ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡುವುದು ಹೇಗೆ?

Posted By:

ಗೂಗಲ್‌ ತನ್ನ ನ್ಯೂಸ್‌ನಲ್ಲಿ ಕನ್ನಡ ಭಾಷೆಯನ್ನು ಸೇರಿಸದಿದ್ದರೂ,ಪ್ರತಿ ವರ್ಷ‌ವು ಸರ್ಚ್‌ ಇಂಜಿನ್‌ಗೆ ಮತ್ತು ಉತ್ಪನ್ನಗಳಿಗೆ ಹೊಸ ಹೊಸ ವಿಶೇಷತೆಯನ್ನು ಸೇರಿಸುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಗ್ರಾಹಕಸ್ನೇಹಿಯಾಗುತ್ತಿದೆ. ಸರ್ಚ್‌ ಎಂಜಿನ್‌ನಲ್ಲಿ ಹೊಸ ವಿಶೇಷತೆಗಳನ್ನು ಸೇರಿಸಿ ಈಗಲೂ ವಿಶ್ವದ ನಂಬರ್‌ ಒನ್‌ ಪಟ್ಟವನ್ನು ಗೂಗಲ್‌ ತನ್ನಲ್ಲೇ ಉಳಿಸಿಕೊಂಡಿದೆ.

ಗೂಗಲ್‌ನಲ್ಲಿ ಮಾಹಿತಿ ಹುಡುಕುವ ಜೊತೆಗೆ ಬಳಕೆದಾರರು ತನ್ನ ಸರ್ಚ್‌ ಎಂಜಿನ್‌ನಲ್ಲಿ ಎಂಜಾಯ್‌ ಮಾಡಲು ಗೂಗಲ್‌ ಹೊಸ ವಿಶೇಷತೆಗಳನ್ನು ಈ ಹಿಂದೆ ಸೇರಿಸಿದೆ. ಸ್ಕ್ರೀನ್‌ ದೊಡ್ಡದಾಗುವುದು, ಸ್ಕ್ರೀನ್‌ ಸಣ್ಣಾದಾಗುವುದು. ಮಾಹಿತಿಗಳು ಸ್ಕ್ರೀನ್‌ನಲ್ಲಿ ತೇಲುವಂತೆ ಕಾಣುವುದು ಸೇರಿದಂತೆ ಹಲವಾರು ವಿಶೇಷತೆಗಳು ಗೂಗಲ್‌ನಲ್ಲಿದೆ.

ಈ ವಿಶೇಷತೆಗಳು ಬಳಕೆದಾರನಿಗೆ ಮಾಹಿತಿ ಹುಡುಕಲು ಸಹಕಾರಿಯಾಗದಿದ್ದರೂ, ವಿಶೇಷತೆಯಿಂದ ಬಳಕೆದಾರ ಎಂಜಾಯ್‌ ಮಾಡಬಹುದು. ಹೇಗೆ ಎಂಜಾಯ್‌‌ ಮಾಡಬಹುದು, ಏನೇನು ಮಾಡಬಹುದು ಎನ್ನುವದಕ್ಕೆ ಆ ವಿಶೇಷತೆಗಳ ಬಗ್ಗೆ ಇಲ್ಲಿ ಕಿರು ವಿವರ ಮತ್ತು ಲಿಂಕ್‌ ಇದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ ನಂತರ ನೀವು ಇಲ್ಲಿ ನೀಡಲಾಗಿರುವ ಲಿಂಕ್‌ ಮೂಲಕ ಎಂಜಾಯ್‌ ಮಾಡಿಕೊಂಡು ಗೂಗಲ್‌ನಲ್ಲಿ ಮಾಹಿತಿ ಹುಡುಕಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಗೂಗಲ್‌ ಗ್ರಾವಿಟಿ:

ಗೂಗಲ್‌ ಗ್ರಾವಿಟಿ:

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ


ಸರ್ಚ್‌ ಮಾಡಿರುವ ಮಾಹಿತಿಗಳು ಸ್ಕ್ರೀನ್‌ಲ್ಲಿ ತೇಲಿಕೊಂಡಂತೆ ಕಾಣಬೇಕೆ? ಹಾಗಾದ್ರೆ ನೀವು ಗೂಗಲ್‌ ಗ್ರಾವಿಟಿಯಲ್ಲಿ ಸರ್ಚ್‌ ಮಾಡಿ.

 ಗೂಗಲ್‌ ಅರ್ಥ್‌ನಲ್ಲಿ ದೇವರು!

ಗೂಗಲ್‌ ಅರ್ಥ್‌ನಲ್ಲಿ ದೇವರು!

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ದೇವರನ್ನು ನಂಬುವವರು ಪ್ರಪಂಚದ ಯಾವ ಮೂಲೆಯಲ್ಲೂ ದೇವರು ನೆಲೆಸಿರುತ್ತೇನೆ. ನಮ್ಮನ್ನು ನೋಡುತ್ತಿರುತ್ತಾನೆ ಎಂದು ಹೇಳುತ್ತಿರುತ್ತಾರೆ.ಹೀಗಾಗಿ ಇಂಟರ್‌ನೆಟ್‌ ದೇವರು ಗೂಗಲ್‌ನಲ್ಲೂ ದೇವರು ಕಂಡು ಬಂದಿದ್ದಾರೆ.ಸುಳ್ಳಲ್ಲ ಬೇಕಾದ್ರೆ ನೀವು ಗೂಗಲ್ ಮ್ಯಾಪ್ ನಲ್ಲಿ ಪರೀಕ್ಷಿಸಿ ನೋಡಬಹುದು!

ಗೂಗಲ್‌ ಮಿರರ್‌:

ಗೂಗಲ್‌ ಮಿರರ್‌:

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ಕನ್ನಡಿ ಮುಂದೆ ಅಕ್ಷರ ಹಿಡಿದರೆ ಹೇಗೆ ಉಲ್ಟಾ ಕಾಣುತ್ತದೋ ಅದೇ ರೀತಿ ಗೂಗಲ್‌ನಲ್ಲೂ ಕಾಣಬೇಕಾದರೆ ಮಿರರ್‌ ಸರ್ಚ್‌ಗೆ ಹೋಗಿ ಟೈಪ್‌ ಮಾಡಿ ನೋಡಬಹುದು.

 ಗೂಗಲ್‌ ಬ್ಯಾರೆಲ್ ರೋಲ್

ಗೂಗಲ್‌ ಬ್ಯಾರೆಲ್ ರೋಲ್

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ಗೂಗಲ್‌ನ ಸಂಪೂರ್ಣ‌ ಸರ್ಚ್‌ ಪೇಜ್‌ನ್ನು ತಿರುಗಿಸಬೇಕೆ? ಗೂಗಲ್‌ನಲ್ಲಿ
Google Barrel Roll ಎಂದು ಟೈಪ್‌ ಮಾಡಿ. ಗೂಗಲ್‌ ಸರ್ಚ್ ಸ್ಕ್ರೀನ್‌ ಒಂದು ಸಲ ಸಂಪೂರ್ಣ‌ವಾಗಿ ತಿರುಗಿ ಮೊದಲಿನ ಹಾಗೇ ಕಾಣುತ್ತದೆ. ವಿಶೇಷವಾಗಿ ಮಕ್ಕಳಿಗಾಗಿ ಈ ವಿಶೇಷತೆಯನ್ನು ಗೂಗಲ್‌‌ ಸೇರಿಸಿದೆ.

 ಗೂಗಲ್‌ ಕಾಮನಬಿಲ್ಲು:

ಗೂಗಲ್‌ ಕಾಮನಬಿಲ್ಲು:

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ಮಕ್ಕಳಿಗೆ ಮನರಂಜನೆ ನೀಡಲು ಗೂಗಲ್‌ ಕಾಮನ ಬಿಲ್ಲು ಸರ್ಚ್ ವಿಶೇಷತೆ ಇದೆ. ಗೂಗಲ್‌ ಕಾಮನಬಿಲ್ಲುನಲ್ಲಿ ಟೈಪ್‌ ಮಾಡಿದ್ರೆ ಮಾಹಿತಿಗಳು ವಿವಿಧ ಬಣ್ಣದಲ್ಲಿ ಸ್ಕ್ರೀನ್‌ಲ್ಲಿ ಕಾಣುತ್ತದೆ.

 Google Sphere

Google Sphere

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ಗೂಗಲ್‌ ಸರ್ಚ್‌‌ನಲ್ಲಿ ಚಿತ್ರಗಳು ಸ್ಕ್ರೀನ್‌ನಲ್ಲಿ ಅಡ್ಡದಿಡ್ಡಿ ಓಡಾಡುವಂತೆ ಮಾಡಬೇಕಿದ್ದಲ್ಲಿ ನೀವು Google Sphere ಬೇಕಾದ ವ್ಯಕ್ತಿಯ ಹೆಸರನ್ನು ಟೈಪಿಸಿ ಸರ್ಚ್‌ ಮಾಡಿ.ಚಿತ್ರಗಳು ಅಡ್ಡಾದಿಡ್ಡಿ ಓಡಾಡುತ್ತಿರುತ್ತದೆ. ಬೇಕಾದ್ರೆ ಮೌಸ್‌ ಮೂಲಕವು ನೀವು ಚಿತ್ರಗಳನ್ನು ಸ್ಕ್ರೀನ್‌ನಲ್ಲಿ ತಿರುಗುವಂತೆ ಮಾಡಬಹುದು.

ಓರೆಯಾಗಿ ಓದಿ

ಓರೆಯಾಗಿ ಓದಿ

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ಗೂಗಲ್‌ನಲ್ಲಿ ಮಾಹಿತಿಯನ್ನು ಓರೆಯಾಗಿ ಓದಬೇಕಿದ್ದಲ್ಲಿ Google Tilt or Askew ಟೈಪ್‌ ಮಾಡಿ ಓದಬಹುದು.

 ಗೂಗಲ್ ಡೂಡಲ್‌

ಗೂಗಲ್ ಡೂಡಲ್‌

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!

ಗೂಗಲ್‌ನಲ್ಲಿ ಬರುವ ಎಲ್ಲಾ ಡೂಡಲ್‌ಗಳನ್ನು ನೋಡಬೇಕಿದ್ದಲ್ಲಿ ಗೂಗಲ್‌ ಡೂಡಲ್‌ಗೆ ಭೇಟಿ ನೀಡುವ ಮೂಲಕ ನೋಡಬಹುದು.

ಗೂಗಲ್‌ನಲ್ಲಿ ಜಾದು ಮಾಡಿ:

ಗೂಗಲ್‌ನಲ್ಲಿ ಜಾದು ಮಾಡಿ:

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!

ಗೂಗಲ್‌ ಸರ್ಚ್‌ನಲ್ಲಿರುವ ಇಂಗ್ಲಿಷ್‌ 'Google'ಪದದ ಎರಡು 'o' ಅಕ್ಷರಳನ್ನು ತೆಗೆಯಬಹುದು. darkartsmedia.com ತೆರಳಿ ಮೌಸ್‌ ಮೂಲಕ 'Google' ಪದವನ್ನು ಅಳಿಸಿದರೆ ಎರಡು 'o' ಅಕ್ಷರ ಅಳಿಸಿಹೋಗುತ್ತದೆ. ಪುನಃ ಓ ಪದ ಕಾಣವಂತೆ ಮಾಡಬೇಕಿದ್ದರೆ ಸರ್ಚ್‌ಬಾರ್‌ನಲ್ಲಿ ಟೈಪ್‌ ಮಾಡಿದ್ರೆ ಎರಡು ಸೆಕೆಂಡ್‌ 'o' ಪದ ಗೂಗಲ್‌ ಕಾಣುತ್ತಿರುತ್ತದೆ.

 Annoying Google

Annoying Google

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!


ಟೈಪ್‌ ಮಾಡುವ ಅಕ್ಷರಗಳು ಅಟೋಮ್ಯಾಟಿಕ್‌ ಆಗಿ ಕ್ಯಾಪಿಟಲ್ ಸ್ಮಾಲ್‌ ಲೇಟರ್‌ ಆಗಿ ಪರಿವರ್ತ‌ನೆಯಾಗುವಂತೆ Annoying Google ಮೂಲಕ ಮಾಡಬಹುದು.

 ಎಪಿಕ್‌ ಗೂಗಲ್‌:

ಎಪಿಕ್‌ ಗೂಗಲ್‌:

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!

ಗೂಗಲ್‌ ಸರ್ಚ್‌ನ ಸ್ಕ್ರೀನ್‌ ಕ್ಷಣದಲ್ಲೇ ದೊಡ್ಡದಾಗಬೇಕೇ?ಹಾಗಾದ್ರೆ ಎಪಿಕ್‌ ಗೂಗಲ್‌ನಲ್ಲಿ ಸರ್ಚ್ ಮಾಡಿ

 Weenie Google

Weenie Google

ಗೂಗಲ್‌ನಲ್ಲಿ ಎಂಜಾಯ್‌ ಮಾಡಿಕೊಂಡು ಸರ್ಚ್ ಮಾಡಿ!

ಗೂಗಲ್‌ ಸರ್ಚ್‌ನ ಸ್ಕ್ರೀನ್‌ ಕ್ಷಣ ಕ್ಷಣದಲ್ಲೇ ಸಣ್ಣದಾಗಿ ಕಾಣಬೇಕೆ? ಹಾಗಾದ್ರೆ Weenie Google ಸರ್ಚ್‌ ಮಾಡಬಹುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot