ಗೂಗಲ್‌ ಸರ್ಚ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಹೇಗೆ?

Posted By:

ಕನ್ನಡ ಟೈಪಿಂಗ್‌ ಗೊತ್ತಿಲ್ಲ.ಇಂಟರ್‌ನೆಟ್‌ನಲ್ಲಿ ಕನ್ನಡದಲ್ಲಿ ಮಾಹಿತಿ ಹುಡುಕಲು ಹೋಗುವವರಿಗೆ ಕಾಡುವ ದೊಡ್ಡ ಸಮಸ್ಯೆ ಇದು.ಇಂಟರ್‌ನೆಟ್‌ನಲ್ಲಿ ಕನ್ನಡ ಟೈಪ್‌ ಮಾಡುವುದು ಕಷ್ಟದ ಕೆಲಸವಲ್ಲ.ನೀವು ಸ್ವಲ್ಪ ಪ್ರಯತ್ನ ಪಟ್ಟರೆ ಇಂಟರ್‌ನೆಟ್‌ನಲ್ಲಿ ಸುಲಭವಾಗಿ ಕನ್ನಡ ಟೈಪ್‌ ಮಾಡಬಹುದು. ಫೇಸ್‌ಬುಕ್‌ನಲ್ಲಿ ಕಂಗ್ಲಿಷ್‌‌ನಲ್ಲಿ ಬರೆಯದೇ ಕನ್ನಡದಲ್ಲಿ ಟೈಪ್‌ ಮಾಡುವ ಮೂಲಕ ಚರ್ಚೆ‌ಯಲ್ಲಿ ಭಾಗವಹಿಸಬಹುದು.

ಇಂಟರ್‌ನೆಟ್‌ನಲ್ಲಿ ಕನ್ನಡ ಟೈಪ್‌ ಮಾಡುವುದರಿಂದ ಮತ್ತೊಂದು ಲಾಭ ಇದೆ. ನೀವು ಓದಿರಬಹುದು ಗಿಝ್‌ಬಾಟ್‌ ಕಳೆದ ಹತ್ತು ತಿಂಗಳಿನಿಂದ ಗೂಗಲ್‌ನಲ್ಲಿ ಕನ್ನಡ ನ್ಯೂಸ್‌ ಬೇಕು ಎಂದು ಗೂಗಲ್‌‌ನ್ನು ಕೇಳುತ್ತಿದ್ದರೂ ಇದುವರೆಗೂ ಅವರು ಆ ಸೇವೆಯನ್ನು ನೀಡಿಲ್ಲ.ಗೂಗಲ್‌ ಸರ್ಚ್‌ನಲ್ಲಿ ಕನ್ನಡವನ್ನು ಬಳಸಿ ಟೈಪ್‌ ಮಾಡಿ ಮಾಹಿತಿ ಹುಡುಕುವವರ ಸಂಖ್ಯೆ ಕಡಿಮೆ ಇರುವುದರಿಂದ ಗೂಗಲ್‌ ತನ್ನ ಸುದ್ದಿಯಲ್ಲಿ ಕನ್ನಡ ಭಾಷೆಯನ್ನು ಸೇರಿಸಲು ತಡಮಾಡುತ್ತಿದೆ.ಗೂಗಲ್, ಬಿಂಗ್, ಯಾಹೂ ನಂತಹ ಸರ್ಚ್ ಎಂಜಿನ್‌ಗಳಲ್ಲಿ ಕನ್ನಡದ ಪದಗಳನ್ನು ಯುನಿಕೋಡ್‌ನಲ್ಲಿ ನೋಡಲು ಸಾಧ್ಯವಾಗದೆ ಇದ್ದಾಗ, ಮೈಕ್ರೋಸಾಫ್ಟ್‌,ಗೂಗಲ್‌,ಆಪಲ್‌, ಯಾಹೂ ಕಂಪೆನಿಗಳು ಭಾರತದ ಬೇರೆ ಭಾಷೆಗೆ ನೀಡುತ್ತಿರುವ ಸೌಲಭ್ಯವನ್ನು ಕನ್ನಡ ಭಾಷೆಗೆ ನೀಡಲು ಮುಂದೆ ಬರುವುದಿಲ್ಲ.

ಈ ಎಲ್ಲಾ ಕಾರಣದಿಂದಾಗಿ ಕನ್ನಡದಲ್ಲಿ ನಮಗೆ ಸೌಲಭ್ಯ ಸಿಗಬೇಕಿದ್ದರೆ ಇಂಟರ್‌ನೆಟ್‌ನಲ್ಲಿ ಕನ್ನಡ ಬಳಕೆ ಜೊತೆಗೆ ಕನ್ನಡದಲ್ಲಿ ಸರ್ಚ್‌ ಮಾಡುವವರ ಸಂಖ್ಯೆ ಹೆಚ್ಚಾಗಬೇಕು. ಹೀಗಾಗಿ ಇಲ್ಲಿ ಕ್ರೋಮ್‌ಬ್ರೌಸರ್‌ನಲ್ಲಿ ಕನ್ನಡ ಬಳಸುವುದು ಹೇಗೆ ಎನ್ನುವ ವಿವರವನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹಂತ -1

ಹಂತ -1

#1


ಮೊದಲು ಕ್ರೋಮ್‌ ಬ್ರೌಸರ್‌ನಿಂದ ವಿಕಿಮೀಡಿಯ ಇನ್ಪುಟ್ ‌ಟೂಲ್ಸ್ ಹೋಗಿ 'Free' ಆಯ್ಕೆಯನ್ನು ಆರಿಸಿಕೊಳ್ಳಿ

 ಹಂತ-2

ಹಂತ-2

#2

ನಿಮ್ಮ ಆಯ್ಕೆ ಕನ್‌ಫಾರ್ಮ್‌ ಆದ ಬಳಿಕ ಮತ್ತೊಮ್ಮೆ ಈ ಆಯ್ಕೆಯನ್ನು ಸೇರಿಸಬೇಕಾ ಎಂದು ಕೇಳುತ್ತದೆ ಇಲ್ಲಿ"Add" ಆಯ್ಕೆಯನ್ನು ಆರಿಸಿಕೊಂಡಾಗ ಎಕ್ಸ್‌ಟೆನ್ಷನ್ ಇನ್‌ಸ್ಟಾಲ್‌ ಆಗುತ್ತದೆ.

 ಹಂತ-3

ಹಂತ-3

#3


ಈಗ ನೀವು ಗೂಗಲ್‌ ಸರ್ಚ್‌ ಎಂಜಿನ್‌ ಹೋಮ್‌ ಪೇಜ್‌ ಹೋಗಿ ಕೀಬೋರ್ಡ್‌ನಿಂದ "CTRL + M " ಕೀ ಒತ್ತಿ. ಆಗ ಆ ಎಕ್ಸ್‌ಟೆನ್ಷನ್ ಟೂಲ್‌ ನಿಮ್ಮ ಸರ್ಚ್‌ ಎಂಜಿನ್‌ನಲ್ಲಿ ಕಾಣುತ್ತದೆ. ಇಲ್ಲಿ ಕನ್ನಡದ ನುಡಿ,ಇನ್ಸ್‌ಸ್ಕ್ರಿಪ್ಟ್ , ಟ್ರಾನ್ಸ್‌ಲಿಟರೇಷನ್ (ಲಿಪ್ಯಂತರಣ) ಕೀಬೋರ್ಡ್‌ ಆಯ್ಕೆ ಕಾಣುತ್ತದೆ. ಇಲ್ಲಿ ನೀವು ಬೇಕಾದ ಕೀಬೋರ್ಡ್‌ನ್ನು ಆರಿಸಿ ಕನ್ನಡಲ್ಲಿ ಬರೆಯಬಹುದು. ನಿಮಗೆ ಇಂಗ್ಷಿಷ್‌‌ ಪದಗಳನ್ನು ಟೈಪ್‌ ಮಾಡಬೇಕಿದ್ದಲ್ಲಿ ಪುನಃ "CTRL + M" ಕೀ ಒತ್ತುವ ಮೂಲಕ ಇಂಗ್ಲಿಷ್‌‌ನಲ್ಲಿ ಸರ್ಚ್ ಮಾಡಬಹುದು.

 ಫೇಸ್‌ಬುಕ್‌ನಲ್ಲೂ ಟೈಪ್‌ ಮಾಡಿ:

ಫೇಸ್‌ಬುಕ್‌ನಲ್ಲೂ ಟೈಪ್‌ ಮಾಡಿ:

#4


ಗೂಗಲ್‌ ಸರ್ಚ್‌‌ನಲ್ಲಿ ಹೇಗೆ ಟೈಪ್‌ ಮಾಡುತ್ತಿರೋ ಅದೇ ರೀತಿಯಾಗಿ ಫೇಸ್‌ಬುಕ್‌,ಟ್ವೀಟರ್‌,ಗೂಗಲ್‌ ಪ್ಲಸ್‌‌ನಂತಹ ಸೋಶಿಯಲ್‌ ನೆಟ್‌‌ವರ್ಕ್‌‌ನಲ್ಲೂ ಕನ್ನಡದಲ್ಲಿ ಟೈಪ್‌ ಮಾಡಬಹುದು.

 ಬೇರೆ ವೆಬ್‌ಸೈಟ್‌ನಲ್ಲೂ ಕನ್ನಡ ಟೈಪ್‌ ಮಾಡಿ:

ಬೇರೆ ವೆಬ್‌ಸೈಟ್‌ನಲ್ಲೂ ಕನ್ನಡ ಟೈಪ್‌ ಮಾಡಿ:

#5


ಇಷ್ಟೇ ಅಲ್ಲದೇ ಒನ್‌ ಗೂಗಲ್‌ ಕಸ್ಟಮ್‌ ಸರ್ಚ್‌ ಇರುವ ಸುದ್ದಿ ವೆಬ್‌ಸೈಟ್‌ಗಳಲ್ಲಿ,ಕನ್ನಡ ವಿಕಿಪೀಡಿಯಾದಲ್ಲೂ ಕನ್ನಡದಲ್ಲೇ ಟೈಪ್‌ ಮಾಡಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot