ಬ್ಯಾಂಕ್ ಮುಂದೆ ನಿಲ್ಲದೆ ಅಕೌಂಟ್‌ಗೆ ಹಣ ಹಾಕುವುದು ಹೇಗೆ? ತಿಳಿಯಿರಿ.
ನಿಮ್ಮ ಸಂಬಂಧಿಕರು ಅಥವಾ ಸ್ಲೇಹಿತರಿಗೆ ನೀವು ತುರ್ತಾಗಿ ಹಣವನ್ನು ಹಾಕಲೇಬೇಕು ಆದರೆ, ಹಣ ಹಾಕಲು ಯಾವ ಬ್ಯಾಂಕ್ ಬಳಿ ಹೋದರು ಜನರ ಸಾಲು ಸಾಲು. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯಿರಿ
500 ಮತ್ತು 1000 ರೂಪಾಯಿಗಳ ನೋಟು ಬ್ಯಾನ್ ಮಾಡಿರುವುದು ಸಾಮಾನ್ಯ ಜನರಿಗೆ ಮಾತ್ರ ಹೆಚ್ಚು ಸಮಸ್ಯೆಗಳನ್ನು ತರಬಲ್ಲದು. ಆದರೂ ಕಪ್ಪುಹಣದ ನಿರ್ಮೂಲನೆಗೆ ಜನಸಾಮಾನ್ಯರು ನೀಡುತ್ತಿರುವ ಸಹಕಾರ ಮಾತ್ರ ಅದ್ಬುತವಾದದ್ದು!. ಇವೆಲ್ಲವನ್ನು ಬಿಟ್ಟು ಕೆಲ ಹಣದ ಸಮಸ್ಯೆಗಳು ನಿಮ್ಮನ್ನು ಹೆಚ್ಚು ಕಾಡಬಹುದು.ಇದರಿಂದ ನೀವು ಹೆಚ್ಚು ತೊಂದರೆಗೆ ಒಳಗಾಗಬಹುದು. ಆದರೆ ಚಿಂತಿಸಬೇಡಿ ಅಂತಹ ಸಮಸ್ಯೆಗೆಳಿಗೆ ಇನ್ನಿತರ ಮಾರ್ಗಗಳಿಂದ ಪರಿಹಾರವಿರುತ್ತದೆ. ಸಮಸ್ಯೆಗಳಿಗೆ ಪರಿಹಾರ ಹೇಗೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿರಿ.
ಹಣಕ್ಕಾಗಿ ಕ್ಯೂ ನಿಲ್ಲದಿರಿ..ಮೊಬೈಲ್ ಆಪ್ ಮೂಲಕ ಹಣ ಇರುವ ATM ಹುಡುಕಿ!
ನಿಮ್ಮ ಸಂಬಂಧಿಕರು ಅಥವಾ ಸ್ಲೇಹಿತರಿಗೆ ನೀವು ತುರ್ತಾಗಿ ಹಣವನ್ನು ಹಾಕಲೇಬೇಕು ಆದರೆ, ಹಣ ಹಾಕಲು ಯಾವ ಬ್ಯಾಂಕ್ ಬಳಿ ಹೋದರು ಜನರ ಸಾಲು ಸಾಲು. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂದು ತಿಳಿಯುವುದಿಲ್ಲ ಅಲ್ಲವೇ.? ಚಿಂತೆ ಮಾಡಬೇಡಿ ಪೇಟಿಎಂ ಇ-ವಾಲೆಟ್ ಮೂಲಕ ನಿಮ್ಮವರಿಗೆ ಹಣಸಂದಾಯ ಮಾಡಿ! ಅದು ಕೇವಲ 1% ಬಡ್ಡಿಯೊಂದಿಗೆ.

ಹೌದು ಪೇಟಿಎಂ ಇ-ವಾಲೆಟ್ ಮೂಲಕ ನೀವು ಬ್ಯಾಂಕ್ ಅಟಕೌಂಟ್‌ಗೆ ಹಣವನ್ನು ಸಂದಾಯ ಮಾಡಬಹುದು. ಸಾಮಾನ್ಯವಾಗಿ ಹಣ ವರ್ಗಾವಣೆಗೆ ಶೇಕಡ 4% ನಷ್ಟು ಬಡ್ಡಿದರ ವಿಧಿಸುತ್ತಿದ್ದ ಪೇಟಿಎಂ ದೇಶದಲ್ಲಿ ಹಣಕಾಸಿನ ಪರಿಸ್ಥಿತಿ ಏರುಪೇರಾಗಿರುವುದರಿಂದ ಕೇವಲ 1% ಬಡ್ಡಿ ದರದಲ್ಲಿ ಹಣ ಸಂದಾಯ ಮಾಡಲು ಅವಕಾಶ ಕಲ್ಪಸಿದೆ.ಹಾಗಾಗಿ, ನೀವು ಪೇಟಿಎಂ ಮೂಲಕ ನಿಮ್ಮವರಿಗೆ ಹಣ ಸಂದಾಯ ಮಾಡಿರ. ಮತ್ತು ಪೇಟಿಎಂ ಮೂಲಕ ಹಣವನ್ನು ಹೇಗೆ ಸಂದಾಯ ಮಾಡಬೇಕು ಎಂದು ತಿಳಿಯಲು ಈ ಕೆಳಗೆ ತಿಳಿಯಿರಿ.

1 ಪ್ಲೇ ಸ್ಟೋರ್ ನಿಂದ ಪೇಟಿಎಂ ಆಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ.
2 ಆಪ್‌ನ್ನು ನಿಮ್ಮ ಮೊಬೈಲ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳಿ ಮತ್ತು ಅದನ್ನು ತೆರೆಯಿರಿ.
3 ನಿಮ್ಮ ಅಕೌಂಟ್ ರಿಜಿಸ್ಟಾರ್ ಮಾಡಿಕೊಳ್ಳಿ ಮತ್ತುಯ ಲಾಗಿನ್ ಆಗಿರಿ

4 ಲಾಗಿನ್ ಆದ ನಂತರ ಮುಕಪುಟದಲ್ಲಿ ಕಾಣುವ "Pay and Send" ಎಂಬುದನ್ನು ಆಯ್ಕೆ ಮಾಡಿರಿ
5 "Send Money to Bank Account' ಎಂದು ಕಂಡುಬರುತ್ತದೆ ಅದನ್ನು ಆಯ್ಕೆ ಮಾಡಿ.

6 ನಂತರ ನೀವು ಹಣ ಸಂದಾಯ ಮಾಡಬೇಕಾದ ಅಕೌಂಟ್ ನಂಬರ್ ಮತ್ತು ಇನ್ನಿತರ ದಾಖಲೆರಗಳನ್ನು ನೀಡಿರಿ.
7 ಎಲ್ಲಾ ದಾಖಲೆಗಳನ್ನು ತುಂಬಿದ ನಂತರ ಕೆಲವೇ ಗಂಟೆಗಳಲ್ಲಿ ನಿಮ್ಮ ಹಣ ನೀವು ಕಳುಹಿಸಿದ ಅಕೌಂಟ್‌ನಲ್ಲಿ ಸಂದಾಯವಾಗಿರುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








