ವಿಂಡೋಸ್ 10 ಕಂಪ್ಯೂಟರ್ ಒಎಸ್ ರಿಸ್ಟೋರ್ ಮಾಡುವುದು ಹೇಗೆ?

|

ವಿಂಡೋಸ್ 10 ಇತ್ತೀಚಿಗೆ ಹೆಚ್ಚು ಬಳಕೆಯಾಗುತ್ತಿರುವ ಆಪರೇಟಿಂಗ್ ಸಿಸ್ಟಮ್. ಮೈಕ್ರೊಸಾಫ್ಟ್ ಕಂಪೆನಿಯ ಅತ್ಯುತ್ತಮ ಒಎಸ್ ಇದ್ದಾದರೂ ಕೂಡ ಕೆಲವೊಮ್ಮೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಹ್ಯಾಂಗ್ ಆಗುತ್ತದೆ.!! ಇದಕ್ಕೆ ಕಾರಣ ಆಪರೇಟಿಂಗ್ ಸಿಸ್ಟಮ್ ಅಲ್ಲ ಬದಲಾಗಿ ನಾವು ಸಾಫ್ಟ್‌ವೇರ್ ಮೇಲೆ ಹಾಕುವ ಒತ್ತಡ.!!

ಹೌದು, ದಿನಕ್ಕೆ ಹತ್ತಾರು ಆಪ್‌ಗಳನ್ನು ಡೌನ್‌ಲೋಡ್ ಮಾಡಿ, ಹತ್ತಾರು ಬಾರಿ ಪೆನ್‌ಡ್ರೈವ್ ಹಾಕಿ ಸಾಫ್ಟ್‌ವೇರ್ ಮೆಲೆ ಬಹಳಷ್ಟು ಒತ್ತಡವನ್ನು ನಾವು ಹಾಕುತ್ತೇವೆ, ಇದಲ್ಲದೇ ಒಮ್ಮೆಲೆ ಹತ್ತಾರು ಅಪ್ಲಿಕೇಷನ್‌ಗಳನ್ನು ರನ್ ಮಾಡುವುದರಿಂದ ಸಾಫ್ಟ್‌ವೇರ್ ಹ್ಯಾಂಗ್ ಆಗುತ್ತದೆ.!!

ಓದಿರಿ: ಜಿಯೋದಂತೆ ಅಮೆಜಾನ್ ಸಹ ಪ್ರೈಮ್ ಮೆಂಬರ್‌ಶಿಪ್ ನೀಡಿದೆ!..ಏನು ಆಫರ್!

ಇನ್ನು ಅತ್ಯುತ್ತಮ ಆಂಟಿವೈರಸ್ ಇದ್ದರೂ ಕೂಡ ನಿಮ್ಮ ಸಿಸ್ಟಮ್ ಸ್ಲೋ ಮತ್ತು ಹ್ಯಾಂಗ್ ಆಗುತ್ತದೆ. ಹಾಗಾದರೆ, ಇದನ್ನು ನಾವೆ ವಿಂಡೋಸ್ 10 ರೀಸ್ಟೋರ್ ಮಾಡುವುದು ಹೇಗೆ? ಎಂದು ತಿಳಿಯಲು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡಿ.

ವಿಂಡೋಸ್ 10 ರಿಸ್ಟೋರ್ ಮಾಡಿದರೆ ಏನಾಗುತ್ತದೆ.?

ವಿಂಡೋಸ್ 10 ರಿಸ್ಟೋರ್ ಮಾಡಿದರೆ ಏನಾಗುತ್ತದೆ.?

ಸಿಸ್ಟಮ್ ಸ್ಲೋ ಮತ್ತು ಹ್ಯಾಂಗ್ ಆಗುತ್ತಿದ್ದರೆ ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ರಿಸ್ಟೋರ್ ಮಾಡುವುದು ಒಳ್ಳೆಯದು. ರಿಸ್ಟೋರ್ ಮಾಡುವುದರಿಂದ ಕಂಪ್ಯೂಟರ್‌ನಲ್ಲಿರುವ ಜಂಕ್ ಫೈಲ್‌ಗಳು ಡಿಲೀಡ್ ಆಗಿ ಕಂಪ್ಯೂಟರ್ ಕಾರ್ಯನಿರ್ವಹಣೆ ಉತ್ತಮವಾಗುತ್ತದೆ.! ಮತ್ತು ಹೊಸದಾಗಿ ಖರೀದಿಸಿದಾಗ ಇದ್ದಂತಹ ಕಂಪ್ಯೂಟರ್ ಸಾಫ್ಟ್‌ವೇರ್ ಇರುತ್ತದೆ.!!

ವಿಂಡೋಸ್ 10 ರಿಸ್ಟೋರ್ ಮಾಡುವ ಮುನ್ನ ಏನು ಮಾಡಬೇಕು.!!

ವಿಂಡೋಸ್ 10 ರಿಸ್ಟೋರ್ ಮಾಡುವ ಮುನ್ನ ಏನು ಮಾಡಬೇಕು.!!

ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಕಂಪ್ಯೂಟರ್ ರಿಸ್ಟೋರ್ ಮಾಡುವ ಮುನ್ನ ಬ್ಯಾಕಪ್ ತೆಗೆದುಕೊಳ್ಳಿರಿ. ಏಕೆಂದರೆ ಸಿಸ್ಟಮ್ ರಿಸ್ಟೋರ್ ಮಾಡಿದ ನಂತರ ನೀವು ಇನ್‌ಸ್ಟಾಲ್ ಮಾಡಿದ ಆಪ್ಸ್, ಮತ್ತು ಡಾಕ್ಸುಮೆಂಟ್ಸ್‌ಗಳೆಲ್ಲವೂ ಡಿಲೀಟ್ ಆಗುತ್ತದೆ.!!

ವಿಂಡೋಸ್ 10 ರಿಸ್ಟೋರ್ ಮಾಡುವುದು ಹೇಗೆ? ಪಾರ್ಟ್ 1.

ವಿಂಡೋಸ್ 10 ರಿಸ್ಟೋರ್ ಮಾಡುವುದು ಹೇಗೆ? ಪಾರ್ಟ್ 1.

 • ವಿಂಡೋಸ್ 10 ಬಳಕೆದಾರರು ಸ್ಟಾರ್ಟ್‌ ಕ್ಲಿಕ್ ಮಾಡಿ ಸರ್ಚ್ ಬಟನ್‌ನಲ್ಲಿ ರಿಸ್ಟೋರ್ ಎಂದು ಟೈಪ್ ಮಾಡಿ.
 • ನಂತರ ರಿಸ್ಟೋರ್ ಪಾಯಿಂಟ್ ಆಯ್ಕೆ ಮಾಡಿ .
 • ಸಿಸ್ಟಮ್ ಪ್ರೊಟೆಕ್ಷನ್ ಟ್ಯಾಬ್‌ ತೆರೆದು, ಪ್ರೊಟೆಕ್ಷನ್ ಸೆಟ್ಟಿಂಗ್ ತೆರೆದು ಎನೆಬಲ್ ಐಕಾನ್ ಕ್ಲಿಕ್ ಮಾಡಿ. ಕೆಲವು ನಿಮಿಷದ ನಂತರ ಒಂದು ಮೆಸೇಜ್ ಬರುತ್ತದೆ.
 • ವಿಂಡೋಸ್ 10 ರಿಸ್ಟೋರ್ ಮಾಡುವುದು ಹೇಗೆ? ಪಾರ್ಟ್ 2

  ವಿಂಡೋಸ್ 10 ರಿಸ್ಟೋರ್ ಮಾಡುವುದು ಹೇಗೆ? ಪಾರ್ಟ್ 2

  • ಸ್ಟಾರ್ಟ್‌ ಕ್ಲಿಕ್ ಮಾಡಿ ಸರ್ಚ್ ಬಟನ್‌ನಲ್ಲಿ ರಿಸ್ಟೋರ್ ಎಂದು ಟೈಪ್ ಮಾಡಿ. ನಂತರ ರಿಸ್ಟೋರ್ ಪಾಯಿಂಟ್ ಆಯ್ಕೆ ಮಾಡಿ .
   • ಸಿಸ್ಟಮ್ ಪ್ರೊಟೆಕ್ಷನ್ ಟ್ಯಾಬ್‌ ತೆರೆದು, ಪ್ರೊಟೆಕ್ಷನ್ ಸೆಟ್ಟಿಂಗ್ ತೆರೆದು ಎನೆಬಲ್ ಐಕಾನ್ ಕ್ಲಿಕ್ ಮಾಡಿ. ನಂತರ ಒಂದು ಮೆಸೇಜ್ ಬರುತ್ತದೆ. ಈ ಮೆಸೇಜ್‌ನಲ್ಲಿ ರಿಸ್ಟೋರ್ ಬಗೆಗಿನ ಸಂಪೂರ್ಣ ಮಾಹಿತಿ ಇರುತ್ತದೆ.
   • ನಂತರ "ಸ್ಕ್ಯಾನ್ ಫಾರ್ ಅಫೆಕ್ಟೆಡ್ ಪ್ರೋಗ್ರಾಮ್' ಆಯ್ಕೆ ಕ್ಲಿಕ್ ಮಾಡಿ. ವಿಂಡೋಸ್ ಮತ್ತೊಮ್ಮೆ ನಿಮ್ಮನ್ನು ಎಚ್ಚರಿಸುತ್ತದೆ. ರಿಸ್ಟೋರ್ ಮಾಡಲು 'ನೆಕ್ಸ್ಟ್' ಐಕಾನ್ ಕ್ಲಿಕ್ ಮಾಡಿ.
   ರಿಸ್ಟೋರ್ ಆಗುತ್ತದೆ ಕಾಯಿರಿ.!!

   ರಿಸ್ಟೋರ್ ಆಗುತ್ತದೆ ಕಾಯಿರಿ.!!

   ಈ ಮೇಲಿನ ಹಂತಗಳನ್ನು ಪಾಲಿಸಿದ ನಂತರ ನಿಮ್ಮ ಕಂಪ್ಯೂಟರ್ ರಿಸ್ಟೋರ್ ಆಗಲು ತಯಾರಾಗುತ್ತದೆ. ರಿಸ್ಟೋರ್ ಆಗಲು ಕನಿಷ್ಟವೆಂದರೂ 3 ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ರಿಸ್ಟೋರ್ ಆದನಂತರ ಕಂಪ್ಯೂಟರ್ ತಾನಾಗಿಯೇ ರಿಸ್ಟಾರ್ಟ್ ಆಗುತ್ತದೆ, ಮತ್ತು ಹೊಸದಾಗಿ ಖರೀದಿಸಿದಾಗ ಇದ್ದಂತಹ ಕಂಪ್ಯೂಟರ್ ಸಾಫ್ಟ್‌ವೇರ್ ಇರುತ್ತದೆ.!!

   ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಬಿಡುಗಡೆ!! ಬೆಲೆ ಎಷ್ಟು? ಹೇಗಿದೆ ಮೊಬೈಲ್?

Most Read Articles
Best Mobiles in India

English summary
If something goes wrong with your Windows 10 computer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X