ಹೊಸ ಲ್ಯಾಪ್‌ಟಾಪ್ ಖರೀದಿಗೂ ಮುನ್ನ ಹಳೆಯದೇ ಇರಲಿ ಚೆನ್ನ!

By Shwetha
|

ಸ್ವಲ್ಪ ವರ್ಷಗಳ ಕಾಲ ಬಳಸಿದ ನಂತರ ಹೊಸ ನೋಟ್‌ಬುಕ್ ಅನ್ನು ಖರೀದಿಸಬೇಕೋ ಅಥವಾ ನಿಮ್ಮ ಪ್ರಸ್ತುತ ಲ್ಯಾಪ್‌ಟಾಪ್ ಅನ್ನು ಅಪ್‌ಗ್ರೇಡ್ ಮಾಡಿದರೆ ಸಾಕೇ ಎಂಬ ಆಲೋಚನೆ ನಿಮ್ಮ ಮನದಲ್ಲಿ ಮೂಡಬಹುದು.

ಓದಿರಿ: ಸ್ಮಾರ್ಟ್‌ಫೋನ್‌ನಲ್ಲಿ ಫೋಟೋ ಸ್ಕ್ಯಾನ್ ಮಾಡುವುದು ಹೇಗೆ?

ಸಂದೇಹವೇ ಬೇಡ ಹೊಸ ಲ್ಯಾಪ್‌ಟಾಪ್ ಖರೀದಿ ಎಂದರೆ ಬಜೆಟ್ ನಿಮಗೆ ಹೆಚ್ಚುವರಿಯಾಗಿ ಬೀಳಬಹುದು. ಆದರೆ ಪ್ರಸ್ತುತ ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಅಪ್‌ಗ್ರೇಡ್ ಮಾಡುವುದರಿಂದ ಇದು ನಿಮಗೆ ನಷ್ಟವನ್ನು ಉಂಟುಮಾಡುವುದಿಲ್ಲ ಹಾಗೂ ಇದು ಉತ್ತಮ ಆಯ್ಕೆಯಾಗಿರುತ್ತದೆ. ಆದರೆ ಅಪ್‌ಗ್ರೇಡ್‌ಗಿಂತ ಮುಂಚೆ ಕೆಲವೊಂದು ಅಂಶಗಳನ್ನು ನೀವು ತಿಳಿದುಕೊಂಡಿರಬೇಕಾಗುತ್ತದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಅಪ್‌ಗ್ರೇಡ್‌ಗಿಂತ ಮುಂಚೆ ನೀವು ಗಮನ ಹರಿಸಬೇಕಾದ ಐದು ಅಂಶಗಳ ಪಟ್ಟಿಯನ್ನು ನೀಡುತ್ತಿದ್ದು ಅದೇನು ಎಂಬುದನ್ನು ನೋಡಿ.

ಲ್ಯಾಪ್‌ಟಾಪ್ ಅಪ್‌ಗ್ರೇಡ್ ಮಾಡಬಹುದೇ?

ಲ್ಯಾಪ್‌ಟಾಪ್ ಅಪ್‌ಗ್ರೇಡ್ ಮಾಡಬಹುದೇ?

ಎಲ್ಲಾ ಲ್ಯಾಪ್‌ಟಾಪ್‌ಗಳನ್ನು ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದು ಎಂಬುದಾಗಿ ಯೋಚಿಸಿದಿರಿ. ಲ್ಯಾಪ್‌ಟಾಪ್‌ನ ಹೆಚ್ಚಿನ ಭಾಗಗಳು ಗಟ್ಟಿಯಾಗಿದ್ದು ಅದನ್ನು ಸುಲಭವಾಗಿ ತೆಗೆಯಲಾಗುವುದಿಲ್ಲ. ಲ್ಯಾಪ್‌ಟಾಪ್ ಖರೀದಿಯ ಮುನ್ನ ಲ್ಯಾಪ್‌ಟಾಪ್‌ನ ಭವಿಷ್ಯ ಭದ್ರತೆಯತ್ತ ಗಮನ ಹರಿಸಬೇಕು.

ಹಸ್ತಚಾಲಿತವಾಗಿ ಅಪ್‌ಗ್ರೇಡ್

ಹಸ್ತಚಾಲಿತವಾಗಿ ಅಪ್‌ಗ್ರೇಡ್

ಲ್ಯಾಪ್‌ಟಾಪ್ ಅನ್ನು ಹಸ್ತಚಾಲಿತವಾಗಿ ಅಪ್‌ಗ್ರೇಡ್ ಮಾಡಬಹುದು ಎಂಬುದಾಗಿ ಯೋಚಿಸಿ. ಪರ್ಯಾಯವಾಗಿ ಇಂಟರ್ನೆಟ್‌ನಲ್ಲಿ ನಿಮ್ಮ ವಿಂಡೋಸ್ ಅಥವಾ ಮ್ಯಾಕ್ ಲ್ಯಾಪ್‌ಟಾಪ್‌ಗಾಗಿ ಸಿಸ್ಟಮ್ ಅನ್ನು ಸರ್ಚ್ ಮಾಡಬಹುದಾಗಿದೆ.

ಯಾವ ಭಾಗಗಳನ್ನು ಅಪ್‌ಗ್ರೇಡ್ ಮಾಡಬೇಕು?

ಯಾವ ಭಾಗಗಳನ್ನು ಅಪ್‌ಗ್ರೇಡ್ ಮಾಡಬೇಕು?

ಸಾಮಾನ್ಯವಾಗಿ RAM, ಬ್ಯಾಟರಿ, ಹಾರ್ಡ್ ಡ್ರೈವ್ ಮತ್ತು ವೈರ್‌ಲೆಸ್ ಕಾರ್ಡ್ ಅನ್ನು ಸುಲಭವಾಗಿ ಅಪ್‌ಗ್ರೇಡ್ ಮಾಡಬಹುದಾಗಿದೆ. ಈ ಭಾಗಗಳನ್ನು ಅಪ್‌ಗ್ರೇಡ್ ಮಾಡುವುದು ಪಿಸಿಯ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ.

ಅಪ್‌ಗ್ರೇಡ್

ಅಪ್‌ಗ್ರೇಡ್

ಬ್ಯಾಟರಿ ಮತ್ತು ವೈರ್‌ಲೆಸ್ ಕಾರ್ಡ್ ಅನ್ನು ಯಾವಾಗಲೂ ಅಪ್‌ಗ್ರೇಡ್ ಮಾಡಲಾಗುವುದಿಲ್ಲ. ಮೊದಲಿಗೆ ನೀವು ರೀಸರ್ಚ್ ಅನ್ನು ಮಾಡಿ ಈ ಭಾಗಗಳನ್ನು ಅಪ್‌ಗ್ರೇಡ್ ಮಾಡಬಹುದು ಎಂಬುದನ್ನು ಖಾತ್ರಿಪಡಿಸಿ ನಂತರವೇ ಮುಂದುವರಿಯಿರಿ.

ಎಲ್ಲಾ ಭಾಗಗಳನ್ನು ಅಪ್‌ಗ್ರೇಡ್ ಮಾಡಬೇಕಾಗಿಲ್ಲ

ಎಲ್ಲಾ ಭಾಗಗಳನ್ನು ಅಪ್‌ಗ್ರೇಡ್ ಮಾಡಬೇಕಾಗಿಲ್ಲ

ಮದರ್ ಬೋರ್ಡ್, ಸ್ಕ್ರೀನ್, ಪ್ರೊಸೆಸರ್ ಇವೆಲ್ಲವುಗಳನ್ನು ನೀವು ಅಪ್‌ಗ್ರೇಡ್ ಮಾಡಲೇಬಾರದು. ಕೆಲವೊಂದು ಲ್ಯಾಪ್‌ಟಾಪ್‌ಗಳನ್ನು ನಿರ್ದಿಷ್ಟ ಪ್ರೊಸೆಸರ್ ಮತ್ತು ಮದರ್ ಬೋರ್ಡ್ ಸಿರೀಸ್‌ನಿಂದ ಮಾಡಲಾಗಿರುತ್ತದೆ. ಈ ಅಂಶಗಳನ್ನು ನೀವು ಗಮನದಲ್ಲಿರಿಸಕೊಳ್ಳಲೇಬೇಕಾಗುತ್ತದೆ.

ಬಿಸಿ

ಬಿಸಿ

ಸ್ಕ್ರೀನ್ ಅನ್ನು ಅಪ್‌ಗ್ರೇಡ್ ಮಾಡುವುದು ಅಷ್ಟೊಂದು ಉಚಿತವಾದ ವಿಚಾರವೂ ಅಲ್ಲ ಅಂತೆಯೇ ಇದು ಬೇಕಾಗಿಯೇ ಇಲ್ಲ. ಈ ಭಾಗಗಳು ಲ್ಯಾಪ್‌ಟಾಪ್‌ನಲ್ಲಿ ಎಷ್ಟು ಬಿಸಿಯನ್ನು ಉಂಟುಮಾಡುತ್ತದೆ ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕಾಗುತ್ತದೆ.

ಕಾಂಪಿಟೇಬಲ್ ಭಾಗಗಳನ್ನು ಹುಡುಕಿಕೊಳ್ಳಿ

ಕಾಂಪಿಟೇಬಲ್ ಭಾಗಗಳನ್ನು ಹುಡುಕಿಕೊಳ್ಳಿ

ಲ್ಯಾಪ್‌ಟಾಪ್‌ನ ಮೂಲ ಹಾರ್ಡ್‌ವೇರ್ ಅನ್ನು ಅರಿತುಕೊಂಡು ಯಾವ ಭಾಗಗಳನ್ನು ಅಪ್‌ಗ್ರೇಡ್ ಮಾಡಬೇಕು ಎಂಬುದನ್ನು ನಿರ್ಧರಿಸಿ. ನೀವು ಏನನ್ನು ಖರೀದಿಸಬೇಕು ಎಂಬುದನ್ನು ಹುಡುಕಿಕೊಳ್ಳಿ.

ಸೂಕ್ತವಾಗಿರುವ ಭಾಗ

ಸೂಕ್ತವಾಗಿರುವ ಭಾಗ

RAM ಮಾಡ್ಯುಲ್‌ಗಳನ್ನು ನೀವು ಖರೀದಿಸಬಹುದಾಗಿದೆ ಅಂತೆಯೇ ಕೆಲವೊಂದು ಉತ್ತಮ ಕಂಪೆನಿಗಳಿಂದ ಸೋಲಿಡ್ ಡ್ರೈವ್‌ಗಳ ಶಾಪಿಂಗ್ ಅನ್ನ ನಿಮಗೆ ಮಾಡಬಹುದಾಗಿದೆ. ನಿಮ್ಮ ನೋಟ್‌ಬುಕ್‌ಗೆ ಸೂಕ್ತವಾಗಿರುವ ಭಾಗಗಳನ್ನು ಇಂಟರ್ನೆಟ್‌ನಲ್ಲಿ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಿಮಗೆ ಖರೀದಿಸಬಹುದಾಗಿದೆ.

ಹೊಸ ಲ್ಯಾಪ್‌ಟಾಪ್ ಖರೀದಿ ಮಾಡಬೇಕೇ?

ಹೊಸ ಲ್ಯಾಪ್‌ಟಾಪ್ ಖರೀದಿ ಮಾಡಬೇಕೇ?

ನಿಮ್ಮ ಹಳೆಯ ಲ್ಯಾಪ್‌ಟಾಪ್ ಅನ್ನು ಬದಲಾಯಿಸುವ ಸಮಯ ಇದಾಗಿದೆ ಎಂಬುದಾಗಿ ನಿಮಗೆ ಸೂಚನೆ ದೊರೆಯಬಹುದಾಗಿದೆ. ನಿಮ್ಮ ಲ್ಯಾಪ್‌ಟಾಪ್ ತುಂಬಾ ನಿಧಾನವಾಗಿದ್ದರೆ, ಓಎಸ್‌ನ ಹೊಸ ಆವೃತ್ತಿಯನ್ನು ಇನ್‌ಸ್ಟಾಲ್ ಮಾಡಲು ನಿಮಗೆ ಇಚ್ಛೆ ಇಲ್ಲ ಎಂದಾದಲ್ಲಿ, ಯಾವುದೇ ಸಾಫ್ಟ್‌ವೇರ್ ಅಥವಾ ನಿಯಮಿತವಾಗಿ ರಿಪೇರಿ ಮಾಡಬೇಕಾಗುತ್ತಿದೆ ಎಂದಾದಲ್ಲಿ ಹೊಸ ಲ್ಯಾಪ್‌ಟಾಪ್ ಅನ್ನು ಖರೀದಿಸಿ.

ಉತ್ತಮ ಅನುಭವ

ಉತ್ತಮ ಅನುಭವ

ಉತ್ತಮ ಅನುಭವಕ್ಕಾಗಿ ನೀವು ಹೊಸ ಲ್ಯಾಪ್‌ಟಾಪ್ ಅನ್ನು ಖರೀದಿ ಮಾಡಿ ಹಳೆಯದಕ್ಕೆ ಇತಿ ಶ್ರೀ ಹಾಡಬಹುದಾಗಿದೆ. ಆದರೆ ಹೊಸದನ್ನು ಖರೀದಿಸುವ ಮುನ್ನ ಇದ್ದುದರಲ್ಲಿಯೇ ಹೊಸ ನಾವೀನ್ಯತೆಗಳನ್ನು ತರಲು ಸಾಧ್ಯವೇ ಎಂಬುದನ್ನು ಕಂಡುಕೊಳ್ಳಿ.

Best Mobiles in India

English summary
You need to keep in mind that only a few parts of the laptop can be upgraded by yourself and this will void the warranty of the laptop. So, here we have come up with a list of five things you need to know. Take a look..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X