Home
ಟೆಕ್ ನೌಕರಿ

ಆಪಲ್‌ 'ಐಕ್ಲೌಡ್' ಸ್ಟೋರೇಜ್‌ ಫುಲ್‌ ಆಗಿದೆಯಾ?.ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಫೋನ್‌ಗಳಲ್ಲಿ ಆಂತರಿಕ ಮೆಮೊರಿ ಎಷ್ಟಿದ್ದರೂ ಕಡಿಮೆಯೇ ಎನ್ನುವ ಸ್ಥಿತಿಯನ್ನು ಬಹುತೇಕ ಬಳಕೆದಾರರ ಮನಸ್ಥಿತಿ ಆಗಿರುತ್ತದೆ. ಹೆಚ್ಚಿನ ಸ್ಥಳಾವಕಾಶಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯತ್ತ ಗಮನ ನೀಡುತ್ತಾರೆ. ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ತಮ್ಮ ಪ್ರಮುಖ ಡಾಟಾಗಳನ್ನು ಸಂಗ್ರಹಿಸಲು ಎಸ್‌ಡಿ ಕಾರ್ಡ್‌ನಲ್ಲಿ ಬದಲಾಗಿ ಕ್ಲೌಡ್‌ ಸ್ಟೋರೇಜ್‌ನಲ್ಲಿ ಶೇಖರಿಸಲು ಮುಂದಾಗುತ್ತಾರೆ.

ಆಪಲ್‌ 'ಐಕ್ಲೌಡ್' ಸ್ಟೋರೇಜ್‌ ಫುಲ್‌ ಆಗಿದೆಯಾ?.ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಪ್ರಸ್ತುತ ಆಂಡ್ರಾಯ್ಡ್ ಮತ್ತು ಐಫೋನ್‌ ಫೋನ್‌ಗಳಲ್ಲಿ ಕಂಪನಿಗಳು ಕ್ಲೌಡ್‌ ಸ್ಟೋರೇಜ್‌ ಆಯ್ಕೆಯನ್ನು ಬಳಕೆದಾರರಿಗೆ ನೀಡುತ್ತಲಿದ್ದು, ಬಳಕೆದಾರರಿಗೆ ನಿಗದಿತ(ಲಿಮಿಟೆಡ್‌) ಉಚಿತ ಸ್ಥಳಾವಕಾಶವನ್ನು ದೊರೆಯುತ್ತದೆ. ಹೀಗೆ ಆಪಲ್‌ನ ಐಫೋನ್‌ಗಳಲ್ಲಿ ಐಕ್ಲೌಡ್‌ ಸ್ಟೋರೇಜ್‌ ಆಯ್ಕೆಯನ್ನು ನೀಡಲಾಗಿದ್ದು, ಕಂಪನಿಯು ಬಳಕೆದಾರರಿಗೆ 5GB ಯಷ್ಟು ಉಚಿತ ಸ್ಟೋರೇಜ್‌ ಸ್ಥಳಾವಕಾಶವನ್ನು ಮಾತ್ರ ಒದಗಿಸಿದೆ.

ಆಪಲ್‌ 'ಐಕ್ಲೌಡ್' ಸ್ಟೋರೇಜ್‌ ಫುಲ್‌ ಆಗಿದೆಯಾ?.ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

ಕಂಪನಿ ನೀಡುವ 5GB ಸ್ಟೋರೇಜ್‌ ಬಳಕೆದಾರರಿಗೆ ಖಂಡಿತಾ ಸಾಕಾಗೊದಿಲ್ಲ ಹೀಗಾಗಿ ಬಳಕೆದಾರರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಆದರೆ ಐಕ್ಲೌಡ್‌ ಸ್ಟೋರೇಜ್‌ ಸ್ಪೇಸ್‌ ಅನ್ನು ಖಾಲಿ ಮಾಡಿಬಹುದಾಗಿದ್ದು, ಅದಕ್ಕಾಗಿ ಇಂದಿನ ಲೇಖನದಲ್ಲಿ ನಾವು ಕೆಲವು ಟಿಪ್ಸ್‌ ನೀಡಿದ್ದೆವೆ. ಹಾಗಾದರೇ ಆಪಲ್‌ ಐಕ್ಲೌಡ್‌ ಸ್ಟೋರೇಜ್‌ನ ಸ್ಪೇಸ್‌ ಖಾಲಿ ಮಾಡಲು ಯಾವ ಟಿಪ್ಸ್‌ಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಅಧಿಕ ಬ್ಯಾಕ್‌ಅಪ್‌ ಬೇಡಾ

ಅಧಿಕ ಬ್ಯಾಕ್‌ಅಪ್‌ ಬೇಡಾ

ಬ್ಯಾಕ್‌ಅಪ್‌ನಲ್ಲಿ ಎರಡು ವಿಧಗಳಿದ್ದು, ಒಂದು ಸಿಸ್ಟಮ್ ಬ್ಯಾಕ್‌ಅಪ್‌ ಮತ್ತೊಂದು ಆಪ್ಸ್‌ ಬ್ಯಾಕ್‌ಅಪ್‌(individual apps). ಅನಗತ್ಯ ಡಾಟಾಗಳನ್ನು ಕ್ಲೌಡ್‌ ಸ್ಟೋರೇಜ್‌ಗೆ ತುಂಬಿಕೊಳ್ಳುವ ಬದಲು ಬಳಕೆದಾರರು ಅಗತ್ಯವಾದದನ್ನು ಮಾತ್ರ ಬ್ಯಾಕ್‌ಅಪ್‌ ಮಾಡಿಕೊಳ್ಳುವುದು ಉತ್ತಮ. ಐಫೋನ್ ಐಓಎಸ್‌ ಮತ್ತು ಮ್ಯಾಕ್‌ ಡಿವೈಸ್‌ಗಳಲ್ಲಿ ಐಕ್ಲೌಡ್‌ನಲ್ಲಿ ಸ್ಟೋರೇಜ್‌ ಆಗುವ ಮಾಹಿತಿಗಳನ್ನು ನಿಯಂತ್ರಿಸಬಹದು.

ಫೋಟೊ ಲೈಬ್ರರಿ ನಿಯಂತ್ರಣ

ಫೋಟೊ ಲೈಬ್ರರಿ ನಿಯಂತ್ರಣ

ಐಫೋನ್‌ನಲ್ಲಿ ಅನೇಕ ಫೋಟೊಗಳನ್ನು ಸೆರೆಹಿಡಿದಿರುತ್ತಿರಿ ಅವುಗಳಲ್ಲಿ ಎಲ್ಲವು ಅಗತ್ಯವಿರುವುದಿಲ್ಲ. ಹೀಗಾಗಿ ಅಗತ್ಯ ಎನಿಸುವ ಫೋಟೊಗಳನ್ನು ಮಾತ್ರವೇ ಸ್ಟೋರ್‌ ಮಾಡಲು ಮುಂದಾಗಿ ಈ ಮೂಲಕ ನಿಮ್ಮ ಫೋಟೊ ಲೈಬ್ರರಿಯ ಗಾತ್ರವನ್ನು ತಗ್ಗಿಸಿ ಸ್ಟೋರೇಜ್‌ ಸ್ಪೇಸ್‌ ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ವಿಡಿಯೊಗಳಲ್ಲಿಯೂ ಅನಗತ್ಯ ವಿಡಿಯೊ ಸ್ಟೋರೇಜ್‌ ಮಾಡಿ ಐಕ್ಲೌಡ್‌ ಸ್ಪೇಸ್‌ ಫುಲ್‌ ಮಾಡಬೇಡಿ.

ಓಲ್ಡ್‌ ಮೆಸೆಜ್‌ ಡಿಲಿಟ್‌ ಮಾಡಿ

ಓಲ್ಡ್‌ ಮೆಸೆಜ್‌ ಡಿಲಿಟ್‌ ಮಾಡಿ

ಐಫೋನ್ ಐಕ್ಲೌಡ್‌ ಸ್ಟೋರೇಜ್‌ಗೆ ಸ್ಥಳಾವಕಾಶ ಹೆಚ್ಚಿಸಲು ಇನ್ನೊಂದು ಟಿಪ್ಸ್‌ಯೆಂದರೇ ಹಳೇಯ ಮೆಸೆಜ್‌ಗಳನ್ನು ಡಿಲಿಟ್ ಮಾಡುವುದು. ಎಷ್ಟೂ ಮೆಸೆಜ್‌ಗಳು ಬಂದಿರುತ್ತವೆ ಅವುಗಳಲ್ಲಿ ಬಹುತೇಕ ಮಸೆಜ್‌ಗಳು ಉಪಯುಕ್ತವಿರುವುದಿಲ್ಲ ಅವುಗಳನ್ನು ಡಿಲಿಟ್‌ ಮಾಡುವ ಮೂಲಕ ಸ್ಟೋರೇಜ್‌ ಸ್ಪೇಸ್‌ ಖಾಲ ಮಾಡಬಹುದು. ಬಹಳಷ್ಟು ಅನುಪಯುಕ್ತ ಮೆಸೆಜ್‌ಗಳು ಹಾಗೆಯೇ ಉಳಿದಿರುತ್ತವೆ.

ಮೇಲ್‌ ಮ್ಯಾನೇಜಮೆಂಟ್

ಮೇಲ್‌ ಮ್ಯಾನೇಜಮೆಂಟ್

ಫೋನ್‌ ಬಳಕೆದಾರರೆಂದ ಮೇಲೆ ಇ ಮೇಲ್‌ಗಳು ಬರುವುದು ಸಹಜ. ಹಾಗೇ ಬಂದ ಇ ಮೇಲ್‌ಗಳಲ್ಲಿ ಕೇಲವು ದೊಡ್ಡ ಗಾತ್ರದ ಅಟ್ಯಾಚ್‌ಮೆಂಟ್‌ಗಳು ಬಂದಿರುತ್ತವೆ. ಅವುಗಳು ಸ್ಪೇಸ್‌ ಅನ್ನು ಕಬಳಿಸುತ್ತವೆ. ಹೀಗಾಗಿ ಸ್ಪೇಸ್‌ ಉಳಿಸಲು ಮೇಲ್‌ ಮ್ಯಾನೇಜಮೆಂಟ್‌ ಮಾಡುವುದು ಮುಖ್ಯ. ಅನಗತ್ಯ ಮತ್ತು ದೊಡ್ಡ ಗಾತ್ರದ ಫೈಲ್‌ ಅಟ್ಯಾಚಮೆಂಟ್‌ಗಳನ್ನು ಡಿಲಿಟ್ ಮಾಡಬಹದು.

ಐಕ್ಲೌಡ್ ಡ್ರೈವ್‌‌ನಿಂದ ಫೈಲ್‌ ಡಿಲಿಟ್

ಐಕ್ಲೌಡ್ ಡ್ರೈವ್‌‌ನಿಂದ ಫೈಲ್‌ ಡಿಲಿಟ್

ಐಕ್ಲೌಡ್ ಡ್ರೈವ್‌‌ನಲ್ಲಿ ಎಷ್ಟೂ ಫೈಲ್‌ಗಳನ್ನು ಶೇಖರಿಸುತ್ತಿರಾ, ಅವುಗಳಲ್ಲಿ ಮತ್ತೆ ಬಳಕೆಗೆ ಬೇಕಾಗಿರದವು ಸಹ ಸೇರಿಕೊಂಡಿರುತ್ತವೆ. ಅನಗತ್ಯ ಫೈಲ್‌ಗಳನ್ನು ಡಿಲಿಟ್‌ ಮಾಡುವುದು ಉತ್ತಮ. ಇದರಿಂದ ಐಕ್ಲೌಡ್‌ನ ಸ್ಟೋರೇಜ್‌ ಸ್ಪೇಸ್‌ನಲ್ಲಿ ಸ್ಥಳಾವಕಾಶ ಸೀಗಲಿದೆ. ಪಿಡಿಎಫ್‌ ಫೈಲ್‌, ಮೆಮೊಸ್‌ಗಳು ಸೇರಿದಂತೆ ಇನ್ನು ಹಲವು ವಿಧದ ಫೈಲ್‌ಗಳ ಸಹ ಸೇರಿರುತ್ತವೆ. ಅವುಗಳಲ್ಲಿ ಬೇಡವಾದವುಗಳನ್ನು ಡಿಲಿಟ್‌ ಮಾಡಿ.

Best Mobiles in India

English summary
iCloud’s automatic backups can take up a lot of space. There are two kinds of backups: system backups and individual app backups. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+