Subscribe to Gizbot

ಕಂಪ್ಯೂಟರ್ ಹ್ಯಾಕ್ ಆದಾಗ ಏನು ಮಾಡಬೇಕು?

Written By:

ನೀವು ಒಂದು ಇಮೇಲ್ ಅಟ್ಯಾಚ್‌ಮೆಂಟ್ ಅನ್ನು ತೆರೆದಿದ್ದೀರಿ ಇದು ಅಪರಿಚಿತ ಇಮೇಲ್ ಆಗಿದ್ದು ಇದರಿಂದಾಗಿ ನಿಮ್ಮ ಕಂಪ್ಯೂಟರ್ ನಿಧಾನಗತಿಯನ್ನು ಪ್ರವೇಶಿಸುತ್ತಿದೆ ಮತ್ತು ಇತರ ಘಟನೆಗಳು ನಡೆಯುತ್ತಿದೆ. ಇದು ಮಾಲ್‌ವೇರ್‌ಗಳ ದಾಳಿಯಿಂದ ನಡೆಯುತ್ತಿದೆ ಎಂಬುದನ್ನು ನೀವು ಗಮನಿಸಿದ್ದೀರಾ?

ಇದನ್ನೂ ಓದಿ: ಕಂಪ್ಯೂಟರ್ ಸ್ಲೋ ಆಗಿದೆಯೇ? ಹಾಗಿದ್ದರೆ ಈ 10 ಕಾರಣಗಳನ್ನು ಅಭ್ಯಸಿಸಿ

ಹೌದು ನಿಮ್ಮ ಕಂಪ್ಯೂಟರ್ ಹ್ಯಾಕ್ ಆಗಿದೆ ಎಂಬುದು ಇದರಿಂದ ತಿಳಿಯುತ್ತದೆ. ಇದನ್ನು ಆರಂಭದಿಂದಲೇ ತಡೆಗಟ್ಟದಿದ್ದಲ್ಲಿ ನಿಮ್ಮ ಕಂಪ್ಯೂಟರ್‌ಗೆ ಏನಾದರೂ ಸಂಭವಿಸುವುದು ಖಂಡಿತ. ಹಾಗಿದ್ದರೆ ಇದನ್ನು ತಡೆಗಟ್ಟುವ ಬಗೆ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನೀವು ತಿಳಿಯಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೆಟ್‌ವರ್ಕ್ ಕೇಬಲ್ ಪ್ರತ್ಯೇಕಿಸಿ

ನಿಮ್ಮ ಕಂಪ್ಯೂಟರ್ ಅನ್ನು ದೂರವಿಡಿ

ನಿಮ್ಮ ಹ್ಯಾಕರ್ ಯಾವ ರೀತಿಯಲ್ಲಿ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡುತ್ತಿದ್ದಾರೆ ಎಂಬುದನ್ನು ಅರಿತುಕೊಂಡು ಆ ವಿಧಾನವನ್ನು ದೂರವಿರಿಸಿ. ನಿಮ್ಮ ಪಿಸಿಯಿಂದ ನೆಟ್‌ವರ್ಕ್ ಕೇಬಲ್ ಅನ್ನು ಪ್ರತ್ಯೇಕಿಸಿ ಮತ್ತು ವೈಫೈ ಸಂಪರ್ಕವನ್ನು ಆಫ್ ಮಾಡಿ.

ಬೂಟೇಬಲ್ ಅಲ್ಲದ ಡ್ರೈವ್ ಆಗಿ ಬಳಸುವುದು

ಕಂಪ್ಯೂಟರ್ ಅನ್ನು ಬೂಟೇಬಲ್ ಅಲ್ಲದ ಡ್ರೈವ್ ಆಗಿ ಬಳಸುವುದು

ನಿಮ್ಮ ಕಂಪ್ಯೂಟರ್ ಅನ್ನು ಶಟ್ ಡೌನ್ ಮಾಡುವುದು ಹ್ಯಾಕರ್‌ನಿಂದ ಡಿವೈಸ್ ಅನ್ನು ರಕ್ಷಿಸುತ್ತದೆ ಅಂತೆಯೇ ನಿಮ್ಮ ಫೈಲ್‌ಗಳಿಗೆ ಆಗುವ ಹಾನಿಯನ್ನು ಇದು ತಪ್ಪಿಸುತ್ತದೆ.

ಕಂಪ್ಯೂಟರ್ ಸ್ಕ್ಯಾನ್

ಮಾಲ್‌ವೇರ್‌ಗಾಗಿ ನಿಮ್ಮ ಡ್ರೈವ್ ಸ್ಕ್ಯಾನ್ ಮಾಡಿ

ಇನ್ನೊಂದು ಪಿಸಿ ಆಂಟಿ ವೈರಸ್ ಅನ್ನು ಬಳಸಿಕೊಂಡು, ನಿಮ್ಮ ಕಂಪ್ಯೂಟರ್ ಅನ್ನು ಸ್ಕ್ಯಾನ್ ಮಾಡಿ. ನಿಮ್ಮ ಹಾರ್ಡ್ ಡ್ರೈವ್‌ನ ಫೈಲ್ ಸಿಸ್ಟಮ್‌ನಿಂದ ಇನ್‌ಫೆಕ್ಷನ್ ಅನ್ನು ಇದು ನಿವಾರಿಸುತ್ತದೆ.

ವೈಯಕ್ತಿಕ ಡೇಟಾ

ಫೈಲ್‌ಗಳನ್ನು ಬ್ಯಾಕಪ್ ಮಾಡುವುದು

ಈಗಾಗಲೇ ಹಾನಿಗೊಳಪಟ್ಟಿರುವ ಡ್ರೈವ್‌ನಿಂದ ಎಲ್ಲಾ ವೈಯಕ್ತಿಕ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ.

ಪಿಸಿಗೆ ಡ್ರೈವ್ ಸರಿಸಿ

ನಿಮ್ಮ ಪಿಸಿಗೆ ಡ್ರೈವ್ ಸರಿಸಿ

ನಿಮ್ಮ ಫೈಲ್ ಬ್ಯಾಕಪ್ ಯಶಸ್ವಿಯಾಗಿದೆ ಎಂಬುದು ನಿಮಗೆ ಖಾತ್ರಿಯಾದಲ್ಲಿ, ನಿಮ್ಮ ಹಳೆಯ ಪಿಸಿಗೆ ಡ್ರೈವ್ ಅನ್ನು ಸರಿಸಬಹುದು.

ಹಳೆಯ ಹಾರ್ಡ್ ಡ್ರೈವ್ ಅಳಿಸಿ

ಹಳೆಯ ಹಾರ್ಡ್ ಡ್ರೈವ್ ಅನ್ನು ಅಳಿಸಿ

ಮಾಲ್‌ವೇರ್ ಕ್ಲೀನ್ ಅನ್ನು ನೀವು ಮಾಡಿದ್ದರೂ ನಿಮ್ಮ ಪಿಸಿಯನ್ನು ಸಂಪೂರ್ಣವಾಗಿ ನಂಬದಿರಿ. ಡ್ರೈವ್ ಅನ್ನು ಸಂಪೂರ್ಣವಾಗಿ ತೊಡೆದು ಹಾಕಿ ಮತ್ತು ನಂಬಿಕಸ್ಥ ಮೀಡಿಯಾದಿಂದ ನಿಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಮರುಲೋಡ್ ಮಾಡಿ.

ಮರುಲೋಡ್

ಆಪರೇಟಿಂಗ್ ಸಿಸ್ಟಮ್ ಮರುಲೋಡ್ ಮಾಡುವುದು

ನೀವು ಖರೀದಿಸಿರುವ ನಿಮ್ಮ ಮೂಲ ಓಎಸ್ ಡಿಸ್ಕ್ ಅನ್ನು ಬಳಸಿ. ನಕಲಿಸಿದ ಅಥವಾ ಒರಿಜಿನಲ್‌ನಂತೆ ತೋರುವ ಓಎಸ್ ಡಿಸ್ಕ್‌ಗಳನ್ನು ಬಳಸದಿರಿ.

ರೀಇನ್‌ಸ್ಟಾಲ್

ಆಂಟಿ ವೈರಸ್ ರೀಇನ್‌ಸ್ಟಾಲ್ ಮಾಡಿ

ಇತರ ಯಾವುದೇ ಅಪ್ಲಿಕೇಶನ್‌ಗಳನ್ನು ಲೋಡ್ ಮಾಡಿಕೊಳ್ಳುವ ಮುನ್ನ, ಭದ್ರತಾ ಸಂಬಂಧಿ ಸಾಫ್ಟ್‌ವೇರ್ ಅನ್ನು ನೀವು ಲೋಡ್ ಮಾಡಲೇಬೇಕು. ನಿಮ್ಮ ಆಂಟಿವೈರಸ್ ಸಾಫ್ಟ್‌ವೇರ್ ನವೀಕೃತವಾಗಿದೆ ಎಂಬುದನ್ನು ಗಮನಿಸಿಕೊಳ್ಳಿ.

 ಬ್ಯಾಕಪ್ ಮಾಡಿ

ನಿಮ್ಮ ಬ್ಯಾಕಪ್ ಡಿಸ್ಕ್‌ಗಳನ್ನು ಸ್ಕ್ಯಾನ್ ಮಾಡಿ

ನಿಮ್ಮ ಸಿಸ್ಟಮ್‌ಗೆ ಬ್ಯಾಕಪ್ ಡಿಸ್ಕ್‌ಗಳನ್ನು ಅಳವಡಿಸುವಾಗ ಡೇಟಾ ಫೈಲ್‌ಗಳನ್ನು ಯಾವಾಗಲೂ ಸ್ಕ್ಯಾನ್ ಮಾಡಿ.

ಮರುಲೋಡ್

ನಿಮ್ಮ ಸಿಸ್ಟಮ್‌ನ ಸಂಪೂರ್ಣ ಬ್ಯಾಕಪ್ ಮಾಡಿ

ನಿಮ್ಮ ಕಂಪ್ಯೂಟರ್‌ನ ಸಂಪೂರ್ಣ ಬ್ಯಾಕಪ್ ಮಾಡುವುದು ಅತ್ಯವಶ್ಯಕವಾಗಿದೆ. ಇದರಿಂದಾಗಿ ನಿಮ್ಮ ಸಿಸ್ಟಮ್ ಅನ್ನು ಆಗಾಗ್ಗೆ ಮರುಲೋಡ್ ಮಾಡುವ ತೊಂದರೆ ಇರುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You opened an e-mail attachment that you probably shouldn't have and now your computer has slowed to a crawl and other strange things are happening.Here are the basic steps you need to perform to get back to normal after you've been hacked.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot