ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ

Posted By:

ಕಂಪ್ಯೂಟರ್‌ ಮೌಸ್‌ ಬಳಸಿ ಮಾಡುವ ಕೆಲಸವನ್ನು ನಾವು ಕೀಬೋರ್ಡ್‌ನಲ್ಲಿರುವ ಕೀ ಮೂಲಕವೇ ಮಾಡಬಹುದು. ಬಹುತೇಕ ಮಂದಿ ಎಲ್ಲಾ ಕೆಲಸಕ್ಕೂ ಮೌಸ್‌ನ್ನೇ ಬಳಸುತ್ತಿದ್ದಾರೆ. ಆದರೆ ಕೀಬೋರ್ಡ್ ಬಳಸಿ ಕೆಲಸ ಮಾಡಿದ್ದರೆ ಸುಲಭವಾಗಿ,ವೇಗವಾಗಿ ಕಂಪ್ಯೂಟರ್‌ ಕೆಲಸವನ್ನು ಮಾಡಿ ಮುಗಿಸಬಹುದು.

ಹೀಗಾಗಿ ಇಲ್ಲಿ ಪ್ರತಿದಿನ ಮೌಸ್‌ ಮೂಲಕ ಮಾಡುತ್ತಿರುವ ಕೆಲಸವನ್ನು ಕೀಬೋರ್ಡ್‌‌ ಮೂಲಕವೇ ಹೇಗೆ ಮಾಡಬಹುದು ಎನ್ನುವುದಕ್ಕೆ ಕೆಲವು ಕೀ ಬೋರ್ಡ್ ಶಾರ್ಟ್‌ಕಟ್‌ ಕೀಗಳ ವಿವರವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡುವುದು ಹೇಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಸೈಡ್‌ ಬೈ ಸೈಡ್‌ ವಿಂಡೋ

ಸೈಡ್‌ ಬೈ ಸೈಡ್‌ ವಿಂಡೋ

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ


ಕೆಲವೊಮ್ಮೆ ಸಂಶೋಧನೆ,ಲೇಖನಗಳನ್ನು ಬರೆಯುವ ಸಂದರ್ಭದಲ್ಲಿ ಇಂಟರ್‌ನೆಟ್‌ ನಿಂದ ಮಾಹಿತಿಗಳನ್ನು ಪಡೆದು ಅದನ್ನು ನಿಮ್ಮ ಲೇಖನಕ್ಕೆ ಸೇರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ನೇರವಾಗಿ ಲೇಖನದಿಂದ ಕಾಪಿ ಮಾಡಿ ವರ್ಡ್‌‌‌ಗೆ ಪೇಸ್ಟ್‌ ಮಾಡುವುದಕ್ಕಿಂದತಲೂ ಸ್ಕ್ರೀನ್‌ನಲ್ಲೇ ಎರಡು ವಿಂಡೋಗಳನ್ನು ಕಾಣುವಂತೆ ಮಾಡಿ ಕೆಲಸವನ್ನು ಸುಲಭಮಾಡಬಹುದು.

ವಿಂಡೋಸ್‌ ಮತ್ತು ಬಲಗಡೆ ಬಾಣದ ಗುರುತಿರುವ ಕೀಯನ್ನು ಓತ್ತಿ ಬಲಗಡೆಕಾಣುವಂತೆ ಮಾಡಬಹುದು.ಇನ್ನೂ ವಿಂಡೋಸ್‌ ಮತ್ತು ಎಡಗಡೆಯ ಬಾಣದ ಗುರುತಿರುವ ಕೀಯನ್ನು ಓತ್ತಿ ಎಡಗಡೆ ಕಾಣುವಂತೆ ಮಾಡಬಹುದು. ಸಣ್ಣದಾಗಿರುವ ಸ್ಕ್ರೀನ್ ದೊಡ್ಡದಾಗಿ ಕಾಣಲು ವಿಂಡೋಸ್‌ ಮತ್ತು ಮೇಲಿನ ಬಾಣದ ಗುರುತಿರುವ ಕೀಯನ್ನು ಓತ್ತಿ ದೊಡ್ಡದು ಮಾಡಬಹುದು.

 ಟ್ಯಾಬ್‌ ಕ್ಲೋಸ್‌ ಓಪನ್‌:

ಟ್ಯಾಬ್‌ ಕ್ಲೋಸ್‌ ಓಪನ್‌:

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ


ಮೊಜಿಲ್ಲಾ,ಕ್ರೋಮ್‌ ಇತ್ಯಾದಿ ಬ್ರೌಸರ್‌ಗಳಿಂದ ವೆಬ್‌ಸೈಟ್‌‌, ಯೂಟ್ಯೂಬ್‌ ಓಪನ್‌ ಮಾಡಿರುತ್ತೀರಿ. ಕೊನೆಗೆ ಓಪನ್‌ ಆಗಿರುವ ಟ್ಯಾಬ್‌ನ್ನು ಮೌಸ್‌ ಮೂಲಕ ಕ್ಲೋಸ್‌ ಮಾಡದೇ ಒಂದೇ ಬಾರಿಗೆ ಕ್ಲೋಸ್‌ ಮಾಡಬಹುದು.

Ctrl + W ಕೀಯನ್ನು ಒತ್ತಿ ಒಪನ್‌ ಆಗಿರುವ ಒಂದು ಟ್ಯಾಬ್‌ನ್ನು ಕ್ಲೋಸ್‌ ಮಾಡಬಹುದು. ಇನ್ನು ಎಲ್ಲಾ ಟ್ಯಾಬ್‌ಗಳನ್ನು ಕ್ಲೋಸ್‌ ಮಾಡಬೇಕಿದ್ದಲ್ಲಿ Ctrl + Shift + W ಕೀ ಒತ್ತಿದರೆ ಆಯಿತು. ಪುನಃ ಕ್ಲೋಸ್‌ ಮಾಡಿರುವ ಟ್ಯಾಬ್‌ ಓಪನ್ ಮಾಡಬೇಕಿದ್ದಲ್ಲಿ Ctrl + Shift + T ಕೀ ಒತ್ತಿ,ಮತ್ತೇ ರಿ-ಓಪನ್‌ ಮಾಡಬಹುದು.

 ವಿಂಡೋ ಓಪನ್‌

ವಿಂಡೋ ಓಪನ್‌

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ


ಕಂಪ್ಯೂಟರ್‌ನಲ್ಲಿ ಅನೇಕ ವಿಂಡೋಗಳನ್ನು ಓಪನ್‌ ಮಾಡಿ ಕೆಲಸ ಮಾಡುತ್ತಿರುತ್ತೇವೆ.ಆದರೆ ಕೆಲಸ ಮಾಡುವ ಸಂದರ್ಭದಲ್ಲಿ ಒಂದೇ ವಿಂಡೋದಲ್ಲಿ ಮಾತ್ರ ಓಪನ್‌ ಆಗಿರುತ್ತದೆ.ಕೆಲವೊಮ್ಮೆ ಇನ್ನೊಂದು ವಿಂಡೋಗಳನ್ನು ಸಹ ಓಪನ್‌ ಮಾಡಿ ನೋಡಬೇಕಾಗುತ್ತದೆ.ಈ ರೀತಿ ಮಾಡಲು Alt + Tab ಕೀಯನ್ನು ಒತ್ತಿ ಸುಲಭವಾಗಿ ಬೇಕಾದ ವಿಂಡೋಗಳನ್ನು ಓಪನ್‌ ಮಾಡಬಹುದು.

 ಫೋಲ್ಡರ್‌ ಡಿಲೀಟ್‌:

ಫೋಲ್ಡರ್‌ ಡಿಲೀಟ್‌:

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ


ಅನಗತ್ಯವಾದ ಫೋಲ್ಡರ್‌ ಡಿಲೀಟ್‌ ಮಾಡಿದ್ದರೂ ಆ ಫೋಲ್ಡರ್‌ ಸಂಪೂರ್ಣ‌ವಾಗಿ ಡಿಲೀಟ್‌ ಆಗಿರುವುದಿಲ್ಲ. ಫೋಲ್ಡರ್‌ ರಿಸೈಕಲ್‌ಬಿನ್‌ನಲ್ಲಿ ಸೇವ್ ಆಗಿರುತ್ತದೆ. ಹೀಗಾಗಿ ರಿ ಫೋಲ್ಡರ್‌‌‌ ರಿಸೈಕಲ್‌‌ಬಿನ್‌ಗೆ ಹೋಗದೇ Shift + Del ಕೀ ಒತ್ತು ಮೂಲಕ ಸಂಪೂರ್ಣ‌ವಾಗಿ ಡಿಲೀಟ್‌ ಮಾಡಬಹುದು.

ಫಾಂಟ್‌ ಗಾತ್ರವನ್ನು ದೊಡ್ಡದು ಸಣ್ಣದು ಮಾಡುವುದು

ಫಾಂಟ್‌ ಗಾತ್ರವನ್ನು ದೊಡ್ಡದು ಸಣ್ಣದು ಮಾಡುವುದು

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ


ಮೈಕ್ರೋಸಾಫ್ಟ್‌ ವರ್ಡ್‌ನಲ್ಲಿ ಟೈಪ್‌ ಮಾಡುವ ಸಂದರ್ಭದಲ್ಲಿ ಫಾಂಟ್‌ ಗಾತ್ರವನ್ನು ಆಗಾಗ ಬದಲಾಯಿಸಬೇಕಾಗುತ್ತದೆ. ಪ್ರತಿ ಬಾರಿ ಮೌಸ್‌ ಬಳಸಿ ಈ ಕೆಲಸ ಮಾಡುವುದಕ್ಕಿಂತಲೂ ಅಕ್ಷರಗಳನ್ನು ಸೆಲೆಕ್ಟ್‌ ಮಾಡಿ Ctrl + ] ಕೀ ಒತ್ತಿ ಫಾಂಟ್‌ ಗಾತ್ರವನ್ನು ದೊಡ್ಡದು ಮಾಡಬಹುದು. ಅದೇರೀತಿ ಅಕ್ಷರಗಳನ್ನು ಸೆಲೆಕ್ಟ್‌ ಮಾಡಿ Ctrl + [ ಕೀ ಒತ್ತಿ ಫಾಂಟ್‌ ಗಾತ್ರವನ್ನು ಕಡಿಮೆ ಮಾಡಬಹುದು.

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ

ಶಾರ್ಟ್‌ಕಟ್‌ ಕೀ ಬಳಸಿ ವೇಗವಾಗಿ ಕೆಲಸ ಮಾಡಿ


ಇದನ್ನೂ ಓದಿ:
ಕಂಪ್ಯೂಟರ್‌ ಕೀಬೋರ್ಡ್ ಶಾರ್ಟ್‌ಕಟ್‌ ಕೀಗಳು
ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಸುಲಭವಾಗಿ ಸರ್ಚ್‌ ಮಾಡಲು ಟಿಪ್ಸ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot