Home
ಟೆಕ್ ನೌಕರಿ

SSLC Exam 2025: ಪ್ರವೇಶ ಪತ್ರ ಬಿಡುಗಡೆ.. ಈ ರೀತಿ ಸುಲಭವಾಗಿ ಡೌನ್‌ಲೋಡ್ ಮಾಡಿ

ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-1 (SSLC Exam 2025) ನಡೆಯಲಿದೆ. ಈ ಪರೀಕ್ಷೆಗೆ ವಿದ್ಯಾರ್ಥಿಗಳ ಪ್ರವೇಶ ಪತ್ರ (SSLC Exam Admit Card Released) ಬಿಡುಗಡೆ ಮಾಡಲಾಗಿದೆ. ನೀವು ಶಾಲಾ ಲಾಗಿನ್‌ ಮೂಲಕ ಪ್ರವೇಶ ಪತ್ರವನ್ನು ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಹಲವು ಸೂಚನೆಗಳನ್ನು ನೀಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಜಾಲತಾಣದಲ್ಲಿ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ. ಹಾಗಿದ್ರೆ, SSLC 2025 ಅಂತಿಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಎಸ್‌ಎಸ್‌ಎಲ್‌ಸಿ ಪರೀಕ್ಷೆ 2025ರ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಶಾಲೆಗಳು ತಮ್ಮ ಅಧಿಕೃತ ವೆಬ್‌ಸೈಟ್‌ಗಳಾದ sslc.karnataka.gov.in ಮತ್ತು kseab.karnataka.gov.in ಮೂಲಕ ಹಾಲ್ ಟಿಕೆಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಶಾಲಾ ಅಧಿಕಾರಿಗಳು ಶಾಲಾ ಕೋಡ್ ಮತ್ತು ಪಾಸ್‌ವರ್ಡ್ ಸೇರಿದಂತೆ ತಮ್ಮ ಲಾಗಿನ್‌ಗಳನ್ನು ಬಳಸಿಕೊಂಡು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಲಾಗಿದೆ. ಬಳಿಕ, ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲು ತಿಳಿಲಾಗಿದೆ. ಯಾವುದೇ ದೋಷಗಳನ್ನು ಸರಿಪಡಿಸುವುದು ಮಾರ್ಚ್ 17 ರವರೆಗೆ ಅವಕಾಶ ನೀಡಲಾಗಿದೆ.

SSLC Exam 2025: ಪ್ರವೇಶ ಪತ್ರ ಬಿಡುಗಡೆ.. ಈ ರೀತಿ ಸುಲಭವಾಗಿ ಡೌನ್‌ಲೋಡ್ ಮಾಡಿ

ಮಾ.21 ರಿಂದ ಏ.4 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-1

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ನಡೆಯಲಿವೆ. ಪ್ರತಿದಿನ ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ಪರೀಕ್ಷೆಗಳು ಜರುಗಲಿವೆ. ಪ್ರಥಮ ಭಾಷೆ, ಕೋರ್ ವಿಷಯಗಳು ಮತ್ತು ಜೆಟಿಎಸ್ ವಿಷಯಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ, ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿವೆ. ಎಂಎಸ್‌ಎಫ್‌ಕ್ಯೂ ವಿಷಯ ಪರೀಕ್ಷೆಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 12.15 ರವರೆಗೆ ಜರುಗಲಿವೆ.

SSLC Exam ಅಂತಿಮ ಪ್ರವೇಶ ಪತ್ರ ಡೌನ್‌ಲೋಡ್ ಮಾಡಲು ಹೀಗೆ ಮಾಡಿ!

ಹಂತ 1: ಮೊದಲು KSEAB ಅಧಿಕೃತ ವೆಬ್‌ಸೈಟ್ kseab.karnataka.gov.in ಗೆ ಭೇಟಿ ನೀಡಿ.

ಹಂತ 2: ಬಳಿಕ ಮುಖಪುಟದಲ್ಲಿರುವ ಎಸ್ಸೆಸ್ಸೆಲ್ಸಿ ಅಂತಿಮ ಹಾಲ್ ಟಿಕೆಟ್‌ 2025ಗಾಗಿ (ಪ್ರವೇಶ ಪತ್ರ) ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ಸಂಬಂಧಪಟ್ಟ ಇಲಾಖೆಗಳು ಅಥವಾ ಶಾಲಾ ಮುಖ್ಯಸ್ಥರು ಪೋರ್ಟಲ್‌ನಲ್ಲಿ ಶಾಲಾ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಬೇಕು.

ಹಂತ 4: ಆಗ ಎಲ್ಲಾ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರವು ಡಿಸ್ಪ್ಲೇ ಮೇಲೆ ಕಾಣಿಸುತ್ತದೆ.

ಹಂತ 5: ಎಸ್ಸೆಸ್ಸೆಲ್ಸಿ ಪ್ರವೇಶ ಪತ್ರ 2025 ಅನ್ನು ಪರಿಶೀಲಿಸಿ, ಸೇವ್ ಮಾಡಿ ಮತ್ತು ಡೌನ್‌ಲೋಡ್ ಮಾಡಿ.

ಹಂತ 6: ಡೌನ್‌ಲೋಡ್ ಮಾಡಿದ ಹಾಲ್‌ ಟಿಕೆಟ್‌ ಅನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತದೆ.

ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ಹಾಲ್ ಟಿಕೆಟ್‌ಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು. ಏಕೆಂದರೆ, ಪ್ರವೇಶ ಪತ್ರವಿಲ್ಲದೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ.

ಒಟ್ಟು 8,42,817 ವಿದ್ಯಾರ್ಥಿಗಳು

ಪ್ರಸಕ್ತ ಸಾಲಿನಲ್ಲಿ ಒಟ್ಟು 8,42,817 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಓದುತ್ತಿದ್ದಾರೆ. ಇದರಲ್ಲಿ 38,091 ಪುನರಾವರ್ತಿತ ಮತ್ತು 15,539 ಖಾಸಗಿ ಸೇರಿ 8,96,447 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 3,35,468 ಬಾಲಕರು ಮತ್ತು 3,78,389 ಬಾಲಕಿಯರು ಇದ್ದಾರೆ. ಹಾಗೆಯೇ ಐವರು ತೃತೀಯ ಲಿಂಗಿಗಳು ಇದ್ದಾರೆ. ರಾಜ್ಯದ 2,818 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ.

ಕನಿಷ್ಠ 35% ಅಂಕ ಪಡೆಯಬೇಕು

ಕೆಎಸ್‌ಇಎಬಿ ಎಸ್‌ಎಸ್‌ಎಲ್‌ಸಿ (10 ನೇ ತರಗತಿ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಭ್ಯರ್ಥಿಯು ಪ್ರತಿ ವಿಷಯದಲ್ಲೂ ಮತ್ತು ಒಟ್ಟಾರೆಯಾಗಿ ಕನಿಷ್ಠ 35 ರಷ್ಟು ಅಂಕಗಳನ್ನು ಪಡೆಯಬೇಕು. ವಿದ್ಯಾರ್ಥಿಗಳು ತಮ್ಮ ಎಸ್‌ಎಸ್‌ಎಲ್‌ಸಿ ಅಂಕಗಳಿಗೆ ಮಾರ್ಕ್ಸ್ ಜೊತೆಗೆ ಶ್ರೇಣಿಗಳನ್ನು ಪಡೆಯಲಿದ್ದಾರೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+