ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವಿನ ಸಣ್ಣ ಬ್ಲಾಕ್‌ ಹೋಲ್‌ ರಹಸ್ಯ ಏನು ಗೊತ್ತೇ?

By Staff
|

ನೀವು ಐಫೋನ್‌ ಬಳಸುತ್ತಿರಬಹುದು. ಆದರೆ ಬಳಕೆ ಮಾಡಲು ಪ್ರಾರಂಭಿಸಿದ ದಿನದಿಂದಲೂ ಸಹ ಆಪಲ್‌ ಫ್ಲಾಗ್‌ಶಿಪ್‌ನ ನಿಮ್ಮ ಐಫೋನ್ ಬಗ್ಗೆ ನಿಮಗೆ ತಿಳಿಯದ ಎಷ್ಟೋ ವಿಷಯಗಳು ಇರುತ್ತದೆ. ಹೌದು, ನಿಮಗೆ ತಿಳಿಯದ ಎಷ್ಟೋ ಫೀಚರ್‌ಗಳು ಐಫೋನ್‌ನಲ್ಲಿ ಇವೆ. ಐಫೋನ್‌ ಕ್ಯಾಮೆರಾಗೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಐಫೋನ್‌ ಬಳಕೆದಾರರಾದ ನೀವು ಎಂದಾದರೂ ಐಫೋನ್ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವೆ ಇರುವ ಸಣ್ಣ ಕಪ್ಪು ಹೋಲ್‌(Black Hole) ಅನ್ನು ಗಮನಿಸಿದ್ದೀರಾ? ಖಂಡಿತ ಸಾಧ್ಯವಿಲ್ಲ ಎನಿಸುತ್ತೆ. ಗಮನಿಸಿದ್ದರೂ ಸಹ ಬ್ಲ್ಯಾಕ್ ಹೋಲ್‌ ಬಗೆಗಿನ ಸಂಶಯಾತ್ಮಕ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿರುತ್ತದೆ. ಆದರೆ ಆ ಸಣ್ಣ ಬ್ಲ್ಯಾಕ್‌ ಹೋಲ್‌ ಏನು ಎಂದು ನಾವು ನಿಮಗೆ ತಿಳಿಸುತ್ತಿದ್ದೇವೆ. ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಐಫೋನ್‌ನಲ್ಲಿ ಸಣ್ಣ ಬ್ಲ್ಯಾಕ್‌ ಹೋಲ್‌

ಐಫೋನ್‌ನಲ್ಲಿ ಸಣ್ಣ ಬ್ಲ್ಯಾಕ್‌ ಹೋಲ್‌

ಅಂದಹಾಗೆ ಐಫೋನ್ 5 ವರೆಗೂ ಸಹ ಎಲ್ಲಾ ಐಫೋನ್‌ಗಳ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವೆ ಬ್ಲ್ಯಾಕ್‌ ಹೋಲ್‌ ಇತ್ತು. ಆ ಬ್ಲ್ಯಾಕ್‌ ಹೋಲ್‌ ಅಲ್ಲಿ ಏಕಿತ್ತು ಮತ್ತು ಬ್ಲ್ಯಾಕ್‌ ಹೋಲ್‌ ಏನು ಎಂದು ಗೊತ್ತೇ? ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಸಣ್ಣ ಕಪ್ಪು ಹೋಲ್‌?

ಸಣ್ಣ ಕಪ್ಪು ಹೋಲ್‌?

ಸಣ್ಣ ಕಪ್ಪು ಹೋಲ್‌ ಬೇಸಿಕಲಿ ಮೈಕ್ರೋಫೋನ್ ಎಂದು ಓದಿರುತ್ತೀರಿ. ಟೆಕ್ನಿಕಲಿ ಹೇಳುವುದಾದರೆ ಇದು ಮೈಕ್ರೋಫೋನ್‌ ಅಲ್ಲ. ಇದು ನಿಮ್ಮ ಧ್ವನಿಯನ್ನು ಕೇಳಿಸಿಕೊಳ್ಳುತ್ತದೆ ಹಾಗೂ ಗದ್ದಲ ನಿವಾರಣೆ ಮಾಡುತ್ತದೆ.

ಬ್ಯಾಗ್ರೌಂಡ್‌ ಗದ್ದಲ ನಿವಾರಣೆ

ಬ್ಯಾಗ್ರೌಂಡ್‌ ಗದ್ದಲ ನಿವಾರಣೆ

ಐಫೋನ್‌ನ ಕ್ಯಾಮೆರಾ ಮತ್ತು ಫ್ಲ್ಯಾಶ್‌ ನಡುವೆ ಇರುವ ಕಪ್ಪು ಹೋಲ್‌ ಮೈಕ್ರೋಫೋನ್ ನಿಮ್ಮ ಸುತ್ತಮುತ್ತಲು ಇರುವ ಬ್ಯಾಗ್ರೌಂಡ್ ಧ್ವನಿಯನ್ನು ನಿವಾರಣೆ ಮಾಡಿ ನೀವು ಕರೆ ಮಾಡಿರುವ ಚಂದಾದಾರರಿಗೆ ನಿಮ್ಮ ಸ್ಪಷ್ಟ ಧ್ವನಿಯನ್ನು ಕೇಳುವಂತೆ ಮಾಡುತ್ತದೆ.

ಕಪ್ಪು ಹೋಲ್‌ ಉಪಯೋಗವೇನು?

ಕಪ್ಪು ಹೋಲ್‌ ಉಪಯೋಗವೇನು?

ಕಪ್ಪು ಹೋಲ್‌ ನಿಮ್ಮ ಧ್ವನಿಯಲ್ಲಿ ಯಾವುದೇ ಫಿಲ್ಲರ್‌ ಇಲ್ಲದಂತೆ ರೆಕಾರ್ಡ್‌ ಮಾಡುತ್ತದೆ. ಆಪಲ್‌ ಸಿರಿಯು ನಿಮ್ಮ ವಾಯ್ಸ್‌ ಅನ್ನು ನಿಖರವಾಗಿ ಕೇಳಲು ಮತ್ತು HD ವೀಡಿಯೊ ರೆಕಾರ್ಡ್‌ ಮಾಡಲು ಸಹಾಯ ಮಾಡುತ್ತದೆ.

ಐಫೋನ್‌ನಲ್ಲಿ  3 ಮೈಕ್ರೋಫೋನ್‌

ಐಫೋನ್‌ನಲ್ಲಿ 3 ಮೈಕ್ರೋಫೋನ್‌

ಅಂದಹಾಗೆ ಐಫೋನ್‌ನಲ್ಲಿ 3 ಮೈಕ್ರೋಫೋನ್‌ಗಳಿವೆ. ಐಫೋನ್‌ನ ಬಾಟಮ್‌ನಲ್ಲಿ, ಐಫೋನ್‌ ಹಿಂದೆ ಮತ್ತು ಐಫೋನ್‌ನ ಮೇಲ್ಭಾಗದ ಫ್ರಂಟ್‌ ಸ್ಪೀಕರ್‌ ಹತ್ತಿರ ಒಟ್ಟಾರೆ ಮೂರು ಮೈಕ್ರೋಫೋನ್‌ಗಳು ಇವೆ. ಆದರೆ ಇವುಗಳು ಸಾಧಾರಣ ಫೋನ್‌ನೊಂದಿಗೆ ಸಂಭಾಷಣೆ ನಡೆಸುವ ವೇಳೆ ಆಕ್ಟಿವೇಟ್‌ ಆಗುವುದಿಲ್ಲ.

ಮೈಕ್ರೋಫೋನ್ ಅಳವಡಿಕೆಯ ಉದ್ದೇಶ

ಮೈಕ್ರೋಫೋನ್ ಅಳವಡಿಕೆಯ ಉದ್ದೇಶ

ಐಫೋನ್‌ ಹಿಂದೆ ಮೈಕ್ರೋಫೋನ್ ಅನ್ನು ಅಳವಡಿಸಲು ಕಾರಣವೆಂದರೆ, 'ಸ್ಟೀರಿಯೊ ಆಡಿಯೋ ರೆಕಾರ್ಡಿಂಗ್‌ ಅನ್ನು ವೀಡಿಯೊ ರೆಕಾರ್ಡಿಂಗ್‌ ವೇಳೆ ನಿರ್ವಹಿಸಲು ಅಳವಡಿಸಲಾಗಿದ್ದು, ಇದು ಸ್ಟೀರಿಯೊ ಸೌಂಡ್‌ ಸಿಸ್ಟಮ್‌ ಪ್ಲೇ ಮಾಡಿದಾಗ ಉತ್ತಮ ಆಡಿಯೋ ನೀಡುತ್ತದೆ".

 3 ಮೈಕ್ರೋಫೋನ್‌ ಏಕೆ?

3 ಮೈಕ್ರೋಫೋನ್‌ ಏಕೆ?

ಐಫೋನ್‌ ಕೆಳಭಾಗದಲ್ಲಿ ಮತ್ತು ಫ್ರಂಟ್‌ ಮೈಕ್ರೋಫೋನ್‌ ಏಕೆ ಎಂದು ಕುತೂಹಲ ಪ್ರಶ್ನೆ ಇರಬಹುದು. ಅಂದಹಾಗೆ ಈ ಎರಡು ಮೈಕ್ರೋಫೋನ್‌ಗಳು ಐಫೋನ್‌ ಬಳಕೆದಾರರ ಸ್ವಂತ ಧ್ವನಿ ಮತ್ತು ಕೇಳಲು ಬಳಕೆಯಾಗುತ್ತವೆ. ಹಿಂದಿನ ಮೈಕ್ರೋಫೋನ್‌ ವೀಡಿಯೊ ರೆಕಾರ್ಡಿಂಗ್‌ಗಾಗಿ ಮತ್ತು ಡಿಜಿಟಲಿ ಬ್ಯಾಗ್ರೌಂಡ್ ಧ್ವನಿಯನ್ನು ಫೋನ್ ಕರೆಯಲ್ಲಿ ಇದ್ದಾಗ ಅಥವಾ ಫೇಸ್‌ ಟೈಕ್‌ ಕರೆಯಲ್ಲಿದ್ದಾಗ ರಿಮೂವ್‌ ಮಾಡಲು ಬಳಕೆಯಾಗುತ್ತವೆ.

ಮೈಕ್ರೋಫೋನ್‌ ಬಳಕೆ

ಮೈಕ್ರೋಫೋನ್‌ ಬಳಕೆ

ವಿಶೇಷ ಅಂದ್ರೆ ಮೈಕ್ರೋಫೋನ್‌ ಫೋಟೋ ಕ್ಲಿಕ್ಕಿಸಿದಾಗ ಪಿಕ್ಸೆಲ್‌ ಧ್ವನಿಯನ್ನು ಸಹ ರಿಮೂವ್‌ ಮಾಡುತ್ತದೆ.

Best Mobiles in India

Read more about:
English summary
Secret Behind A Tiny Black Hole Between Your iPhone Camera and Flash. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X