‌ಲೈನ್‌ ಶಾಪಿಂಗ್‌ ಜೊತೆಗೆ ಆನ್‌ಲೈನ್ ವ್ಯವಹಾರದ ಮೇಲೆ ಜನರಿಗೆ ನಂಬಿಕೆ ಬಂದ ನಂತರ ಜನರೂ ಸಹ ಇದಕ್ಕೆ ಒಗ್ಗಿಕೊಂಡರು.

|

500 ಮತ್ತು 1000 ರೂಪಾಯಿಗಳ ನೋಟು ರದ್ದಾದ ನಂತರ ಭಾರತದಲ್ಲಿ ಕ್ಯಾಶ್‌ಲೆಸ್ ವ್ಯವಹಾರ ಹೆಚ್ಚಿನ ಪ್ರಸಿದ್ದಿ ಪಡೆಯಿತು ಎನ್ನಬಹುದು. ಇಂಟರ್‌ನೆಟ್‌ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗುತ್ತಿರುವ ಇಂದಿನ ದಿನಗಳಲ್ಲಿ ಮೊಬೈಲ್‌ ಮೂಲಕ ದಿನನಿತ್ಯದ ವ್ಯವಹಾರಗಳನ್ನು ನಿರ್ವಹಿಸುವುದು ಜನರಿಗೆ ಹೆಚ್ಚು ಅನುಕೂಲವಾಯಿತು.

ಬಾಗಶಃ ಎಲ್ಲಾ ಅಂತರ್ಜಾಲ ಸೇವೆಗಳನ್ನು ನೀಡುತ್ತಿದ್ದ ಅಂತರ್ಜಾಲ ಸಂಸ್ಥೆ ಪೇಟಿಎಂ, ಈಗ ಮೊಬೈಲ್ ಮೂಲಕ ಹಣವನ್ನು ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡುವ ಸೌಲಭ್ಯವನ್ನು ಸಹ ನೀಡಿದೆ. ಗಂಟೆಗಟ್ಟಲೆ ಬ್ಯಾಕಿನ ಮುಂದೆ ಕ್ಯೂ ನಿಂತು ತಮ್ಮ ಅಕೌಂಟ್‌ಗೆ ಹಣವನ್ನು ಹಾಕುತ್ತಿದ್ದವರಿಗೆ ಇದು ಹೆಚ್ಚು ಉತ್ತಮವಾದ ಸೇವೆ ಎನ್ನಬಹುದು. ಆನ್‌ಲೈನ್‌ ಶಾಪಿಂಗ್‌ ಜೊತೆಗೆ ಮೊಬೈಲ್‌ ಶುಲ್ಕ ಪಾವತಿ, ಡಿಟಿಎಚ್‌ ಬಿಲ್‌ ಪಾವತಿ, ಬಸ್‌ ಟಿಕೆಟ್‌, ಬುಕಿಂಗ್‌, ಹೋಟೆಲ್‌ ಬುಕಿಂಗ್‌, ವಿದ್ಯುತ್‌ ಬಿಲ್‌ ಎಲ್ಲವೂ ಆನ್‌ಲೈನ್‌ನಲ್ಲಿಯೆ ಆಗುವುದರಿಂದ ಮತ್ತು ಆನ್‌ಲೈನ್ ವ್ಯವಹಾರದ ಮೇಲೆ ಜನರಿಗೆ ನಂಬಿಕೆ ಬಂದ ನಂತರ ಜನರೂ ಸಹ ಇದಕ್ಕೆ ಒಗ್ಗಿಕೊಂಡರು.

ಓದಿರಿ:ಈ 5 ಸೆಕೆಂಡ್ ವಾಟ್ಸಾಪ್ ವೀಡಿಯೊ ನಿಮ್ಮ ಫೋನ್ ಕ್ರ್ಯಾಶ್‌ ಮಾಡುತ್ತದೆ? ಎಚ್ಚರ..!

ಹಾಗಾದರೆ ಸುಲಭವಾಗಿ ಪೇಟಿಎಂ ಮೂಲಕ ಹಣವನ್ನು ನಿಮ್ಮ ಬ್ಯಾಂಕ್ ಅಕೌಂಟ್‌ಗೆ ಹೇಗೆ ವರ್ಗಾವಣೆ ಮಾಡಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪೇಟಿಎಂ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಪೇಟಿಎಂ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಗೂಗಲ್‌ ಪ್ಲೇ ಸ್ಟೋರ್ ಮೂಲಕ ಪೇಟಿಎಂ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಮಾಹಿತಿ ನೀಡಿ ಪೇಟಿಎಂಗೆ ಲಾಗಿನ್ ಆಗಿ.

ಸೆಂಡ್ ಮನಿ ಟು ಬ್ಯಾಂಕ್ ಸೆಲೆಕ್ಟ್ ಮಾಡಿ.

ಸೆಂಡ್ ಮನಿ ಟು ಬ್ಯಾಂಕ್ ಸೆಲೆಕ್ಟ್ ಮಾಡಿ.

ಪೇಟಿಎಂಗೆ ಲಾಗಿನ್ ಆಗಿ ಅದನ್ನು ತೆರೆದ ನಂತರ ನಿಮಗೆ ಅಲ್ಲಿ ಪಾಸ್‌ಬುಕ್ ಐಕಾನ್ ಕಾಣಿಸುತ್ತದೆ. ಅಲ್ಲಿ ಕ್ಲಿಕ್ ಮಾಡಿ ಸೆಂಡ್ ಮನಿ ಟು ಬ್ಯಾಂಕ್ ಐಕಾನ್ ಸೆಲೆಕ್ಟ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ಅಕೌಂಟ್ ಮಾಹಿತಿ ತುಂಬಿರಿ

ಬ್ಯಾಂಕ್ ಅಕೌಂಟ್ ಮಾಹಿತಿ ತುಂಬಿರಿ

ಸೆಂಡ್ ಮನಿ ಟು ಬ್ಯಾಂಕ್ ಐಕಾನ್ ಸೆಲೆಕ್ಟ್ ಮಾಡಿ ಎಲ್ಲಿ transfar ಎನ್ನುವ ಆಯ್ಕೆಯನ್ನು ಒತ್ತಿರಿ. ನಂತರ ನೀವು ಹಣ ಪಾವತಿಸಬೇಕಾಗಿರುವ ಬ್ಯಾಂಕ್ ಅಕೌಂಟ್ ಮಾಹಿತಿಯನ್ನು ತುಂಬಿ

ಪೇಟಿಎಂ ವೆಬ್‌ಸೈಟ್‌ ತೆರೆಯಿರಿ.

ಪೇಟಿಎಂ ವೆಬ್‌ಸೈಟ್‌ ತೆರೆಯಿರಿ.

paytm.com ವೆಬ್‌ಸೈಟ್‌ ತೆರೆದು ನಿಮ್ಮ ಪೇಟಿಎಂ ಅಕೌಂಟ್ ಮುಲಕ ಲಾಗಿನ್ ಆಗಿರಿ. ವೆಬ್‌ಸೈಟ್‌ ಬಲಬಾಗದಲ್ಲಿ ಕಾಣುವ ಪೇಟಿಎಂ ವಾಲೆಟ್ ಕ್ಲಿಕ್ ಮಾಡಿ.

transfer to bank ಮಾಡಿ ಹಣ ಕಳುಹಿಸಿ.

transfer to bank ಮಾಡಿ ಹಣ ಕಳುಹಿಸಿ.

ಪೇಟಿಎಂ ವಾಲೆಟ್ ಕ್ಲಿಕ್ ಮಾಡಿದ ನಂತರ transfer to bank ಎನ್ನುವ ಐಕಾನ್ ಒತ್ತಿರಿ. ನಿವು ಕಳಹಿಸಬೇಕಾಗಿರುವ ಅಕೌಂಟ್‌ಗೆ ನಿಮ್ಮ ಹಣ ತಲುಪುತ್ತದೆ. ಪೇಟಿಎಂಗೆ ನೀವು ನೂತನ ಕಸ್ಟಮರ್ ಆಗಿದ್ದರೆ ಮೊದಲ ಬಾರಿ ನಿಮ್ಮ ಅಕೌಂಟ್‌ಗೆ ಹಣ ತಲುಪಲು ಮೂರು ದಿವಸಗಳು ಬೇಕಾಗುತ್ತವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Prime Minister Narendra Modi’s announcement of scrapping Rs. 500 and Rs. 1000 currency notes. From vegetable vendors to grocery stores, everyone is joining the Paytm cashless payments platform.to know more this visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X