Home
ಟೆಕ್ ನೌಕರಿ

ಇಂದು IND vs ENG ಟಿ-20: ಡೆಡ್ಲಿ ಬೌಲರ್ ಕಂಬ್ಯಾಕ್.. RCB ಆಟಗಾರರ ಮೇಲೆ ಎಲ್ಲರ ಕಣ್ಣು.. ಪಂದ್ಯ ಎಲ್ಲಿ ವೀಕ್ಷಿಸಬೇಕು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯಕ್ಕೆ ಕ್ಷಣಗಣನೆ. ಮೊಹಮ್ಮದ್ ಶಮಿ ಮೇಲೆ ಎಲ್ಲರ ಕಣ್ಣು! ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20 ಸರಣಿ (IND vs ENG T20)ಇಂದಿನಿಂದ ಆರಂಭವಾಗಲಿದೆ. ಐದು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಸೂರ್ಯ ಕುಮಾ‌ರ್ ಸಾರಥ್ಯದಲ್ಲಿ ಭಾರತ ತಂಡ ಸಿದ್ಧವಾಗಿದೆ. ಎಲ್ಲರ ಕಣ್ಣುಗಳು ಡೇಂಜರಸ್ ಬೌಲರ್ ಮೊಹಮ್ಮದ್ ಶಮಿಯತ್ತ ನೆಟ್ಟಿವೆ. ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡಿರುವ ಮೊಹಮ್ಮದ್ ಶಮಿ ನಿರೀಕ್ಷೆಯಂತೆ ಪ್ರದರ್ಶನ ನೀಡಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಕೊಲ್ಕತ್ತಾದಲ್ಲಿ ನಡೆದರೆ, ದ್ವಿತೀಯ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಇನ್ನು ಮೂರನೇ ಪಂದ್ಯ ರಾಜ್‌ ಕೋಟ್‌ನಲ್ಲಿ ಜರುಗಲಿದೆ. ನಾಲ್ಕನೇ ಪಂದ್ಯವನ್ನು ಪುಣೆಯಲ್ಲಿ ಆಯೋಜಿಸಲಾಗಿದೆ. ಸರಣಿಯ ಕೊನೆಯ ಮ್ಯಾಚ್‌ ಮುಂಬೈನಲ್ಲಿ ನಡೆಯಲಿದೆ. ಐದು ಪಂದ್ಯಗಳ ಟಿ-20 ಸರಣಿಯ ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಗೆ ಶುರುವಾಗಲಿವೆ. ಸಂಜೆ 6.30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಹಾಗಿದ್ರೆ, ಮೊಬೈಲ್‌ನಲ್ಲಿ ಈ ಪಂದ್ಯವನ್ನು ಎಲ್ಲಿ, ಹೇಗೆ ವೀಕ್ಷಿಸಬೇಕು? ಯಾವ ಟಿವಿಯಲ್ಲಿ ಲೈವ್ ವೀಕ್ಷಿಸಬೇಕು? ತಿಳಿಯಲು ಮುಂದೆ ಓದಿ.

ಇಂದು IND vs ENG ಟಿ-20 ಪಂದ್ಯ: ಡೆಡ್ಲಿ ಬೌಲರ್ ಶಮಿ ಕಂಬ್ಯಾಕ್.. ಹೀಗಿದೆ ತಂಡ!

ಐದು ಟಿ-20 ಪಂದ್ಯ ಮತ್ತು ಮೂರು ಏಕದಿನ ಪಂದ್ಯ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ-20 ಸರಣಿಯು ಜನವರಿ 22ರಂದು (ಇಂದು) ಪ್ರಾರಂಭವಾಗಲಿದೆ. ಮೊದಲ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದೆ. ಈ ಮ್ಯಾಚ್ ಸಂಜೆ 7 ಗಂಟೆಗೆ ಶುರುವಾಗಲಿದೆ. ಈ ಸರಣಿಯಲ್ಲಿ ಐದು ಟಿ-20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಇಂಗ್ಲೆಂಡ್ ಟಿ-20 ಪಂದ್ಯದ ಲೈವ್ ಸ್ಟ್ರೀಮಿಂಗ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಮತ್ತು ಸ್ಟಾರ್ ಸ್ಪೋರ್ಟ್ಸ್ 1 HD/SD, ಸ್ಟಾರ್ ಸ್ಪೋರ್ಟ್ಸ್ 2 HD/SD ನಲ್ಲಿ ನೇರ ಪ್ರಸಾರವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಹಿಂದಿ HD/SD ನಲ್ಲಿ ಹಿಂದಿ ಕಾಮೆಂಟರಿ ಲಭ್ಯವಿದೆ.

ಭಾರತ ಮತ್ತು ಇಂಗ್ಲೆಂಡ್ ಟಿ-20 ಸರಣಿಯ ವೇಳಾಪಟ್ಟಿ

  • ಮೊದಲ ಟಿ-20: ಜನವರಿ 22 ರಂದು ಸಂಜೆ 7 ಗಂಟೆಗೆ - ಕೋಲ್ಕತ್ತಾ
  • ಎರಡನೇ ಟಿ-20: ಜನವರಿ 25 ರಂದು ಸಂಜೆ 7 ಗಂಟೆಗೆ - ಚೆನ್ನೈ
  • ಮೂರನೇ ಟಿ-20: ಜನವರಿ 28 ರಂದು ಸಂಜೆ 7 ಗಂಟೆಗೆ - ರಾಜ್‌ಕೋಟ್‌
  • ನಾಲ್ಕನೇ ಟಿ-20: ಜನವರಿ 31 ರಂದು ರಾತ್ರಿ 7 ಗಂಟೆಗೆ - ಪುಣೆ
  • ಐದನೇ ಟಿ-20: ಫೆಬ್ರವರಿ 2 ರಂದು ಸಂಜೆ 7 ಗಂಟೆಗೆ - ಮುಂಬೈ

ಈ ಸುದ್ದಿ ಓದಿದ್ದೀರಾ?: ಇಂದು Samsung Galaxy S25 ಸರಣಿ ಲಾಂಚ್; ಧೂಳೆಬ್ಬಿಸಲಿವೆ 3 ಹೊಸ ಫೋನ್.. ಬೆಲೆ, ವಿಶೇಷತೆಗಳೇನು ಗೊತ್ತಾ?

ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿಯ ವೇಳಾಪಟ್ಟಿ

  • ಮೊದಲನೇ ಏಕದಿನ ಪಂದ್ಯ: ಫೆಬ್ರವರಿ 6 ರಂದು ಮಧ್ಯಾಹ್ನ 1.30 ಗಂಟೆಗೆ - ನಾಗ್ಪುರ
  • ಎರಡನೇ ಏಕದಿನ ಪಂದ್ಯ: ಫೆಬ್ರವರಿ 9 ರಂದು ಮಧ್ಯಾಹ್ನ 1.30 ಗಂಟೆಗೆ - ಕಟಕ್‌
  • ಮೂರನೇ ಏಕದಿನ ಪಂದ್ಯ: ಫೆಬ್ರವರಿ 12 ರಂದು ಮಧ್ಯಾಹ್ನ 1.30 ಗಂಟೆಗೆ - ಅಹಮದಾಬಾದ್‌

ಮೊಬೈಲ್‌ನಲ್ಲಿ ಪಂದ್ಯ ವೀಕ್ಷಣೆ ಹೇಗೆ, ಎಲ್ಲಿ?

ಭಾರತ ಮತ್ತು ಇಂಗ್ಲೆಂಡ್ ಟಿ-20 ಸರಣಿಯ ಪ್ರಸಾರ ಹಕ್ಕುಗಳು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ (Disney Plus Hotstar) ಪಾಲಾಗಿವೆ. ನೀವು ಮೊಬೈಲ್‌ನಲ್ಲಿ ಈ ಪಂದ್ಯವನ್ನು ವೀಕ್ಷಿಸಬಹುದು. ನೀವು ಈ ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ಡೌನ್‌ಲೋಡ್ ಮಾಡಿದ ಬಳಿಕ, ನಿಮ್ಮ ಮೊಬೈಲ್ ನಂಬರ್‌ನೊಂದಿಗೆ ಲಾಗಿನ್ ಮಾಡಬೇಕು.

ಹಂತ 1: ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ Disney + Hotstar ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ 2: ಬಳಿಕ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ ಅಪ್ಲಿಕೇಶನ್ ಓಪನ್ ಮಾಡಿ.
ಹಂತ 3: ನಿಮ್ಮ ಮೊಬೈಲ್ ನಂಬರ್ ಮತ್ತು OTP ಸಹಾಯದಿಂದ ಲಾಗಿನ್ ಮಾಡಿ.
ಹಂತ 4: ಮೇಲ್ಭಾಗದಲ್ಲಿ ಭಾರತ ಮತ್ತು ಇಂಗ್ಲೆಂಡ್ ಟಿ-20 ಸರಣಿಯ ಚಿತ್ರ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಹಂತ 5: 'ಸ್ಪೋರ್ಟ್ಸ್' ಟ್ಯಾಬ್ ಟ್ಯಾಪ್ ಮಾಡುವ ಮೂಲಕ ನೀವು ಭಾರತ ಮತ್ತು ಇಂಗ್ಲೆಂಡ್ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.

ಟಿವಿಯಲ್ಲಿ ಟಿ-20 ಪಂದ್ಯ ವೀಕ್ಷಣೆ ಹೇಗೆ?

ನೀವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿಭಾರತ ಮತ್ತು ಇಂಗ್ಲೆಂಡ್ ಟಿ-20 ಪಂದ್ಯಗಳ ನೇರ ಪ್ರಸಾರ ವೀಕ್ಷಿಸಬಹುದು. ಸ್ಟಾರ್ ಸ್ಪೋರ್ಟ್ಸ್ ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪಂದ್ಯವನ್ನು ನೇರ ಪ್ರಸಾರ ಮಾಡಲಿದೆ. ಇಂಗ್ಲಿಷ್ ಕಾಮೆಂಟರಿ ಸ್ಟಾರ್ ಸ್ಪೋರ್ಟ್ಸ್ 1 HD/SD ಮತ್ತು ಸ್ಟಾರ್ ಸ್ಪೋರ್ಟ್ಸ್ 2 HD/SD ನಲ್ಲಿ ಇರುತ್ತದೆ. ಆದರೆ, ಸ್ಟಾರ್ ಸ್ಪೋರ್ಟ್ಸ್ ಹಿಂದಿ HD/SD ನಲ್ಲಿ ಹಿಂದಿ ಕಾಮೆಂಟರಿ ಇರಲಿದೆ.

ಭಾರತ ಟಿ-20 ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ರೆಡ್ಡಿ, ಅಕ್ಷರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್ ಮತ್ತು ಧ್ರುವ್ ಜುರೆಲ್ (ವಿಕೆಟ್‌ ಕೀಪರ್).

ಇಂಗ್ಲೆಂಡ್ ಟಿ-20 ತಂಡ

ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಫಿಲಿಪ್ ಸಾಲ್ಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಜಾಕೋಬ್ ಬಿಥೆಲ್, ಜೇಮಿ ಓವರ್‌ಟನ್, ಲಿಯಾಮ್ ಲಿವಿಂಗ್‌ಸ್ಟನ್​, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಆದಿಲ್ ರಶೀದ್ ಮತ್ತು ಗಸ್ ಅಟ್ಕಿನ್ಸನ್.

Best Mobiles in India

English summary
IND vs ENG 1st T20I Live Streaming: When and where to watch India vs England Live on TV and online
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+