IPL 2024: ಮೊಬೈಲ್‌ನಲ್ಲೇ RCB ಮತ್ತು CSK ಮ್ಯಾಚ್ ಲೈವ್ ನೋಡಲು ಹೀಗೆ ಮಾಡಿ!
ಕ್ರಿಕೆಟ್ ಪ್ರಿಯರು ಬಹಳ ಕುತೂಹಲದಿಂದ ಕಾಯುತ್ತಿರುವ ಐಪಿಎಲ್ 2024 ಗೆ (IPL 2024) ಇಂದು ಚಾಲನೆ ಸಿಗಲಿದೆ. ಆರಂಭಿಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿವೆ. ಇನ್ನು ಕ್ರಿಕೆಟ್ ಪ್ರಿಯರು ಮೊಬೈಲ್ ಮೂಲಕವೇ ಉಚಿತವಾಗಿ ಮ್ಯಾಚ್ ಅನ್ನು ನೇರ ವೀಕ್ಷಣೆ ಮಾಡಬಹುದಾಗಿದೆ.
ಹೌದು, IPL ಅಂದ್ರೆ, ಕ್ರಿಕೆಟ್ ಆಸಕ್ತರಿಗೆ ಹಬ್ಬದ ಸಂಭ್ರಮವೇ ಸರಿ. ಇನ್ನು ಐಪಿಎಲ್ 2024 ಉದ್ಘಾಟನಾ ಕಾರ್ಯಕ್ರಮವು ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಹಾಗೂ ಗಾಯಕ ಸೋನು ನಿಗಮ್ ಸೇರಿದಂತೆ ಅನೇಕ ಬಾಲಿವುಡ್ ನಟ-ನಟಿಯರು ಭಾಗವಹಿಸಲಿದ್ದಾರೆ. ಹಾಗಾದರೆ ಐಪಿಎಲ್ ಮ್ಯಾಚ್‌ಗಳನ್ನು ವೀಕ್ಷಿಸುವುದು ಹೇಗೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

IPL 2024 ಲೈವ್ ಸ್ಟ್ರೀಮಿಂಗ್
ಐಪಿಎಲ್ 2024 ರ ಉದ್ಘಾಟನಾ ಕಾರ್ಯಕ್ರಮವು ಇಂದು ಸಂಜೆ 6:30 ಗಂಟೆಗೆ ಚೆನ್ನೈನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಈ ಉದ್ಘಾಟನಾ ಕಾರ್ಯಕ್ರಮವನ್ನು ಆಸಕ್ತ ಅಭಿಮಾನಿಗಳು ಜಿಯೋ ಸಿನಿಮಾ (JioCinema) ದಲ್ಲಿ ಉಚಿತವಾಗಿ ಲೈವ್ ಸ್ಟ್ರೀಮಿಂಗ್ ಮಾಡಬಹುದಾಗಿದೆ. ಅಂದಹಾಗೆ ಜಿಯೋ ಸಿನಿಮಾ ಆಪ್ ಹಾಗೂ ವೆಬ್‌ಸೈಟ್‌ನಲ್ಲಿಯೂ ಲಭ್ಯ ಇದೆ.

ಇನ್ನು ಟಿವಿ ಮೂಲಕ ವೀಕ್ಷಿಸಲು ಬಯಸುವ ಅಭಿಮಾನಿಗಳು, ಸ್ಟಾರ್ ಸ್ಪೋರ್ಟ್ಸ್ 1 ಚಾನೆಲ್, ಸ್ಟಾರ್ ಸ್ಪೋರ್ಟ್ಸ್ 2 ಚಾನೆಲ್, ಸ್ಟಾರ್ ಸ್ಪೋರ್ಟ್ಸ್ 3 ಚಾನೆಲ್, ಸ್ಟಾರ್ ಸ್ಪೋರ್ಟ್ಸ್ 1 ಹೆಚ್‌ಡಿ ಚಾನೆಲ್, ಸ್ಟಾರ್ ಸ್ಪೋರ್ಟ್ಸ್ 2 ಹೆಚ್‌ಡಿ ಚಾನೆಲ್ ಮೂಲಕ ಸಹ ವೀಕ್ಷಿಸಬಹುದು.
IPL 2024 ಉದ್ಘಾಟನಾ ಪಂದ್ಯ
ಐಪಿಎಲ್ 2024 ರ ಉದ್ಘಾಟನಾ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವೆ ನಡೆಯಲಿದೆ. ಐಪಿಎಲ್‌ನ ಆರಂಭಿಕ ಪಂದ್ಯವು ರಾತ್ರಿ 8 ಗಂಟೆಗೆ ಶುರುವಾಗಲಿದೆ.
ಜಿಯೋ ಟೆಲಿಕಾಂನ ಕೆಲವು ಕ್ರಿಕೆಟ್ ಪ್ಯಾಕ್ ರೀಚಾರ್ಜ್ ಯೋಜನೆಗಳು ಐಪಿಎಲ್ ಮ್ಯಾಚ್ ವೀಕ್ಷಿಸಲು ಪೂರಕ ಎನಿಸುತ್ತವೆ. ಜಿಯೋ 444ರೂ. ಈ ರೀಚಾರ್ಜ್ ಯೋಜನೆಯು ಕ್ರಿಕೆಟ್ ಪ್ಯಾಕ್ ಗಳಲ್ಲಿ ಒಂದಾಗಿದ್ದು, ಮೊಬೈಲ್ ಮೂಲಕ ಐಪಿಎಲ್ ನೋಡುವವರಿಗೆ ಇದು ಉತ್ತಮ ಎನ್ನಬಹುದು. ಇದ್ರಲ್ಲಿ ಒಟ್ಟು 60 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಿಗಲಿದ್ದು, ಹಾಗೆಯೇ ಒಟ್ಟು 100GB ಡೇಟಾ ಪ್ರಯೋಜನ ಲಭ್ಯ. ಇತರೆ ಯಾವುದೇ ಸೌಲಭ್ಯ ಇರಲ್ಲ.
ಅಲ್ಲದೇ ಜಿಯೋ 555ರೂ. ಇದು ಆಡ್ ಆನ್ ರೀಚಾರ್ಜ್ ಯೋಜನೆ ಆಗಿದೆ. ಇದ್ರಲ್ಲಿ ಒಟ್ಟು 55 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಿಗಲಿದ್ದು, ಹಾಗೆಯೇ 55GB ಡೇಟಾ ಪ್ರಯೋಜನ ಸಹ ಲಭ್ಯ. ಇನ್ನುಳಿದಂತೆ ಈ ಯೋಜನೆಯಲ್ಲಿ ಯಾವುದೇ ಅನಿಯಮಿತ ವಾಯಿಸ್ ಕರೆ, ಎಸ್‌ಎಮ್‌ಎಸ್ ಸೌಲಭ್ಯ ದುರೆಯುತ್ತವೆ.
ಹಾಗೆಯೇ ಜಿಯೋ 667ರೂ. ಇದು ಕ್ರಿಕೆಟ್ ಪ್ಯಾಕ್ ಆಗಿದ್ದು, ಈ ಯೋಜನೆಯು ಒಟ್ಟು 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಇನ್ನು ಇದು ಒಟ್ಟು 150GB ಡೇಟಾ ಪ್ರಯೋಜನ ನೀಡಲಿದೆ. ಇನ್ನುಳಿದಂತೆ ಈ ಪ್ಲ್ಯಾನಿನಲ್ಲಿ ಇತರೆ ಯಾವುದೇ ಸೌಲಭ್ಯ ಇರಲ್ಲ.
ಅದೇ ರೀತಿ ಜಿಯೋ 2878ರೂ. ಇದು ದುಬಾರಿ ಆಡ್ ಆನ್ ಡೇಟಾ ಯೋಜನೆ ಆಗಿದ್ದು, ಇದ್ರಲ್ಲಿ 2GB ಡೇಟಾ ಸೌಲಭ್ಯ ಸಿಗಲಿದೆ. ಇನ್ನು ಒಟ್ಟಾರೆ ಪೂರ್ಣ ಅವಧಿಗೆ 730GB ಡೇಟಾ ಬಳಕೆಗೆ ಸಿಗಲಿದೆ. ಇನ್ನು ಜಿಯೋದ ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ.


Click it and Unblock the Notifications








