SSLC, PUC exam;ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್‌ಗಳನ್ನು ಬಳಕೆ ಮಾಡಿ!

|

ಇನ್ನೇನು ಕೆಲ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ಬರುತ್ತಿದ್ದು, ವಿದ್ಯಾರ್ಥಿಗಳು ಈಗಿನಿಂದಲೇ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ಶಾಲಾ-ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿ ಸಹ ನಡೆಯುತ್ತಿದ್ದು, ಇದು ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಜೀವನಕ್ಕೆ ಅನುಕೂಲ ಆಗಲಿದೆ. ಇದರ ನಡುವೆ ವಿದ್ಯಾರ್ಥಿಗಳು ಇನ್ನೂ ಸಹ ಹೆಚ್ಚಿನ ಅಂಕ ಗಳಿಸಿ ಉತ್ತಮ ಸ್ಥಾನ ಪಡೆಯಲು ಈ ಆಪ್‌ಗಳನ್ನು ಬಳಕೆ ಮಾಡಬಹುದಾಗಿದೆ.

ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್‌ಗಳನ್ನು ಬಳಕೆ ಮಾಡಿ!

ಹೌದು, ಕೊರೊನಾ ಹಿನ್ನೆಲೆ ಈಗಂತೂ ಬಹುಪಾಲು ಎಲ್ಲಾ ವಿದ್ಯಾರ್ಥಿಗಳು ಹಾಗೂ ಪೋಷಕರ ಬಳಿ ಸ್ಮಾರ್ಟ್‌ಫೋನ್‌ಗಳಿವೆ. ಹೀಗಾಗಿ ಸ್ಮಾರ್ಟ್‌ಫೋನ್‌ ಮೂಲಕವೇ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದ್ದು, ಅದರಂತೆ ವಿದ್ಯಾರ್ಥಿಗಳು ಪೂರ್ವಭಾವಿಯಾಗಿ ಪರೀಕ್ಷೆ ತಯಾರಿ ನಡೆಸಲು ಎವರ್‌ನೋಟ್‌, ಎಕ್ಸಾಮ್‌ ಕೌಂಟ್‌ಡೌನ್‌, ಗ್ರೇಡ್‌ ಅಪ್‌, ಮೈ ಸ್ಟಡಿ ಲೈಫ್‌, 2Do ಆಪ್‌ ಸೇರಿದಂತೆ ಇನ್ನಿತರೆ ಆಪ್‌ ಗಳನ್ನು ಬಳಕೆ ಮಾಡುವ ಮೂಲಕ ಪರೀಕ್ಷೆಯನ್ನು ಹೆಚ್ಚಿನ ಅಂಕ ಪಡೆಯಬಹುದಾಗಿದೆ.

ಎವರ್‌ನೋಟ್‌
ಎವರ್‌ನೋಟ್‌ ಆಲ್-ಇನ್-ಒನ್ ಪರೀಕ್ಷೆಯ ತಯಾರಿಕೆಗೆ ದೊಡ್ಡ ಪ್ಲಾಟ್‌ಫಾರ್ಮ್‌ ಆಗಿದ್ದು, ಇದು ಟೈಪ್ ಮಾಡಲು, ರೆಕಾರ್ಡ್ ಮಾಡಲು ಅಥವಾ ಛಾಯಾಚಿತ್ರ ಗಳನ್ನು ರಚಿಸಲು ಮತ್ತು ಸಿಂಕ್ ಮಾಡಲು ಅನುಮತಿಸುತ್ತದೆ. ಇನ್ನು ನೋಟ್ಸ್‌ ಅನ್ನು ವ್ಯವಸ್ಥಿತವಾಗಿ ಒಂದೇ ಸ್ಥಳದಲ್ಲಿ ಇರಿಸಿಕೊಳ್ಳಲು ಇದು ನಿಮಗೆ ಅನುಮತಿಸುತ್ತದೆ. ಅಧ್ಯಯನ ವಿಷಯಗಳನ್ನು ಮಲ್ಟಿಮೀಡಿಯಾ ಆಯ್ಕೆ ಮೂಲಕ ಇದರಲ್ಲಿ ಬಳಕೆ ಮಾಡಬಹುದಾಗಿದ್ದು, ಈ ಮೂಲಕ ವಿದ್ಯಾರ್ಥಿಗಳನ್ನು ಸೆಳೆಯುತ್ತದೆ. ಇನ್ನು ಈ ಆಪ್‌ ವಿದ್ಯಾರ್ಥಿಗಳಿಗೆ ಉಚಿತವಾಗಿದ್ದು, ಆಂಡ್ರಾಯ್ಡ್‌, ಐಓಎಸ್ ಬಳಕೆದಾರರಿಗೆ ಲಭ್ಯ.

ಎಕ್ಸಾಮ್‌ ಕೌಂಟ್‌ಡೌನ್
ಎಕ್ಸಾಮ್‌ ಕೌಂಟ್‌ಡೌನ್ ಎಂಬ ಹೆಸರೇ ವಿದ್ಯಾರ್ಥಿಗಳನ್ನು ಎಚ್ಚರಿಸುವ ಶಕ್ತಿ ಹೊಂದಿದೆ. ಈ ಆಪ್‌ ಪರೀಕ್ಷೆಗಳು ಮತ್ತು ಪರೀಕ್ಷಾ ದಿನಾಂಕವನ್ನು ಟ್ರ್ಯಾಕ್ ಮಾಡಲು ಸಹಕಾರಿಯಾಗಲಿದ್ದು, ಈ ಮೂಲಕ ನೀವು ಯಾವುದನ್ನು ಮರೆಯುವ ಹಾಗೆಯೇ ಇಲ್ಲ. ಈ ಮೂಲಕ ಭಯಮುಕ್ತರಾಗಿ ಬೇಕಾದ ಸಮಯದಲ್ಲಿ ಅಗತ್ಯಕ್ಕೆ ತಕ್ಕಂತೆ ಪರೀಕ್ಷಾ ಪೂರ್ವ ತಯಾರಿ ನಡೆಸಬಹುದಾಗಿದೆ. ಇದರೊಂದಿಗೆ ದೈನಂದಿನ ಕೌಂಟ್‌ಡೌನ್ ಜೊತೆಗೆ, ಪರೀಕ್ಷೆ ದಿನಾಂಕ ಹತ್ತಿರ ಬರುತ್ತಿದ್ದಂತೆ ನೋಟಿಫಿಕೇಶನ್‌ ಸಹ ನೀಡುತ್ತದೆ. ಹಾಗೆಯೇ ಈ ದಿನಾಂಕ ಹಾಗೂ ಸಮಯವನ್ನು ನಿಮ್ಮ ಸ್ನೇಹಿತರ ಜೊತೆಗೂ ಶೇರ್‌ ಮಾಡಿಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್‌ಗಳನ್ನು ಬಳಕೆ ಮಾಡಿ!

ಗ್ರೇಡ್‌ಅಪ್
ಗ್ರೇಡ್‌ಅಪ್ ಆಪ್‌ ಕೇವಲ ತರಗತಿಯಲ್ಲಿ ಕೂತು ಪಾಠ ಕೇಳುವ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಕೆಲಸ ಗಿಟ್ಟಿಸಿಕೊಳ್ಳಲು ಓದುತ್ತಿರುವ ನಿರುದ್ಯೋಗಿಗಳಿಗೂ ಇದು ಸಹಕಾರಿ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗಿಸುವ ಆಪ್‌ಗಳಲ್ಲಿ ಈ ಆಪ್‌ ಸಹ ಪ್ರಮುಖವಾಗಿದೆ. ಇನ್ನು ಈ ಆಪ್‌ ಮೂಲಕ ರೈಲ್ವೆ, ಎಸ್‌ಎಸ್‌ಸಿ, ಬ್ಯಾಂಕ್ ಪರೀಕ್ಷೆ, ಯುಪಿಎಸ್‌ಸಿ ಸೇರಿದಂತೆ ಇನ್ನಿತರೆ ಪ್ರಮುಖವಾದ ಎಲ್ಲಾ ಕೇಂದ್ರೀಯ ಪರೀಕ್ಷೆಗಳಿಗೆ ತಯಾರಿ ನಡೆಸಬಹುದಾಗಿದೆ. ಇನ್ನು ಪ್ರಮುಖವಾಗಿ ಈ ಆಪ್‌ನಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯ ಪಠ್ಯಗಳು ಲಭ್ಯ ಇವೆ.

ಮೈ ಸ್ಟಡಿ ಲೈಫ್‌
ಈ ಆಪ್‌ ಮೂಲಕ ನೀವು ಯಾವಾಗಲೂ ಜೊತೆಯಲ್ಲೇ ಕೊಂಡೊಯ್ಯುವ ಬುಕ್‌ಗೆ ವಿದಾಯ ಹೇಳಬಹುದು. ನೋಟ್‌ಬುಕ್ ಪ್ಲಾನರ್‌ಗೆ ಬದಲಿಯಾಗಿ ಈ ಆಪ್‌ ಕೆಲಸ ಮಾಡಲಿದ್ದು, ನಿಮ್ಮ ಶೈಕ್ಷಣಿಕ ಮತ್ತು ಸಾಮಾಜಿಕ ಜೀವನವನ್ನು ಸಮತೋಲನಗೊಳಿಸಲು ಇದು ಸಹಾಯ ಮಾಡುತ್ತದೆ. ಈ ಆಪ್ ನಲ್ಲಿ ವಿದ್ಯಾರ್ಥಿಗಳು ಸಂಕೀರ್ಣವಾದ ವೇಳಾಪಟ್ಟಿಗಳನ್ನು ಸುಲಭಗೊಳಿಸಿಕೊಳ್ಳಬಹುದು ಹಾಗೂ ವಿಷಯಗಳನ್ನು ವರ್ಗವಾರು ವಿಭಾಗಿಸಬಹುದು. ಜೊತೆಗೆ ಅಸೈನ್‌ಮೆಂಟ್‌ನ ಅಂತಿಮ ದಿನಾಂಕ ಅಥವಾ ಮುಂಬರುವ ಪರೀಕ್ಷೆ ದಿನಾಂಕವನ್ನು ಕಂಡುಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್‌ಗಳನ್ನು ಬಳಕೆ ಮಾಡಿ!

2Do ಆಪ್‌
2Do ಆಪ್‌ ಬಳಕೆದಾರರ ವಿದ್ಯಾಭ್ಯಾಸದ ಜೀವನವನ್ನು ಟ್ರ್ಯಾಕ್‌ ಮಾಡುತ್ತದೆ. ಯಾಕೆಂದರೆ ವಿದ್ಯಾರ್ಥಿಗಳು ಹಲವು ವಿಷಯಗಳನ್ನು ಒಮ್ಮೆಲೆ ಅಭ್ಯಾಸ ಮಾಡುವುದರಿಂದ ಎಲ್ಲವನ್ನು ಒಂದೇ ಸಮಯದಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟ. ಹೀಗಾಗಿ ಬಳಕೆದಾರರು ಯಾವ ಸಮಯದಲ್ಲಿ ಏನೇನು ಮಾಡಬೇಕು ಎಂಬ ಕಾರ್ಯಯೋಜನೆಗೆ ಅನುವು ಮಾಡಿಕೊಡುತ್ತದೆ. ಹಾಗೆಯೇ ಕೋರ್ಸ್‌, ಸಬ್ಜೆಕ್ಟ್‌, ಸ್ಟುಡೆಂಟ್‌ ಕ್ಲಬ್‌ ಸೇರಿದಂತೆ ಇನ್ನಿತರೆ ವರ್ಗಗಳನ್ನು ಇದು ನೀಡಲಿದ್ದು, ಯಾವಾಗ ಏನು ಮಾಡಬೇಕು ಎಂಬುದನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ.

Best Mobiles in India

English summary
SSLC and PUC exams are coming up in a few months and students are already making all kinds of preparations. Apart from this, students can use Evernote, Exam Countdown, Grade Up, My Study Life app for more study.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X