Home
ಟೆಕ್ ನೌಕರಿ

KEA VAO 2024 ತಾತ್ಕಾಲಿಕ ಫಲಿತಾಂಶ ಪ್ರಕಟ; ಜಿಲ್ಲಾವಾರು ಫಲಿತಾಂಶ ಹೀಗೆ ಚೆಕ್‌ ಮಾಡಿ!

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examinations Authority - KEA) ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ 2024 ರ ತಾತ್ಕಾಲಿಕ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶವನ್ನು ಹಾಗೂ ಜಿಲ್ಲಾವಾರು ಮೆರಿಟ್ ಲಿಸ್ಟ್‌ ಅನ್ನು ಆನ್‌ಲೈನ್‌ ಮೂಲಕ ಚೆಕ್ ಮಾಡಬಹುದು.

1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಕ್ಟೋಬರ್ 27, 2024 ರಂದು ಗ್ರಾಮ ಆಡಳಿತಾಧಿಕಾರಿ (VAO) ನೇಮಕಾತಿ ಪರೀಕ್ಷೆಯನ್ನು ನಡೆಸಿತ್ತು. ಅಭ್ಯರ್ಥಿಗಳು ಈಗ ಅಧಿಕೃತ cetonline.karnataka.gov.in ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶಗಳನ್ನು ಚೆಕ್ ಮಾಡಬಹುದು.

KEA VAO 2024 ತಾತ್ಕಾಲಿಕ ಫಲಿತಾಂಶ; ಜಿಲ್ಲಾವಾರು ಫಲಿತಾಂಶ ಹೀಗೆ ಚೆಕ್‌ ಮಾಡಿ!

ಹಾಗೆಯೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA)VAO 2024 ತಾತ್ಕಾಲಿಕ ಫಲಿತಾಂಶ ಹಾಗೂ VAO ತಾತ್ಕಾಲಿಕ ಜಿಲ್ಲಾವಾರು ಪಟ್ಟಿ ಸಹ ಪ್ರಕಟಿಸಿದೆ.

ವೈಯಕ್ತಿಕ ಫಲಿತಾಂಶ ಚೆಕ್‌ ಮಾಡಲು ಈ ಕ್ರಮ ಅನುಸರಿಸಿ :

* ಮೊದಲಿಗೆ KEA ಯ ಅಧಿಕೃತ ವೆಬ್‌ಸೈಟ್‌ಗೆ cetonline.karnataka.gov.in ಗೆ ಭೇಟಿ ನೀಡಿರಿ
* ನಂತರ ನೇಮಕಾತಿ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ
* ಬಳಿಕ ಅಲ್ಲಿ ಕಾಣುವ ಆಯ್ಕೆಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ 2024 ಮೇಲೆ ಕ್ಲಿಕ್‌ ಮಾಡಿ

* ತದ ನಂತರ ಅಲ್ಲಿ ಕಾಣುವ ಆಯ್ಕೆಗಳಲ್ಲಿ VAO ತಾತ್ಕಾಲಿಕ ಫಲಿತಾಂಶ ಲಿಂಕ್‌ ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ
* ಆಗ ಫಲಿತಾಂಶ ಚೆಕ್ ಮಾಡುವ ಪುಟ ತೆರೆದುಕೊಳ್ಳುತ್ತದೆ
* ಅಲ್ಲಿ ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್‌ ಹಾಗೂ ಜನ್ಮ ದಿನಾಂಕ ನಮೂದಿಸುವ ಮೂಲಕ ಫಲಿತಾಂಶ ನೋಡಬಹುದು.

ಜಿಲ್ಲಾ ಪಟ್ಟಿ ಫಲಿತಾಂಶ ಚೆಕ್‌ ಮಾಡಲು ಈ ಕ್ರಮ ಅನುಸರಿಸಿ :

* KEA ಯ ಅಧಿಕೃತ cetonline.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿರಿ
* ನಂತರ ನೇಮಕಾತಿ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ
* ಬಳಿಕ ಅಲ್ಲಿ ಕಾಣುವ ಆಯ್ಕೆಗಳಲ್ಲಿ ಗ್ರಾಮ ಆಡಳಿತ ಅಧಿಕಾರಿ 2024 ಆಯ್ಕೆ ಸೆಲೆಕ್ಟ್‌ ಮಾಡಿ

* ತದ ನಂತರ ಅಲ್ಲಿ ಕಾಣುವ ಆಯ್ಕೆಗಳಲ್ಲಿ VAO ತಾತ್ಕಾಲಿಕ ಜಿಲ್ಲಾ ಪಟ್ಟಿ ಆಯ್ಕೆ ಮೇಲೆ ಟ್ಯಾಪ್‌ ಮಾಡಿ
* ಆಗ ಜಿಲ್ಲಾ ಪಟ್ಟಿ PDF ಫೈಲ್‌ ಲಿಸ್ಟ್‌ ಕಾಣಿಸುತ್ತದೆ.
* ಅಲ್ಲಿ ಅಭ್ಯರ್ಥಿಗಳು ತಾವು ನೋಡ ಬಯಸುವ ಜಿಲ್ಲೆಯ ಹೆಸರಿನ ಮೇಲೆ ಟ್ಯಾಪ್‌ ಮಾಡಿ ಫಲಿತಾಂಶ ನೋಡಬಹುದು.

Best Mobiles in India

English summary
KEA VAO Result 2024: How to Check Provisional Merit List and district-wise Cut Off. check details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+