ಆಪಲ್ 'ಐಫೋನ್'ನಲ್ಲಿ ರಹಸ್ಯವಾಗಿರುವ ಟ್ರಿಕ್ಸ್‌ಗಳು ಯಾವುವು ಗೊತ್ತೇ?
ಐಫೋನ್ ಮಾಲಿಕರು ಯಾವಾಗಲು 'ಸೆಲ್ ಫೋನ್' ಮಾರುಕಟ್ಟೆಯಲ್ಲಿ ಡಾಮಿನೇಟ್. ಹೊಸದಾಗಿ ಐಫೋನ್ ಕೊಂಡರೂ, 1 ವರ್ಷ ಐಫೋನ್ ಬಳಸಿದರೂ ಸಹ ಐಫೋನ್ ಬಳಕೆದಾರರು ಮಾತ್ರ ಐಫೋನ್‌ನಲ್ಲಿನ ಸಿಕ್ರೇಟ್ ಟ್ರಿಕ್ಸ್‌ಗಳನ್ನು ತಿಳಿಯುವಲ್ಲಿ ಎಲ್ಲರೂ ಸಹ ಫೇಲ್ ಆಗುತ್ತಾರೆ.
ಐಫೋನ್ ಇದುವರೆಗೂ ಸಹ ತನ್ನ ಬಳಕೆದಾರರಿಗೆ ಬಳಕೆಯಲ್ಲಿನ ಕೆಲವು ಅದ್ಭುತ ರಹಸ್ಯ ಟಿಪ್ಸ್‌ಗಳನ್ನು ಎಲ್ಲಿಯೂ ತಿಳಿಸಿಲ್ಲ. ಆದರೆ ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ಐಫೋನ್(iPhone) ಬಳಕೆಯಲ್ಲಿನ ಅದ್ಭುತ ರಹಸ್ಯ ಟ್ರಿಕ್ಸ್‌ಗಳನ್ನು ನೀಡಲಾಗುತ್ತಿದೆ. ಐಫೋನ್ ಬಳಕೆದಾರರು ಈ ಟಿಪ್ಸ್‌ಗಳಿಂದ ಬಳಕೆಯಲ್ಲಿ ಹೆಚ್ಚು ಸಾಮರ್ಥ್ಯ ಫೀಚರ್‌ನೊಂದಿಗೆ, ಆಕರ್ಷಕವಾಗಿ ಉತ್ತಮ ಅನುಭವ ಪಡೆಯಬಹುದು. ಲೇಖನದ ಕೆಳಗಿನ ಸ್ಲೈಡರ್ ಕ್ಲಿಕ್ಕಿಸಿ ಟ್ರಿಕ್ಸ್‌ಗಳನ್ನು ತಿಳಿಯಿರಿ.
ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್ ನಡುವಿನ ಸಣ್ಣ ಬ್ಲಾಕ್ ಹೋಲ್ ರಹಸ್ಯ ಇಲ್ಲಿದೆ

1
ಕಣ್ಣುಗಳು ಆಯಾಸವಾಗಿರುವ ಫೀಲ್ ಆಗುತ್ತಿದೆಯೇ? ಐಫೋನ್‌ನಲ್ಲಿರುವ ಮೆಸೇಜ್‌ಗಳನ್ನು, ಅಥವಾ ಇತರೆ ಯಾವುದೇ ಟೆಕ್ಸ್ಟ್‌ಗಳನ್ನು ಓದಲು ಆಗುತ್ತಿಲ್ಲವೇ? ಹಾಗಾದ್ರೆ ಐಫೋನ್‌ನಲ್ಲಿ ಟೆಕ್ಸ್ಟ್ ಅನ್ನು ರೀಡ್ ಮಾಡುವ ಫೀಚರ್ ಅನ್ನು ಹೊಂದಬಹುದು. ಜಸ್ಟ್ ಹಾಗೆ 'Speak' ಬಟನ್ ಒತ್ತಿದರೆ ಸಾಕು ಮೆಸೇಜ್ ರೀಡ್ ನಿಮಗೆ ಆಡಿಯೋದಲ್ಲಿ ಕೇಳುತ್ತದೆ. ಈ ಫೀಚರ್‌ಗಾಗಿ Settings>>General>Tap Accessibility>>Turn on Speak Selection Feature. ನಂತರದಲ್ಲಿ ಟೆಕ್ಸ್ಟ್ ಸೆಲೆಕ್ಟ್ ಮಾಡಿದಾಗಲೆಲ್ಲ 'Speak' ಫೀಚರ್ ಪ್ರದರ್ಶನವಾಗುತ್ತದೆ.

2
ಐಫೋನ್ ಬಳಸುವಲ್ಲಿ ಉತ್ತಮ ಅನುಭವಕ್ಕಾಗಿ ವಿವಿಧ ಕಾಂಟ್ಯಾಕ್ಟ್‌ಗಳಿಗಾಗಿ ವಿವಿಧ ರೀತಿಯ ವೈಬ್ರೇಶನ್ ಪ್ಯಾಟರ್ನ್ ವ್ಯವಸ್ಥೆಗೊಳಿಸಬಹುದಾಗಿದೆ. ಇತರರು ಮೆಸೇಜ್ ಮಾಡಿದಲ್ಲಿ ಅವರು ಯಾರು ಎಂದು ಫೋನ್ ನೋಡದೆ ತಿಳಿಯಬಹುದಾಗಿದ್ದು, ಈ ಫೀಚರ್‌ಗಾಗಿ Settings > Sounds > Ringtone > Vibration > Create New Vibration

3
ಪ್ರತಿ ಬಾರಿಯೂ ಇಂಟರ್ನೆಟ್ ಬಳಸಿದಾಗ ವೆಬ್ ಅಡ್ರೆಸ್ ಟೈಪ್ ಮಾಡುವಲ್ಲಿ ಕೀಬೋರ್ಡ್‌ನಲ್ಲಿ "." ಕ್ಲಿಕ್ ಮಾಡಿದಲ್ಲಿ ಹಲವು ಸಫ್ಫಿಕ್ಸೆಸ್ ಓಪನ್ ಆಗುತ್ತವೆ.

4
ಐಫೋಣ್ ಸ್ಕ್ರೀನ್‌ನಲ್ಲಿ ಇರುವ ಮಾಹಿತಿಯನ್ನು ಇತರರಿಗೆ ಕಳುಹಿಸಬೇಕೇ?ಹಾಗಾದ್ರೆ ಸ್ಕ್ರೀನ್‌ಶಾಟ್ ತೆಗೆಯಲು 'ಹೋಮ್ ಬಟನ್' ಮತ್ತು 'ಆನ್/ಆಫ್' ಬಟನ್ ಅನ್ನು ಒಮ್ಮೆಯೇ ಪ್ರೆಸ್ ಮಾಡಿ.

5
ಐಫೋನ್‌ನಲ್ಲಿ ಇಮೇಲ್ ಬಳಸುವ ಉತ್ತಮ ಅನುಭವಕ್ಕಾಗಿ, ನಿಮ್ಮ ಇಮೇಲ್‌ನ ಎಲ್ಲಾ ಡ್ರಾಫ್ಟ್‌ಗಳನ್ನು ಒಮ್ಮೆಯೇ ತೆಗೆಯಲು "Compose" ಐಕಾನ್ ಅನ್ನು ದೀರ್ಘಕಾಲ ಪ್ರೆಸ್ ಮಾಡಿ.

6
ಹೆಚ್ಚು ಬಾರಿ ಬಳಸುವ ಒಂದೇ ರೀತಿಯ ಟೆಕ್ಸ್ಟ್‌ಗಳನ್ನು ಶಾರ್ಟ್‌ಕಟ್ ಕ್ರಿಯೇಟ್ ಮಾಡಿ. ಇದರಿಂದ ಪ್ರತಿ ಬಾರಿ ಟೈಪಿಸುವ ಅಗತ್ಯ ತಪ್ಪಿಸಬಹುದು. Settings > General > Keyboard > Shortcuts > Add New Shortcut.

7
ಸೆಲ್ಫಿ ಗೇಮ್‌ಗೆ ಸೂಪರ್ ಟಿಪ್ಸ್. ನಿಮ್ಮ ಐಫೋನ್‌ನಲ್ಲಿ ಕ್ಯಾಮೆರಾ ಆಪ್ ಓಪನ್ ಮಾಡಿ ವಾಲ್ಯೂಮ್ ಬಟನ್ ಅನ್ನು ಫೋಟೋ ಕ್ಲಿಕ್ಕಿಸಲು ಬಳಸಬಹುದಾಗಿದೆ.

8
ಕೆಲವು ಪದಗಳನ್ನ ಹೇಗೆ ಉಚ್ಚರಿಸುವುದು ಎಂದು ತಿಳಿಯದಿದ್ದಲ್ಲಿ, ಸಿರಿ ನಿಮಗೆ ತರಬೇತಿ ನೀಡುತ್ತದೆ. ಅಲ್ಲದೇ ಮಸೇಜ್‌ಗಳನ್ನು ಸಹ ಸಿರಿ ಇಂದಲೇ ಕಳುಹಿಸಬಹುದು.

9
ನಿಮ್ಮ ಐಫೋನ್ ಒಂದಾದ ನಂತರ ಹಲವು ಫೋಟೋಗಳನ್ನ ತೆಗೆಯಬಹುದು. ಆದರೆ ಕ್ಯಾಮೆರಾ ಆಪ್‌ನಲ್ಲಿ ಕ್ಯಾಪ್ಚರ್ ಬಟನ್ ಕೆಳಗೆ ಟ್ಯಾಪ್ ಮಾಡಿದರೆ ಖಂಡಿತ ಉತ್ತಮ ಶಾಟ್ ತೆಗೆಯುವಲ್ಲಿ ಮಿಸ್ ಆಗೋದೆ ಇಲ್ಲಾ.

10
ಟೆಕ್ಸ್ಟ್ ಮೆಸೇಜ್‌ಗಳನ್ನು ಹಾಗೆ ಒಮ್ಮೆ ಎಡಭಾಗಕ್ಕೆ ಸ್ಲೈಡ್ ಮಾಡಿದರೆ, ಪ್ರತಿ ಮೆಸೇಜ್‌ಗಳ ನಿಖರ ಸಮಯವನ್ನು ತಿಳಿಯಬಹುದು.


Click it and Unblock the Notifications